'ನಾನು ಯಾವುದೇ ಶೂಟಿಂಗ್ ಸೆಟ್‌ಗೆ ಹೋದಾಗ ಮೊದಲು ಅಲ್ಲಿನ ವಾತಾವರಣವನ್ನು ಸ್ಟಡಿ ಮಾಡುತ್ತೇನೆ. ನಿರ್ದೇಶಕರು, ಸಹನಟರು, ನಟಿಯರು, ಕ್ಯಾಮೆರಾಮನ್ ಹೀಗೆ ಎಲ್ಲರನ್ನೂ ಮಾತನಾಡಿಸುತ್ತೇನೆ, ಅವರ ಮೈಂಡ್ ಸ್ಟಡಿ ಮಾಡಿಕೊಳ್ಳುತ್ತೇನೆ.
ತಮಿಳು ಮೂಲದ ನಟ, ಪ್ಯಾನ್ ಇಂಡಿಯಾ ಸ್ಟಾರ್ ವಿಜಯ್ ಸೇತುಪತಿ ಮಾತನಾಡಿರುವ ಸಂದರ್ಶನವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಲಿವುಡ್ ನಟಿ ಕತ್ರಿನಾ ಕೈಫ್ ಬಗ್ಗೆ ವಿಜಯ್ ಸೇತುಪತಿ ಮಾತನಾಡಿದ್ದಾರೆ. ಅವರ ಮಾತನ್ನು ಕೇಳಿ ಪಕ್ಕದಲ್ಲಿದ್ದವರು ಜೋರಾಗಿ ನಕ್ಕಿದ್ದಾರೆ. ಅವರೆಲ್ಲ ನಕ್ಕ ಬಳಿಕ ನಟ ವಿಜಯ್ ಸೇತುಪತಿ 'ನೀವೆಲ್ಲಾ ಏಕೆ ನಗುತ್ತಿದ್ದೀರಿ, ನಾನೇನಾದ್ರೂ ತಪ್ಪು ಮಾತನಾಡಿದೆನಾ?
ಬಹುಶಃ ನಾನು ಸೀರಿಯಸ್ ಆಗಿ ಮಾತನಾಡಿದೆ ಎಂದು ನೀವು ನಕ್ಕಿರಬಹುದು' ಎಂದು ಹೇಳಿ ಅಲ್ಲಿನ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಹಾಗಿದ್ದರೆ ನಟ ವಿಜಯ್ ಸೇತುಪತಿ ನಟಿ ಕತ್ರಿನಾ ಕೈಫ್ ಬಗ್ಗೆ ಏನು ಹೇಳಿದ್ದಾರೆ? ಕುತೂಹಲ ತಣಿಸಲು ಮುಂದಕ್ಕೆ ಓದಿ.. 'ನಟಿ ಕತ್ರಿನಾ ಕೈಫ್ ತುಂಬಾ ಸೆನ್ಸಿಬಲ್, ಬ್ಯೂಟಿಫುಲ್' ಎಂದು ಹೇಳಿದ್ದಾರೆ ನಟ ವಿಜಯ್ ಸೇತುಪತಿ. ಅದನ್ನು ಬೇರೆ ರೀತಿ ಅರ್ಥ ಮಾಡಿಕೊಂಡ ಅಲ್ಲಿದ್ದವರು ನಕ್ಕಿದ್ದಾರೆ.
ಬೇಬಿ ಶ್ಯಾಮಿಲಿಗೆ 'ಕರ್ಮ' ಅನುಭವಿಸಲೇಬೇಕು, ಮಾಡಿದ್ದುಣ್ಣೋ ಮಾರಾಯ ಅಂತಿರೋದ್ಯಾಕೆ?
