ಕನ್ನಡದಲ್ಲಿ ನಟ ಡಾ ವಿಷ್ಣುವರ್ಧನ್ ಜತೆ ಸೂರ್ಯವಂಶ ಚಿತ್ರದಲ್ಲಿ ನಟಿ ಇಷಾ ಕೊಪ್ಪೀಕರ್ ನಾಯಕಿಯಾಗಿ ನಟಿಸಿದ್ದಾರೆ. ಬಳಿಕ ಅವರು ಹೂ ಅಂತೀಯಾ ಊಹೂಂ ಅಂತೀಯಾ, ಓ ನನ್ನ ನಲ್ಲೆ, ಕವಚ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.
ಕನ್ನಡ ಸೇರಿದಂತೆ ತಮಿಳು, ತೆಲುಗು, ಕನ್ನಡ ಹಾಗೂ ಮರಾಠಿ ಚಿತ್ರಗಳಲ್ಲಿ ನಟಿಸಿರುವ ನಟಿ ಇಷಾ ಕೊಪ್ಪೀಕರ್ ಈಗ ಒಂಟಿಯಾಗಿದ್ದಾರೆ. ಅಂದರೆ, 9 ವರ್ಷದ ತಮ್ಮ ದಾಂಪತ್ಯ ಜೀವನಕ್ಕೆ ನಟಿ ಇಷಾ ಇತಿಶ್ರೀ ಹಾಡಿದ್ದಾರೆ. 9 ವರ್ಷದ ಹಿಂದೆ ಟಿಮ್ಮಿ ನಾರಂಗ್ ಎಂಬ ಬಿಸಿನೆಸ್‌ಮ್ಯಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ನಟಿ ಇಷಾ ಕೊಪ್ಪೀಕರ್, ಸಂಸಾರದಲ್ಲಿ ಮನಸ್ತಾಪ ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಡಿವೋರ್ಸ್ ನೀಡಿದ್ದಾರೆ. ಸದ್ಯ ಟಿಮ್ಮಿ ಹಾಗೂ ಇಷಾ ಬೇರೆ ಬೇರೆ ಆಗಿದ್ದು ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎನ್ನಬಹುದು.
ಕನ್ನಡದಲ್ಲಿ ನಟ, ಸಾಹಸ ಸಿಂಹ, ಅಭಿನವ ಭಾರ್ಗವ ಡಾ ವಿಷ್ಣುವರ್ಧನ್ ಜತೆ ಸೂರ್ಯವಂಶ ಚಿತ್ರದಲ್ಲಿ ನಟಿ ಇಷಾ ಕೊಪ್ಪೀಕರ್ ನಾಯಕಿಯಾಗಿ ನಟಿಸಿದ್ದಾರೆ.
ಬಳಿಕ ಅವರು ಹೂ ಅಂತೀಯಾ ಊಹೂಂ ಅಂತೀಯಾ, ಓ ನನ್ನ ನಲ್ಲೆ, ಕವಚ ಸಿನಿಮಾಗಳಲ್ಲಿ ನಟನೆ ಮಾಡುವ ಮೂಲಕ ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೆ ಚಿರಪರಿಚಿತವಾಗಿದ್ದಾರೆ. ತಮಿಳು, ತೆಲುಗು ಹಾಗು ಹಿಂದಿ ಚಿತ್ರಗಳಲ್ಲಿಯೂ ನಟಿಸುವ ಮೂಲಕ ಇಷಾ ಬಹುಭಾಷಾ ನಟಿ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದು ಅಲ್ಲದೇ ತಮ್ಮ ಮಾತೃಭಾಷೆ ಮರಾಠಿಯಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಕ್ಷೇತ್ರಕ್ಕೂ ಆಟಕ್ಕೂ ಏನು ಸಂಬಂಧ; ನಮ್ಮಿಬ್ಬರ ಅಕ್ಕ-ತಮ್ಮ ಸಂಬಂಧ ಮುಗಿಯಿತು!
