ಹಿಂದಿ ನಟಿಗಾಗಿ ಕಾದು ಕುಳಿತು 10 ಲಕ್ಷ ಕೊಟ್ಟ ಸಿಎಂ ಸಿದ್ದು: ಕ್ಯಾರೇ ಮಾಡದ ಶಬನಾ ಅಜ್ಮಿ- ಕನ್ನಡಿಗರು ಗರಂ

Published : Mar 18, 2025, 03:45 PM ISTUpdated : Mar 18, 2025, 04:22 PM IST
ಹಿಂದಿ ನಟಿಗಾಗಿ ಕಾದು ಕುಳಿತು 10 ಲಕ್ಷ ಕೊಟ್ಟ ಸಿಎಂ ಸಿದ್ದು: ಕ್ಯಾರೇ ಮಾಡದ ಶಬನಾ ಅಜ್ಮಿ- ಕನ್ನಡಿಗರು ಗರಂ

ಸಾರಾಂಶ

ಬೆಂಗಳೂರಿನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ಶಬನಾ ಅಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಮುಖ್ಯಮಂತ್ರಿಗಳೇ ನಿವಾಸದಲ್ಲಿ ಪ್ರಶಸ್ತಿ ನೀಡಿದರು. ಆದರೆ, ಶಬನಾ ಕರ್ನಾಟಕಕ್ಕೆ ಧನ್ಯವಾದ ಹೇಳದಿದ್ದುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಕನ್ನಡಿಗರಿಗೆ ಪ್ರಶಸ್ತಿ ನೀಡದೆ ಹಿಂದಿ ನಟಿಗೆ ನೀಡಿದ್ದೇಕೆ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ. ಶಬನಾ ಅಜ್ಮಿ ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವುದೇ ಪ್ರಶಸ್ತಿಗೆ ಕಾರಣ.

ಇತ್ತೀಚೆಗೆ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಿತು.ಮಾ.1ರಿಂದ ಮಾ.8ರವರೆಗೆ ನಡೆದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ, ಒಬ್ಬರಿಗೆ ನೀಡುವ  ಜೀವಮಾನ ಸಾಧನೆ ಪ್ರಶಸ್ತಿಗೆ ಬಾಲಿವುಡ್​ ಹಿರಿಯ ನಟಿ ಶಬನಾ ಅಜ್ಮಿ ಅವರನ್ನು ಕರ್ನಾಟಕ ಸರ್ಕಾರ ಆಯ್ಕೆ ಮಾಡಿತ್ತು. ಇದಕ್ಕೆ ನೀಡುವ ಮೊತ್ತ 10 ಲಕ್ಷ ರೂಪಾಯಿಗಳು. ಆದರೆ ನಟಿ ಅವಾರ್ಡ್​ ಫಂಕ್ಷನ್​ ದಿನ ಹಾಜರು ಆಗಲಿಲ್ಲ. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಮ್ಮ ನಿವಾಸದಲ್ಲಿ ನಟಿಗಾಗಿ ಕಾದು, ಅವರು ತಮ್ಮ ಪತಿ ಕವಿ, ಗೀತಕಾರ ಜಾವೇದ್ ಅಖ್ತರ್ ಜೊತೆ ಬಂದಾಗ ನಟಿ ಪ್ರಶಸ್ತಿಯನ್ನು ಸ್ವೀಕರಿಸಿದರು.  

