ಬಳಸಿ ಕಸದಂತೆ ಬಿಸಾಕಿದ ಎಂದಿದ್ದ ಸಲ್ಮಾನ್​ ಮಾಜಿ ಗೆಳತಿ ಸೋಮಿಯಿಂದ ಪುನಃ ಭಾವನಾತ್ಮಕ ಪೋಸ್ಟ್​

By Suvarna News  |  First Published Jul 10, 2023, 7:24 PM IST

ಸಲ್ಮಾನ್​ ಖಾನ್​ ಮಾಜಿ ಗೆಳತಿ ಸೋಮಿ ಅಲಿ ಈಗ ಮತ್ತೊಮ್ಮೆ ನಟನ ವಿರುದ್ಧ ಆರೋಪಿಸುತ್ತಲೇ ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿಕೊಂಡಿದ್ದಾರೆ. 
 


1990 ರ ದಶಕದಲ್ಲಿ ಬುಲಂದ್, ಅಂತಾ ಮತ್ತು ಯಾರ್ ಗದರ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸೋಮಿ ಅಲಿ, ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಎನ್ನುವ ವಿಷಯವೇನೂ ಗುಟ್ಟಾಗಿ ಉಳಿದಿಲ್ಲ.  ಎಂಟು ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್​ ಮಾಡಿ ನಂತರ ಸೋಮಿಯನ್ನು ದೂರವಿಟ್ಟಿದ್ದರು ಸಲ್ಮಾನ್​. ಬಾಲಿವುಡ್​ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಕರೆಸಿಕೊಳ್ಳುವ ಸಲ್ಮಾನ್ ಖಾನ್ ಸುತ್ತಲೂ ಇಂಥ ಹಲವು ನಟಿಯರು ಆರೋಪ ಮಾಡಿದ್ದು ಇದೆ. ಸದಾ  ಲವ್​ ಅಫೇರ್ಸ್​ (Love Affair)ಗಳಿಂದ ಇವರು ಸುದ್ದಿಯಾಗುತ್ತಲೇ ಇದ್ದಾರೆ. ಅವರ ಪೈಕಿ ನಟಿ ಸೋಮಿ ಅಲಿ ಒಬ್ಬರು.   ಬಾಲಿವುಡ್​ ಅಂಗಳದಲ್ಲಿ ಸೋಮಿ ಮತ್ತು ಸಲ್ಮಾನ್​ ಸುದ್ದಿ ಹಾಟ್​ ಟಾಪಿಕ್​ (Hot Topic) ಆಗಿದೆ. ಸಲ್ಮಾನ್​ ಖಾನ್​ನ ಮಾಜಿ ಗೆಳತಿಯೂ ಆಗಿರುವ ಸೋಮಿ, ಸಲ್ಮಾನ್​ ವಿರುದ್ಧ ಮಾಡಿರುವ ಗಂಭೀರ ಆರೋಪಗಳು ಕೆಲ ದಿನಗಳಿಂದ ಭಾರಿ ಚರ್ಚೆಯಲ್ಲಿತ್ತು. ಈ ಹಿಂದೆ ಸೋಮಿ ಎಲ್ಲರ ಮುಂದೆ ಒಂದು ಕೋರಿಕೆ ಇಟ್ಟಿದ್ದರು. ಅದೇನೆಂದರೆ, ತನಗೆ ಚಿತ್ರಹಿಂಸೆ ಕೊಟ್ಟು ಬದುಕನ್ನು ನರಕ ಮಾಡಿರುವ ಸಲ್ಮಾನ್​ ಖಾನ್​ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು.  ಒಂದು ವೇಳೆ ಹೀಗೆ ಮಾಡದಿದ್ದರೆ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದೂ  ಬೆದರಿಕೆ ಹಾಕಿದ್ದರು. 'ಸಲ್ಮಾನ್​ ಖಾನ್​ ಎಂದಿಗೂ ಪರ್ಸನಲ್​ ಆಗಿ ಕ್ಷಮೆ ಕೇಳಲಿಲ್ಲ. ಈಗ ಆತನ ಕರಾಳ ಮುಖ ಜಗಜ್ಜಾಹೀರವಾಗಿದೆ. ಹೆಣ್ಣುಮಕ್ಕಳನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ ಸಲ್ಮಾನ್​, ಈಗ ಎಲ್ಲರೆದುರೂ ಕ್ಷಮೆ ಕೇಳಬೇಕು, ನನಗೆ ಆಗಿರುವ ಅನ್ಯಾಯ ಜಗಜ್ಜಾಹೀರ ಆಗಬೇಕು' ಎಂದಿದ್ದರು ನಟಿ. 

