ಚೆನ್ನೈನಲ್ಲಿ ಖ್ಯಾತ ನಟ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ; ಕಿಡಿಗೇಡಿ ವಿರುದ್ಧ ತೀವ್ರಗೊಂಡ ಆಕ್ರೋಶ

Published : Dec 29, 2023, 08:52 PM ISTUpdated : Dec 31, 2023, 09:23 AM IST
ಚೆನ್ನೈನಲ್ಲಿ ಖ್ಯಾತ ನಟ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ; ಕಿಡಿಗೇಡಿ ವಿರುದ್ಧ ತೀವ್ರಗೊಂಡ ಆಕ್ರೋಶ

ಸಾರಾಂಶ

ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ ಘಟನೆಗೆ ಸಂಬಂಧಪಟ್ಟಂತೆ ಕೇಸ್ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ಆದರೆ, ಇಲ್ಲಿಯವರೆಗೂ ಕಿಡಿಗೇಡಿಯ ಪತ್ತೆ ಆಗಿಲ್ಲ. 

ಡಿಸೆಂಬರ್ 28ರಂದು ನಿಧನರಾದ ತಮಿಳು ಹಿರಿಯ ನಟ, ರಾಜಕಾರಣಿ ವಿಜಯ್‌ಕಾಂತ್ (Vijayakanth) ಅವರ ಅಂತಿಮ ದರ್ಶನಕ್ಕೆ ಚೆನ್ನೈನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಆಗಮಿಸಿದ್ದ ತಮಿಳು ಸ್ಟಾರ್ ನಟ ದಳಪತಿ ವಿಜಯ್ ಮೇಲೆ ಯಾರೋ ದುಷ್ಕರ್ಮಿಗಳು ಚಪ್ಪಲಿ ಎಸೆದಿದ್ದು, ಅದು ಭಾರೀ ದೊಡ್ಡ ಸುದ್ದಿಯಾಗುತ್ತಿದೆ. ಅಂತಿಮ ದರ್ಶನಕ್ಕೆ ಬಂದವರ ಮೇಲೆ ಚಪ್ಪಲಿ ಎಸೆತದ ಘಟನೆ ಸಮಾಜದಲ್ಲಿ ಎಲ್ಲರೂ ತಲೆ ತಗ್ಗಿಸುವಂಥದ್ದು ಎಂದು ಪಕ್ಷಬೇಧ ಮರೆತು ಎಲ್ಲರೂ ಅಭಿಪ್ರಾಯ ಪಡುತ್ತಿದ್ದಾರೆ. ಅಂತಿಮ ದರ್ಶನದ ವೇಳೆ ಸೆಕ್ಯರಿಟಿ ಮತ್ತು ಪೊಲೀಸ್ ವ್ಯವಸ್ಥೆ ಸರಿ ಆಗಿರಲಿಲ್ಲ ಎನ್ನಲಾಗುತ್ತಿದೆ. 

ತಮಿಳು ಸೂಪರ್ ಸ್ಟಾರ್ ನಟ ರಜನಿಕಾಂತ್ (Rajinikanth) ಸೇರಿದಂತೆ ದೇಶದ ಹಲವು ಹಿರಿಯಕಿರಿಯ ನಟರು ಅಗಲಿರುವ ನಟ ವಿಜಯ್‌ಕಾಂತ್ ಅಂತೊಮ ದರ್ಶನಕ್ಕೆ ಆಗಮಿಸಿದ್ದರು. ಆದರೆ, ನಟ ವಿಜಯ್ ಮೇಲೆ ಮಾತ್ರ ಚಪ್ಪಲಿ ಎಸೆಯಲಾಗಿದೆ. ಈ ಬಗ್ಗೆ ವಿಜಯ್ ಅಭಿಮಾನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಜಯ್‌ಕಾಂತ್ ಒಬ್ಬರು ರಾಜಕಾರಣಿ ಮಾತ್ರವಲ್ಲ, ಅದಕ್ಕೂ ಮೊದಲು ಅವರು ನಟರಾಗಿದ್ದವರು. ಒಂದು ನಟನ ಅಂತಿಮ ದರ್ಶನಕ್ಕೆ ಬಂದ ಇನ್ನೊಬ್ಬ ನಟನಿಗೆ ಹೀಗೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಮುಗೀತು ಪ್ರಭಾಸ್ ಕಥೆ ಅಂತಿದ್ದವರ ಕೆನ್ನೆಗೆ ಬಿತ್ತು ಭಾರೀ ತಪರಾಕಿ; ಡಾರ್ಲಿಂಗ್ ಮಿಂಚಿಂಗ್!

