ದುಬಾರಿ ಮನೆಯನ್ನು ಮಾರಾಟಕ್ಕಿಟ್ಟ ಸೋನಾಕ್ಷಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಯ್ತು ವಿಡಿಯೋ......
ಬಾಲಿವುಡ್ ಸ್ಟಾರ್ ನಟ ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ ಮತ್ತು ಜಹೀರ್ ಇಕ್ಬಾಲ್ ಹಲವು ವರ್ಷಗಳಿಂದ ಪ್ರೀತಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ಯಾಲೆಸ್, ರೆಸಾರ್ಟ್‌ನಲ್ಲಿ ಸೆಲೆಬ್ರಿಟಿಗಳು ಮದುವೆ ಮಾಡಿಕೊಂಡರೆ ಸೋನಾಕ್ಷಿ ಮಾತ್ರ ಬಾಂದ್ರಾದಲ್ಲಿರುವ ತಮ್ಮ ಸ್ವಂತ ಮನೆಯಲ್ಲಿ ಮದುವೆ ರಿಜಿಸ್ಟರ್ ಮಾಡಿಕೊಂಡರು. ಫ್ಯಾಮಿಲಿಯಲ್ಲಿ ಏನೇ ಡ್ರಾಮಾ ನಡೆಯುತ್ತಿದ್ದರೂ ಒಳ ಒಳಗೆ ಬಚ್ಚಿಟ್ಟುಕೊಂಡರೂ ಮಾಧ್ಯಮಗಳು ಒಂದೊಂದೇ ರಿವೀಲ್ ಮಾಡುತ್ತಿದೆ. ಈಗ ಸೋನಾಕ್ಷಿ ಮನೆ ಮಾರಾಟಕ್ಕೆ ಇಟ್ಟಿರುವ ವಿಡಿಯೋ ಕೂಡ ವೈರಲ್ ಆಗಿದೆ.
ಹೌದು! ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಐಷಾರಾಮಿ ಮನೆಯೊಂದು ಮಾರಾಟಕ್ಕೆ ಇದೆ ಎಂದು ವಿಡಿಯೋ ಮಾಡಿದ್ದಾರೆ. ಮನೆಯ ಮೂಲೆ ಮೂಲೆಗಳನ್ನು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದು ಅಲ್ಲಲ್ಲಿ ಸೋನಾಕ್ಷಿ ಮನೆ ಎಂದು ಸಣ್ಣ ಸುಳಿವು ಸಿಕ್ಕಿದೆ. ಅಲ್ಲದೆ ಈ ವಿಡಿಯೋಗೆ ಸ್ವತಃ ಸೋನಾಕ್ಷಿ ಕಾಮೆಂಟ್ ಮಾಡಿರುವುದು ನೋಡಿ ಕನ್ಫರ್ಮ್ ಆಗಿದೆ ಇದು ಪಕ್ಕಾ ನಟಿ ಮದುವೆ ಮಾಡಿಕೊಂಡ ಮನೆ ಎಂದು.
ಸಿಂಪಲ್ ಲುಕ್‌ನಲ್ಲಿ ಮಿಂಚಿದ ಅಮೃತಾ ಪ್ರೇಮ್; ಐಬ್ರೋ ಎಷ್ಟು ದಪ್ಪಗಿದೆ ಎಂದು ಕಣ್ಣಾಕಿದ ನೆಟ್ಟಿಗರು!
ಮುಂಬೈನ ಬಾಂದ್ರಾದಲ್ಲಿ ಸುಮಾರು 4200 ಚದರ ಅಡಿಯಲ್ಲಿ ಈ ಮನೆಯಲ್ಲಿ ಕಟ್ಟಲಾಗಿದೆ. ಸುಮಾರು ನಾಲ್ಕೈದು ಬೆಡ್‌ರೂಮ್ ಕಟ್ಟ ಬಹುದಾದ ಜಾಗದಲ್ಲಿ ಇವರು ಕೇವಲ ಎರಡು ದೊಡ್ಡ ಬೆಡ್ ರೂಮ್ ಕಟ್ಟಿಕೊಂಡಿದ್ದಾರೆ. ಸಮುದ್ರಕ್ಕೆ ಮುಖ ಮಾಡುವ ಎರಡು ದೊಡ್ಡ ಬಾಲ್ಕಾನಿ ಹೊಂದಿದೆ. ಈ ಮನೆಯಲ್ಲಿ ಪ್ರೈವೇಟ್ ಲಿಫ್ಟ್ ಮತ್ತು ಜಿಮ್ ಸೇರಿ ಅನೇಕ ಐಷಾರಾಮಿ ಸೌಕರ್ಯಗಳು ಹೊಂದಿದೆ. ಈ ಮನೆಯ ಬೆಲೆ ಸುಮಾರು 25 ಕೋಟಿ ರೂಪಾಯಿ ಎನ್ನಲಾಗಿದೆ. ಅಲ್ಲದೆ ಈ ಮನೆಯ ಒಳ ವಿನ್ಯಾಸ ಮಾಡಲು 5 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಕೇವಲ ಎರಡು ರೂಮ್ ಇರುವ ಮನೆಗೆ ಇಷ್ಟು ಬೆಲೆ ಅಂದ್ರೆ ಸಿಕ್ಕಾಪಟ್ಟೆ ದುಬಾರಿ ಅಂತಾನೂ ಕೆಲವರು ಹೇಳುತ್ತಾರೆ.
'ರಾಜಶ್ಯಾಮಲ' ವಿಶೇಷ ಪೂಜೆ ಮಾಡಿಸಿದ್ದ ರಶ್ಮಿಕಾ ಮಂದಣ್ಣ; ಜ್ಯೋತಿಷಿ ವೇಣುಸ್ವಾಮಿಗೆ ವಿಡಿಯೋದಿಂದ ಎದುರಾಯ್ತು ಸಂಕಷ್ಟ
ಸೋನಾಕ್ಷಿ ಸಿನ್ಹಾ ಮದುವೆಯಾದ ಮನೆಯನ್ನು ಯಾಕೆ ಮಾರಲು ಮುಂದಾಗಿದ್ದಾರೆ? ಮೊದಲೇ ಬೇರೆ ಜಾತಿ ಅವರನ್ನು ಮದುವೆ ಆಗಿರುವುದ್ದಕ್ಕೆ ಮನೆಯಲ್ಲಿ ತುಂಬಾ ಮನಸ್ತಾಪವಿದೆ. ಈ ಕಾರಣಕ್ಕೆ ಮನೆ ಮಾರಾಟಕ್ಕೆ ಇಟ್ಟಿರುವುದು ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ.