ಸಮಾಜ ಬಯಸಿದಾಗ ಅಲ್ಲ, ನಾನು ಬಯಸಿದಾಗ ತಾಯಿ ಆಗ್ತಿದ್ದೀನಿ; ರಾಮ್ ಚರಣ್ ಪತ್ನಿ ಉಪಾಸನಾ

Published : Apr 03, 2023, 01:23 PM IST
ಸಮಾಜ ಬಯಸಿದಾಗ ಅಲ್ಲ, ನಾನು ಬಯಸಿದಾಗ ತಾಯಿ ಆಗ್ತಿದ್ದೀನಿ; ರಾಮ್ ಚರಣ್ ಪತ್ನಿ ಉಪಾಸನಾ

ಸಾರಾಂಶ

ಸಮಾಜ ಬಯಸಿದಾಗ ಅಲ್ಲ, ನಾನು ಬಯಸಿದಾಗ ತಾಯಿ ಆಗ್ತಿದ್ದೀನಿ ಎಂದು ರಾಮ್ ಚರಣ್ ಪತ್ನಿ ಉಪಾಸನಾ ಹೇಳಿದ್ದಾರೆ.  

ಟಾಲಿವುಡ್ ಸ್ಟಾರ್ ರಾಮ್ ಚರಣ್ ಸದ್ಯ ತಂದೆಯಾಗುತ್ತಿರುವ ಸಂತಸದಲ್ಲಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ತಾಯಿಯಾಗುತ್ತಿದ್ದಾರೆ. ಮದುವೆಯಾಗಿ 10 ವರ್ಷದ ನಂತರ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಮೊದಲ ಮಗುವನ್ನು ಸ್ವಾಗತಿಸುತ್ತಿದ್ದಾರೆ. ಗರ್ಭಿಣಿ ಉಪಾಸನಾ ಸದ್ಯ ತನ್ನ ತಾಯ್ತಿತನ ಜರ್ನಿ ಎಂಜಾಯ್ ಮಾಡುತ್ತಿದ್ದಾರೆ. ಉಪಾಸನಾ ಮತ್ತು ರಾಮ್ ಚರಣ್ ಇಬ್ಬರೂ ಇತ್ತೀಚಿಗಷ್ಟೆ ವಿದೇಶಕ್ಕೆ ಹಾರಿದ್ದು ಅಲ್ಲೇ ಒಂದಿಷ್ಟು ಸಮಯ ಕಳೆದು ಭಾರತಕ್ಕೆ ಪಾವಾಸ್ ಆಗಲಿದ್ದಾರೆ. ಈ ಸಂತಸದ ದಿನಗಳ ಜೊತೆಗೆ ಉಪಾಸನಾ ಮದುವೆಯಾದ ಪ್ರಾರಂಭದ ದಿನಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದರು, ಬಾಡಿ ಶೇಮಿಂಗ್‌ಗೆ ಒಳಗಾಗುತ್ತಿದ್ದ ಬಗ್ಗೆ ಬಹಿರಂಗ ಪಡಿಸಿದ್ದರು. ಇದೀಗ ಮದುವೆಯಾಗಿ 10 ವರ್ಷಗಳ ನಂತರ ಮಗುವ ಪಡೆಯುತ್ತಿರುವ ಬಗ್ಗೆ ಮತ್ತು ಸಾಮಾಜ ಹೇಗೆ ಒತ್ತಡ ಹೇರಿತು ಎಂದು ಮೊದಲ ಬಾರಿಗೆ ಉಪಾಸನಾ ಮಾತನಾಡಿದ್ದಾರೆ. 

ಹ್ಯೂಮನ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಉಪಾಸನಾ, ಕುಟುಂಬ ಮತ್ತು ಸಮಾಜದಿಂದ ಸಾಕಷ್ಟು ಒತ್ತವಿತ್ತು. ಆದರೆ ರಾಮ್ ಚರಣ್ ಮತ್ತು ತಾನು ಯಾವುದೇ ಪರಿಣಾಮ ಬೀರಲು ಬಿಡಲಿಲ್ಲ ಎಂದು ಹೇಳಿದ್ದಾರೆ. 'ನಾನು ತುಂಬಾ ಉತ್ಸುಕಳಾಗಿದ್ದೇನೆ. ತುಂಬಾ ಹೆಮ್ಮೆಪಡುತ್ತೇನೆ.  ಸಮಾಜ ಬಯಸಿದಾಗ ಅಲ್ಲ ನಾವು ಬಯಸಿದಾಗ ಮಗು ಪಡೆಯುತ್ತಿದ್ದೇವೆ. ಮದುವೆಯಾಗಿ ಹತ್ತು ವರ್ಷಗಳ ನಂತರ ಈಗ ಮಗುವನ್ನು ಪೆಯುತ್ತಿದ್ದೇವೆ. ಇದು ಉತ್ತಮ ಸಮಯವಾಗಿದೆ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ನಾನು ಅಭಿವೃದ್ದಿ ಹೊಂದಿದ್ದೇವೆ, ಇಬ್ಬರೂ ಆರ್ಥಿಕವಾಗಿ ಸದೃಢರಾಗಿದ್ದೇವೆ. ಮಕ್ಕಳನ್ನೂ ನಾವೆ ನೋಡಿಕೊಳ್ಳಬಹುದು' ಎಂದು ಹೇಳಿದ್ದಾರೆ. 