ದಳಪತಿ ವಿಜಯ್ (Thalapathy Vijay) ಚೆನ್ನೈ (cHENNAI) ನಲ್ಲಿ ಕಿಕ್ಕಿರಿದು ತುಂಬಿದ್ದ ಜನಗಳ ಮಧ್ಯೆ ಅಗಲಿರುವ ನಟ ವಿಜಯ್‌ಕಾಂತ್ (Actor Vijayakanth funeral) ಪಾರ್ಥೀವ ಶರೀರ ನೋಡಿಕೊಂಡು, ಅದಕ್ಕೆ ಕೈ ಮುಗಿದು, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ, ಜನಗಳ ಮಧ್ಯದಲ್ಲಿ ತೆರಳುತ್ತ ಬಹಳ ಕಷ್ಟಪಟ್ಟು ತಮ್ಮ ಕಾರಿನ ಬಳಿ ಹೋಗಿದ್ದಾರೆ. ಈ ಸಮಯದಲ್ಲಿ ಯಾರೋ ಕಿಡಿಗೇಡಿ ನಟ ವಿಜಯ್ ಬೆನ್ನಿಗೆ ತಾಕುವಂತೆ ಅವರಿಗೆ ಚಪ್ಪಲಿ ಎಸೆದಿದ್ದಾರೆ. ಅದು ವಿಜಯ್ ಬೆನ್ನು ಸವರಿಕೊಂಡು ಪಕ್ಕಕ್ಕೆ ಬಿದ್ದಿದೆ, ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ದಳಪತಿ ವಿಜಯ್ ಅಭಿಮಾನಿಗಳು ಭಾರೀ ಗರಂ ಆಗಿದ್ದಾರೆ. 

ಮುಂದಿನ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಪ್ರಭಾಸ್; ಖ್ಯಾತ ನಿರ್ಮಾಣ ಸಂಸ್ಥೆ, ಅಂತಿಂಥವರಲ್ಲ ನಿರ್ದೇಶಕರು!

ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ ಘಟನೆಗೆ ಸಂಬಂಧಪಟ್ಟಂತೆ ಕೇಸ್ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ಆದರೆ, ಇಲ್ಲಿಯವರೆಗೂ ಕಿಡಿಗೇಡಿಯ ಪತ್ತೆ ಆಗಿಲ್ಲ. 'ಕಿಡಿಗೇಡಿಯನ್ನು ಪತ್ತೆ ಮಾಡಿ ಸೂಕ್ತ ಶಿಕ್ಷೆ ನೀಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ನಟ ದಳಪತಿ ವಿಜಯ್ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೆ ನೀಡಿದ್ದಾರೆ. ಈ ಮೊದಲೂ ಕೂಡ ತಮಿಳು ನಾಡಿನಲ್ಲಿ ಸ್ಟಾರ್ ಅಭಿಮಾನಿಗಳ ಜಗಳ, ಚಪ್ಪಲಿ ಎಸೆತದಂತ ಘಟನೆಗಳು ಜರುಗಿವೆ. ರಜನಿಕಾಂತ್ ಮತ್ತು ಅಜಿತ್ ಅಭಿಮಾನಿಗಳು ದಳಪತಿ ವಿಜಯ್ ಕಂಡರೆ ಸಖತ್ ಉರಿದು ಬೀಳುತ್ತಿದ್ದಾರೆ.  

ಹೊಸಬಳೊಂದಿಗೆ ಅರ್ಜನ್ ಕಪೂರ್ ಕುಚ್‌ ಕುಚ್‌; ವಿರಹ ವೇದನೆಯಲ್ಲಿ ಬೇಯುತ್ತಿರುವ ಮಲೈಕಾಗೆ ಯಾರು ಗತಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?