ಮದ್ವೆ ಆಗ್ತೀನಿ ಅಂದ್ರೆ ಮಕ್ಕಳು ಬೇಡವೇ ಬೇಡ ಅಂತಾರೆ: ಬೇಸರದಲ್ಲಿ ಸುಶ್ಮಿತಾ ಸೇನ್ ಹೇಳಿಕೆ

Published : Aug 21, 2023, 09:50 AM ISTUpdated : Aug 21, 2023, 11:38 AM IST
 ಮದ್ವೆ ಆಗ್ತೀನಿ ಅಂದ್ರೆ ಮಕ್ಕಳು ಬೇಡವೇ ಬೇಡ ಅಂತಾರೆ: ಬೇಸರದಲ್ಲಿ ಸುಶ್ಮಿತಾ ಸೇನ್ ಹೇಳಿಕೆ

ಸಾರಾಂಶ

ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ ಮಕ್ಕಳು ಕೊಟ್ಟ ರಿಯಾಕ್ಷನ್ ಹೇಗಿತ್ತು ಎಂದು ರಿವೀಲ್ ಮಾಡಿದ ನಟಿ ಸುಶ್ಮಿತಾ ಸೇನ್.

ವಿಶ್ವ ಸುಂದರಿ ಸುಶ್ಮಿತಾ ಸೇನ್ ನಟನೆಯ Taali ವೆಬ್‌ ಸೀರಿಸ್‌ ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿದೆ. ಇತ್ತೀಚಿಗೆ ಸಿದ್ಧಾರ್ಥ್ ಕನ್ನಾನ ಜೊತೆ ನಡೆದ ಸಂದರ್ಶನದಲ್ಲಿ ದತ್ತು ಪಡೆದಿರುವ ಮಕ್ಕಳು ರೀನಾ ಮತ್ತು ಆಲಿಷಾ ಮದುವೆ ಅನ್ನೋ ಪದ ಕೇಳಿದರೆ ಹೇಗೆ ರಿಯಾಕ್ಟ್ ಮಾಡುತ್ತಾರೆ ಯಾವ ರೀತಿ ರಿಯಾಕ್ಟ್ ಮಾಡುತ್ತಾರೆ ಎಂದು ಹಂಚಿಕೊಂಡಿದ್ದಾರೆ. ಈ ಸಂದರ್ಶನ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನೆಗೆಟಿವ್ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. 

ಮಕ್ಕಳು ಎಂದಾದರೂ ತಂದೆ ಅನ್ನೋ ವ್ಯಕ್ತಿ ಜೀವನದಲ್ಲಿ ಇರಬೇಕಿತ್ತು ಎಂದು ಹೇಳುತ್ತಾರಾ ಅಥವಾ ಮಿಸ್ ಮಾಡಿಕೊಳ್ಳುತ್ತಾರಾ ಎಂದು ಸಿದ್ಧಾರ್ಥ್ ಪ್ರಶ್ನೆ ಮಾಡಿದಾಗ 'ಖಂಡಿತ ಇಲ್ಲ. ಮಕ್ಕಳ ಜೀವನದಲ್ಲಿ ಇದುವರೆಗೂ ತಂದೆ ಅನ್ನೋ ವ್ಯಕ್ತಿ ಜೀವನದಲ್ಲಿ ಇರಲಿಲ್ಲ ಹೀಗಾಗಿ ಇರಬೇಕಿತ್ತು ಅನ್ನೋ ಆಸೆ ಅಥವಾ ಮಿಸ್ ಮಾಡಿಕೊಳ್ಳುತ್ತೀವಿ ಅನ್ನೋ ಭಾವನೆ ಅವರಿಗಿಲ್ಲ. ನಾನು ಮದುವೆ ಮಾಡಿಕೊಳ್ಳಬೇಕು ಅಂತ ಯೋಚನೆ ಮಾಡುತ್ತಿರುವೆ ಎಂದು ಅವರಿಗೆ ಹೇಳಿದರೆ ಯಾಕೆ ಮದುವೆ ಯಾರಿಗಾಗಿ ಮದುವೆ ಆಗಬೇಕು ನೀನು ನಮಗೆ ತಂದೆ ಬೇಡ ನೀನೇ ಸಾಕು ಎನ್ನುತ್ತಾರೆ. ಆದರೆ ನನಗೆ ಗಂಡ ಬೇಕು ನಿಮಗೆ ಆ ಸಂಬಂಧ ಅಗತ್ಯ ಇಲ್ಲವಾದರೂ ನನಗೆ ಬೇಕು ಎಂದು ತಮಾಷೆ ಮಾಡುವೆ. ಖಂಡಿತ ತಂದೆ ಸ್ಥಾನದಲ್ಲಿ ಯಾರನ್ನೂ ಇಷ್ಟ ಪಡುವುದಿಲ್ಲ ಮಿಸ್ ಮಾಡಿಕೊಳ್ಳುವುದಿಲ್ಲ. ಅವರಿಗೆ ತಾತ ಇದ್ದಾರೆ ನನ್ನ ತಂದೆ ಅವರಿಗೆ ತಾತ. ಇಷ್ಟೇ ಸಾಕು ಅವರಿಗೆ ಜೀವನ ಪರ್ಫೆಕ್ಟ್ ಆಗಿದೆ. ನಾನು ತಂದೆ ವಿಚಾರ ಮಾತನಾಡಲು ಶುರು ಮಾಡಿದಾಗ ಮೊದಲು ನೆನಪಾಗುವುದು ನಮ್ಮ ತಂದೆ' ಎಂದು ಸುಶ್ಮಿತಾ ಸೀನ್ ಮಾತನಾಡಿದ್ದಾರೆ.

