ಕಾಸ್ಟ್​ ಕೌಚಿಂಗ್ ಭಯಾನಕ ಅನುಭವ ಬಿಚ್ಚಿಟ್ಟ ನಟ Ankit Gupta!

By Suvarna News  |  First Published Jan 30, 2023, 3:56 PM IST

ಕಿರುತೆರೆ ನಟ ಅಂಕಿತ್​ ಗುಪ್ತಾ ಅವರು ತಮಗಾಗಿರುವ ಕಾಸ್ಟ್​ ಕೌಚಿಂಗ್​ ಕುರಿತ ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ. ಏನದು?
 


ಕಾಸ್ಟ್​ ಕೌಚಿಂಗ್​ (cast couching) ಎನ್ನುವುದು ಕಳೆದ ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್​ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟ್​ ಕೌಚಿಂಗ್​ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು.  ಇದರ ಬಗ್ಗೆ ಒಂದೆಡೆ ಟೀಕೆ ಟಿಪ್ಪಣೆಗಳೂ ಕೇಳಿ ಬರತೊಡಗಿದವು. ಕ್ರಮೇಣ ಈಗ ಈ ಸುದ್ದಿ ತಣ್ಣಗಾಗುತ್ತಾ ಬಂದಿದೆ.

ಆದರೆ ಕಾಸ್ಟ್​ ಕೌಚಿಂಗ್​ ಅಥವಾ ಮೀ ಟೂ (Me too) ಎಂದಾಕ್ಷಣ ನೆನಪಾಗುವುದು ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಎಂದೇ. ಆದರೆ ಅಸಲಿಗೆ ಹಾಗಲ್ಲ. ಪುರುಷರ ಮೇಲೂ ಇಂಥ ಘಟನೆಗಳು ನಡೆದಿರುವುದು ಅಲ್ಲಲ್ಲಿ ವರದಿಯಾಗಿದೆ. ಇದೀಗ ಖ್ಯಾತ ನಟನೊಬ್ಬ ತಮಗಾಗಿರುವ ಕಾಸ್ಟ್​ ಕೌಚಿಂಗ್​  ಕುರಿತು ಶಾಕಿಂಗ್​ ಹೇಳಿಕೆ ನೀಡಿದ್ದಾರೆ. 'ಉದರಿಯಾನ್' ಹಿಂದಿ ಧಾರಾವಾಹಿ ಮೂಲಕ, ಸೂಪರ್​ ಹೀರೋ (Hero) ಎನಿಸಿಕೊಂಡಿರುವ ನಟ ಅಂಕಿತ್​ ಗುಪ್ತಾ ಈಗ ತಮಗಾಗಿರುವ ಕಹಿ ಅನುಭವಗಳನ್ನು ತೆರೆದಿಟ್ಟಿದ್ದಾರೆ.  ಹಿಂದಿಯ  'ಬಿಗ್ ಬಾಸ್ 16' (Bigg Boss 16) ರ ಸ್ಪರ್ಧಿಯಾಗಿದ್ದ ಅಂಕಿತ್ ಅವರು ಜನರ  ಸದ್ಯ  'ಜುನೂನಿಯತ್' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಂದರ್ಭದಲ್ಲಿ ತಮ್ಮ ಹಿಂದಿನ ಘಟನೆಗೆ ಸಂಬಂಧಿಸಿದ ಆಘಾತಕಾರಿ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. 

Tap to resize

Latest Videos

ಶಾರುಖ್​ ಖಾನ್​ ಇಲ್ಲವೇ ಸೆಕ್ಸ್​ ಬೇಕು: ನಟಿ ನೇಹಾ ಧೂಪಿಯಾ ಹೇಳಿದ್ದೇನು?

ಇದು ತಮ್ಮ  ಜೀವನದ ಭಯಾನಕ ಕ್ಷಣವಾಗಿದೆ ಎಂದಿರುವ ಅಂಕಿತ್​ (Ankith Guptha) ಅವರು, ಯಾರೊಬ್ಬರ ಹೆಸರನ್ನೂ ಹೇಳದೆ ಕಹಿ ಘಟನೆ ವಿವರಿಸಿದ್ದಾರೆ. 'ನಾನು ನಟನಾ ವೃತ್ತಿಯನ್ನು ಆರಿಸಿಕೊಂಡಾಗ ಹಲವರು ನನಗೆ  ವಿಚಿತ್ರವಾದ ಸಲಹೆಗಳನ್ನು ನೀಡಿದರು. ಇದನ್ನು ಕೇಳಿ ನನಗೆ ಹೇಳಿದವರ ಮೇಲೆಯೇ ಸಿಟ್ಟು ಬಂದಿತ್ತು. ಸಾಮಾನ್ಯವಾಗಿ ಇಂಥ ಘಟನೆಗಳು ನಟಿಯರ ಮೇಲೆ  ಆಗುತ್ತದೆ ಎಂದು ಕೇಳಿದ್ದೆ.  ಆದರೆ ನಟರೂ ಇಂಥದ್ದೊಂದು ಕೆಟ್ಟದ್ದನ್ನು ಅನುಭವಿಸಬೇಕು ಎಂದು ತಿಳಿದಿರಲಿಲ್ಲ.  ನಟನಾ ಕ್ಷೇತ್ರದಲ್ಲಿ ಬದುಕಲು ರಾಜಿ ಮಾಡಿಕೊಳ್ಳಲೇ ಬೇಕು ಮತ್ತು ಉದ್ಯೋಗವನ್ನು ಪಡೆಯಲು ಪ್ರತಿಯೊಬ್ಬರೂ ಆ ಒಂದು ಘಟನೆ ಮೂಲಕ ಹೋಗಬೇಕು ಎಂದು ಕೆಲವರು ಹೇಳಿದ್ದರು. ನಾನದನ್ನು ನಂಬಿರಲಿಲ್ಲ. ಇಂದು ಸಿನಿಮಾವನ್ನು ಆಳುತ್ತಿರುವ ಬಹುತೇಕ ಎಲ್ಲಾ ದೊಡ್ಡದೊಡ್ಡ ತಾರೆಯರು ಈ ಹಂತವನ್ನು ತಲುಪಲು ಅವರು ಕೆಲವು ರಾಜಿ ಮಾಡಿಕೊಂಡಿದ್ದಾರೆ ಎಂದು ಉದ್ಯಮದಲ್ಲಿರುವ ಜನರು ಹೇಳಿಕೊಂಡಿದ್ದನ್ನೂ ಕೇಳಿದ್ದೆ ಎಂದು  ಅಂಕಿತ್ ಗುಪ್ತಾ ಹೇಳಿದರು.

