ಅವ್ರು ಗೋಸುಂಬೆಗಳು... ಡ್ರಿಂಕ್ಸು, ಸೆಕ್ಸು ಬಿಟ್ರೆ ಬೇರೆ ಗೊತ್ತಿಲ್ಲದ ಮೂರ್ಖರು... ಕಂಗನಾ ಹೇಳಿದ್ದು ಯಾರಿಗೆ ಗೊತ್ತಾ?

By Suchethana D  |  First Published Aug 20, 2024, 9:54 PM IST

ಅವ್ರು ಗೋಸುಂಬೆಗಳು... ಡ್ರಿಂಕ್ಸು, ಸೆಕ್ಸು ಬಿಟ್ರೆ ಬೇರೆ ಗೊತ್ತಿಲ್ಲದ ಮೂರ್ಖರು... ಅಂತೆಲ್ಲಾ ನಟಿ, ಸಂಸದೆ ಕಂಗನಾ ರಣಾವತ್​ ಹೇಳಿದ್ದಾರೆ. ಅಷ್ಟಕ್ಕೂ ಅವರು ಹೀಗೆಲ್ಲಾ ಹೇಳಿದ್ದು ಯಾರಿಗೆ ಗೊತ್ತಾ? 
 


ಅವರು ಮೂರ್ಖರಲ್ಲಿ ಮೂರ್ಖರು. ಯಾವಾಗ್ಲೂ ಪ್ರೊಟೀನ್​ ಶೇಕ್​ಗಳ ಸುತ್ತನೇ ಸುತ್ತುತ್ತಾ ಇರ್ತಾರೆ. ಅದೇ ಅವರಿಗೆ ಜೀವನ. ಡ್ರಿಂಕ್ಸು, ಸೆಕ್ಸು ಬಿಟ್ರೆ ಬೇರೆ ಗೊತ್ತಿಲ್ಲ. ಶೂಟಿಂಗ್ ಇಲ್ಲದಿದ್ದರೆ, ಬೆಳಿಗ್ಗೆ ಎದ್ದು ವ್ಯಾಯಾಮ, ಮಧ್ಯಾಹ್ನ ಮಲಗುವುದು, ನಂತರ ಏಳುವುದು, ಜಿಮ್‌ಗೆ ಹೋಗಿ ಮಲಗುವುದು ಮತ್ತು ಟಿವಿ ನೋಡುವುದು... ಇಷ್ಟೇ ಅವರ ದಿನಚರಿ. ಇಂಥವರು ನನಗೆ ಫ್ರೆಂಡ್ಸ್​ ಆಗಲು ಸಾಧ್ಯನೆ...?

