ಹಾರರ್ ಮೂವಿ ಲವರ್ಸ್‌ಗೆ ಇದು ಬೆಸ್ಟ್ ಸಿನಿಮಾ; ಇದನ್ನ ನೋಡೋಕೆ ಸ್ವಲ್ಪ ಧೈರ್ಯವೂ ಬೇಕು!

Published : Mar 18, 2025, 02:22 PM ISTUpdated : Mar 18, 2025, 02:42 PM IST
ಹಾರರ್ ಮೂವಿ ಲವರ್ಸ್‌ಗೆ ಇದು ಬೆಸ್ಟ್ ಸಿನಿಮಾ; ಇದನ್ನ ನೋಡೋಕೆ ಸ್ವಲ್ಪ ಧೈರ್ಯವೂ ಬೇಕು!

ಸಾರಾಂಶ

Psychological horror film: ಮಲಯಾಳಂನ 'ಈ ಸಿನಿಮಾವು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಅಜ್ಜಿಯ ಸಾವಿನ ಬಳಿಕ ತಾಯಿ-ಮಗ ವಿಚಿತ್ರ ಅನುಭವಗಳಿಗೆ ಸಾಕ್ಷಿಯಾಗುತ್ತಾರೆ. ಮನೆಯಲ್ಲಿ ದೆವ್ವ ಇದೆಯಾ ಅಥವಾ ಇದು ಭ್ರಮೆಯೇ ಎಂಬ ಸಸ್ಪೆನ್ಸ್ ಚಿತ್ರದಲ್ಲಿದೆ.

Must-watch Malayalam thriller Movie: ಮಲಯಾಳಂ ಸಿನಿಮಾಗಳು ತಮ್ಮ ಆಳವಾದ ಕಥೆಗಳು ಮತ್ತು ಅದ್ಭುತ ನಿರ್ದೇಶನದಿಂದಾಗಿ ಇಡೀ ದೇಶದ ಗಮನ ಸೆಳೆಯುತ್ತದೆ. ಸಣ್ಣ ಕಥಾ ಎಳೆಯನ್ನುತ ತೆರೆಯ ಮೇಲೆ ಸುಂದರವಾಗಿ ತೋರಿಸಲು ಕಲೆಯನ್ನು ಮಲಯಾಳಂ ಚಿತ್ರರಂಗ ಹೊಂದಿದೆ. ಬಾಲಿವುಡ್‌ ಸ್ಟಾರ್ ಕಲಾವಿದರು ಪಡೆಯುವ ಸಂಭಾವನೆಯಲ್ಲಿ ಮಲಯಾಳಂ ಸಿನಿಮಾವೊಂದು ಬಿಡುಗಡೆಯಾಗುತ್ತದೆ. ಚಿತ್ರಕ್ಕೆ ಹಾಕಿದ ಬಂಡವಾಳಕ್ಕಿಂತ ಮೂರರಿಂದ ನಾಲ್ಕು ಪಟ್ಟು ಹಣವನ್ನು ಬಾಕ್ಸ್‌ ಆಫಿಸ್‌ನಲ್ಲಿ ಕಲೆಕ್ಷನ್ ಮಾಡುತ್ತವೆ. ಇಂದು ನಾವು ಹೇಳುತ್ತಿರುವ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ 2022ರಲ್ಲಿ ಬಿಡುಗಡೆಯಾಗಿತ್ತು. 

ಈ ಚಿತ್ರ ನೋಡುಗರನ್ನು ಭಯಪಡಿಸಲು ಕೇವಲ ದೆವ್ವದ ಘಟನೆಗಳನ್ನು ಬಳಸಿಕೊಂಡಿಲ್ಲ.  ಮಾನಸಿಕ ಆರೋಗ್ಯ, ಖಿನ್ನತೆ ಮತ್ತು ಭಾವನಾತ್ಮಕ ಒತ್ತಡದಂತಹ ಸನ್ನಿವೇಶಗಳ ಮೂಲಕವೂ ನೋಡುಗರನ್ನು ಈ ಚಿತ್ರ ಭಯಬೀಳಿಸುತ್ತದೆ. 2022 ಮಲಯಾಳಂನ 'ಭೂತಕಾಲಂ' (Bhoothakaalam) ಉತ್ತಮ ಸೈಕಾಲಜಿಕಲ್ ಥ್ರಿಲ್ಲರ್‌ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗುತ್ತದೆ.

