ಬಾಲಿವುಡ್ ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸ್ತ್ರೀ 2ನಲ್ಲಿ ಭರ್ಜರಿ ಡಾನ್ಸ್ ಮಾಡಿ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಈ ಮಧ್ಯೆ ಅವರ ಟೆಂಪಲ್ ಟೂರ್ ಫೋಟೋ ವೈರಲ್ ಆಗಿದೆ. ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ ತಮನ್ನಾ.
ನಟಿ ತಮನ್ನಾ ಭಾಟಿಯಾ (Actress Tamannaah Bhatia), ದಕ್ಷಿಣದಿಂದ ಬಾಲಿವುಡ್ ವರೆಗೆ ತಮ್ಮ ಛಾಪು ಮೂಡಿಸಿದ್ದಾರೆ. ಮಿಲ್ಕಿ ಬ್ಯೂಟಿ (milky beauty) ಎಂದೇ ಪ್ರಸಿದ್ಧಿ ಪಡೆದಿರುವ ತಮನ್ನಾ ಎಲ್ಲಿಗೆ ಹೋದ್ರೂ ಸುದ್ದಿಯಲ್ಲಿರ್ತಾರೆ. ಬಾಕ್ಸ್ ಆಫೀಸ್ (Box Office) ಚಿಂದಿ ಮಾಡ್ತಿರುವ ಸ್ತ್ರೀ 2 ಹಾರರ್ ಚಿತ್ರದಲ್ಲಿ ತಮನ್ನಾ ಭಾಟಿಯಾ, ಆಜ್ ಕಿ ರಾತ್ ಅಂತ ಕುಣಿದಿದ್ದಾರೆ. ಸ್ತ್ರೀ 2 ಸಿನಿಮಾ ಪ್ರಚಾರದಲ್ಲಿ ನಟಿ ಶ್ರದ್ಧಾ ಕಪೂರ್ ಜೊತೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದ ತಮನ್ನಾ ಭಾಟಿಯಾ, ಶ್ರದ್ಧಾರನ್ನು ಮನಸ್ಪೂರ್ವಕವಾಗಿ ಹೊಗಳಿದ್ದಾರೆ.
ಸ್ತ್ರೀ 2 ತೆರೆಗೆ ಬರುವ ಮುನ್ನ ತಮನ್ನಾ ಭಾಟಿಯಾ ಕಾಶಿ ವಿಶ್ವನಾಥನ ದರ್ಶನ ಪಡೆದು ಬಂದಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಗೆ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದ ತಮನ್ನಾ, ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ಮಹಾದೇವನ ಭಕ್ತಿಯಲ್ಲಿ ಲೀನರಾಗಿದ್ದರು. ಶ್ರಾವಣ ಮಾಸದ ಸಮಯದಲ್ಲಿ ಅನೇಕ ಕಲಾವಿರದು ಪ್ರತಿ ವರ್ಷ ಶಿವನ ದೇವಸ್ಥಾನಕ್ಕೆ ಭೇಟಿ ನೀಡ್ತಾರೆ. ತಮನ್ನಾ ಕೂಡ ಈ ಬಾರಿ ವಿಶ್ವನಾಥನ ದರ್ಶನ ಪಡೆದು ಧನ್ಯರಾಗಿದ್ದಾರೆ. ಅವರ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತಮನ್ನಾ ಭಾಟಿಯಾ ಕಾಶಿ ದೇವಸ್ಥಾನಕ್ಕೆ ನೀಡಿದ್ದ ಫೋಟೋಗಳನ್ನು filmygyan ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ರಾಮ್ ಚರಣ್ ಜೊತೆ ಸೇಲ್ಫಿ ತೆಗೆದುಕೊಳ್ಳುವ ಆಸೆ ಈಡೇರಿತು; ಮೆಲ್ಬೋರ್ನ್ ಮೇಯರ್ ನಿಕ್ ರೀಸ್ ಪೋಸ್ಟ್ ವೈರಲ್!
ಒಂದು ಫೋಟೋದಲ್ಲಿ ತಮನ್ನಾ ದೇವಸ್ಥಾನದ ಮುಂದೆ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಅವರು ಶಿವಲಿಂಗವನ್ನು ಸ್ಪರ್ಶಿಸುತ್ತಿದ್ದಾರೆ. ತಮನ್ನಾ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಹರ್ ಹರ್ ಮಹಾದೇವ್ ಎಂಬ ಘೋಷಣೆ ಕೂಗಿದ್ದಾರೆ. ಇನ್ನು ಕೆಲ ಅಭಿಮಾನಿಗಳು ತಮನ್ನಾ ಬ್ಯೂಟಿ ಮೇಲೆ ಕಣ್ಣು ಹಾಕಿದ್ದಾರೆ. ತಮನ್ನಾ ಮೇಕಪ್ ಇಲ್ಲದೆ ಇಷ್ಟೊಂದು ಸುಂದರವಾಗಿ ಹೇಗೆ ಕಾಣ್ತಾರೆ ಅನ್ನೋದು ಅಭಿಮಾನಿಗಳ ಪ್ರಶ್ನೆ.