ನಟ ವಿಜಯ್ ಸೇತುಪತಿ ಹಾಗೂ ನಟಿ ಕತ್ರಿನಾ ಕೈಫ್ ಮೇರಿ ಕ್ರಿಸ್‌ಮಸ್ (Merry Christmas)ಎಂಬ ಬಾಲಿವುಡ್ ಸಿನಿಮಾದಲ್ಲಿ ಒಟ್ಟಿಗೇ ನಟಿಸಿದ್ದಾರೆ. ಶೂಟಿಂಗ್ ವೇಳೆ ಸಹಜವಾಗಿಯೇ ಸಹನಟಿ ಕತ್ರಿನಾ ಕೈಫ್ ಪರ್ಸನಾಲಿಟಿ ಬಗ್ಗೆ ನಟ ವಿಜಯ್ ಸೇತುಪತಿ ಅರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಿವರವಾಗಿ ಮಾತನಾಡಿರುವ ವಿಜಯ್ ಸೇತುಪತಿ 'ನಾನು ಯಾವುದೇ ಶೂಟಿಂಗ್ ಸೆಟ್‌ಗೆ ಹೋದಾಗ ಮೊದಲು ಅಲ್ಲಿನ ವಾತಾವರಣವನ್ನು ಸ್ಟಡಿ ಮಾಡುತ್ತೇನೆ. ನಿರ್ದೇಶಕರು, ಸಹನಟರು, ನಟಿಯರು, ಕ್ಯಾಮೆರಾಮನ್ ಹೀಗೆ ಎಲ್ಲರನ್ನೂ ಮಾತನಾಡಿಸುತ್ತೇನೆ, ಅವರ ಮೈಂಡ್ ಸ್ಟಡಿ ಮಾಡಿಕೊಳ್ಳುತ್ತೇನೆ.
ಇಂದು ನಾರ್ತ್-ಸೌತ್ ಸಿನಿಮಾ ಭೇದಭಾವವಿಲ್ಲ, ಭಾರತದ ಸಿನಿಮಾ ಎನ್ನಲಾಗುತ್ತಿದೆ; ಅಲ್ಲು ಅರ್ಜುನ್
ಇಲ್ಲದಿದ್ದರೆ ನನಗೆ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಆಗುವುದಿಲ್ಲ. ನಾನು ಎಲ್ಲರಿಂದ ಸೆಪರೇಟ್ ಆಗಿಬಿಡುತ್ತೇನೆ. ನನಗೆ ಶೂಟಿಂಗ್ ಸ್ಪಾಟ್ ಸೆಟ್ ಆಗುವುದು ತುಂಬಾ ಇಂಪಾರ್ಟೆಟ್. ಅದಾಗದಿದ್ದರೆ ಕೆಲಸ ಮಾಡಲು ನನಗೆ ಸಾಧ್ಯವೇ ಆಗುವುದಿಲ್ಲ' ಎಂದಿದ್ದಾರೆ ನಟ ವಿಜಯ್ ಸೇತುಪತಿ. ವಿಜಯ್ ಸೇತುಪತಿ ಮಾತು ಮಾತು ಕೇಳಿ ಅಲ್ಲಿದ್ದವರು ನಕ್ಕಿದ್ದಾರೆ. ಆಗ ಅವರಿಗೆ ತಾವು ಏನಾದ್ರು ತಪ್ಪು ಮಾತನಾಡಿದೆನಾ ಎಂಬ ಸಂದೇಹ ಬಂದಿದೆ. ಅದನ್ನು ಅವರು ಅಲ್ಲಿದ್ದವರನ್ನು ಕೇಳಿದ್ದಾರೆ. ಆದರೆ ಯಾರೊಬ್ಬರೂ ಅದಕ್ಕೆ ಉತ್ತರಿಸಿಲ್ಲ.
ಪ್ರಶ್ನೆ ಕೇಳಿದ ಪುಟ್ಟ ಬಾಲಕಿಗೆ ನಟ ರಣ್‌ಬೀರ್ ಕಪೂರ್ ಕೊಟ್ಟ ಉತ್ತರ ಕೇಳಿ ಶಾಕ್ ಆಗ್ಬೇಡಿ!
ತಕ್ಷಣ ಅವರೇ ಏನೋ ಅರ್ಥೈಸಿಕೊಂಡವರಂತೆ, ಬಹುಶಃ ನೀವೆಲ್ಲಾ ನಕ್ಕಿದ್ದು ನಾನು ಈ ವಿಷಯವನ್ನು ತುಂಬಾ ಸೀರಿಯಸ್ಸಾಗಿ ಹೇಳಿದ್ದೇನೆ ಅಂತ ಇರಬಹುದು ಎಂದು ಹೇಳಿದ್ದಾರೆ. ಆದರೆ ಅವರೆಲ್ಲಾ ನಿಜವಾಗಿ ನಕ್ಕಿದ್ದು ಯಾಕೆ ಎಂಬುದು ಯಾರಿಗೂ ಅರ್ಥವಾಗಿಲ್ಲ ಎನ್ನಬಹುದು. ಒಟ್ಟಿನಲ್ಲಿ, ವಿಜಯ್ ಸೇತುಪತಿ ಮಾತು ನಗು ತರಿಸಿರುವುದಂತೂ ಸತ್ಯ.