
ತೆಲುಗು ಮೆಗಾ ಸ್ಟಾರ್ ಚಿರಂಜೀವಿ (Mega Star Chiranjeevi) ಅವರ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆ ಎನ್ನಬಹುದು. ಏಕೆಂದರೆ, ಅವರು ಮನುಷ್ಯರಾಗಿ ಹುಟ್ಟಿದ್ದು ನಟ ಹಾಗೂ ಡಾನ್ಸರ್ ಆಗಲು ಮಾತ್ರ ಎಂಬಷ್ಟರ ಮಟ್ಟಿಗೆ ಅವರಿಗೆ ಅವರೆಡೂ ಕಲೆ ಸಿದ್ಧಿಸಿತ್ತು. 1990ರಲ್ಲಿ ಬಿಡುಗಡೆಯಾದ ಚಿರಂಜೀವಿ ಹಾಗೂ ಶ್ರೀದೇವಿ (Sridevi) ನಟನೆಯ 'ಜಗದೇಕ ವೀರುಡು ಅತಿಲೋಕ ಸುಂದರಿ' ಚಿತ್ರದ ಶೂಟಿಂಗ್ ವೇಳೆ ನಡೆದ ಘಟನೆ ಇದಕ್ಕೆ ಸಾಕ್ಷಿ ಎನ್ನಬಹುದು. ಹಾಗಿದ್ದರೆ ಅಂದು ಏನಾಗಿತ್ತು? ಇಲ್ಲಿದೆ ಡೀಡೇಲ್ಸ್..
ಚೆನ್ನೈನ ವಾಹಿನಿ ಸ್ಟುಡಿಯೋದಲ್ಲಿ ಅದೊಂದು ದಿನ ಶ್ರೀದೇವಿ ಹಾಗೂ ಚಿರಂಜೀವಿ ನಟನೆಯ 'ಜಗದೇಕ ವೀರುಡು ಅತಿಲೋಕ ಸುಂದರಿ' (Jagadeka Veerudu Atiloka Sundari) ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಅಂದು 'ದಿನಕ್ಕು ತಾ.. ಕಸಕ್ಕು ರಾ...' ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಆ ಸಾಂಗ್ ಶೂಟಿಂಗ್ ಆಗಿಬಿಟ್ಟರೆ ಸಿನಿಮಾದ ಕಂಪ್ಲೀಟ್ ಚಿತ್ರೀಕರಣ ಮುಗಿದಂತೆ. ಆದ್ದರಿಂದ ಸಿನಿಮಾ ಬಿಡುಗಡೆ ದಿನಾಂಕವನ್ನೂ ಸಹ ಘೋಷಿಸಲಾಗಿತ್ತು. ಆದರೆ ಚಿತ್ರದ ನಾಯಕ ನಟ ಚಿರಂಜೀವಿ ಅವರಿಗೆ ಅಂದು 104 ಡಿಗ್ರಿ ಭಾರೀ ಜ್ವರ..!
ಬೆನ್ನಿನ ಮೇಲೆ ಅಂಬರೀಷ್ ಎತ್ತಿಕೊಂಡು ಕೋಪ ಕಮ್ಮಿಆಗಲೆಂದು ಬಯಸಿದ್ರಾ ಸುಧಾರಾಣಿ!
ಆದರೆ, ಅಂದು ಶೂಟಿಂಗ್ ನಟೆಯಲೇಬೇಕಿತ್ತು. ಕಾರಣ, ಅದು ಶೂಟಿಂಗ್ ಶೆಡ್ಯೂಲ್‌ನ ಕೊನೆಯ ದಿನ. ಜೊತೆಗೆ, ಆ ದಿನ ಬಿಟ್ಟರೆ ಸದ್ಯಕ್ಕೆ ನಟಿ ಶ್ರೀದೇವಿ ಹಾಗೂ ನಟ ಚಿರಂಜೀವಿ ಇಬ್ಬರ ಡೇಟ್ಸ್ ಕೂಡ ಸಿಗಲು ಸಾಧ್ಯವಿಲ್ಲ, ಇಬ್ಬರದೂ ಬೇರೆ ಸಿನಿಮಾ ಡೇಟ್ಸ್ ಫಿಕ್ಸ್ ಆಗಿದೆ. ಅಷ್ಟೊಂದು ಹೆಚ್ಚಿನ ಜ್ವರವಿದ್ದರೂ ನಟ ಚಿರಂಜೀವಿ ಶೂಟಿಂಗ್ ಕ್ಯಾನ್ಸಲ್ ಮಾಡಿಸಲಿಲ್ಲ, ಡಾನ್ಸ್ ಮಾಡಿಯೇ ಬಿಟ್ಟರಂತೆ.
