ನಟ ಅಜಿತ್ ಸಾಚ ಅಲ್ಲ, ಕಿಚ್ಚ ಸುದೀಪ್ ಬೆನ್ನಲ್ಲೇ ಥಲಾ ಮೇಲೆ ನಿರ್ಮಾಪಕನ ಗಂಭೀರ ಆರೋಪ!

Published : Jul 11, 2023, 11:20 AM ISTUpdated : Jul 11, 2023, 11:31 AM IST
ನಟ ಅಜಿತ್ ಸಾಚ ಅಲ್ಲ, ಕಿಚ್ಚ ಸುದೀಪ್ ಬೆನ್ನಲ್ಲೇ ಥಲಾ ಮೇಲೆ ನಿರ್ಮಾಪಕನ ಗಂಭೀರ ಆರೋಪ!

ಸಾರಾಂಶ

ಕಿಚ್ಚ ಸುದೀಪ್ ಮೇಲೆ ಎಮ್ ಎನ್ ಕುಮಾರ್ ಹಣಕಾಸು ಸಂಬಂಧ ಗಂಭೀರ ಆರೋಪ ಮಾಡಿದ್ದಾರೆ. ಸುದೀಪ್ ಮೋಸ ಮಾಡಿದ್ದಾರೆ ಅನ್ನೋ ಆರೋಪ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಸುದೀಪ್ ಸ್ಪಷ್ಟನೆ ನೀಡಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಘಟನೆ ಬೆನ್ನಲ್ಲೇ ಇದೀಗ ತಮಿಳಿನ ಖ್ಯಾತ ನಟ ಥಲಾ ಅಜಿತ್ ಕುಮಾರ್ ವಿರುದ್ಧ ನಿರ್ಮಾಪಕ ಗಂಭೀರ ಆರೋಪ ಮಾಡಿದ್ದಾರೆ. ಅಜಿತ್ ಸಾಚಾ ಅಲ್ಲವೇ ಅಲ್ಲ ಎಂದಿದ್ದಾರೆ.  

ಚೆನ್ನೈ(ಜು.11) ನಟ ಕಿಚ್ಚ ಸುದೀಪ್ ಮೇಲೆ ನಿರ್ಮಾಪಕ ಎಮ್ ಎನ್ ಕುಮಾರ್ ಮಾಡಿದ ಆರೋಪ ಇದೀಗ ಗಂಭೀರವಾಗಿದೆ. ಇತ್ತ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿ ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಎಮ್ ಎನ್ ಕುಮಾರ್‌ಗೆ  5 ಕೋಟಿ ರೂಪಾಯಿ ಸಹಾಯ ಮಾಡಲು ಹೋದ ಸುದೀಪ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ಮಾಪಕನಿಂದ ಯಾವುದೇ ಹಣ ತೆಗೆದುಕೊಂಡಿಲ್ಲ. ದಾಖಲೆ ಸಮೇತ ಕಾನೂನು ಹೋರಾಟ ಮಾಡುವುದಾಗಿ ಕಿಚ್ಚ ಸುದೀಪ್ ಹೇಳಿದ್ದಾರೆ. ಈ ಪ್ರಕರಣ ಗಂಭೀರವಾಗುತ್ತಿದ್ದಂತೆ ಇದೀಗ ತಮಿಳು ನಟ ಥಲಾ ಅಜಿತ್ ಕುಮಾರ್ ವಿರುದ್ಧ ಖ್ಯಾತ ನಿರ್ಮಾಪಕ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಥಲಾ ಅಜಿತ್ ನನ್ನಿಂದ ಹಣ ಪಡೆದು ವಾಪಸ್ ನೀಡಿಲ್ಲ, ಇಷ್ಟೇ ಅಲ್ಲ ಇದಕ್ಕೆ ಚಿತ್ರದಲ್ಲಿ ಅಭಿನಯಿಸುವುದಾಗಿ ಹೇಳಿದ್ದರೂ. ಅದನ್ನೂ ಮಾಡಿಲ್ಲ. ಅಜಿತ್ ಕುಮಾರ್ ಸಾಚ ಅಲ್ಲವೇ ಅಲ್ಲ ಎಂದು ನಿರ್ಮಾಪಕ ಮಣಿಕಂ ನಾರಾಯಣನ್ ಆರೋಪಿಸಿದ್ದಾರೆ.

ಅಜಿತ್ ಕುಮಾರ್ ಹಣ ಪಡೆದು ಮೋಸ ಮಾಡಿದ್ದಾರೆ ಎಂಬ ಗಂಭೀರ ಆರೋಪ ತಮಿಳು ಇಂಡಸ್ಟ್ರೀಯಲ್ಲಿ ಕೋಲಾಹಲ ಸೃಷ್ಟಿಸಿದೆ. ಅಜಿತ್ ಮೇಲೆ ಇದುವರೆಗೂ ಈ ರೀತಿಯ ಒಂದೇ ಒಂದು ಆರೋಪಗಳಿಲ್ಲ. ಸಿನಿಮಾ ಇಂಡಸ್ಟ್ರೀಯ ಜಂಟಲ್‌ಮೆನ್ ಎಂದೇ ಗುರುತಿಸಿಕೊಂಡಿರುವ ಅಜಿತ್ ಮೇಲೆ ಇದೀಗ ವಂಚನೆ ಆರೋಪ ಮಾಡಿದ್ದಾರೆ. 