ಹೀಗೆ ಕೇಳಿದವರು ಬಾಲಿವುಡ್​ ಕಾಂಟ್ರವರ್ಸಿ ಕ್ವೀನ್​, ಸಂಸದೆ ಕಂಗನಾ ರಣಾವತ್​. ಅಷ್ಟಕ್ಕೂ ಇವರು ಹೀಗೆಲ್ಲಾ ಹೇಳ್ತಿರೋದು ಯಾರಿಗೆ ಅಂದುಕೊಂಡ್ರಿ. ಖುದ್ದು ಬಾಲಿವುಡ್​ ತಾರೆಯರಿಗೆ! ಹೌದು. ಬಾಲಿವುಡ್​ ನಟಿಯೂ ಆಗಿರುವ ಕಂಗನಾ, ಬಾಲಿವುಡ್​ ನಟ-ನಟಿಯರ ವಿರುದ್ಧವೇ ಹೀಗೆಲ್ಲಾ ಮಾತನಾಡಿದ್ದಾರೆ. ರಾಜ್ ಶಾಮಣಿ ಅವರೊಂದಿಗೆ ಪಾಡ್‌ಕಾಸ್ಟ್‌ನಲ್ಲಿ ಬಾಲಿವುಡ್ ಮಂದಿಯ ಜೀವನ ಶೈಲಿ ಮತ್ತಿತರ ವಿಷಯಗಳ ಕುರಿತು ಅವರು ಮಾತನಾಡಿದ್ದಾರೆ.   ನಿಮಗೆ ಬಾಲಿವುಡ್‌ನಲ್ಲಿ ಸ್ನೇಹಿತರಿದ್ದಾರೆಯೇ ಎಂದು ನಟಿಗೆ ಕೇಳಿದಾಗ, ಉತ್ತರವಾಗಿ ಕಂಗನಾ ಹೀಗೆಲ್ಲಾ ಹೇಳಿದ್ದಾರೆ.  ‘ನೋಡಿ, ನಾನು ಬಾಲಿವುಡ್ ಪ್ರಕಾರದ ವ್ಯಕ್ತಿಯಲ್ಲ. ಅಲ್ಲಿದ್ದವರು ನನಗೆ ಸ್ನೇಹಿತರಾಗಲು ಸಾಧ್ಯವಿಲ್ಲ. ಬಾಲಿವುಡ್ ಮಂದಿ ತಮ್ಮದೇ ವೃತ್ತದ ಸುತ್ತ ತುಂಬಿಕೊಂಡಿದ್ದಾರೆ. ಅವರೆಲ್ಲಾ ಮೂರ್ಖರು.  ಅವರ ಜೀವನವು ಪ್ರೋಟೀನ್ ಶೇಕ್‌ಗಳ ಸುತ್ತ ಸುತ್ತುತ್ತದೆ ಎಂದು ಹೇಳಿದ್ದಾರೆ. ಆ ಜನರು ಮಿಡತೆಗಳಂತೆ. ಸಂಪೂರ್ಣವಾಗಿ ಖಾಲಿ. ಅಂತಹ ಜನರೊಂದಿಗೆ ನೀವು ಹೇಗೆ ಸ್ನೇಹಿತರಾಗಬಹುದು ಎಂದು ನಟಿ ಪ್ರಶ್ನಿಸಿದ್ದಾರೆ.

Tap to resize

Latest Videos

ಸಂಸದೆಯಾದ್ರೆ ನಟನೆಗೆ ಗುಡ್​​ಬೈ ಹೇಳ್ತಾರಾ ಕಂಗನಾ? ನಟಿಯ ಹೇಳಿಕೆಗೆ ಅಭಿಮಾನಿಗಳು ಏನಂತಿದ್ದಾರೆ?
 
ಇನ್ನು ಬಾಲಿವುಡ್​​ ನಟ-ನಟಿಯರ ಹ್ಯಾಬಿಟ್​ ಕುರಿತು ಮಾತನಾಡಿರುವ ಕಂಗನಾ,  ಬಾಲಿವುಡ್ ಮಂದಿಗೆ ಡ್ರಿಂಕ್ಸ್ ಸೇವಿಸೋದೇ ಜೀವನ. ಸದಾ  ಬಟ್ಟೆ ಮತ್ತು ಪರಿಕರಗಳ ಬಗ್ಗೆ ಮಾತನಾಡುತ್ತಾರೆ. ಅವರ ಲೈಫು ಬರೀ ಇಂಥ ವಿಷಯಗಳಲ್ಲಿಯೇ  ಕಳೆದು ಹೋಗುತ್ತದೆ. ದುಬಾರಿ  ಕಾರು  ಇತ್ಯಾದಿಗಳ ಬಗ್ಗೆ ಮಾತನಾಡುವವರನ್ನು ನೋಡಿದರೆ ವಿಚಿತ್ರ ಎನಿಸುತ್ತೆ. ಬಾಲಿವುಡ್ ಪಾರ್ಟಿಗಳು ಒಂಥರಾ ನಾಚಿಕೆಗೇಡಿನ ಸಂಗತಿ ಎಂದೆಲ್ಲಾ ಬಾಲಿವುಡ್​ ವಿರುದ್ಧ ನಟಿ ಮಾತನಾಡಿದ್ದಾರೆ! 