'ಇದು ನಮ್ಮ ಪರಸ್ಪರ ನಿರ್ಧಾರವಾಗಿತ್ತು. ನಾವು ದಂಪತಿ ಸಮಾಜ ಅಥವಾ ಕುಟುಂಬದಿಂದ ಅಥವಾ ಹೊರಗಿನಿಂದ ಯಾವುದೇ ಒತ್ತಡ ಬರಲು ಬಿಡಲಿಲ್ಲ. ಇದು ನಮ್ಮ ನಮ್ಮ ಸಂಬಂಧದ ಬಗ್ಗೆ ಮತ್ತು ನಾವು ಹೇಗೆ ಮಗುವನ್ನು ಬೆಳೆಸಲಿದ್ದೇವೆ ಎನ್ನುವ ಬಗ್ಗೆ ಸಾಕಷ್ಟು ಹೇಳುತ್ತೆ' ಎಂದು ಹೇಳಿದ್ದಾರೆ. 

ರಾಮ್‌ ಚರಣ್‌ ಬರ್ತಡೇ ಪಾರ್ಟಿಯಲ್ಲಿ ಮಿಂಚಿದ ಕಾಜೋಲ್‌ ಅಗರ್ವಾಲ್‌

ಬಾಡಿ ಶೇಮಿಂಗ್ ಬಗ್ಗೆ ಉಪಾಸನಾ ಮಾತು 

ಸಿಕ್ಕಾಪಟ್ಟೆ ಟ್ರೋಲ್‌ಗಳಿಂದ ಮಾನಸಿಕ ಆರೋಗ್ಯದ ಮೇಲೆ ಬೀರುತ್ತಿತ್ತು ಎಂದು ಉಪಾಸನಾ ಹೇಳಿದ್ದಾರೆ. ಟ್ರೋಲ್‌ಗಳನ್ನು ಎದುರಿಸಲು ಸಿಕ್ಕಾಪಟ್ಟೆ ಕಷ್ಟವಾಯಿತು ಎಂದು ಹೇಳಿದ್ದಾರೆ. ನಂತರದ ದಿನಗಳಲ್ಲಿ ನೆಗೆಟಿವ್ ಕಾಮೆಂಟ್‌ಗಳನ್ನು ನಿರ್ಲಕ್ಷಿಸುವುದನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ. ಇತರರು ಏನು ಹೇಳುತ್ತಾರೆಂದು ಚಿಂತಿಸುವುದಕ್ಕಿಂತ ತನ್ನ ಕೆಲಸ ಮತ್ತು ಆರೋಗ್ಯದ ಮೇಲೆ ಹೆಚ್ಚು ಗಮನ ಕೊಡುವುದು ಮುಖ್ಯ ಎಂದು ಉಪಾಸನಾ ಹೇಳಿದರು. ಅನೇಕ ನಟಿಯರು ಬಾಡಿಶೇಮಿಂಗ್‌ಗೆ ಒಳಗಾಗಿದ್ದಾರೆ. ಅನೇಕರು ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ರಾಮ್ ಚರಣ್ ಪತ್ನಿ ಕೂಡ ಹೊರತಾಗಿಲ್ಲ. 

ಪವರ್‌ಫುಲ್ ಸ್ಟಾರ್ ಜೋಡಿಗಳಲ್ಲಿ ರಾಮ್ ಚರಣ್-ಉಪಾಸನಾ; ನೆಟ್ ವರ್ತ್ ನೋಡಿದ್ರೆ ಅಚ್ಚರಿ ಪಡ್ತೀರಾ!

ರಾಮ್ ಚರಣ್ ಸಿನಿಮಾ 

ರಾಮ್ ಚರಣ್ ಸಿನಿಮಾ ವಿಚಾರಗಳ ಬಗ್ಗೆ ಹೇಳುವುದಾದರೆ ಸದ್ಯ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾ ಬಳಿಕ ರಾಮ್ ಚರಣ್ ಗೇಮ್ ಚೇಂಜರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್  ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ರಾಮ್ ಚರಣ್ ಜೊತೆ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?