ಚಿತ್ರದ ಹೆಸರೇ ಹೇಳುವಂತೆ ಅತೀಥ ಘಟನೆಗಳನ್ನ ಆಧಾರಿತ ಎಂದು ಹೇಳಬಹುದು. ನಮ್ಮ ಭಯವೇ ಅತೀಥ ಶಕ್ತಿಗಳೊಂದಿಗೆ ಸಂಪರ್ಕ ಸಾಧಿಸುತ್ತದೆಯೇ ಎಂಬ ಪ್ರಶ್ನೆಯೊಂದಿಗೆ ಈ ಸಿನಿಮಾ ನೋಡಲು ಆರಂಭಿಸಬೇಕು. ಶೇನ್ ನಿಗಮ್, ರೇವತಿ ಮತ್ತು ಸಜ್ಜು ಕುರುಪು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂರು ಪಾತ್ರಗಳ ಮನೋಜ್ಞ ನಟನೆ ಚಿತ್ರವನ್ನು ಮತ್ತಷ್ಟು ಅದ್ಧೂರಿಯನ್ನಾಗಿಸಿದೆ. ಜೇಮ್ಸ್ ಎಲಿಯಾ, ಅಥಿರಾ ಪಟೇಲ್, ವಲಸಾಲಾ ಮೆನನ್, ಅಭಿರಾಮ್ ರಾಧಕೃಷ್ಣ, ಗಿಲು ಜೋಸೆಫ್, ಮಂಜು ಸುನಿಚೆನ್ ಮತ್ತು ಸ್ನೇಹಾ ಶ್ರೀಕುಮಾರ್ ಸೇರಿದಂತೆ ಹಲವು ಕಲಾವಿದರು ಭೂತಕಾಲಂ ಸಿನಿಮಾದಲ್ಲಿ ನಟಿಸಿದ್ದಾರೆ. ಭೂತಕಾಲಂ ಸಿನಿಮಾವನ್ನು ರಾಹುಲ್ ಸದಾಶಿವನ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಸೋನಿ LIV ಆಪ್‌ನಲ್ಲಿ ವೀಕ್ಷಿಸಬಹುದು.

ಚಿತ್ರದ ಕಥೆ ಏನು? 
ಭೂತಕಾಲಂ ಸಿನಿಮಾ ಓರ್ವ ಯುವಕ ಮತ್ತು ಆತನ ತಾಯಿ ಸುತ್ತ ಸುತ್ತುತ್ತದೆ. ಅಜ್ಜಿಯ ಸಾವಿನ ಬಳಿಕ ವಿಚಿತ್ರ ಅನುಭವಗಳಿಗೆ ತಾಯಿ ಮತ್ತು ಮಗ ಸಾಕ್ಷಿಯಾಗುತ್ತಾರೆ. ಚಿತ್ರ ನೋಡುವಾಗ ಪ್ರೇಕ್ಷಕರಲ್ಲಿ ಎರಡು ಪ್ರಶ್ನೆಗಳು ಮೂಡುತ್ತವೆ. ಮನೆಯಲ್ಲಿ ನಿಜವಾಗಿಯೂ ದೆವ್ವಾ ಇದೆಯಾ ಅಥವಾ ಇದು ಕೇವಲ ಇಬ್ಬರ ಭಮೆನಾ, ಮಾನಸಿಕ ಒತ್ತಡದಿಂದಾಗುವ ಖಿನ್ನತೆಯ ಪರಿಣಾಮನಾ ಎಂಬ ಸಸ್ಪೆನ್ಸ್  ಮೂಡಿಸುತ್ತದೆ. 

