ಅರ್ಬಾಜ್ ಖಾನ್ ತಮ್ಮ ಹೊಸ ಪತ್ನಿ ಶುರಾ ಖಾನ್ ಜೊತೆಗೂಡಿ ಏರ್ಪೋರ್ಟ್ಗೆ ಹೋದಾಗ ಅಲ್ಲಿಯ ಮಹಿಳೆಯೊಬ್ಬರ ರಿಯಾಕ್ಷನ್ ವೈರಲ್ ಆಗಿದ್ದು, ನೆಟ್ಟಿಗರು ಬಿದ್ದೂ ಬಿದ್ದೂ ನಗ್ತಿದ್ದಾರೆ.
ನಟ ಸಲ್ಮಾನ್ ಖಾನ್ ಸಹೋದರ, ನಟಿ ಮಲೈಕಾ ಶರಾವತ್ ಮಾಜಿ ಪತಿ, ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಮಾಜಿ ಲಿವ್ ಇನ್ ಪಾರ್ಟನರ್ ಅರ್ಬಾಜ್ ಖಾನ್ ಇತ್ತೀಚೆಗೆ ಮದುವೆಯಾಗಿದ್ದು, ನವವಧುವಿನ ಜೊತೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ಮನೆಯಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ 56 ವರ್ಷದ ಅರ್ಬಾಜ್ ಖಾನ್ ಅವರು ತಮಗಿಂತ 22 ವರ್ಷ ಚಿಕ್ಕವಳಾದ 33 ವರ್ಷದ ಶುರಾ ಖಾನ್ ಅವರ ಕೈಹಿಡಿದಿದ್ದಾರೆ. ಪತ್ನಿಯ ಹೆಸರು ಶುರಾ ಖಾನ್. ಇವರು ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ಶುರಾ ಖಾನ್ ಮತ್ತು ಅರ್ಬಾಜ್ ಖಾನ್ ಅವರು ಪಾಟ್ನಾ ಶುಕ್ಲಾ ಸೆಟ್‌ನಲ್ಲಿ ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದೆ. ಶುರಾ ಖಾನ್ ಅವರು, ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥದಾನಿ ಅವರ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ.
ಇವರ ವಯಸ್ಸಿನ ಅಂತರ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಜೋಡಿ ಸಕತ್ ಟ್ರೋಲ್ ಕೂಡ ಆಗುತ್ತಿದೆ. ಮದುವೆ ಮನೆಗೆ ಬರುವಾಗಿನಿಂದಲೂ ಹಲವು ವಿಡಿಯೋಗಳಲ್ಲಿ ಶುರಾ ಖಾನ್ ಪಾಪರಾಜಿಗಳ ಕ್ಯಾಮೆರಾ ಎದುರು ನೇರವಾಗಿ ಮುಖಕೊಡದೇ ಮುಖ ಮುಚ್ಚಿಕೊಳ್ಳುವುದನ್ನು ನೋಡಬಹುದು. ಇದೀಗ ಹನಿಮೂನ್ ಮೂಡ್ನಲ್ಲಿರೋ ಜೋಡಿ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಜೋಡಿ ಸೆರೆಯಾಗಿದೆ. ತಮ್ಮ ಫೋಟೋ, ವಿಡಿಯೋ ಮಾಡುವುದನ್ನು ಮೊದಲೇ ಅರಿತಿರುವ ಶುರಾ ಖಾನ್ ಅವರು ಕ್ಯಾಪ್ ಧರಿಸಿ ಬಂದಿದ್ದಾರೆ. ಈ ಕ್ಯಾಪ್ ಹಾಕಿಕೊಂಡು ತಮ್ಮ ಮುಖ ಮರೆಮಾಚುವುದು ಅವರ ಉದ್ದೇಶ. ಅದೇ ರೀತಿ ತಲೆಯನ್ನು ಬಗ್ಗಿಸಿಕೊಂಡು ಕ್ಯಾಪ್ನಲ್ಲಿ ಮುಖ ಎಲ್ಲಿಯೂ ಕಾಣದಂತೆ ಮಾಡಿದ್ದಾರೆ. ಅರ್ಬಾಜ್ ಖಾನ್ ಹಸನ್ಮುಖರಾಗಿ ಕ್ಯಾಮೆರಾಕ್ಕೆ ಪೋಸ್ ನೀಡುತ್ತಿದ್ದರೆ, ಶುರಾ ಮಾತ್ರ ಅಪ್ಪಿತಪ್ಪಿಯೂ ಮುಖ ತೋರಿಸಲಿಲ್ಲ. ಇದರಿಂದ ಅವರು ಸಕತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ.
