
ತಮಿಳು ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಕಸ್ತೂರಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಸ್ಟ್ರಾಂಗ್ ವುಮೆನ್ ಆಗಿ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್‌ಗಳಿಗೆ ಉತ್ತರ ಕೊಡುವ ನಟಿ 8 ವರ್ಷಗಳ ಹಿಂದೆ ವೈರಲ್ ಆದ ಫೋಟೋಶೂಟ್ ಬಗ್ಗೆ ಮಾತನಾಡಿದ್ದಾರೆ. ಅಮೆರಿಕಾದಲ್ಲಿ ಕ್ಲಿಕ್ ಮಾಡಿದ ಫೋಟೋ ಭಾರತದಲ್ಲಿ ವೈರಲ್ ಆಗಿತ್ತು ಹೇಗೆಂದು ಈಗಲ್ಲೂ ಗೊತ್ತಿಲ್ಲ ಎನ್ನುತ್ತಿದ್ದಾರೆ.
ಹೌದು! ನಟಿ ಕಸ್ತೂರಿ 8 ವರ್ಷಗಳ ಹಿಂದೆ ಅಮೆರಿಕಾ ಮ್ಯಾಗಜಿನ್‌ಗೆ ಮಾಡಿಸಿದ ಮದರ್‌ಹುಡ್ ಫೋಟೋಶೂಟ್ ಸಖತ್ ವೈರಲ್ ಆಗಿತ್ತು. ಆ ಫೋಟೋಗಳಲ್ಲಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡು ಬೋಲ್ಡ್ ನಟಿ ಎನಿಸಿಕೊಂಡರು. 'ಅಮೆರಿಕಾದ ಸಂಸ್ಥೆಗಾಗಿ ಆ ಫೋಟೋಶೂಟ್ ಮಾಡಬೇಕಾಯಿತ್ತು. ಆದರೆ ಅಲ್ಲಿ ಮಾಡಿದ ಫೋಟೋಶೂಟ್ ಫೋಟೋಗಳು ಭಾರತದಲ್ಲಿ ಹೇಗೆ ಬಂತು ಗೊತ್ತಿಲ್ಲ. ಆ ಫೋಟೋಗಳು ಇಲ್ಲಿ ವೈರಲ್ ಆದಾಗ ಕೊಂಚ ಭಯವಾಗಿತ್ತು. ಅಮೆರಿಕಾದಲ್ಲಿ ಇದೆಲ್ಲಾ ಓಕೆ ಆದರೆ ನಮ್ಮವರು ಒಪ್ಪಿಕೊಳ್ಳುತ್ತಾರೋ ಇಲ್ವೋ ಅನ್ನೋ ಭಯ ಶುರುವಾಗಿತ್ತು. ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ಆತಂಕಗೊಂಡಿದ್ದೆ. ಆದರೆ ನನ್ನ ಅದೃಷ್ಠ ಒಂದೂ ನೆಗೆಟಿವ್ ಕಾಮೆಂಟ್ ಬರಲಿಲ್ಲ' ಎಂದು ಇತ್ತೀಚಿಗೆ ನಡೆದ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಕಸ್ತೂರಿ ಮಾತನಾಡಿದ್ದಾರೆ.
'ನಾನು ತಮಿಳು ನಾಡಿಗೆ ಭೇಟಿ ನೀಡಿದಾಗ ಮಹಿಳೆಯರು ನನ್ನ ಧೈರ್ಯವನ್ನು ಮೆಚ್ಚಿಕೊಂಡರು. ತುಂಬಾ ಎಮೋಷನಲ್ ಆಗಿ ಪ್ರೀತಿ ತೋರಿಸಿ ಅಭಿನಂದಿಸಿದರು. ನನ್ನ ಮೆಚ್ಯುರಿಟಿಯನ್ನು ಅಪಾರ ಜನರು ಮೆಚ್ಚಿಕೊಂಡರು. ಕೆಲವು ಮಾತ್ರ ಅದಕ್ಕೆ ಚಕಾರ ಎತ್ತಿದ್ದರು. ಅಂತಹ ಕೆಲವರು ಇರುತ್ತಾರೆ ಬಿಡಿ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ' ಎಂದು ಕಸ್ತೂರಿ ಹೇಳಿದ್ದಾರೆ.
