
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಅಮಿತಾಭ್ ಸದ್ಯ ಪ್ರಭಾಸ್ ಮತ್ತು ದೀಪಿಕಾ ನಟನೆಯ ಪ್ರಾಜೆಕ್ಟ್ K ಸಿನಿಮಾದ ಶೂಟಿಂಗ್ ನಲ್ಲಿ ಇದ್ದರು. ಪ್ರಾಜೆಕ್ಟ್ K ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು ಅಮಿತಾಭ್ ಕೂಡ ಭಾಗಿಯಾಗಿದ್ದರು. ಚಿತ್ರೀಕಕಣದ ಆಕ್ಷನ್ ದೃಶ್ಯದ ಚಿತ್ರೀಕರಣ ವೇಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಅವರೇ ತಮ್ಮ ಬ್ಲಾಕ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಪಕ್ಕೆಲುಬಿಗೆ ಬಲವಾಗಿ ಏಟು ಬಿದ್ದಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಲಾಗಿದೆ. ಸದ್ಯ ಅಮಿತಾಭ್ ಹೈದರಾಬಾದ್‌ನಿಂದ ಮುಂಬೈಗೆ ತೆರಳಿದ್ದು ಜಲ್ಸಾ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಅಮಿತಾಭ್ ಅವರಿಗೆ ಗಾಯವಾಗಿದೆ ಎನ್ನುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಆದರೆ ಯಾರು ಭಯ ಪಡಬೇಕಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅಮಿತಾಭ್ ಬೇಗ ಚೇತರಿಸಿಕೊಂಡು ಶೀಘ್ರದಲ್ಲೇ ಚಿತ್ರೀಕರಣಕ್ಕೆ ಮರಳಿದ್ದಾರೆ ಎಂದು ಮಾಹಿತಿ ನೀಡಿದೆ.
ಈ ಬಗ್ಗೆ ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ, 'ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ K ಚಿತ್ರೀಕರಣದಲ್ಲಿ, ಆಕ್ಷನ್ ಶಾಟ್ ಸಮಯದಲ್ಲಿ, ನಾನು ಗಾಯಗೊಂಡಿದ್ದೇನೆ, ಹೈದರಾಬಾದ್‌ನಲ್ಲಿ. ಮನೆಗೆ ಹಿಂತಿರುಗಿದ್ದೇನೆ. ಸ್ಟ್ರಾಪಿಂಗ್ ಮಾಡಲಾಗಿದೆ ಸದ್ಯ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
Kabzaa Trailer ಬಿಡುಗಡೆ ಮಾಡಿದ ಬಾಲಿವುಡ್ ಬಿಗ್ ಬಿ: ಎರಡೂವರೆ ಗಂಟೆ ತಡವಾಗಿ ರಿಲೀಸ್..!
'ಸದ್ಯ ನಾನು ಮಾಡಬೇಕಾಗಿದ್ದ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿದ್ದೀನಿ. ನಾನು ಗುಣಮುಖವಾಗುವವರೆಗೂ ಮುಂದೂಡಲಾಗಿದೆ. ನಾನು ಜಲ್ಸಾದಲ್ಲಿ ವಿಶ್ರಾಂತಿ ಪಡೆಯುತ್ತೇನೆ ಮತ್ತು ಎಲ್ಲಾ ಅಗತ್ಯ ಚಟುವಟಿಕೆಗಳಿಗೆ ನಾನು ಮೊಬೈಲ್ ಬಳಸುತ್ತಿದ್ದೀನಿ. ನಾನು ವಿಶ್ರಾಂತಿಯಲ್ಲಿದ್ದೀನಿ ಮತ್ತು ಸಾಮಾನ್ಯವಾಗಿ ಮಲಗಿದ್ದೇನೆ. ಕಷ್ಟವಾಗುತ್ತದೆ ಅಥವಾ ಹೇಳುತ್ತೇನೆ. ನಾನು ಇಂದು ಸಂಜೆ ಜಲ್ಸಾ ಗೇಟ್‌ನಲ್ಲಿ ಹಿತೈಷಿಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬರಬೇಡಿ. ಬರುವ ಉದ್ದೇಶವಿರುವವರಿಗೆ ನಿಮ್ಮಿಂದ ಸಾಧ್ಯವಾದಷ್ಟು ಮಾಹಿತಿ ನೀಡಿ. ಉಳಿದೆಲ್ಲವೂ ಚೆನ್ನಾಗಿದೆ' ಎಂದು ಬರೆದುಕೊಂಡಿದ್ದಾರೆ.
ಅಮಿತಾಭ್ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!
ಪ್ರಾಜೆಕ್ಟ್ K ಬಗ್ಗೆ
ಈ ಸಿನಿಮಾದಲ್ಲಿ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಭ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಿಂದ ಒಂದು ಪೋಸ್ಟರ್ ಬಿಟ್ಟರೇ ಯಾವುದೇ ಅಪ್‌ಡೇಟ್ ಹೊರಬಿದ್ದಿಲ್ಲ. ನಾಗ್ ಅಶ್ವಿನ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ. ಅಮಿತಾಭ್ ಕಳೆದ 5 ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಅಮಿತಾಭ್ ಅವರಿಗೆ ಅನೇಕರು ಟ್ವೀಟ್ ಮಾಡಿ ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.