ಮದುವೆ ಸುದ್ದಿ ಬೆನ್ನಲ್ಲೇ ವಿಯೆಟ್ನಾಂಗೆ ಹಾರಿದ ರಶ್ಮಿಕಾ-ವಿಜಯ್​? ಗುಡ್​ ನ್ಯೂಸ್ ಯಾವಾಗ ಕೇಳಿದ ಫ್ಯಾನ್ಸ್​!

Published : Jan 15, 2024, 05:47 PM IST
ಮದುವೆ ಸುದ್ದಿ ಬೆನ್ನಲ್ಲೇ ವಿಯೆಟ್ನಾಂಗೆ ಹಾರಿದ ರಶ್ಮಿಕಾ-ವಿಜಯ್​? ಗುಡ್​ ನ್ಯೂಸ್ ಯಾವಾಗ ಕೇಳಿದ ಫ್ಯಾನ್ಸ್​!

ಸಾರಾಂಶ

ಮದುವೆ ಸುದ್ದಿ ಬೆನ್ನಲ್ಲೇ ವಿಯೆಟ್ನಾಂನಲ್ಲಿ ರಶ್ಮಿಕಾ-ವಿಜಯ್ ಮೋಜು-ಮಸ್ತಿ. ವೈರಲ್​ ಫೋಟೋ ನೋಡಿ ಅಭಿಮಾನಿಗಳು ಏನಂತಿದ್ದಾರೆ ನೋಡಿ... 

ವಿಜಯ್​ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ಸುದ್ದಿ ತುಂಬಾ ಹಳೆಯದ್ದು. ಇವರಿಬ್ಬರು ಎಲ್ಲಿಯೇ ಹೋದರೂ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಆದರೆ ಈ ಸುದ್ದಿಯನ್ನು ರಶ್ಮಿಕಾ ಒಮ್ಮೆ ಅಲ್ಲಗಳೆದಿದ್ದರು.  ನಾನು, ವಿಜಯ್ ದೇವರಕೊಂಡ ಉತ್ತಮ ಸ್ನೇಹಿತರು. ನನಗೆ ಫ್ರೆಂಡ್ಸ್ ಸರ್ಕಲ್ ಇದೆ, ಅವರ ಜೊತೆಯೇ ನಾನು ಜಾಸ್ತಿ ಮಾತನಾಡ್ತೀನಿ, ತಿರುಗಾಡ್ತೀನಿ. ಅದರಲ್ಲೇನು ಎಂದು ಸ್ವಲ್ಪ ಗರಂ ಆಗಿದ್ದರು.  ಇವರಿಬ್ಬರೂ ನ್ಯೂಯಾರ್ಕ್​ಗೆ ಹೋಗಿದ್ದರು ಎನ್ನುವ ಸುದ್ದಿ ಬಹಳ ಸದ್ದು ಮಾಡಿದ್ದ ಬಗ್ಗೆಯೂ ಮಾತನಾಡಿದ್ದ ರಶ್ಮಿಕಾ  ನಾವು 10 ಜನರು ಒಟ್ಟಿಗೆ ಟ್ರಿಪ್ ಹೋಗ್ತೀವಿ. ಈಗ ಎಲ್ಲರೂ ಸ್ನೇಹಿತರ ಜೊತೆ ಟ್ರಿಪ್ ಹೋಗ್ತಾರೆ. ಅದರಲ್ಲೇನಿದೆ ಎಂದಿದ್ದರು. ಆದರೆ ನಂತರ,  ಟರ್ಕಿಯಲ್ಲಿ ಒಟ್ಟಿಗೇ ಇದ್ದರು ಎನ್ನುವುದು ಇಬ್ಬರ ಫೋಟೋಗಳಿಂದ ಫ್ಯಾನ್ಸ್​ ಪತ್ತೆ ಹಚ್ಚಿದ್ದರು.   ವಿಜಯ ಮತ್ತು ರಶ್ಮಿಕಾ ಟರ್ಕಿಯ ಫೋಟೋಗಳನ್ನು ತುಂಬಾ ದಿನಗಳ ಅಂತರದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​  ಮಾಡಿಕೊಂಡಿದ್ದರು. ಮೊದಲು ಇದನ್ನು ವಿಜಯ್​ ಶೇರ್​ ಮಾಡಿಕೊಂಡಿದ್ದರು. ರೆಸ್ಟೋರೆಂಟ್​ ಒಂದರಲ್ಲಿ ಆಹಾರ ಸೇವಿಸುವ ಫೋಟೋ ಇದಾಗಿದೆ. ಅದೇ ಬ್ಯಾಕ್​ಗ್ರೌಂಡ್​ ಇರುವ ಫೋಟೋವನ್ನು ರಶ್ಮಿಕಾ ಬಹಳ ದಿನಗಳ ಬಳಿ ಶೇರ್​ ಮಾಡಿಕೊಂಡಿದ್ದು, ಇದು ತುಂಬಾ ಹಳೆಯ ಫೋಟೋ ಎಂದಿದ್ದರು. ಆದರೆ ಇಬ್ಬರ ಫೋಟೋಗಳನ್ನು ಕಂಪೇರ್​ ಮಾಡಿರುವ ಫ್ಯಾನ್ಸ್​ ಇವೆರಡೂ ಒಂದೇ ಹೋಟೆಲ್​ನದ್ದು ಎಂದಿದ್ದರು.

