ಯಶ್ ರಾವಣ ಟೆಸ್ಟ್ ಲುಕ್ ಫೋಟೋ ವೈರಲ್: ರಾಕಿಂಗ್ ಸ್ಟಾರ್ ರಾವಣ ಆಗೋದು ಕನ್ಫರ್ಮ್!

By Govindaraj S  |  First Published Jan 15, 2024, 8:29 PM IST

ರಾಕಿಂಗ್ ಸ್ಟಾರ್ ಯಶ್ ತನ್ನ ಹುಟ್ಟುಹಬ್ಬದ ದಿನವೇ ನಾಲ್ಕು ಜನ ಡೈ ಹಾರ್ಡ್ ಅಭಿಮಾನಿಗಳನ್ನ ಕಳೆದುಕೊಂಡು ನೋವಿನಲ್ಲಿದ್ದಾರೆ. ಈ ಬೇಸರದಲ್ಲೇ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಕೂಡ ಕ್ಯಾನ್ಸಲ್ ಮಾಡಿದ್ರು. 


ರಾಕಿಂಗ್ ಸ್ಟಾರ್ ಯಶ್ ತನ್ನ ಹುಟ್ಟುಹಬ್ಬದ ದಿನವೇ ನಾಲ್ಕು ಜನ ಡೈ ಹಾರ್ಡ್ ಅಭಿಮಾನಿಗಳನ್ನ ಕಳೆದುಕೊಂಡು ನೋವಿನಲ್ಲಿದ್ದಾರೆ. ಈ ಬೇಸರದಲ್ಲೇ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಕೂಡ ಕ್ಯಾನ್ಸಲ್ ಮಾಡಿದ್ರು. ಬೆಂಗಳೂರಲ್ಲಿದ್ದರೆ ತನ್ನ ಅಭಿಮಾನಿಗಳನ್ನ ತಡೆಯೋಕೆ ಆಗಲ್ಲ ಅಂತ ಫ್ಯಾಮಿಲಿ ಕರೆದುಕೊಂಡು ಗೋವಾಗೆ ಹೋಗಿದ್ದಾರೆ. ನಟ ಯಶ್ ಗೋವಾದಲ್ಲಿದ್ದಾರೆ. ಆದ್ರೆ ಈ ಕಡೆ ಬಾಲಿವುಡ್ನಿಂದ ಬಿಗ್ ನ್ಯೂಸ್ ಒಂದು ಹೊರ ಬಂದಿದೆ. ಯಶ್ ಟಾಕ್ಸಿಕ್ ಸಿನಿಮಾದ ಜೊತೆ ರಾವಣ ಆಗುತ್ತಿದ್ದಾರೆ ಅನ್ನೋದು ಈಗಿರೋ ಫೈರಿಂಗ್ ಸುದ್ದಿ. 

Tap to resize

Latest Videos

ಯಶ್ ಕಡೆಯಿಂದ ಈ ಬಗ್ಗೆ ಯಾವ್ದೇ ಕನ್ಫರ್ಮ್ ಆಗಿಲ್ಲ. ಆದ್ರೆ ಬಾಲಿವುಡ್ನಲ್ಲಿ ಮಾತ್ರ ಈ ಬಗ್ಗೆ ಬಾರಿ ಜೋರ್ ಚರ್ಚೆ ಆಗ್ತಿದೆ. ಅದಕ್ಕೆ ಬೇಕಾದ ಗ್ಯಾರಂಟಿಯನ್ನೂ ಕೊಡುತ್ತಿದ್ದಾರೆ. ಟಾಕ್ಸಿಕ್' ಬಿಟ್ಟರೆ ಮತ್ಯಾವುದೇ ಚಿತ್ರಕ್ಕೆ ಯಶ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಆದರೆ ಬಾಲಿವುಡ್‌ನಲ್ಲಿ ರಾಮಾಯಣ ಕಾವ್ಯ ಆಧರಿಸಿ ನಿತೇಶ್ ತಿವಾರಿ ಸಿನಿಮಾ ಮಾಡುತ್ತಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸುತ್ತಾರೆ ಅನ್ನೋದು ಒಂದು ವರ್ಷದಿಂದ ಇರೋ ವಿಚಾರ. ಈಗ ಯಶ್ ರಾವಣನ ಟೆಸ್ಟ್ ಲುಕ್ ಮಾಡಿಸಿದ್ದಾರಾ.? ಇದಕ್ಕೆ ಪ್ರ್ಯೂಫ್ ಒಂದು ಸಿಕ್ಕಿದೆ. 

ಯಶ್ ರಾವಣನ ಲುಕ್ ಟೆಸ್ಟ್ ಫೋಟೋ ವೈರಲ್ ಆಗಿದೆ. ನಿರ್ದೇಶಕ ನಿತೇಶ್ ತಿವಾರಿ ಮಾರ್ಚ್ನಿಂದ ರಾಮಾಯಣ ಶೂಟಿಂಗ್ ಶುರು ಮಾಡ್ತಾರೆ. ರಾಮಾಯಣ ಎರಡು ಪಾರ್ಟ್ನಲ್ಲಿ ಬರೋದ್ರಿಂದ ಮೊದಲ ಪಾರ್ಟ್ನಲ್ಲಿ ರಾವಣನ ದೃಶ್ಯಗಳು ಹೆಚ್ಚು ಇಲ್ಲ. ಹೀಗಾಗಿ ಯಶ್ ಈ ಸಿನಿಮಾ ಶೂಟಿಂಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋಲ್ಲ. ಒಂದು ವಾರ ಮಾತ್ರ ಯಶ್ ಶೂಟಿಂಗ್ನಲ್ಲಿ ಭಾಗ ವಹಿಸ್ತಾರೆ ಅನ್ನೋ ಟಾಕ್ ಇದೆ. ಸದ್ಯ ರಾಮಾಯಣ ಚಿತ್ರದಲ್ಲಿ ರಾವಣನ ಗೆಟಪ್‌ನಲ್ಲಿ ಯಶ್ ಲುಕ್ ಅಂತ ಹೇಳಿ ಫೋಟೊವೊಂದು ವೈರಲ್ ಆಗುತ್ತಿದೆ. ದಟ್ಟವಾದ ಗಡ್ಡ, ಮೀಸೆಯಲ್ಲೇ ವಿಭೂತಿಧಾರಿ ರಾವಣನನ್ನು ನೆನಪಿಸುವ ಹಾಗೆ ಯಶ್ ಕಾಣಿಸಿದ್ದಾರೆ. 

click me!