ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷರಾಗಿ ಎನ್ ಎಮ್ ಸುರೇಶ್ ಆಯ್ಕೆ

Published : Sep 23, 2023, 08:11 PM ISTUpdated : Sep 23, 2023, 08:44 PM IST
ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷರಾಗಿ ಎನ್  ಎಮ್ ಸುರೇಶ್ ಆಯ್ಕೆ

ಸಾರಾಂಶ

ಅಧ್ಯಕ್ಷರಾಗಿ ಎನ್ ಎಮ್ ಸುರೇಶ್ ಆಯ್ಕೆಯಾಗಿದ್ದಾರೆ. ಅಭ್ಯರ್ಥಿ (NM Suresh) ಅವರಿಗೆ ಸಾ ರಾ ಗೋವಿಂದ್ ಹಾಗೂ ಉಮೇಶ್ ಬಣಕಾರ್ ಬೆಂಬಲ ವ್ಯಕ್ತಪಡಿಸಿದ್ದರು. ಶಿಲ್ಪಾ ಶ್ರೀನಿವಾಸ್ ಅವರಿಗೆ ಭಾ ಮಾ ಹರೀಶ್ ಬೆಂಬಲವಿತ್ತು ಎನ್ನಲಾಗಿದ್ದು ಚುನಾವಣೆ ತೀವ್ರ ಕೂತೂಹಲಕ್ಕೆ ಕಾರಣವಾಗಿತ್ತು.  

ಇಂದು (23 September 2023) ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಲೆಕ್ಷನ್ (Karnataka Film Chamber Election) ನಡೆದಿದ್ದು, ಅಧ್ಯಕ್ಷರಾಗಿ ಎನ್ ಎಮ್ ಸುರೇಶ್ (NM Suresh) ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಬಾ ಮಾ ಗಿರೀಶ್ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಜಯಸಿಂಹ ಮಸೂರಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಪ್ರಮಿಳಾ ಜೋಷಾಯ್ ಆಯ್ಕೆ ಆಗಿದ್ದಾರೆ. ಈ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದ ಫಿಲಂ ಚೇಂಬರ್ ಚುನಾವಣೆಗೆ ತೆರೆ ಬಿದ್ದಿದೆ. 

ಭಾರೀ ಕುತೂಹಲ ಕೆರಳಿಸಿದ್ದ ಇಂದಿನ ಫಿಲಂ ಚೇಂಬರ್ ಚುನಾವಣೆ ಮತದಾನವು ರೇಸ್ ಕೋರ್ಸ್ ಬಳಿ ಇರುವ 'ಗುರುರಾಜ ಕಲ್ಯಾಣ ಮಂಟ'ದಲ್ಲಿ ನಡೆದಿದೆ.  ಮತದಾನ ಪ್ರಕ್ರಿಯೆ ಮಧ್ಯಾಹ್ನ 2 ರಿಂದ 6ರವರೆಗೂ ನಡೆದಿದ್ದು, ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಮೂರು ವಲಯಗಳಿಂದ ಮತದಾನ ನಡೆದಿದೆ. 

ಇಂದು (23 ಸೆಪ್ಟೆಂಬರ್ 2023) ರಂದು ಸಂಜೆ 6.30ಕ್ಕೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿ ರಾತ್ರಿ 8 ಗಂಟೆಗೂ ಸ್ವಲ್ಪ ಮೊದಲೇ ಫಿಲಂ ಚೇಂಬರ್ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟಿದ್ದು, ಸ್ಪರ್ಧಾ ಕಣದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ನಿರ್ಮಾಪಕರಾದ ಎನ್ ಎಮ್ ಸುರೇಶ್, ಶಿಲ್ಪಾ ಶ್ರೀನಿವಾಸ್, ಮಾರ್ಸ್ ಸುರೇಶ್, ಎ ಗಣೇಶ್ ಇದ್ದರು.  

ಆಕೆಯೊಂದಿಗೆ ಸಿನಿಮಾ ಮಾಡಲಾರೆ; ಹೀಗೆಂದಿದ್ದೇಕೆ ವಿಜಯ್ ಸೇತುಪತಿ?

ಅಧ್ಯಕ್ಷರಾಗಿ ಎನ್ ಎಮ್ ಸುರೇಶ್ (NM Suresh) ಆಯ್ಕೆಯಾಗಿದ್ದಾರೆ. ಅಭ್ಯರ್ಥಿ NM ಸುರೇಶ್ ಅವರಿಗೆ ಸಾ ರಾ ಗೋವಿಂದ್ ಹಾಗೂ ಉಮೇಶ್ ಬಣಕಾರ್ ಬೆಂಬಲ ವ್ಯಕ್ತಪಡಿಸಿದ್ದರು. ಶಿಲ್ಪಾ ಶ್ರೀನಿವಾಸ್ ಅವರಿಗೆ ಭಾ ಮಾ ಹರೀಶ್ ಬೆಂಬಲವಿತ್ತು ಎನ್ನಲಾಗಿದ್ದು ಚುನಾವಣೆ ತೀವ್ರ ಕೂತೂಹಲಕ್ಕೆ ಕಾರಣವಾಗಿತ್ತು.  ಫಿಲಂ ಚೇಂಬರ್ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ ಹಾಗೂ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಇಂದು ಹಣಾಹಣಿ ನಡೆದಿದೆ.  

ಜನರಿಗಾಗಿ ಏನು ಮಾಡ್ತೀರಾ: ಬೊಂಬಾಟ್ ಉತ್ತರ ಕೊಟ್ಟ 'ಜವಾನ್' ಶಾರುಖ್!

ಮತ ಚಲಾವಣೆಯಲ್ಲಿ 1600 ಸದಸ್ಯರು ಭಾಗವಹಿಸಿದ್ದಾರೆ. ಒಟ್ಟಿನಲ್ಲಿ, ಕರ್ನಾಟಕ ಚಲನಚಿತ್ರ ಮಂಡಳಿಯ ಮಂದಿನ ಅಧ್ಯಕ್ಷರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?