ನಟ ರಣ್‌ವೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ಅವರಿಗೊಂದು ಮುದ್ದಾದ ಮಗುವಿದೆ, ಹೆಸರು ರಾಹಾ. ಸದ್ಯ ನಟ ರಣ್‌ವೀರ್ ಕಪೂರ್ ತಮ್ಮ ಸಿನಿಮಾ ಕೆರಿಯರ್ ಮುಂದುವರೆಸಿದ್ದರೆ ನಟಿ ಆಲಿಯಾ ಭಟ್..
ಫಂಕ್ಷನ್ ಒಂದರ ವೇದಿಕೆಯಲ್ಲಿದ್ದ ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಅವರಿಗೆ 8 ವರ್ಷದ ಬಾಲಕಿಯೊಬ್ಬಳು ಪ್ರಶ್ನೆ ಕೇಳಿದ್ದಾಳೆ. ಅದಕ್ಕೆ ನಟ ರಣ್‌ಬೀರ್ ಅವರಿಂದ ಉತ್ತರವನ್ನೂ ಪಡೆದಿದ್ದಾರೆ. ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಹಾಗಿದ್ದರೆ ಚಿಕ್ಕ ಬಾಲಕಿ ಕೇಳಿದ ಪ್ರಶ್ನೆಯೇನು? ಅದಕ್ಕೆ ನಟ ರಣ್‌ವೀರ್ ಸಿಂಗ್ ಕೊಟ್ಟ ಉತ್ತರವೇನು ಎಂಬ ಬಗ್ಗೆ ಕುತೂಹಲವಿದ್ದರೆ ಮಿಸ್ ಮಾಡದೇ ಮುಂದಕ್ಕೆ ಓದಿ..
ಕಾಶ್ವಿ ಎಂಬ 8 ವರ್ಷದ ಬಾಲಕಿ 'ನೀವು ಹೀಗೆ ಮನೆಯಿಂದ ಹೊರಗೆ ಓಡಾಡುತ್ತಿರುವಾಗ ನಿಮ್ಮ ಮುದ್ದು ಮಗಳು 'ರಾಹಾ' ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಾಳೆ. ನೀವೂ ಕೂಡ ಅವಳನ್ನು ಮೀಸ್ ಮಾಡಿಕೊಳ್ಳುತ್ತೀರಾ' ಎಂದು ಕೇಳಿದ್ದಾಳೆ. ಅದಕ್ಕೆ ಉತ್ತರ ಕೊಟ್ಟಿರುವ ನಟ ರಣ್‌ಬೀರ್ 'ಹೌದು, ನಾನು ನನ್ನ ಮಗಳು ರಾಹಾರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ.
ಇಂದು ನಾರ್ತ್-ಸೌತ್ ಸಿನಿಮಾ ಭೇದಭಾವವಿಲ್ಲ, ಭಾರತದ ಸಿನಿಮಾ ಎನ್ನಲಾಗುತ್ತಿದೆ; ಅಲ್ಲು ಅರ್ಜುನ್
ಆದರೆ, ಇಂದು ತಂತ್ರಜ್ಞಾನ ತುಂಬಾನೇ ಮುಂದುವರೆದಿದೆ. ಇಂದು ಮೊಬೈಲ್ ಕ್ಯಾಮೆರಾ-ಆ್ಯಪ್ ಮೂಲಕ ನಾವು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಮನೆಯಲ್ಲಿ ಇರುವವರನ್ನು ನೋಡಬಹುದು, ಅವರೊಂದಿಗೆ ಮಾತನಾಡಬಹುದು. ನಾನೂ ಕೂಡ ಇಂದಿನ ತಂತ್ರಜ್ಞಾನದ ಮೂಲಕ ನನ್ನ ಮಗಳನ್ನು ನೋಡುತ್ತೇನೆ. ನಾನು ನನ್ನ ಪತ್ನಿ ಆಲಿಯಾ (Alia Bhatt) ಬಳಿ ನನ್ನ ಮಗುವನ್ನು ಒಮ್ಮೆ ತೋರಿಸು ಎಂದು ಹೇಳಿ ಆಗಾಗ ನೋಡುತ್ತಲೇ ಇರುತ್ತೇನೆ. ನಾನು ನನ್ನ ಮಗಳನ್ನು ಖಂಡಿತವಾಗಿಯೂ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ.
ಪ್ರಭಾಸ್‌ಗೆ 'ಡಾರ್ಲಿಂಗ್' ಅಂತ ಕರೆಯೋ ಸೀಕ್ರೆಟ್ ಬಿಚ್ಚಿಟ್ರು ಮಲಯಾಳಂ ನಟ ಪೃಥ್ವಿರಾಜ್!
ಅದು ಹೇಗೆ ಎಂದರೆ, ನೀನು ನಿನ್ನ ಅಮ್ಮನನ್ನು, ನಿನ್ನ ಅಮ್ಮ ನಿನ್ನನ್ನು ಮಿಸ್ ಮಾಡಿಕೊಂಡಂತೆಯೇ ಇದೂ ಕೂಡ' ಎಂದು ಹೇಳಿ ಚಿಕ್ಕ ಮಗುವಿಗೆ ಅರ್ಥವಾಗುವಂತೆ ಮಾತನಾಡಿ ಆ ಬಾಲಕಿಯನ್ನು ಖುಷಿಗೊಳಿಸಿದ್ದಾರೆ ನಟ ರಣ್‌ವೀರ್ ಕಪೂರ್. ಅಂದಹಾಗೆ, ನಟ ರಣ್‌ವೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು 'ಜಾಕಿ' ಸಿನಿಮಾ ರೀ-ರಿಲೀಸ್
ಅವರಿಗೊಂದು ಮುದ್ದಾದ ಮಗುವಿದೆ, ಹೆಸರು ರಾಹಾ. ಸದ್ಯ ನಟ ರಣ್‌ವೀರ್ ಕಪೂರ್ ತಮ್ಮ ಸಿನಿಮಾ ಕೆರಿಯರ್ ಮುಂದುವರೆಸಿದ್ದರೆ ನಟಿ ಆಲಿಯಾ ಭಟ್ ಹೌಸ್‌ವೈಫ್ ತರ ಇದ್ದು ಮಗುವಿನ ಪಾಲನೆ-ಪೋಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟ ರಣ್‌ವೀರ್ ಕಪೂರ್ ಹಾಗು ರಶ್ಮಿಕಾ ಮಂದಣ್ಣ ನಟನೆಯ 'ಆನಿಮಲ್' ಸಿನಿಮಾ ತೆರೆಗೆ ಬಂದು ಸೂಪರ್ ಹಿಟ್ ದಾಖಲಿಸಿದೆ.