ನಾನು ಆರಂಭದಲ್ಲಿ ಇದನ್ನು ಕೇಳಿದ್ದೆ ಅಷ್ಟೇ. ಆದರೆ ನನ್ನ ಅನುಭವಕ್ಕೆ ಅದು ಬಂದಿರಲಿಲ್ಲ. ನಾನು ಅಂಥ ವ್ಯಕ್ತಿ ಅಲ್ಲ, ನಾನು ಹಾಗೆಲ್ಲಾ ಮಾಡಲು ಸಾಧ್ಯವೇ ಇಲ್ಲ ಎಂಬ ಅಚಲ ಭರವಸೆ ನನ್ನ ಮೇಲೆ ನನಗೆ ಇತ್ತು. ಆದರೆ ನಟನಾಗಲು ಹೋದಾಗಲೇ ತಿಳಿದದ್ದು ನನ್ನ ಭರವಸೆ ಎಲ್ಲವೂ ಟುಸ್​ ಎಂದು ಎಂಬುದಾಗಿ ಅಂಕಿತ್​ ಹೇಳಿದ್ದಾರೆ. "ಒಬ್ಬ ದೊಡ್ಡ ವ್ಯಕ್ತಿ ನನ್ನ ಬಳಿ ನಟನಾಗಿ (Actor) ಮಿಂಚಬೇಕು ಎಂದರೆ ತಮ್ಮ ಜೊತೆ  ರಾಜಿ (compramise) ಮಾಡಿಕೊಳ್ಳಲು ಹೇಳಿದರು. ಅವರು ಹೇಳುತ್ತಿರುವ ರಾಜಿ ಎಂಥದ್ದು ಎಂದು ನನಗೆ ತಿಳಿದಿತ್ತು. ನಾನು ಅದಕ್ಕೆ ಸುತರಾಂ ಒಪ್ಪಲಿಲ್ಲ. ಅವರು ಪದೇ ಪದೇ ನನ್ನನ್ನು ಕೇಳುತ್ತಿದ್ದರು. ಆದರೆ ಯಾವುದಕ್ಕೂ ನಾನು ಬಗ್ಗಲಿಲ್ಲ. ಕೊನೆಗೆ ಅವರು, ಸರಿ... ನಿನಗೆ  ರಾಜಿ ಮಾಡಿಕೊಳ್ಳಲು ಇಷ್ಟವಿಲ್ಲದಿದ್ದರೆ ತೊಂದರೆ ಇಲ್ಲ,  ಕನಿಷ್ಠ ಪಕ್ಷ  ಅದನ್ನು ಸ್ಪರ್ಶಿಸಲು ಅವಕಾಶ ನೀಡು, ಮೇಲಿನಿಂದಾದರೂ ಸ್ಪರ್ಶಿಸಲು (touching)ಅವಕಾಶ ಕೊಡು ಎಂದು ಕೇಳಿದರು. ಅದನ್ನು ಕೇಳಿ ನಾನು  ಆಘಾತಕ್ಕೊಳಗಾದೆ. ನನ್ನ ಜೊತೆ ಇದೇನಾಗುತ್ತಿದೆ ಎಂದು ತಲೆ ತಿರುಗಿದಂತಾಯಿತು ಎಂದು ಅಂಕಿತ್​ ಗುಪ್ತಾ ಹೇಳಿದ್ದಾರೆ.

ದಳಪತಿ ವಿಜಯ್​ ಜೊತೆ ಭಾರಿ ಸುದ್ದಿಯಾಗಿದ್ದ ನಟಿ ಕೀರ್ತಿ ಸುರೇಶ್​ ಮದುವೆ?

ಅಂಕಿತ್ ಗುಪ್ತಾ ಅವರಲ್ಲದೆ, ಟಿವಿ ನಟರಾದ ಕರಣ್ ಟ್ಯಾಕರ್, ರಣವೀರ್ ಸಿಂಗ್, ಕರಣ್ವೀರ್ ಬೋಹ್ರಾ, ಆಯುಷ್ಮಾನ್ ಖುರಾನಾ(Ayushman Khurana), ಆಶಿಶ್ ಬಿಶ್ತ್, ರಿತ್ವಿಕ್ ಧಂಜನಿ ಮತ್ತು ಅಂಕಿತ್ ಸಿವಾಚ್ ಕೂಡ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದಾರೆ ಎನ್ನಲಾಗಿದೆ. 

 

 
 
 
 
 
 
 
 
 
 
 
 
 
 
 

A post shared by Ankit Gupta (@6_ankitgupta)

click me!