ಇಷಾ ಕೊಪ್ಪೀಕರ್ ಹಾಗೂ ಟಿಮ್ಮಿ ನಾರಂಗ್ ನಡುವೆ ಹಲವು ಬಾರಿ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಆದರೆ, ಕೆಲವರ ಮಧ್ಯಸ್ಥಿಕೆಯಿಂದ ತೇಪೆ ಹಚ್ಚಿಕೊಂಡು ಹೇಗೋ ಸಂಸಾರ ಸಾಗುತ್ತಿತ್ತು. ಆದರೆ, ಈ ಬಾರಿ ಯಾರು ಅದೆಷ್ಟೇ ಪ್ರಯತ್ನಿಸಿದರೂ ತೇಪೆ ಹಚ್ಚು ಕಾರ್ಯ ಯಶಸ್ವಿಯಾಗಿಲ್ಲ ಎನ್ನಲಾಗಿದೆ. ತಮ್ಮಿಬ್ಬರ ಮಧ್ಯೆ ಡಿವೋರ್ಸ್ ಆಗಿರುವ ಬಗ್ಗೆ ಕೊನೆಗೂ ಸತ್ಯ ಬಾಯಿ ಬಿಟ್ಟಿರುವ ನಟಿ ಇಷಾ ಕೊಪ್ಪೀಕರ್, 'ನಾವು ಭಾವನಾತ್ಮಕವಾಗಿ ದೂರ ದೂರ ಆಗಿದ್ದೇವೆ ಎಂಬ ಭಾವನೆ ನಮ್ಮಿಬ್ಬರಲ್ಲೂ ಬಲವಾಗಿದೆ. ಈ ಮೊದಲು ನಾವು ಸಾಕಷ್ಟು ಟೈಮ್ ಜಗಳ ಆಡಿಕೊಂಡಿದ್ದರೂ ಮತ್ತೆ ರಾಜಿ ಆಗುವಷ್ಟು ಭಾವನಾತ್ಮಕತೆ ಇತ್ತು' ಎಂದಿದ್ದಾರೆ.
ವಿಲನ್ ಪಾತ್ರ ಮಾಡಲಾರೆ ಅಂದಿದ್ರೂ ಒಪ್ಕೊಂಡ್ರಾ; ತಲೈವರ್ 171 ಚಿತ್ರಕ್ಕೆ ಸ್ಟಾರ್ ಹೀರೋನೇ ವಿಲನ್ನಾ!
'ನಮ್ಮಿಬ್ಬರ ಮಧ್ಯೆ ಈಗ ಅಗಾಧ ಎಂಬಷ್ಟು ಅಂತರ ಏರ್ಪಟ್ಟಿದೆ. ನಾನೊಂದು ತೀರ ನೀನೊಂದು ತೀರ' ಎಂಬಷ್ಟು ದೂರವಾದ ಮೇಲೆ, ಮತ್ತೆ ಒಂದಾಗಲು ಸಾಧ್ಯವೇ ಇಲ್ಲ ಎಂಬ ಭಾವನೆ ಬಂದ ಮೇಲೆ ಮತ್ತೆ ಒಟ್ಟಿಗೇ ಇರಿವುದರಲ್ಲಿ ಯಾವ ಅರ್ಥವೂ ಇಲ್ಲ. ಒಂದೇ ಮನೆಯಲ್ಲಿ ಇರುವುದು ಕೂಡ ಹಿಂಸೆ ಎನಿಸುತ್ತಿದೆ. ಹೀಗಾಗಿ ಇಬ್ಬರೂ ಬೇರೆ ಆಗುವ ಬಗ್ಗೆ ಯೋಚಿಸಿ ನಿರ್ಧರಿಸಿಯೇ ಡಿವೋರ್ಸ್ ತೆಗೆದುಕೊಂಡಿದ್ದೇವೆ' ಎಂದಿದ್ದಾರೆ ನಟಿ ಇಷಾ ಕೊಪ್ಪೀಕರ್. ಅಂದಹಾಗೆ, ನಟಿ ಇಷಾ ಕೊಪ್ಪೀಕರ್ ಟಿಮ್ಮಿ ನಾರಂಗ್‌ಗಿಂತ ಮೊದಲು ಇಂದರ್ ಕುಮಾರ್ ಎಂಬವರನ್ನು ಲವ್ ಮಾಡುತ್ತಿದ್ದು, ಅದು ಸಖತ್ ಸುದ್ದಿಯಾಗಿತ್ತು.
ಪ್ರಭಾಸ್-ಶಾರುಖ್ ಫ್ಯಾನ್ಸ್ ಸೋಷಿಯಲ್ ವಾರ್ ಬಗ್ಗೆ ಕೊನೆಗೂ ಬಾಯ್ಬಿಟ್ಟ ಪ್ರಶಾಂತ್ ನೀಲ್!