ಕೊನೆಯ ಬಾರಿಗೆ ನಾನು ವಿದಾಯ ಹೇಳುತ್ತಿದ್ದೇನೆ ಎನ್ನುತ್ತಲೇ ಕಣ್ಣೀರಿಟ್ಟ ಅಮಿತಾಭ್​ ಬಚ್ಚನ್​: ಫ್ಯಾನ್ಸ್​ ಗಲಿಬಿಲಿ

By Suvarna News  |  First Published Dec 31, 2023, 1:06 PM IST

ಕೌನ್​ ಬನೇಗಾ ಕರೋರ್​ಪತಿಯ ಕೊನೆಯ ಸಂಚಿಕೆಯಲ್ಲಿ ಅಮಿತಾಭ್​ ಹೇಳಿದ ಮಾತುಗಳಿಂದ ಅಭಿಮಾನಿಗಳು ಫುಲ್​ ಕನ್​ಫ್ಯೂಸ್​ ಆಗಿದ್ದಾರೆ. ನಟ ಕಣ್ಣೀರು ಹಾಕಿದ್ದೇಕೆ? 
 


ಅಮಿತಾಭ್​ ಬಚ್ಚನ್​ (Amitabh Bachchan) ಬಾಲಿವುಡ್​ ಕಂಡ ಅಪರೂಪದ ನಟ. ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರದಿಂದ ಹಿಡಿದು ಈ 80ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ. 1970ರ ದಶಕದಲ್ಲಿ ಜಂಜೀರ್, ದೀವಾರ್, ಆನಂದ್, ರೋಟಿ ಕಪಾಡಾ ಮತ್ತು ಮಕಾನ್ ಚಿತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಮಿತಾಭ್​ ಬಚ್ಚನ್​ ಅವರಿಗೆ ಈ ವಯಸ್ಸಿನಲ್ಲಿಯೂ ಉತ್ಸಾಹ ಬತ್ತಿಲ್ಲ. ಅವರ ಎನರ್ಜಿ ಇನ್ನೂ ಹಾಗೆಯೇ ಇದೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ.  80ರ ಹರೆಯದಲ್ಲಿ ಬಿಗ್ ಬಿ ಫುಲ್ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಕೂಲಿ ಚಿತ್ರದಲ್ಲಿ ಮಾರಣಾಂತಿಕ ಗಾಯಗಳಿಂದ ಬದುಕಿ ಬಂದಿದ್ದ ಅಮಿತಾಭ್​ ಅವರು ಇತ್ತೀಚೆಗೆ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಗಂಭೀರ ಗಾಯಗಳಾಗಿದ್ದವು. ಇವೆಲ್ಲವುಗಳ ಹೊರತಾಗಿಯೂ ಅಮಿತಾಭ್​ ಬಚ್ಚನ್​ ಇಂದಿಗೂ ಅದೇ ಎನರ್ಜಿಯನ್ನು ಉಳಿಸಿಕೊಂಡಿದ್ದಾರೆ. 

ಕೆಲ ತಿಂಗಳಿನಿಂದ ಅವರು  ಕೌನ್​ ಬನೇಗಾ ಕರೋರ್​ಪತಿ (KBC)ಯ 15ನೇ ಸೀಸನ್​ನಲ್ಲಿ ಅದೇ ಉತ್ಸಾಹದಲ್ಲಿ ನಟ ಕಾಣಿಸಿಕೊಂಡಿದ್ದರು. ಕಳೆದ ಅಕ್ಟೋಬರ್​ 11ರಂದು 81ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಅಮಿತಾಭ್​ ಬಚ್ಚನ್ ಅವರ ಕೌನ್​ ಬನೇಗಾ ಕರೋರ್​ಪತಿಯ ಕೊನೆಯ ಎಪಿಸೋಡ್​ ಮೊನ್ನೆ ಶುಕ್ರವಾರ ಮುಗಿಯಿತು. ಅಂದು ಅಕ್ಷರಶಃ ಕಣ್ಣೀರಾಗಿದ್ದಾರೆ ನಟ. ಈ ಹಿಂದೆ ಹುಟ್ಟುಹಬ್ಬವನ್ನುಇದೇ ವೇದಿಕೆಯಲ್ಲಿ ಮಾಡಿದ್ದಾಗ  ಅಮಿತಾಭ್​ ಕಣ್ಣೀರು ಹಾಕಿದ್ದರು.  ದರಲ್ಲಿ ಅವರು ಜನರು ತಮಗೆ ತೋರಿಸುವ ಅಪಾರ ಅಭಿಮಾನ ಕಂಡು ಭಾವುಕರಾಗಿದ್ದರು. ಹುಟ್ಟುಹಬ್ಬದ ನಿಮಿತ್ತ ಅಮಿತಾಭ್​ ಅವರಿಗೆ ದೊಡ್ಡ ಸರ್​ಪ್ರೈಸ್​ ಮಾಡಲಾಗಿತ್ತು. ಅದನ್ನು ನೋಡಿ ಭಾವುಕರಾಗಿದ್ದ ನಟ, ಅಳುತ್ತಲೇ, ಇನ್ನೆಷ್ಟು ಎಂದು ನನ್ನನ್ನು ಅಳಿಸುವಿರಿ ಎಂದು ಅಭಿಮಾನಿಗಳಿಗೆ ಪ್ರಶ್ನಿಸಿದ್ದರು.