ದುಡ್ಡಿರೋ ಹುಡ್ಗಿ ಮಿಡಲ್ ಕ್ಲಾಸ್‌ ಹುಡ್ಗನ ಮದ್ವೆ ಆದ್ರೆ ಹೀಗೆ ಸೀರೆ ಹಾಕೋದು; ರಾಮಾಚಾರಿ 'ಚಾರು' ಅಸಲಿ ಲುಕ್!

ಸುಶ್ಮಿತಾ ಸೇನ್ ಬ್ಯುಸಿನೆಸ್:

ನಟಿ ಸುಶ್ಮಿತಾ ಸೇನ್ ಉತ್ತಮ ನಟಿ ಮತ್ತು ಆಭರಣ ಬ್ರಾಂಡ್ ನ (jewellery brand)ಮಾಲೀಕರು ಹೌದು. ಇದರೊಂದಿಗೆ, ಸುಶ್ಮಿತಾ ತಂತ್ರ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ಹೌಸ್ ನ ಮಾಲೀಕರಾಗಿದ್ದಾರೆ. ಇದಲ್ಲದೆ, ನಟಿ ಅನೇಕ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಸ್  ಸಹ ಹೊಂದಿದ್ದಾರೆ. 2022 ರ ಫೈನಾನ್ಷಿಯಲ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಸುಶ್ಮಿತಾ ಸೇನ್ ಅವರ ನೆಟ್ ವರ್ತ್ 74 ಕೋಟಿ ರೂ. 

ಸದಾ ದೂಷಿಸುವುದು ಹಂಗಿಸುವುದು; ಶೂಟಿಂಗ್‌ ನಡುವೆ ನಿದ್ರೆಗೆ ಜಾರಿದ ಅನುಶ್ರೀ!

ಸಿನಿಮಾಗಳಿಗಿಂತ ಪ್ರೇಮ ಪ್ರಕರಣಗಳಿಗೇ ಫೇಮಸ್‌ : 

ಪ್ರಸ್ತುತ ಸುಶ್ಮಿತಾ ಸೇನ್ ಅವರಿಗೆ ಯಾವುದೇ ಚಲನಚಿತ್ರ ಆಫರ್ಸ್ ಇಲ್ಲ. ಸುಶ್ಮಿತಾ ಯಾವಾಗಲೂ ತನ್ನ ಚಿತ್ರಗಳಿಗಿಂತ ಹೆಚ್ಚಾಗಿ ತನ್ನ ಪ್ರೇಮ ಪ್ರಕರಣಗಳ ಕಾರಣದಿಂದ ಮುಖ್ಯಾಂಶಗಳಲ್ಲಿರುತ್ತಾರೆ.ಮಿಸ್ ಯೂನಿವರ್ಸ್ ಕೀರಿಟ ಗೆದ್ದ ನಂತರ ಸುಶ್ಮಿತಾ ಅವರು ಚಲನಚಿತ್ರಗಳಿಗೆ ಆಫರ್‌ಗಳನ್ನು ಪಡೆಯಲು ಪ್ರಾರಂಭಿಸಿದರು. 1996ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅವರ  ಚಿತ್ರದ ದಸ್ತಕ್ ಸೂಪರ್ ಫ್ಲಾಪ್ ಆಗಿತ್ತು.  1999ರಲ್ಲಿ ಬಂದ ಅವರ ಬಿವಿ ನಂಬರ್ ಒನ್ ಬಾಕ್ಸ್ ಆಫೀಸ್ ಹಿಟ್ ಆದರೂ ಸುಶ್ಮಿತಾಗೆ ಹೆಚ್ಚಿನ ಲಾಭ ಆಗಲಿಲ್ಲ. ಅವರ 26 ವರ್ಷಗಳ ವೃತ್ತಿ ಜೀವನದಲ್ಲಿ ಅವರು ಸುಮಾರು 27 ಚಿತ್ರಗಳಲ್ಲಿ ನಟಿಸಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಫ್ಲಾಪ್.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!
ಪ್ರಶಸ್ತಿ ಸಮಾರಂಭಕ್ಕೆ ‘ಡ್ಯೂಪ್’ ಕಳಿಸಿ ಬೇಸ್ತು ಬೀಳಿಸಿದ್ರಾ ನಟಿ ಅದಾ ಶರ್ಮಾ..? ‘AI ತದ್ರೂಪು’ ಕಳಿಸಿದ್ದು ನಿಜಾನಾ?