ಈ ಮಧ್ಯೆ ಅಭಿಮಾನಿಯೊಬ್ಬರು ಗರ್ಭಗುಡಿ ಪ್ರವೇಶವನ್ನು ಪ್ರಶ್ನಿಸಿದ್ದಾನೆ. ಉತ್ತರ ಭಾರತದ ಬಹುತೇಕ ದೇವಸ್ಥಾನಗಳಲ್ಲಿ ಎಲ್ಲ ಭಕ್ತರೂ ಗರ್ಭಗುಡಿ ಪ್ರವೇಶ ಮಾಡಿ, ದೇವರನ್ನು ಸ್ಪರ್ಶಿಸಬಹುದು. ಆದ್ರೆ ದಕ್ಷಿಣ ಭಾರತದ ಯಾವುದೇ ದೇವಸ್ಥಾನದಲ್ಲಿ ಇದಕ್ಕೆ ಒಪ್ಪಿಗೆ ಇಲ್ಲ. ಉತ್ತರ ಭಾರತದಲ್ಲಿ ಯಾವಾಗ ಈ ಪದ್ಧತಿ ಜಾರಿಗೆ ಬಂತು ಎಂಬುದು ತಿಳಿದಿಲ್ಲ. ಇವರು ದಕ್ಷಿಣ ಭಾರತೀಯರನ್ನು ನೋಡಿ ಕಲಿಯಬೇಕು. ಇಲ್ಲಿ ಯಾವ ಜಾತಿ, ಯಾವ ಧರ್ಮ ಎನ್ನುವುದು ಮುಖ್ಯವಲ್ಲ. ಗರ್ಭಗುಡಿಗೆ ತನ್ನದೇ ಆದ ಮಹತ್ವವಿದೆ. ಅದು ತನ್ನದೇ ಆದ ಶಕ್ತಿಯನ್ನು ಹೊಂದಿರುತ್ತದೆ. ಹಾಗಾಗಿ ಅಲ್ಲಿಗೆ ಎಲ್ಲರ ಪ್ರವೇಶ ಸೂಕ್ತವಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಜನ ಮೆಚ್ಚಿದ ಮಂಥರೆ… ಕಾವೇರಿನ ಯಾರಿಗಾದ್ರೂ ಮೀರ್ಸೋದಕ್ಕೆ ಸಾಧ್ಯಾನ ಅಂತಿದ್ದಾರೆ ಜನ, ನೀವೇನಂತೀರಾ?
ಸದ್ಯ ತಮನ್ನಾ ಸ್ತ್ರೀ 2 ಸಕ್ಸಸ್ ಖುಷಿಯಲ್ಲಿದ್ದಾರೆ. ಸಿನಿಮಾ ತಂಡ ಸಕ್ಸಸ್ ಪಾರ್ಟಿಯನ್ನು ಆಯೋಜಿಸಿತ್ತು. ಪಾರ್ಟಿಯಲ್ಲಿ ತಮನ್ನಾ ಸಖತ್ ಮಜಾ ಮಾಡಿದ್ದರು. ಅದರ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಒಂದು ವಿಡಿಯೋದಲ್ಲಿ ಹಿಟ್ ಹಾಡು ಆಜ್ ಕಿ ರಾತ್ ಹುಕ್ ಸ್ಟೆಪ್ ಹಾಕಿದ್ದಾರೆ ತಮನ್ನಾ ಭಾಟಿಯಾ. ಅವರ ಜೊತೆ ಕೃತಿ ಸನೋನ್ ಮತ್ತು ಶ್ರದ್ಧಾ ಕಪೂರ್ ಡಾನ್ಸ್ ಮಾಡ್ತಿದ್ದಾರೆ. ತಮನ್ನಾ, ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಚಾಂದ್ ಸಾ ರೋಷನ್ ಚೆಹ್ರಾ ಮೂಲಕ ತಮ್ಮ ವೃತ್ತಿ ಜೀವನ ಶುರು ಮಾಡಿದ ತಮನ್ನಾ ಅವರ ಮೊದಲ ತೆಲಗು ಚಿತ್ರ ಶ್ರೀ ಆದ್ರೆ.ಕೇಡಿ ತಮಿಳಿನ ಮೊದಲ ಚಿತ್ರವಾಗಿದೆ. ಚಿತ್ರರಂಗದಲ್ಲಿ ಬ್ಯುಸಿ ಇರುವ ನಟಿ ತಮನ್ನಾ, ಇತ್ತೀಚಿಗೆ ಐಟಂ ಸಾಂಗ್ ಗಳಲ್ಲಿ ಮಿಂಚುತ್ತಿದ್ದಾರೆ. ಅವರ ಡಾನ್ಸ್ ಸ್ಟೈಲ್, ಮೋಹಕ ನೋಟ ಅಭಿಮಾನಿಗಳ ಮನಸ್ಸು ಗೆಲ್ಲುತ್ತಿದೆ.