Tap to resize

Latest Videos

ಅಮಿತಾಭ್​ ಮಗನಾದರೂ ಯಾರೂ ನನ್ನನ್ನು ಚಿತ್ರಕ್ಕೆ ಸೇರಿಸಿಕೊಳ್ಳಲೇ ಇಲ್ಲ: ಆ ದಿನಗಳ ನೆನೆದ ಅಭಿಷೇಕ್​!

 ಇದೀಗ ಎಪಿಸೋಡ್​ಗೆ ವಿದಾಯ ಹೇಳುವಾಗ ಮತ್ತೆ ಕಣ್ಣೀರಾಗಿದ್ದಾರೆ. ಕೊನೆಯ ಬಾರಿಗೆ ನಾನು ವಿದಾಯ ಹೇಳುತ್ತಿದ್ದೇನೆ ಎನ್ನುತ್ತಲೇ ಕಣ್ಣೀರಿಟ್ಟಿದ್ದಾರೆ ನಟ.  ಬಿಗ್ ಬಿ ಸೀಸನ್‌ನ ಕೊನೆಯ ಸಂಚಿಕೆ ಬಗ್ಗೆ ಮಾತನಾಡಿದ್ದಾರೆಯೇ ಅಥವಾ ಕಾರ್ಯಕ್ರಮದಿಂದ ನಿವೃತ್ತಿ ಹೊಂದಿದ್ದಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರು ತಮ್ಮ ಎಂದಿನ ಧಾಟಿಯಲ್ಲಿ “ದೇವಿ ಔರ್ ಸಜ್ಜನೋ,  ಈಗ ವೇದಿಕೆಯಿಂದ ಹೋಗುವ ಸಮಯ ಬಂದಿದೆ.  ಬಿಡುವುದು ಕಷ್ಟ. ನಾಳೆಯಿಂದ ನಾನು ಇಲ್ಲಿಗೆ ಹಿಂತಿರುಗುವುದಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಕೊನೆಯ ಬಾರಿಗೆ ನಾನು ಈ ಕಾರ್ಯಕ್ರಮದಿಂದ ನಿಮ್ಮೆಲ್ಲರಿಗೂ ವಿದಾಯ ಹೇಳುತ್ತಿದ್ದೇನೆ. ಶುಭರಾತ್ರಿ ಎನ್ನುತ್ತಲೇ ಕಣ್ಣೀರಾದರು.
 
ಸೀಸನ್‌ನ ಕೊನೆಯ ಸಂಚಿಕೆಯಲ್ಲಿ ಹಲವಾರು ಪ್ರಮುಖ ವ್ಯಕ್ತಿಗಳು ಹಾಜರಾಗಿದ್ದರು. ಶರ್ಮಿಳಾ ಟ್ಯಾಗೋರ್, ವಿದ್ಯಾ ಬಾಲನ್ ಮತ್ತು ಸಾರಾ ಅಲಿ ಖಾನ್ ಮುಂತಾದವರು ಭಾಗವಹಿಸಿದ್ದರು.  ಪ್ರೋಮೋ ನೋಡಿದ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ.  ಬಿಗ್​ ಬಿ ಈ ಸೀಸನ್​ ಮುಗಿಯಿತು ಎಂದು ಭಾವುಕರಾದರೋ ಅಥವಾ ಇದೇ ಕೊನೆಯ ಸೀಸನ್​ ಎಂದು ತಿಳಿದುಕೊಂಡು ಕಣ್ಣೀರಾದರೋ ತಿಳಿಯದೇ ಕನ್​ಫ್ಯೂಸ್​ ಆಗಿದ್ದಾರೆ. 

ಕರಣ್​ ಷೋನಲ್ಲಿ ಅಮಿತಾಭ್​ ಪುತ್ರಿ ಶ್ವೇತಾ, ಐಶ್ವರ್ಯ ಬಗ್ಗೆ ಹೇಳಿದ್ದೇನು? ಕುತೂಹಲದ ವಿಡಿಯೋ ವೈರಲ್​

 

click me!