ಇದರ ಬೆನ್ನಲ್ಲೇ, ಇಬ್ಬರೂ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ, ಇದಕ್ಕೆ ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿದೆ. ಫೆಬ್ರವರಿ ಎರಡನೇ ವಾರದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿಯೂ ಸಕತ್​ ಸದ್ದು ಮಾಡುತ್ತಿದೆ.  ಮದುವೆಯ ಸುದ್ದಿ ಬೆನ್ನಲ್ಲೇ ಇದೀಗ ಇವರಿಬ್ಬರೂ ವಿಯೆಟ್ನಾಂಗೆ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಜಯ್ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಬೀದಿ ಆಹಾರವನ್ನು ತಿಂದು ತುಂಬಾ ನಗುತ್ತಿದ್ದಾರೆ. ಅದೇ ಇನ್ನೊಂದೆಡೆ ರಶ್ಮಿಕಾ ಕೂಡ ಕೆಲವು ಫೋಟೋ ಶೇರ್​ ಮಾಡಿಕೊಂಡಿದ್ದಾರೆ.  ಟೋಪಿ ಧರಿಸಿರುವ ನಟಿ, ಈ  ಟೋಪಿ ನನಗೆ ತುಂಬಾ ಇಷ್ಟವಾಯಿತು. ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ. 

ಪಕ್ಕದಲ್ಲಿ ರಶ್ಮಿಕಾ ಇರುವಾಗ್ಲೇ ಆಲಿಯಾ ಚಪ್ಪಲಿ ತೆಗೆದು ಎಸೆದದ್ದೇಕೆ? 'ಅನಿಮಲ್'​ ರಿವೇಂಜಾ ಕೇಳ್ತಿದ್ದಾರೆ ನೆಟ್ಟಿಗರು!

ಇದು ಪ್ರೀ ಹನಿಮೂನಾ ಎಂದು ಜೋಡಿಯನ್ನು ಕಾಲೆಳೆಯುತ್ತಿದ್ದಾರೆ ನೆಟ್ಟಿಗರು. ಇನ್ನು ಕೆಲವರು ಗುಡ್​ನ್ಯೂಸ್​ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ಅಂದಹಾಗೆ  ರಶ್ಮಿಕಾ, ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆ ನಂತರ ತೆಲಗು ಸಿನಿಮಾದಲ್ಲಿಯೂ ನಟಿಸಿದರು. ಒಂದಷ್ಟು ಸಿನಿಮಾಗಳನ್ನೂ ಮಾಡಿ ಸ್ಟಾರ್ ಆದರು. ರಶ್ಮಿಕಾ ಮಂದಣ್ಣ ಅವರು ತಮ್ಮ ಚಿತ್ರರಂಗದ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಕನ್ನಡದ ನಾಯಕ ರಕ್ಷಿತ್ ಶೆಟ್ಟಿ ಅವರ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಸಂಬಂಧ ಮುರಿದು ಬಿತ್ತು. ರಶ್ಮಿಕಾ ಮಂದಣ್ಣ ಈಗ ಸೌತ್‌ ಸಿನಿಮಾಗಳ ಜೊತೆಗೆ ಬಾಲಿವುಡ್‌ನಲ್ಲಿಯೂ ಸದ್ದು ಮಾಡುತ್ತಿದ್ದಾರೆ. 

ಇನ್ನು, ಲೈಗರ್ ಸಿನಿಮಾ ಸೋಲಿನ ಬಳಿಕ ಗೆಲುವಿನ ನಿರೀಕ್ಷೆಯಲ್ಲಿದ್ದ ವಿಜಯ್ ದೇವರಕೊಂಡಗೆ ಶಿವ ನಿರ್ವಾಣ ನಿರ್ದೇಶನದಲ್ಲಿ ಖುಷಿ ಚಿತ್ರದಲ್ಲಿ ತಕ್ಕ ಮಟ್ಟಿನ ಯಶಸ್ಸು ಸಿಕ್ಕಿದೆ.. ಈ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸಿದ್ರು. ಸೆಪ್ಟೆಂಬರ್ 1 ರಂದು ಬಿಡುಗಡೆಗೊಂಡ ಖುಷಿ ಸಿನಿಮಾ ಆಗಿ ಸೂಪರ್ ಹಿಟ್ ಆಗಿದೆ. 

'ಅನಿಮಲ್'​ ಯಶಸ್ಸು ಡೇಂಜರಸ್​ ಎಂದ ಜಾವೇದ್​ ಅಖ್ತರ್! ನೀವು ಕಲಾವಿದನೇ ಅಲ್ಲ ಎಂದು ನಿರ್ದೇಶಕ ಗರಂ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!