ಫಿಲಂ ಚೇಂಬರ್‌ಗೆ ನೋವಿನಿಂದ ಪತ್ರ ಬರೆದ ಕಿಚ್ಚ ಸುದೀಪ್: ಸಿನಿಮಾ ಜೀವನದ ಏರಿಳಿತಗಳ ಉಲ್ಲೇಖ

ಮಣಿಕಂ ನಾರಾಯಣನ್ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಹಲವು ವರ್ಷಗಳ ಹಿಂದೆ ಥಲಾ ಅಜಿತ್ ನನ್ನಿದ ಹಣ ಪಡೆದಿದ್ದಾರೆ. ಅಜಿತ್ ತನ್ನ ಪೋಷಕರನ್ನು ಮಲೇಷಿಯಾ ಪ್ರವಾಸಕ್ಕೆ ಕಳುಹಿಸಲು ಹಣ ಪಡೆದಿದ್ದಾರೆ. ಹಣ ಪಡೆದ ವೇಳೆ , ಹಣಕ್ಕೆ ಪ್ರತಿಯಾಗಿ ನಿಮ್ಮ ಚಿತ್ರದಲ್ಲಿ ಅಭಿನಯಿಸುತ್ತೇನೆ. ನನ್ನ ವೇತನದಲ್ಲಿ ಪಡೆದುಕೊಂಡಿರುವ ಹಣ ಹೊಂದಿಸಿಕೊಳ್ಳಿ ಎಂದಿದ್ದರು. ಇದುವರೆಗೂ ಅಜಿತ್ ನನ್ನ ಹಣ ಹಿಂತಿರುಗಿಸಿಲ್ಲ. ಚಿತ್ರವನ್ನೂ ಮಾಡಿಲ್ಲ. ಅಜಿತ್ ಜಂಟಲ್‌ಮೆನ್ ಅಲ್ಲ. ವಂಚಕ ಎಂದು ನಿರ್ಮಾಕ ಮಣಿಕಂ ನಾರಾಯಣನ್ ಆರೋಪಿಸಿದ್ದಾರೆ. 

ಅಜಿತ್ ಪತ್ನಿ ಶಾಲಿನಿ ನನ್ನ ಉತ್ತಮ ಸ್ನೇಹಿತೆಯಾಗಿದ್ದರು. ಆದರೆ ಈಗಲ್ಲ. ಅಜಿತ್ ಪ್ರತಿ ಚಿತ್ರಕ್ಕೆ 50 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಉತ್ತಮ ಹಣ ಸಂಪಾದಿಸುತ್ತಿದ್ದರೂ ವಂಚಿಸುವ ಅಗತ್ಯವೇನಿತ್ತು?ಎಂದು ಮಣಿಕಂ ನಾರಾಯಣನ್ ಪ್ರಶ್ನಿಸಿದ್ದಾರೆ.ಅಜಿತ್ ನಂಬಿ ನಿರ್ಮಾಪಕ ಎಎಂ ರತ್ನಮ್ ಮೋಸ ಹೋಗಿದ್ದಾರೆ. ಅಜಿತ್‌ಗಾಗಿ ಹಲವು ಚಿತ್ರ ನಿರ್ಮಾಣ ಮಾಡಿ ನಷ್ಟ ಅನುಭವಿಸಿದ್ದಾರೆ. ಆದರೆ ಅಜಿತ್ ಅವರ ನೆರವಿಗೆ ಬರಲಿಲ್ಲ ಎಂದು ಆರೋಪಿಸಿದ್ದಾರೆ.

ಸುದೀಪ್ - MN ಕುಮಾರ್​ ವಿವಾದ: ಕುಮಾರ್ ಭುಜದ ಮೇಲೆ ಗನ್ ಇಟ್ಟು ಹೊಡಿತ್ತಿದ್ದಾರೆ- ಜಾಕ್ ಮಂಜು ಕಿಡಿ

ಆಜಿತ್ ವಂಚನೆ ಕುರಿತು ಹಲವು ಬಾರಿ ಆರೋಪ ಮಾಡಿದ್ದೇನೆ. ಆದರೆ ಇದುವರೆಗೂ ಅಜಿತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಣ ಕೂಡ ವಾಪಸ್ ನೀಡಿಲ್ಲ. ಅಜಿತ್ ಕುಮಾರ್‌ನಿಂದ ಹಲವು ನಿರ್ಮಾಪಕರು ಕಂಗಲಾಗಿದ್ದಾರೆ ಎಂದು ಮಣಿಕಂ ನಾರಾಯಣನ್ ಹೇಳಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