ಆಂಟಿ ಆಂಟಿ ಅನ್ನೋಕೆ ನಾಚಿಕೆ ಆಗಲ್ವಾ?; ಹುಡುಗರ ಡಬಲ್ ಮೀನಿಂಗ್ ಕಾಮೆಂಟ್‌ಗೆ ನಟಿ ಕಸ್ತೂರಿ ಕ್ಲಾಸ್
'ನಾನು ಯಾವ ಫೋಟೋ ಅಪ್ಲೋಡ್ ಮಾಡಿದ್ದರೂ ನನ್ನ ಡ್ರೆಸ್ಸಿಂಗ್ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಅರೆಬೆತ್ತಲೇ ಫೋಟೋಶೂಟ್‌ನಲ್ಲಿ ಡ್ರೆಸ್ ಬಗ್ಗೆ ಹೇಳಿದ್ದಾರೆ. ನನಗೆ ಕಂಫರ್ಟ್ ಎನಿಸಿದನ್ನು ಮಾತ್ರ ನಾನು ಧರಿಸುತ್ತೇನೆ. ಅವರು ಏನು ಅಂತಾರೆ ಇವರು ಏನಂತಾರೆ ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸಿನಿಮಾದಲ್ಲಿ ಕೆಲಸ ಮಾಡುತ್ತಿರುವೆ ಅಂದ್ಮೇಲೆ ನಾನು ಈ ರೀತಿ ಡ್ರೆಸ್ ಧರಿಸಬೇಕು. ಅದು ನಮ್ಮ ವೃತ್ತಿ ಜೀವನದ ಒಂದು ಭಾಗವಾಗಿರುತ್ತದೆ. ಕೆಲವರು ಒಪ್ಪಿಕೊಳ್ಳುವುದಿಲ್ಲ ಕೆಲವರು ಪಾಸಿಟಿವ್ ಆಗಿ ಸ್ವೀಕರಿಸುತ್ತಾರೆ ಇನ್ನೂ ಕೆಲವರು ಸರಿಯಾಗಿ ಮಾಡಿದೀಯಾ ಎನ್ನುತ್ತಾರೆ' ಎಂದಿದ್ದಾರೆ ಕಸ್ತೂರಿ.
ದಿನಕ್ಕೆರಡು ಕರ್ಜೂರ, ಕೆಂಪಕ್ಕಿ ಮತ್ತು ರೋಸ್ ಮಿಲ್ಕ್: ಕಿರುತೆರೆ ನಟಿ ದೀಪಿಕಾ ಪ್ರೆಗ್ನೆನ್ಸಿ ಫುಡ್ ಹೀಗಿದೆ...
ಆಂಟಿ ಅನ್ನೋರಿಗೆ ಕ್ಲಾಸ್:
ಕೆಲವು ದಿನಗಳ ಹಿಂದೆ ನಿರೂಪಕಿ ಅನಸೂಯ ಭಾರದ್ವಾಜ್‌ನ ಕೆಲವು ಪುಂಡ ಪೋಕರಿಗಳು ಆಂಟಿ ಆಂಟಿ ಎಂದು ಕರೆಯುತ್ತಾರೆ. ಇದಕ್ಕೆ ಗರಂ ಆದ ಕಸ್ತೂರಿ ಕ್ಲಾಸ್ ತೆಗೆದುಕೊಂಡಿದ್ದಾರೆ. 'ಪುಟ್ಟ ಮಕ್ಕಳು ಆಂಟಿ ಎಂದು ಕರೆಯುವುದಕ್ಕೂ ದೊಡ್ಡವರು ಆಂಟಿ ಎಂದು ಕರೆಯುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಅದನ್ನು ಮೊದಲು ಅರ್ಥ ಮಾಡಿಕೊಳ್ಳಿ.ನೀವು ದೊಡ್ಡವರಾಗಿ ಹೆಣ್ಣುಮಕ್ಕಳನ್ನು ಆಂಟಿ ಎಂದು ಕರೆಯುವುದು ದೊಡ್ಡ ತಪ್ಪು. ಯಾಕೆ ಹುಡುಗರು ಅಂಕಲ್ ಆಗಲ್ವಾ? ಹೆಣ್ಣು ಮಕ್ಕಳು ಮಾತ್ರಾ ಆಂಟಿನಾ.ಒಬ್ಬ ಕಲಾವಿದ ಅಥವಾ ಸ್ಟಾರ್ ನಟನ ಬಳಿ ಹೋಗಿ ನೀವು ಅಂಕಲ್ ಎಂದು ಕರೆಯಲು ಸಾಧ್ಯವೇ? ಅವರಿಗೆ ವಯಸ್ಸಾಗಿದ್ದರೂ ಅಂಕಲ್ ಎಂದು ಕರೆಯುವುದಿಲ್ಲ. ಆಂಟಿ ಅನ್ನೋ ಪದಕ್ಕೆ ಡಬಲ್ ಮೀನಿಂಗ್ ಇದೆ.'ಅನಸೂಯಗಿಂತ ಎರಡರಷ್ಟು ವಯಸ್ಸಾಗಿರುವ ನಾಯಕರಿದ್ದಾರೆ ಅವರಿಗೆ ಯಾಕೆ ಅಂಕಲ್ ಎಂದು ಕರೆಯುವುದಿಲ್ಲ? ಅಂಕಲ್ ಎಂದು ಕರೆಯಲು ಧೈರ್ಯ ಇದ್ಯಾ?ಆಂಟಿ ಎಂದು ಕರೆಯುವುದಕ್ಕೆ ಎರಡು ಕಾರಣವಿದೆ...ಒಂದು ಆಂಟಿ ಎನ್ನುತ್ತಿರುವವರ ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಇರುತ್ತದೆ ಮತ್ತೊಂದು ಅವರಿಗೆ ನೋವು ಮಾಡುವುದು. ಈ ವಿಚಾರದಲ್ಲಿ ನಾನು ಅನಸೂಯ ಪರ' ಎಂದು ಕಸ್ತೂರಿ ಇತ್ತೀಚಿಗೆ ನಡೆದ ಖಾಸಗಿ ಸಂದರ್ಶನದಲ್ಲಿ ರಿಯಾಕ್ಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.