ಆದರೆ, ಕುತೂಹಲದ ಸಂಗತಿ ಏನೆಂದರೆ, ಶಬನಾ ಅಜ್ಮಿ ಅವರು ಕರ್ನಾಟಕದಿಂದ ಪ್ರಶಸ್ತಿ ಪಡೆದುಕೊಂಡರೂ, ಕರ್ನಾಟಕದ ಬಗ್ಗೆ, ಕನ್ನಡಿಗರ ಬಗ್ಗೆ ಯಾವುದೇ ಒಂದು ಹೇಳಿಕೆಯನ್ನೂ ನೀಡಲಿಲ್ಲ. ಕೊನೆಯ ಪಕ್ಷ ಸೌಜನ್ಯಕ್ಕಾದರೂ ಕರ್ನಾಟಕಕ್ಕೆ ಧನ್ಯವಾದ ಸಲ್ಲಿಸಲಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವ ಒಂದೇ ಒಂದು ಫೋಟೋ ಶೇರ್​ ಮಾಡಿಕೊಂಡು ಸಿದ್ದರಾಮಯ್ಯ ಮತ್ತು ತಮ್ಮ ಪತಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜೊತೆಗೆ ನಟ ಸಾಧು ಕೋಕಿಲ ಅವರಿಗೆ ಧನ್ಯವಾದ ಹೇಳಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದಿಂದ 10 ಲಕ್ಷ ರೂಪಾಯಿ ಪಡೆದಿಕೊಂಡಿರುವ ನಟಿಯೊಬ್ಬರು ಯಾವುದೇ ಮಾಧ್ಯಮಗಳ ಮುಂದೆಯೂ ಕರ್ನಾಟಕಕ್ಕೆ ಧನ್ಯವಾದ ಸಲ್ಲಿಸುವುದು ದೂರದ ಮಾತು, ತಮಗಾಗಿ ಕಾದು ಕುಳಿತು ಪ್ರಶಸ್ತಿ ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಎಲ್ಲಿಯೂ ಧನ್ಯವಾದ ಸಲ್ಲಿಸದೇ ಒಂದೇ ಒಂದು ಫೋಟೋ ಹಾಕಿಕೊಂಡು ಅಲ್ಲಿ ಥ್ಯಾಂಕ್ಸ್​ ಹೇಳಿರುವುದಕ್ಕೆ ಇನ್ನಿಲ್ಲದಂತೆ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

ಸಿಎಂ ಬದಲಾಗ್ತಾರಾ? ಯಾರಿಗೆ ದಕ್ಕತ್ತೆ ಪಟ್ಟ? ರಾಷ್ಟ್ರ ರಾಜಕಾರಣದಲ್ಲೂ ಏನಿದು ವಿಚಿತ್ರ? ಕೋಡಿಶ್ರೀ ಭವಿಷ್ಯ ಕೇಳಿ...

ಇದು ಒಂದೆಡೆಯಾದರೆ, ಜೀವಮಾನ ಸಾಧನೆ ಮಾಡಿದ ಕನ್ನಡಿಗರು ಯಾರೂ ಇರಲಿಲ್ಲವೇ ಎನ್ನುವ ಪ್ರಶ್ನೆ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಕಳೆದೊಂದು ವಾರದಿಂದ ಚರ್ಚೆಯಾಗುತ್ತಿದೆ. ಹಿಂದಿಯ ನಟಿಯನ್ನು ಆಯ್ಕೆ ಮಾಡುವ ಹಿಂದೆ ಕಾರಣವೇನಿದೆ? ಅದೂ ಕೂಡ ಶಬನಾ ಅಜ್ಮಿ ಅವರನ್ನೇ ಆಯ್ಕೆ ಮಾಡಿ, ಅವರಿಗೆ ಕರ್ನಾಟಕ ಸರ್ಕಾರ 10 ಲಕ್ಷ ರೂಪಾಯಿ ಕೊಡುವ ಅಗತ್ಯವಿತ್ತೆ ಎನ್ನುವ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ. ಇಷ್ಟು ಬೃಹತ್​ ಮೊತ್ತವನ್ನು ಪಡೆದರೂ ಕರ್ನಾಟಕದ ಮೇಲೆ ಕಿಂಚಿತ್​ ಪ್ರೀತಿ ತೋರದ ನಟಿ ಒಂದೆಡೆಯಾದರೆ, ಪ್ರಶಸ್ತಿ ಸ್ವೀಕರಿಸಲು ಬರಲು ಸಾಧ್ಯವಾಗದ್ದಕ್ಕೆ ಒಂದು ಕ್ಷಮೆಯನ್ನೂ ಕೋರಿಲ್ಲ, ಜೊತೆಗೆ ಎಲ್ಲಿಯೂ ಈ ಬಗ್ಗೆ ಮಾತನಾಡಲಿಲ್ಲ. ಕರ್ನಾಟಕಕ್ಕೆ ಸಂಬಂಧವೇ ಇಲ್ಲದ, ಇಲ್ಲಿಯ ಪರಿಚಯವೂ ಇಲ್ಲದ ಬಾಲಿವುಡ್​ನ ನಟಿಯನ್ನು ಆಯ್ಕೆ ಮಾಡಿರುವ ಹಿಂದಿನ ಉದ್ದೇಶ ಏನು ಎಂದು ಪ್ರಶ್ನಿಸಲಾಗುತ್ತಿದೆ. ಓಲೈಕೆ ಇರಬೇಕು, ಆದರೆ ಈ ಪರಿಯಲ್ಲಿ ಇರಬಾರದು ಎಂಬ ಟೀಕಾಪ್ರಹಾರಗಳೇ ಕೇಳಿಬರುತ್ತಿದೆ. ಹಿಂದಿ ಹೇರಿಕೆ ಎಂದು ಪ್ರತಿಭಟಿಸುವವರೇ ಇಂದು ಹಿಂದಿಯ ನಟಿಯೊಬ್ಬಳಿಗೆ ಕಾದು ಕುಳಿತು ಪ್ರಶಸ್ತಿ ನೀಡಿರುವುದು ವಿಚಿತ್ರ ಎನ್ನಿಸುತ್ತಿದೆ ಎಂದು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. 