ಇದನ್ನೂ ಓದಿ: 50 ವರ್ಷಗಳಲ್ಲಿಯೇ ಇದುವರೆಗೂ ಯಾರು ಮಾಡದ ಹಾರರ್ ಸಿನಿಮಾ; ಹಲವು ದೇಶಗಳಲ್ಲಿ ಬ್ಯಾನ್ ಆದ ಚಿತ್ರ!

ಸಾಮಾನ್ಯವಾಗಿ ಹಾರರ್ ಸಿನಿಮಾಗಳಲ್ಲಿ ಜನರಲ್ಲಿ ಕುತೂಹಲ ಮೂಡಿಸಲು ಜಂಪ್ ಸ್ಕೇರ್‌ಗಳನ್ನು ಬಳಕೆ ಮಾಡುತ್ತಾರೆ. ಆದ್ರೆ ಭೂತಕಾಲಂ ಸಿನಿಮಾದಲ್ಲಿ ಯಾವುದೇ ಜಂಪ್‌ ಸ್ಟೇರ್ ಬಳಕೆ ಮಾಡಿಲ್ಲ. ಸರಳವಾಗಿ ಕಥೆ ಹೇಳುತ್ತಾ ಹೋಗಿದ್ದು, ಕಲಾವಿದರ ಸಹಜ ನಟನೆಯೇ ನಿಮ್ಮ ಭಯಗೊಳಿಸುತ್ತದೆ. ಈ ಚಿತ್ರ ಮಾನಸಿಕ ಆರೋಗ್ಯ, ಒಂಟಿತನ, ಖಿನ್ನತೆ ಮತ್ತು ಹಿಂದಿನ ಆಘಾತಕಾರಿ ಘಟನೆಗಳಿಂದ ಭಯವನ್ನು ಹುಟ್ಟುಹಾಕುತ್ತದೆ. ಪಾತ್ರಗಳೆಲ್ಲವೂ ತೆರೆಯ ಮೇಲೆ ನೈಜವಾಗಿ ಮೂಡಿ ಬಂದಿದ್ದಿರಂದ ಥಿಯೇಟರ್‌ನಿಂದ ಹೊರಬಂದ್ರೂ ಸಿನಿಮಾದ ಕಥೆಯ ನಿಮ್ಮ ಚಿಂತಿಸುವಂತೆ ಮಾಡುತ್ತದೆ.  ಕೆಲವೊಮ್ಮೆ ಚಿತ್ರದಲ್ಲಿ ನಿಜವಾದ ದೆವ್ವಗಳ ರೀತಿಯ ದೃಶ್ಯಗಳು ಕಾಣಿಸುತ್ತವೆ. ಕೆಲವೊಮ್ಮೆ ಮಾನಸಿಕ ಖಿನ್ನತೆಗೊಳಗಾದ ತಾಯಿ-ಮಗಳ ಕಥೆ ಎಂಬಂತೆ ತೋರುತ್ತದೆ. ಈ ಎರಡರದ ಗೊಂದಲದಲ್ಲಿ ಸಿನಿಮಾ ನೋಡುತ್ತಿರುವ ವೀಕ್ಷಕರಿಗೆ ಅಚ್ಚರಿಯ ಕ್ಲೈಮ್ಯಾಕ್ಸ್ ಎದುರಾಗುತ್ತದೆ. 

ಇದನ್ನೂ ಓದಿ: ಭೂತದ ಬಂಗ್ಲೆ, ರಾಣಿಯ ಆತ್ಮ; ಭಯಕ್ಕೂ ಭಯ ಹುಟ್ಟಿಸೋ ಲೇಡಿ ಓರಿಯೆಂಟೆಡ್ ಹಾರರ್ ಸಿನಿಮಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?