ನು ಕಾವಾಲಯ್ಯ, ಆಜ್ ಕಿ ರಾತ್ ಮೀರಿಸುವ ನಟಿ ತಮ್ಮನ್ನ ಸೊಂಟ ಬಳುಕಿಸುವ ಹಾಡಿನ ದೃಶ್ಯ ಲೀಕ್

Published : Apr 09, 2025, 08:18 PM ISTUpdated : Apr 09, 2025, 08:28 PM IST
ನು ಕಾವಾಲಯ್ಯ, ಆಜ್ ಕಿ ರಾತ್ ಮೀರಿಸುವ ನಟಿ ತಮ್ಮನ್ನ ಸೊಂಟ ಬಳುಕಿಸುವ ಹಾಡಿನ ದೃಶ್ಯ ಲೀಕ್

ಸಾರಾಂಶ

ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ ನು ಕಾವಾಲಯ್ಯ, ಆಜ್ ಕಿ ರಾತ್ ಹಾಡು ಭಾರಿ ಜನಪ್ರಿಯತೆ ಪಡೆದಿತ್ತು. ಇದೀಗ ಈ ಹಾಡು ಹಾಗೂ ಡ್ಯಾನ್ಸ್ ಮೀರಿಸುವ ಮತ್ತೊಂದು ತಮನ್ನಾ ಹಾಡಿನ ದೃಶ್ಯ ಲೀಕ್ ಆಗಿದೆ. ರೇಡ್ 2 ಸಿನಿಮಾದ ಈ ಸಾಂಗ್ ಹೇಗಿದೆ? ಹಾಟ್ ಬ್ಯೂಟಿ ತಮನ್ನಾ ಮತ್ತೆ ಎಲ್ಲರ ಗಮನ ಹಿಡಿದಿಟ್ಟಿದ್ದಾರೆ.

ಮುಂಬೈ(ಏ.09) ತಮನ್ನಾ ಭಾಟಿಯಾ ಐಟಂ ಹಾಡು ಪಡ್ಡೆ ಹುಡುಗರ ಮನಸ್ಸು ಕದ್ದಿದೆ. ಮಿಲ್ಕಿ ಬ್ಯೂಟಿಯ ಡ್ಯಾನ್ಸ್‌ಗೆ ಜನರು ಫಿದಾ ಆಗಿದ್ದಾರೆ. ಜೈಲರ್ ಸಿನಿಮಾದಲ್ಲಿ ನು ಕಾವಲಯ್ಯ ಹಾಡು, ಸ್ತ್ರೀ 2 ಸಿನಿಮಾದಲ್ಲಿನ  ಆಜ್ ಕಿ ರಾತ್ ಹಾಡು ಸೂಪರ್ ಹಿಟ್ ಆಗಿತ್ತು. ತಮನ್ನಾ ಡ್ಯಾನ್ಸ್, ಡ್ರೆಸ್, ಹಾಡು ಎಲ್ಲವೂ ಜನರನ್ನು ಆಕರ್ಷಿಸಿತ್ತು. ಇದೀಗ ತಮನ್ನಾ ಮತ್ತೊಂದು ಐಟಂ ಮೂಲಕ ಬರಲು ಸಜ್ಜಾಗಿದ್ದಾರೆ. ಬಾಲಿವುಡ್‌ನ ರೇಡ್ 2 ಸಿನಿಮಾದ ಹಾಡಿನ ದೃಶ್ಯ ಲೀಕ್ ಆಗಿದೆ. ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಮೊಬೈಲ್ ಮೂಲಕ ಸೆರೆ ಹಿಡಿದ ಈ ಹಾಡಿನ ದೃಶ್ಯ ಹಲವರ ನಿದ್ದೆಗೆಡಿಸಿದೆ.

ಬಾಲಿವುಡ್ ಬಹುನಿರೀಕ್ಷಿತ ರೇಡ್ 2 ಸಿನಿಮಾದ ಹಾಡಿನ ತುಣುಕು ಲೀಕ್ ಆಗಿದೆ. ಅಜಯ್ ದೇವಗನ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ತಮನ್ನ ಭಾಟಿಯಾ ಹೆಜ್ಜೆ ಹಾಕಿದ್ದಾರೆ. ಹೈ ಎನರ್ಜಿಕ್ ಡ್ಯಾನ್ಸ್ ಮೂಲಕ  ತಮನ್ನ ಮತ್ತೆ ಪ್ರೇಕ್ಷರ ರಂಜಿಸಲು ಸಜ್ಜಾಗಿದ್ದಾರೆ ಅನ್ನೋದು ಖಚಿತ. ಬೋಲ್ಡ್ ಡ್ರೆಸ್ ಹಾಗೂ ಅಷ್ಟೇ ಬೋಲ್ಡ್ ಸ್ಟೆಪ್ಸ್ ಮೂಲಕ ತಮನ್ನ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ರೇಡ್ 2 ಸಿನಿಮಾದಲ್ಲಿ ತಮನ್ನಾ ಐಟಂ ಹಾಡಿನಲ್ಲಿ ಕಾಣಸಿಕೊಂಡಿದ್ದಾರೆ. ಈ ಹಾಡಿನ ಒಂದು ಸಣ್ಣ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಎಬ್ಬಿಸಿದೆ.

