ಕನ್ನಡತಿ, ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಜಮುನಾ ಬಯೋಪಿಕ್ ನಲ್ಲಿ ನಟಿ ತಮನ್ನಾ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ, ಕನ್ನಡತಿ ಜಮುನಾ ಇತ್ತೀಚಿಗಷ್ಟೆ ನಿಧನ ಹೊಂದಿದರು. ಜಮುನಾ ನಿಧನ ಚಿತ್ರರಂಗಕ್ಕೆ ಆಘಾತ ನೀಡಿದೆ. ಜಮುನಾ ನಿಧನಹೊಂದಿ ಕೆಲವೇ ದಿನಕ್ಕೆ ಹೊಸದೊಂದು ವಿಚಾರ ವೈರಲ್ ಆಗಿದೆ. ಖ್ಯಾತ ನಟಿ ಜಮುನಾ ಅವರ ಬಯೋಪಿಕ್ ತೆರೆಮೇಲೆ ಬರ್ತಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಷ್ಟೆಯಲ್ಲ ಜಮುನಾ ಅವವರ ಪಾತ್ರದಲ್ಲಿ ಖ್ಯಾತ ನಟಿ ತಮನ್ನಾ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಜೋರಾಗಿ ಚರ್ಚೆಯಾಗುತ್ತಿದೆ.
ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಜಮುನಾ ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ಮಿಂಚಿದ್ದಾರೆ. ತನ್ನ ವೃತ್ತಿ ಬದುಕಿನಲ್ಲಿ ಸುಮಾರು 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ವರನಟ ರಾಜ್‌ಕುಮಾರ್ ಜೊತೆ 2 ಸಿನಿಮಾಗಳಲ್ಲಿ ನಟಿ ಜಮುನಾ ನಟಿಸಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ `ಸಾಕ್ಷಾತ್ಕಾರ’ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಇತ್ತೀಚಿನ ದಿನಗಳಲ್ಲಿ ಸೌತ್ ಸಿನಿಮಾರಂಗದಲ್ಲಿ ಬಯೋಪಿಕ್ ಗಳ ಹೆಚ್ಚಾಗಿ ಬರ್ತಿವೆ. ಇದೀಗ ಜಮುನಾ ಬಯೋಪಿಕ್ ಬರ್ತಿರುವುದು ಸಿನಿ ಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಕಾಲಿವುಡ್‌ನ ಖ್ಯಾತ ನಿರ್ದೇಶಕರೊಬ್ಬರು ಜಮುನಾ ಬಯೋಪಿಕ್ ತೆರೆಮೇಲೆ ತರುವ ಜವಾಬ್ದಾರಿ ವಹಿಸಿಕೊಂಡಿದ್ದಾರಂತೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು ಜಮುನಾ ಅವರ ಸಂಪೂರ್ಣ ಜೀವನ ತೆರೆಮೇಲೆ ಬರುತ್ತಿದ್ದು ಈಗಗಾಲೇ ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ತಮನ್ನಾ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ ಸದ್ಯದಲ್ಲಿ ಜಮುನಾ ಬಯೋಪಿಕ್ ಸೆಟ್ಟೇರಲಿದೆ. ಈಗಾಗಲೇ ಕೀರ್ತಿ ಸುರೇಶ್ ಮಹಾನಟಿ ಮಾಡಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡರು. ಇದೀಗ ಜಮುನಾ ಬಯೋಪಿಕ್ ಮೂಲಕ ತಮನ್ನಾ ಅಭಿಮಾನಿಗಳ ಮನ ಗೆಲ್ತಾರಾ ಕಾದುನೋಡಬೇಕಿದೆ.
ಕೈ ಕೈ ಹಿಡಿದು ಒಟ್ಟಿಗೆ ಪೋಸ್ ನೀಡಿದ ತಮನ್ನಾ- ವಿಜಯ್ ವರ್ಮಾ; ಲವ್ ಬರ್ಡ್ಸ್ ಫೋಟೋ ವೈರಲ್
ನಟಿ ಜಮುನಾ ಬಗ್ಗೆ
ತೆಲುಗು ಸಿನಿಮಾರಂಗದ ಅತೀ ಹೆಚ್ಚು ಸಿನಿಮಾಗಳಲ್ಲಿ ಜಮುನಾ ನಟಿಸಿದ್ದಾರೆ. ಕರ್ನಾಟಕದಲ್ಲಿ ಜನಿಸಿದ ಜಮುನಾ ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು. 1952ರಲ್ಲಿ ಪುಟ್ಟಿಲು ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ 1954ರಲ್ಲಿ ಆದರ್ಶ ಪತಿ ಸಿನಿಮಾ ಮೂಲಕ ಕನ್ನಡ ಸಿನಿ ಪ್ರಿಯರ ಮುಂದೆ ಬಂದರು.
'ಆ' ಟೈಪ್ ಸೀನ್ ಮಾಡಲು ಹುಡುಗರಿಗೆ ನಾಚಿಕೆ; ನಟಿ ತಮನ್ನಾ ಹೇಳಿಕೆಗೆ ಶಾಕ್ ಆದ ನೆಟ್ಟಿಗರು
ಜಮುನಾ ಅವರು 1965ರಲ್ಲಿ ಪ್ರೊಫೆಸರ್ ಜುಲುರಿ ರಮಣ ರಾವ್ ಅವರನ್ನು ಮದುವೆ ಆಗಿದ್ದರು. 2014ರಲ್ಲಿ ಅವರು ಮೃತಪಟ್ಟರು. ಜಮುನಾ ನಟನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಜಮುನಾ ನಟನೆಯ ಜತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. 1980ರಲ್ಲಿ ಅವರು ಕಾಂಗ್ರೆಸ್ಗೆ ಸೇರ್ಪಡೆ ಆದರು. 1989ರಲ್ಲಿ ಜಮುನಾ ಅವರು ರಾಜಮಂಡ್ರಿಯಿಂದ ಸಂಸದೆ ಆಗಿ ಆಯ್ಕೆ ಆದರು. 1991ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋತರು. ಆ ಬಳಿಕ ರಾಜಕೀಯದಿಂದ ಹೊರನಡೆದರು. ನಂತರ ಅವರು ಬಿಜೆಪಿ ಪರ ಆಗಾಗ ಪ್ರಚಾರ ಮಾಡಿದ್ದರು.