
ಮುಂಬೈ (ಮಾ.5): ಕೆಲ ಸಮಯದಿಂದ ಪ್ರೀತಿಯಲ್ಲಿದ್ದ, ಇನ್ನೇನು ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾದ ಬಾಲಿವುಡ್ ಜೋಡಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ನಡುವೆ ಬ್ರೇಕಪ್ ಆಗಿರುವುದು ಸುದ್ದಿಯಾಗಿದೆ. ಸದ್ಯ ಇಬ್ಬರೂ ತಮ್ಮ ವೃತ್ತಿ ಮೇಲೆ ಹೆಚ್ಚಿನ ಗಮನ ಹರಿಸಲಿದ್ದಾರೆ. ಪ್ರೀತಿಯಲ್ಲಿ ಬೇರೆಯಾದರೂ ಪರಸ್ಪರರ ಮೇಲೆ ಗೌರವವಿದ್ದು, ಸ್ನೇಹಿತರಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ. 2023ರಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ ‘ಲಸ್ಟ್ ಸ್ಟೋರೀಸ್-2’ ಸಿನೆಮಾ ಬಿಡುಗಡೆ ಬಳಿಕ ಅವರ ಪ್ರೇಮವಿಚಾರ ಹೊರಬಂದಿತ್ತು.
ಡೇಟಿಂಗ್ ಆರಂಭಿಸಿದಾಗಿನಿಂದಲೂ ಈ ಜೋಡಿ ಪ್ರಮುಖ ಜೋಡಿ ಗುರಿಗಳನ್ನು ಹೊಂದಿದ್ದರು. ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವರು ಮದುವೆಯಾಗಲು ಸಹ ಯೋಜಿಸಿದ್ದರು. ಆದಾಗ್ಯೂ, ಪಿಂಕ್ ವಿಲ್ಲಾದ ವಿಶೇಷ ವರದಿಯ ಪ್ರಕಾರ, ತಮನ್ನಾ ಮತ್ತು ವಿಜಯ್ ವರ್ಮಾ ಕೆಲವು ವಾರಗಳ ಹಿಂದೆ ತಮ್ಮ ಸಂಬಂಧವನ್ನು ಕೊನೆಗೊಳಿಸಿದರು ಎನ್ನಲಾಗಿದೆ.
ಇದನ್ನೂ ಓದಿ: ತಮನ್ನಾ ಭಾಟಿಯಾ ಹೊಸ ಫೋಟೋಗಳು ವೈರಲ್; ಮಿಲ್ಕಿ ಬ್ಯೂಟಿಯಾ ಸೌಂದರ್ಯ ಕಂಡು 'ಅಪ್ಸರೆ' ಎಂದ ಫ್ಯಾನ್ಸ್!
ಸ್ನೇಹಿತರಾಗಿ ಮುಂದುವರಿಯಲಿದ್ದಾರೆ:
ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ವಾರದ ಹಿಂದೆಯಷ್ಟೇ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಆದರೆ ಅವರು ಉತ್ತಮ ಸ್ನೇಹಿತರಾಗಿ ಮುಂದುವರಿಯಲು ನಿರ್ಧರಿಸಿದ್ದಾರೆ. ಜೋಡಿಗಳ ಪ್ರಣಯ ಜರ್ನಿ ಕೊನೆಗೊಂಡಿದ್ದರೂ, ಅವರು ಪರಸ್ಪರ ಗೌರವ ಮತ್ತು ಮೆಚ್ಚುಗೆಯನ್ನು ಹೊಂದಿದ್ದಾರೆ' ಎಂದು ವರದಿ ಹೇಳಿದೆ. ಆದರೆ ಇನ್ನೇನು ಮದುವೆಯಾಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿಗೆ ಈ ದಿಡೀರ್ ಬೆಳವಣಿಗೆ ಅಚ್ಚರಿ ಮೂಡಿಸಿದೆ. ಆದರೆ ಈ ಬಗ್ಗೆ ತಮ್ಮನ್ನಾ ವಿಜಯ ವರ್ಮಾ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ತಮನ್ನಾ ಮತ್ತು ವಿಜಯ್ ಅವರ ಸಂಬಂಧವು ಅವರು ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ ಲಸ್ಟ್ ಸ್ಟೋರೀಸ್ 2 ಬಿಡುಗಡೆಯ ಸಮಯದಲ್ಲಿ ಸಾರ್ವಜನಿಕರ ಗಮನ ಸೆಳೆಯಿತು.
ಇದನ್ನೂ ಓದಿ: ಮೇಕಪ್ ಇಲ್ಲದ ತಮನ್ನಾ ಫೋಟೋ ವೈರಲ್, 'ಅಯ್ಯೋ ಇವಳೇನಾ ಮಿಲ್ಕಿ ಬ್ಯೂಟಿ ಎಂದ ನೆಟಿಜನ್ಸ್
ಚಿತ್ರದ ಪ್ರಚಾರದ ಸಮಯದಲ್ಲಿ, ಈ ಜೋಡಿ ಕೈಕೈ ಹಿಡಿದುಕೊಂಡು ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿತು, ಅಲ್ಲಿಂದ ಬಹಿರಂಗವಾಗಿ ಕೈ ಹಿಡಿದು ಸುತ್ತಾಡಿದ ಜೋಡಿ ಬಹಿರಂಗವಾಗಿ ತಮ್ಮ ಸಂಬಂಧದ ಹೇಳಿಕೊಂಡಿತ್ತು. ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಇದೀಗ ಇನ್ನೇನು ಮದುವೆ ಆಗಲಿದ್ದಾರೆ ಎಂಬ ನಿರೀಕ್ಷೆ ಹೊತ್ತಲ್ಲಿ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.