ಆದರೆ ಇದುವರೆಗೂ ಸಲ್ಮಾನ್​ ಖಾನ್​  (Salman Khan)  ಅವರಿಗೆ ಏನೂ ಶಿಕ್ಷೆಯಾಗಿಲ್ಲ, ಬದಲಿಗೆ ತಾವೇ ನೋವು ಅನುಭವಿಸುತ್ತಿರುವುದಾಗಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ನೋವಿನ ನುಡಿಗಳನ್ನಾಡಿದ್ದಾರೆ ಸೋಮಿ. ಈ ಬಾರಿ ಅತೀವ ನೋವಿನಿಂದ ಬರೆದುಕೊಂಡಿರುವ ನಟಿ, ಸುದೀರ್ಘ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದಾರೆ. 'ಈ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ನನಗೆ ಒತ್ತಡ ಬರುವುದನ್ನು ನಾನು ಬಲ್ಲೆ. ಹಾಗೆ ಮಾಡದಿದ್ದರೆ  ನನ್ನ ವಿವೇಕವನ್ನೂ ಪ್ರಶ್ನೆ ಮಾಡಲಾಗುತ್ತದೆ ಎನ್ನುವುದೂ ನನಗೆ ಗೊತ್ತು. ನಾನು ಕುಡಿದು ಮನಸ್ಥಿತಿ ಕಳೆದುಕೊಂಡು ಈ ರೀತಿ ಬರೆಯುತ್ತಿದ್ದೇನೆ ಎಂಬ ಗಂಭೀರ ಆರೋಪ ನನ್ನ ಮೇಲೆ ಬಂದರೂ ಅಚ್ಚರಿಯೇನಿಲ್ಲ. ಯಾರು ಏನೇ ಹೇಳಿದರೂ ನಾನು ಈ ವಿಷಯವನ್ನು ಬರೆಯಲೇ ಬೇಕು. ಯಾರು ಏನೇ ವ್ಯಂಗ್ಯ ಮಾಡಿದರೂ ನಾನು ಅನುಭವಿಸುತ್ತಿರುವ ನೋವು ಅವರಿಗೆ ಕಾಣುವುದಿಲ್ಲ. ಏಕೆಂದರೆ ನೀವು ಆ ಅವಮಾನವನ್ನು ಅವರು ಅನುಭವಿಸಿಲ್ಲ. ಎಲ್ಲ ರೀತಿಯ ಚಿತ್ರಹಿಂಸೆ ತಡೆದುಕೊಳ್ಳುತ್ತಿದ್ದೇನೆ' ಎಂದು ನಟಿ ಸೋಮಿ ಹೇಳಿದ್ದಾರೆ.

Tap to resize

Latest Videos

ಇನ್ನಷ್ಟೂ ಸಲ್ಮಾನ್‌ ಖಾನ್‌ ಕರಾಳ ಮುಖ ಬಹಿರಂಗ ಪಡಿಸಿದ ಮಾಜಿ ಗೆಳತಿ ಸೋಮಿ ಆಲಿ

ಇದೇ ವೇಳೆ ಸಲ್ಮಾನ್​ ಖಾನ್​ ಅವರ ಹೆಸರನ್ನು ನೇರವಾಗಿ ಹೇಳದ ಸೋಮಿ, 'ನನಗೆ ಗೊತ್ತು. ನನಗೆ ಹಿಂಸೆ ಕೊಟ್ಟ ಆ ನಟನಿಗೆ ಏನೂ ಆಗುವುದಿಲ್ಲವೆಂದು. ಏಕೆಂದರೆ ಆತ ದೊಡ್ಡ ಸ್ಟಾರ್​. ಆತ ಯಾರ ಜೀವನವನ್ನಾದರೂ ಹಾಳು ಮಾಡಬಹುದು. ಸ್ನೇಹಿತರೆಂದು ನಂಬಿ ಹೋದವರನ್ನು ಕಾಲ ಕಸದಂತೆ ನೋಡಿ ಅವರನ್ನು ಬಳಸಿ ಬೀಸಾಡಬಹುದು. ಆದರೆ ಅವರಿಗೆ ಏನೂ ಆಗುವುದಿಲ್ಲ ಎನ್ನುವುದು ಗೊತ್ತಿದೆ' ಎಂದಿದ್ದಾರೆ. ಸಲ್ಮಾನ್​ ಖಾನ್​ ಅವರ ಬಗ್ಗೆ ಬರೆದ ಕಾರಣ, ಆನ್​ಲೈನ್​ ಮೂಲಕ ತಮಗೆ ಬೆದರಿಕೆಗಳು ಬರುತ್ತಿದ್ದು, ಅದನ್ನು ನಿಲ್ಲಿಸಿ ಎಂದು ನಟಿ ಹೇಳಿಕೊಂಡಿದ್ದಾರೆ. 
 