ಅಪ್ಪನ ವಯಸ್ಸಿನವ ಜೊತೆ ಮದ್ವೆಯಾಗಿ ಈಗ್ಯಾಕೆ ಮುಖ ಮುಚ್ಕೊತ್ಯಾ? ಅರ್ಬಾಜ್ ಪತ್ನಿ ಸಕತ್ ಟ್ರೋಲ್
ಇದರ ಮುಂದುವರೆದಿರುವ ಭಾಗವಾಗಿ ಇದೇ ಏರ್ಪೋರ್ಟ್ನಲ್ಲಿ ಈ ಜೋಡಿ ಹೋಗುತ್ತಿದ್ದಂತೆಯೇ ಇವರ ಮುಂದೆ ಇದ್ದ ಮಹಿಳೆಯೊಬ್ಬರು ಅರ್ಬಾಜ್ ಖಾನ್ ಹಾಗೂ ಅವರ ಪತ್ನಿಯನ್ನು ವಿಚಿತ್ರವಾಗಿ ನೋಡಿದ್ದಾರೆ. ಮೊದಲಿಗೆ ಅರ್ಬಾಜ್ ಖಾನ್ ಅವರನ್ನು ಮೇಲಿನಿಂದ ಕೆಳಕ್ಕೆ ನೋಡಿದ ಮಹಿಳೆ ನಂತರ ಪತ್ನಿ ಶುರಾ ಅವರನ್ನು ವಿಚಿತ್ರವಾಗಿ ನೋಡಿದ್ದಾರೆ. ನಂತರ ಮತ್ತೊಮ್ಮೆ ಅರ್ಬಾಜ್ ಮುಖ ನೋಡಿದ್ದಾರೆ. ಆಗಲೂ ಶುರಾ ಖಾನ್ ತಲೆ ತಗ್ಗಿಸಿಕೊಂಡೇ ನಿಂತಿದ್ದಾರೆ. ಯಾರಾದರೂ ತಮ್ಮ ಫೋಟೋ ತೆಗೆಯುತ್ತಾರೆ, ವಿಡಿಯೋ ಮಾಡಿಬಿಡುತ್ತಾರೆ ಎನ್ನುವ ಕಾರಣದಿಂದ ಶುರಾ ಖಾನ್ ಯಾರಿಗೂ ಮುಖ ತೋರಿಸಲಿಲ್ಲ. ಆದರೆ ಅಲ್ಲಿರುವ ಮಹಿಳೆ ಮಾತ್ರ ಬಗ್ಗಿ ಬಗ್ಗಿ ಶುರಾ ಅವರನ್ನು ನೋಡಲು ಪ್ರಯತ್ನಿಸಿದ್ದಾರೆ. ಅವರ ಮುಖ ನೋಡಿ ನಂತರ ಮತ್ತೆ ಅರ್ಬಾಜ್ ಖಾನ್ರನ್ನು ವಿಚಿತ್ರವಾಗಿ ನೋಡಿದ್ದು, ನಗುವಿನ ಹಿನ್ನೆಲೆಯಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಥಹರೇವಾರಿ ಕಮೆಂಟ್ ಮಾಡುತ್ತಿದ್ದಾರೆ.
ಅಪ್ಪ-ಮಗಳ ಥರ ಜೋಡಿ ಇದೆ ಎಂದು ನೂರಾರು ಮಂದಿ ಕಮೆಂಟ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಬೇಕಿತ್ತಾ ನಿಮಗೆ, ಬೇರೆ ಯಾರೂ ಸಿಗ್ತಾ ಇರಲಿಲ್ವಾ ಎಂದು ಶುರಾ ಅವರಿಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇನ್ನು ಹಲವರು ಶುರಾ ಖಾನ್ ಮುಖ ತೋರಿಸದ ಕಾರಣ, ಅಪ್ಪನ ವಯಸ್ಸಿನವನ ಜೊತೆ ಮದ್ವೆಯಾಗಿ ಇದೀಗ ಮುಖ ಮುಚ್ಚಿಕೊಂಡರೆ ಹೇಗೆ? ಅವನೇ ಬೇಕು ಅಂತ ಮದ್ವೆಯಾಗಿರುವಾಗ ಅರ್ಬಾಜ್ನಂತೆ ಎಲ್ಲರನ್ನೂ ಫೇಸ್ ಮಾಡು ಎನ್ನುತ್ತಿದ್ದಾರೆ.