ಅಷ್ಟಕ್ಕೂ, ಶಬನಾ ಅಜ್ಮಿ ಅವರಿಗೆ ಈ ಪ್ರಶಸ್ತಿ ನೀಡಿರುವ ಹಿಂದೆ ಉದ್ದೇಶವೂ ಇದೆ. ಅದೇನೆಂದರೆ, ಅವರು,  ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದಾರೆ.   ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದರೂ, ಎಲ್ಲವನ್ನೂ ಮೆಟ್ಟಿ ನಿಂತು, 70ರ ದಶಕದಿಂದ 90ರ ದಶಕಗಳವರೆಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು ನಟಿ.   ಚಲನಚಿತ್ರ ಕಲಾವಿದೆಯ ಜೊತೆ  ಸಾಮಾಜಿಕ ಕಾರ್ಯಕರ್ತೆ ಕೂಡ. 1998ರಲ್ಲಿ  ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಗೆ ಸೌಹಾರ್ದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.  ತಮ್ಮ ಸೌಂದರ್ಯ ಮತ್ತು ಪ್ರತಿಭೆಯಿಂದ ಲಕ್ಷಾಂತರ ಜನರನ್ನು ಹುಚ್ಚನನ್ನಾಗಿ ಮಾಡಿದವರು ಇವರು.  ಎರಡು ಮಕ್ಕಳ ತಂದೆ, ಬರಹಗಾರ ಜಾವೇದ್ ಅಖ್ತರ್​ ಅವರನ್ನು ಮದುವೆಯಾಗಿ ವಿವಾದದಲ್ಲಿ ಸಿಲುಕಿದ್ದರು.  ಜಾವೇದ್ ಅವರು  ಮೊದಲ ಪತ್ನಿಗೆ ವಿಚ್ಛೇದನ ನೀಡದೆ 1984ರಲ್ಲಿ ಶಬಾನಾ ಅಜ್ಮಿ ಅವರನ್ನು  ವಿವಾಹವಾಗಿದ್ದೇ ಇದಕ್ಕೆ ಕಾರಣ.  
 

ಹೆಂಡತಿ- ಅಸ್ಟ್ರಾಲಾಜಿ ಇಬ್ರಲ್ಲಿ ಹೆಚ್ಚು ಪ್ರೀತಿಸೋದು ಯಾರನ್ನು ಅಂತ ಕೇಳಿದ್ರೆ ಹೀಗೆ ಹೇಳೋದಾ ಗುರೂಜಿ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?