ಅಂದಹಾಗೆ ಸೋಮಿ, ಮೂಲತಃ ಪಾಕಿಸ್ತಾನಿ (Pakistani) ನಟಿಯಾಗಿರುವ ಸೋಮಿ ಅಲಿ ಹುಟ್ಟಿದ್ದು ಕರಾಚಿಯಲ್ಲಿ. 1976ರಲ್ಲಿ ಹುಟ್ಟಿರುವ ಈಕೆಗೆ ಈಗ 47 ವರ್ಷ ವಯಸ್ಸು. ಸೋಮಿ 16ನೇ ವಯಸ್ಸಿನಲ್ಲಿಯೇ ಸಲ್ಮಾನ್ ಖಾನ್‌ ಅಭಿಮಾನಿಯಾಗಿದ್ದರಂತೆ. ಸಲ್ಮಾನ್​ ಖಾನ್​ರನ್ನು ಹುಚ್ಚು ಹುಚ್ಚಾಗಿ ಪ್ರೀತಿಸುತ್ತಿದ್ದ ಈಕೆ ಅವರನ್ನು ಮದುವೆಯಾಗುವುದಕ್ಕಾಗಿಯೇ ಅಮೆರಿಕದಿಂದ ಬಂದಿದ್ದೆ ಎಂದಿದ್ದಾರೆ. ಕೊನೆಗೂ ಅವರ ಆಸೆ ಈಡೇರಿದ್ದು, ಸಲ್ಮಾನ್‌ರೊಂದಿಗೆ ತೆರೆ ಹಂಚಿಕೊಂಡರು. 1993ರಲ್ಲಿ ಕ್ರಿಶನ್‌ ಅವತಾರ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ಬಂದ ಸೋಮಿ, ಅದಾದ ಬಳಿಕ ಅಂತ್‌, ಯಾರ್‌ ಗದ್ದಾರ್‌, ತೀಸರಾ ಕೌನ್‌, ಆವೋ ಪ್ಯಾರ್‌ ಕರನೇ, ಆಂದೋಲನ್‌ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 1993ರಿಂದ 1999ರ ವರೆಗೂ ಇವರು ರಿಲೇಷನ್‌ಶಿಪ್‌ (Relationship) ನಲ್ಲಿದ್ದರು. 'ಸಲ್ಮಾನ್​ ಖಾನ್​ ತನ್ನನ್ನು ಬೇಕೆಂದ ಹಾಗೆಲ್ಲಾ ಬಳಸಿಕೊಂಡ, ಅತ್ಯಾಚಾರ ಮಾಡಿದ, ಸಿಗರೇಟ್‌ನಿಂದ ಸುಟ್ಟು ಖುಷಿಪಡುತ್ತಿದ್ದ, ನನ್ನ ಮೇಲೆ ಮದ್ಯವನ್ನು ಸುರಿದಿದ್ದ.  ಹಲ್ಲೆ ನಡೆಸಿದ್ದ. ಆತನ ಹೊಡೆತದಿಂದ ಗಾಯಗಳಾಗಿದ್ದವು' ಎಂದು ಅವರು ಹೇಳಿದ್ದರು. 'ಸಲ್ಮಾನ್​ ಖಾನ್​ ಹೊಡೆದಾಗ ಆದ  ಗಾಯಗಳನ್ನು ಮೇಕಪ್‌ನಿಂದ ಮುಚ್ಚಿಕೊಳ್ಳುತ್ತಿದ್ದೆ. ನಾನು ಸ್ಟುಡಿಯೋಗೆ ಹೋದಾಗ ನಿರ್ಮಾಪಕರು ಗಮನಿಸುತ್ತಿದ್ದರು. ಬೇಕಿದ್ದರೆ ಅವರನ್ನೇ ಕೇಳಿ" ಎಂದಿರೋ ಸೋಮಿ "ಅವನೊಂದಿಗೆ ಎಂಟು ವರ್ಷ ಕಳೆದಿದ್ದೆ. ಅವುಗಳು ನನ್ನ ಪಾಲಿಗೆ  ಅತ್ಯಂತ ಕೆಟ್ಟ ದಿನಗಳು. ಆತನಿಗೆ ಹಲವಾರು ಅಫೇರ್‌ಗಳಿವೆ. ಆದರೂ ನನ್ನನ್ನು ಬಳಸಿಕೊಂಡ' ಎಂದಿದ್ದರು. 

ಸಲ್ಮಾನ್​ ಕೈಯಲ್ಲಿ ಸದಾ ಇರೋ ಬ್ರೆಸ್​ಲೆಟ್​ ಹೀಗೆಲ್ಲಾ ಮಾಡತ್ತಾ? ಅಬ್ಬಬ್ಬಾ ಅಂತಿದ್ದಾರೆ ಫ್ಯಾನ್ಸ್​

 
 
 
 
 
 
 
 
 
 
 
 
 
 
 

A post shared by Somy Ali (@realsomyali)

click me!