ಈ ಡಾನ್ಸ್ ಚಿತ್ರೀಕರಣದ ವೇಳೆ ನಟ ಚಿರಂಜೀವಿ ಅವರ ಜ್ವರವನ್ನು ಗಮನಿಸಿಕೊಂಡು, ಆರೋಗ್ಯದಲ್ಲಿ ಏರುಪೇರಾದರೆ ಸಂಭಾಳಿಸಲೆಂದು ಒಬ್ಬರು ಡಾಕ್ಟರ್ ಹಾಗೂ ನರ್ಸ್ ಅನ್ನು ಶೂಟಿಂಗ್ ಸ್ಪಾಟ್‌ಗೆ ಕರೆಸಿಕೊಳ್ಳಾಗಿತ್ತು. ಆದರೆ, ಚಿರಂಜೀವಿ ಸ್ವಲ್ಪವೂ ಹೆದರದೇ ಡಾನ್ಸ್ ಮಾಡಿದ್ದರಂತೆ. ಅಷ್ಟೇ ಅಲ್ಲ, ನಟಿ ಶ್ರೀದೇವಿ ಅವರಿಗೆ ಸರಿಸಮನಾಗಿ ಡಾನ್ಸ್ ಮಾಡಿ, ಅಲ್ಲಿದ್ದವರೆಲ್ಲರೂ ಅಚ್ಚರಿಗೊಳ್ಳುವಂತೆ ಮಾಡಿದ್ದರಂತೆ.
ಕಾರಣ, ನಟಿ ಶ್ರೀದೇವಿ ಅವರು ನಟನೆಯಲ್ಲಿ ಮಾತ್ರವಲ್ಲ, ಡಾನ್ಸ್ ಮಾಡುವುದರಲ್ಲಿ ಕೂಡ ಎತ್ತಿದ ಕೈ. ಶ್ರೀದೇವಿ ಹಾಗೂ ಚಿರಂಜೀವಿ ಡಾನ್ಸ್ ಅಂದರೆ, ಯಾರಿಗೆ ಯಾರೂ ಕಮ್ಮಿ ಅಲ್ಲ ಎಂಬಂತೆ ಎನ್ನುವುದು ಎಲ್ಲರಿಗೂ ಗೊತ್ತು. ಆಗಿನ ಕಾಲದಲ್ಲಿ 'ಸೂಪರ್ ಡಾನ್ಸರ್ ಜೋಡಿ' ಎಂದರೆ ಅದು ನಟ ಚಿರಂಜೀವಿ ಹಾಗು ನಟಿ ಶ್ರೀದೇವಿ ಎಂಬುದು ಎಲ್ಲರಿಗೂ ಗೊತ್ತು. ನಟಿಯರಲ್ಲಿ ಚಿರಂಜೀವಿಗೆ ಸರಿಸಮನಾಗಿ ಡಾನ್ಸ್ ಮಾಡುತ್ತಿದ್ದುದು ಶ್ರೀದೇವಿ ಬಿಟ್ಟರೆ ನಟಿ ವಿಜಯಶಾಂತಿ ಮಾತ್ರ ಎನ್ನಲಾಗುತ್ತಿತ್ತು.
ಡಾ ರಾಜ್ ಮೇಲಿದ್ದ ಭಾರೀ ಆರೋಪವೇನು? ಏನೇ ಇದ್ದರೂ ಅವೆಲ್ಲವೂ ಸತ್ಯಕ್ಕೆ ದೂರ ಅಂದ್ರಲ್ಲ!
ಒಟ್ಟಿನಲ್ಲಿ, ಜಗದೇಕವೀರುಡು ಅತಿಲೋಕ ಸುಂದರಿ ಡಾನ್ಸ್ ಶೂಟಿಂಗ್‌ನಲ್ಲಿ ನಟಿ ಶ್ರೀದೇವಿ ಎದುರು ಅಂತಹ ಜ್ವರದಲ್ಲಿ ಈಕ್ವಲ್ ಆಗಿ ಡಾನ್ಸ್ ಮಾಡಿ ತಮ್ಮ ಟ್ಯಾಲೆಂಟ್ ಪ್ರದರ್ಶಿಸಿದ್ದರು ನಟ ಚಿರಂಜೀವಿ. ಈ ಸಂಗತಿ ಅಂದು ಡಾನ್ಸ್ ಶೂಟಿಂಗ್ ಸ್ಪಾಟ್‌ನಲ್ಲಿ ಇದ್ದವರಿಗೆ ಮಾತ್ರ ಗೊತ್ತಿತ್ತು. ಆದರೆ, ಈಗ ಈ ಸಂಗತಿ ಸೋಷಿಯಲ್ ಮೀಡಿಯಾ ಮೂಲಕ ಇಡೀ ಜಗತ್ತಿಗೇ ಗೊತ್ತಾಗುತ್ತಿದೆ ಎಂಬುದು ಇಂದಿನ ತಂತ್ರಜ್ಞಾನದ ಮಹಿಮೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.