ಬ್ರೇಕ್‌ಅಪ್ ಕೋಲಾಹಲ ಬಳಿಕ ಹೊಸ ಅವತಾರದಲ್ಲಿ ಕಾಣಿಸಿಕೊಂಡ ತಮನ್ನಾ

ರೇಡ್ 2 ಸಿನಿಮಾದ ಟ್ರೇಲರ್‌ನಲ್ಲಿ ತಮನ್ನಾ ಐಟಂ ನಂಬರ್ ದೃಶ್ಯಗಳನ್ನು ಹಾಕಲಾಗಿದೆ. ಇದೀಗ ಶೂಟಿಂಗ್ ಸೆಟ್‌ನಿಂದಲೇ ಸಣ್ಣ ವಿಡಿಯೋ ತುಣುಕು ಸಿನಿಮಾ ಕುತೂಹಲ ಹೆಚ್ಚಿಸಿದೆ. ಕಾವಾಲ ಹಾಗೂ ಆಜ್ ಕಿ ರಾತ್ ಹಾಡಿನ ಬಳಿಕ ಇದೀಗ ತಮನ್ನಾ ಡ್ಯಾನ್ಸ್ ಹಾಗೂ ಐಟಂ ಸಾಂಗ್‌ಗೆ ಭಾರಿ ಬೇಡಿಕೆ ಇದೆ. ಈ ನಿರೀಕ್ಷೆಗೂ ಮೀರಿ ರೇಡ್ 2 ಸಿನಿಮಾದ ಹಾಡೂ ಜನಪ್ರಿಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

 

 

ಈ ಹಾಡಿನಲ್ಲೂ ತಮನ್ನಾ ಕೆಲ ಸಿಗ್ನೇಚರ್ ಸ್ಟೆಪ್ಸ್ ಹಾಕಿದ್ದಾರೆ. ಹೀಗಾಗಿ ಈ ಹಾಡು ಹಾಗೂ ಸ್ಟೆಪ್ಸ್ ವೈರಲ್ ಆಗುವ ಎಲ್ಲಾ ಸಾಧ್ಯತೆ ಇದೆ. ಈ ಹಾಡನ್ನು ಯಾರು ಹಾಡಿದ್ದಾರೆ ಅನ್ನೋ ಕುತೂಹಲ ಹಾಗೇ ಉಳಿದುಕೊಂಡಿದೆ. ಆರಂಭದಲ್ಲಿ ಯೋಯೋ ಹನಿ ಸಿಂಗ್ ಹಾಡು ಹಾಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಯೋ ಯೋ ಹನಿ ಸಿಂಗ್ ಬದಲು ಬೇರೊಬ್ಬರ ಸಿಂಗರ್ ಮೂಲಕ ಈ ಹಾಡು ಹಾಡಿಸಲಾಗಿದೆ. ಆದರೆ ಯಾರು ಆ ಸಿಂಗರ್ ಅನ್ನೋ ಮಾಹಿತಿ ಬಹಿರಂಗವಾಗಿಲ್ಲ.

ರೇಡ್ 2 ಸಿನಿಮಾ ಇದೀಗ ತೀವ್ರ ಕುತೂಹಲ ಕೆರಳಿಸಿದೆ. ತಮನ್ನಾ ಭಾಟಿಯಾ ಐಟಂ ಹಾಡಿಗಾಗಿ ಜನ ಕಾಯುತ್ತಿದ್ದಾರೆ. ಇಷ್ಟೇ ಅಲ್ಲ ಚಿತ್ರಮಂದಿರದಲ್ಲಿ ತಮನ್ನಾ ಡ್ಯಾನ್ಸ್ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಮೇ.1 , 2025ರಂದು ಈ ಸಿನಿಮಾ ತೆರೆಗೆ ಬರುತ್ತಿದೆ. ಅಜಯ್ ದೇವಗನ್, ರಿತೇಶ್ ದೇಶಮುಖ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಅದು ಕೇವಲ ಒನ್ ಸೈಡೆಡ್, ಬ್ರೇಕ್ ಅಪ್ ಸುದ್ದಿ ಬೆನ್ನಲ್ಲೇ ನೋವು ಹೊರಹಾಕಿದ್ರಾ ತಮನ್ನಾ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!