ಸದ್ಯ ನಟಿಯ ಎಮರ್ಜೆನ್ಸಿ ಚಿತ್ರ ಬಿಡುಗಡೆಯಾಗುವ ಹಂತದಲ್ಲಿದೆ. ಇದೇ ವೇಳೆ ನಟಿ ಚಿತ್ರರಂಗಕ್ಕೆ ಗುಡ್​ಬೈ ಹೇಳ್ತಾರಾ ಎನ್ನುವ ಪ್ರಶ್ನೆಯೂ ಇದೆ. ಏಕೆಂದರೆ, ಹಿಮಾಚಲ ಪ್ರದೇಶದ  ಮಂಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಂಗನಾ ರಣಾವತ್ ನಾಮಪತ್ರ ಸಲ್ಲಿಸಿದ್ದ ಸಂದರ್ಭದಲ್ಲಿ  ಹೇಳಿಕೆಯೊಂದನ್ನು ನೀಡಿದ್ದರು. ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ ನಟನೆ ಬಿಡುತ್ತೀರಾ ಎನ್ನುವ ಪ್ರಶ್ನೆಗೆ ಕಂಗನಾ ಹೌದು ಎಂದು ಹೇಳಿದ್ದರು. ಆಜ್​ತಕ್​ಗೆ ನೀಡಿದ್ದ ಸಂದರ್ಶನದಲ್ಲಿ, ಕಂಗನಾ ಅವರಿಗೆ, ರಾಜಕೀಯ ಮತ್ತು ಸಿನಿಮಾದ ಕುರಿತು ಪ್ರಶ್ನೆ ಕೇಳಲಾಯಿತು. ಒಂದು ವೇಳೆ ಗೆದ್ದರೆ ಚಿತ್ರರಂಗವನ್ನು ತೊರೆಯುತ್ತೀರೋ ಎಂದು ಕೇಳಿದಾಗ ನಟಿ ಎಸ್​ ಎಂದಿದ್ದರು. ನನಗೆ ಹಲವು ಚಲನಚಿತ್ರ ನಿರ್ಮಾಪಕರು  ನೀನು ಉತ್ತಮ ನಟಿ, ರಾಜಕೀಯಕ್ಕೆ ಹೋಗಬೇಡಿ, ಚಿತ್ರರಂಗವನ್ನು ಬಿಡಬೇಡಿ ಎಂದೆಲ್ಲಾ ಹೇಳುತ್ತಿದ್ದಾರೆ. ಇದನ್ನು ನಾನು ಕಾಂಪ್ಲಿಮೆಂಟ್​ ಆಗಿ ತೆಗೆದುಕೊಳ್ಳುತ್ತೇನೆ. ಆದರೆ ನಟನಾ ಕ್ಷೇತ್ರವನ್ನು  ಬಿಡುವುದಾಗಿ ಕಂಗನಾ ಹೇಳಿದ್ದರು. ಈಗ ಭರ್ಜರಿ ಗೆಲುವು ಸಾಧಿಸಿ ಲೋಕಸಭೆ ಮೆಟ್ಟಿಲೇರಿರೋ ನಟಿ, ಬಾಲಿವುಡ್​​ ಕುರಿತು ಹೀಗೆಲ್ಲಾ ಮಾತನಾಡ್ತಿರೋದನ್ನು ನೋಡಿದ್ರೆ ನಟನೆ ಬಿಡೋದು ಪಕ್ಕಾ ಎಂದೇ ಹೇಳಲಾಗ್ತಿದೆ!  

ಕಂಗನಾಗೆ ಮದ್ವೆಯಾಗೋ ಆಸೆಯಂತೆ... ಆದ್ರೆ... ನೋವು ತೋಡಿಕೊಂಡ ಸಂಸದೆ ಹೇಳಿದ್ದೇನು?
 

click me!