ಗದರ್ ಯಶಸ್ಸಿನ ಬೆನ್ನಲ್ಲೇ ಶಾಕಿಂಗ್​ ಸುದ್ದಿ: ಸಾಲ ತೀರಿಸದ ಸನ್ನಿ ಡಿಯೋಲ್​ ಮನೆ ಹರಾಜಿಗೆ!

Published : Aug 20, 2023, 06:42 PM IST
ಗದರ್ ಯಶಸ್ಸಿನ ಬೆನ್ನಲ್ಲೇ ಶಾಕಿಂಗ್​ ಸುದ್ದಿ:  ಸಾಲ ತೀರಿಸದ ಸನ್ನಿ ಡಿಯೋಲ್​ ಮನೆ ಹರಾಜಿಗೆ!

ಸಾರಾಂಶ

ಸನ್ನಿ ಡಿಯೋಲ್ ನಟನೆಗೆ ಗದರ್​-2 ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುತ್ತಿದ್ದರೂ ಅವರು ಪಡೆದುಕೊಂಡಿರುವ ಸಾಲವನ್ನು ಪಾವತಿಸದ ಕಾರಣ ಅದನ್ನು ಹರಾಜಿಗೆ ಇಡಲಾಗುತ್ತಿದೆ. ಏನಿದು ಸುದ್ದಿ?   

ಸನ್ನಿ ಡಿಯೋಲ್ (Sunny Deol) ಮತ್ತು ಅಮೀಶಾ ಪಟೇಲ್ ಅಭಿನಯದ 'ಗದರ್: ಏಕ್ ಪ್ರೇಮ್ ಕಥಾ' (Gadar: Ek Prem Katha) ಸೀಕ್ವೆಲ್​ ಇದೇ 11 ರಂದು ಬಿಡುಗಡೆಯಾಗಿದ್ದು, ಬಾಕ್ಸ್​ ಆಫೀಸ್​ ಚಿಂದಿ ಉಡಾಯಿಸಿದೆ. ಇಲ್ಲಿಯವರೆಗೆ, ಭಾರತದಲ್ಲಿ ಒಟ್ಟು 336.13 ಕೋಟಿ ರೂಪಾಯಿ ಮತ್ತು ವಿಶ್ವಾದ್ಯಂತ 395.1 ಕೋಟಿ ರೂಪಾಯಿಗಳನ್ನು ಚಿತ್ರ ಕಲೆಕ್ಷನ್ ಮಾಡಿದೆ. ಈ ಚಿತ್ರ ಪಠಾಣ್​, ಕೆಜಿಎಫ್​-2 ಸೇರಿದಂತೆ ಎಲ್ಲಾ  ಚಿತ್ರಗಳ ದಾಖಲೆಯನ್ನೂ ಉಡೀಸ್​ ಮಾಡಿ  ಮುನ್ನುಗ್ಗುತ್ತಿದೆ. ಜೊತೆಗೆ ಭರ್ಜರಿ ಯಶಸ್ಸು ಕಂಡಿದ್ದ ಬಾಹುಬಲಿಯ ದಾಖಲೆಯನ್ನೂ ಹಿಂದಿಕ್ಕಿದೆ. ಈ ಚಿತ್ರದ ಮೊದಲ ಭಾಗ  2001ರ ಜೂನ್ 15ರಂದು ಬಿಡುಗಡೆಯಾಗಿತ್ತು. ಆಗಲೂ ಇದೇ ರೀತಿಯ ನಾಗಾಲೋಟದಲ್ಲಿ ಓಡಿದ್ದ ಚಿತ್ರ ಈಗ ಪಾರ್ಟ್​-1 ಬಿಡುಗಡೆಯಾದ ಬರೋಬ್ಬರಿ 21 ವರ್ಷಗಳ ನಂತರ ಪಾರ್ಟ್​-2 ಬಿಡುಗಡೆಯಾದಾಗಲೂ ಭರ್ಜರಿ ಯಶಸ್ಸಿನತ್ತ ಸಾಗುತ್ತಿದೆ.   

ಗದರ್ 2 ನಲ್ಲಿ ಸನ್ನಿ ಡಿಯೋಲ್ ತಾರಾ ಸಿಂಗ್ ಆಗಿ ಪುನರಾಗಮನ ಆಗಲಿದ್ದಾರೆ.  ಅಮಿಷಾ ಪಟೇಲ್ ಸಕೀನಾ ಆಗಿದ್ದಾರೆ. 1971 ರ ಇಂಡೋ-ಪಾಕಿಸ್ತಾನ (Indo-Pak) ಯುದ್ಧದ ಸಮಯದಲ್ಲಿ, ಪಾಕಿಸ್ತಾನದಲ್ಲಿ ಸಿಲುಕಿರುವ ತಮ್ಮ ಮಗನನ್ನು ತಾರಾ ಸಿಂಗ್ ವಾಪಸ್​ ಕರೆತರಲು ಪಾಕಿಸ್ತಾನಕ್ಕೆ ಹಿಂದಿರುಗುವ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ. ತಾರಾಸಿಂಗ್​ ತನ್ನ ಮಗ ಚರಣಜೀತ್‌ನನ್ನು ಮನೆಗೆ ಕರೆತರಲು ಸಾಧ್ಯವಾಗತ್ತಾ ಎನ್ನುವುದು ಚಿತ್ರದ ಕುತೂಹಲ. ಈ ಪರಿಯ ಯಶಸ್ಸನ್ನು ಖುದ್ದು ಚಿತ್ರತಂಡವೇ ನಿರೀಕ್ಷಿಸರಲಿಲ್ಲ.  ನಟ ಸನ್ನಿ ಡಿಯೋಲ್ ಇಲ್ಲಿಯವರೆಗೆ ಅಸಂಖ್ಯ ಚಿತ್ರಗಳಲ್ಲಿ ನಟಿಸಿದ್ದರೂ, 100 ಕೋಟಿ ಕ್ಲಬ್​ ಸೇರಿದ ಮೊದಲ ಚಿತ್ರ ಗದರ್​ ಎನಿಸಿಕೊಂಡಿದೆ. ಅದೂ ಅವರ 65ನೇ ವಯಸ್ಸಿನಲ್ಲಿ! ಹೌದು. ಬಾಲಿವುಡ್‌ನಲ್ಲಿ (Bollywood) ಚಿತ್ರಗಳ ಗಳಿಕೆಯನ್ನು ಅಂದಾಜಿಸುವ ವಿಧಾನವು ಈಗ ಮೊದಲ ವಾರಾಂತ್ಯದಲ್ಲಿ ಅವರ ಚಿತ್ರಗಳು ಎಷ್ಟು ಗಳಿಸಿವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮೊದಲ ದಿನವೇ ಚಿತ್ರ 100 ಕೋಟಿ ಗಳಿಕೆ ಕಂಡರೆ ಅದು ಭರ್ಜರಿ ಹಿಟ್ ಎಂಬುದನ್ನು ಈಗಿನ ವಿಶ್ಲೇಷಣೆ.  ಇದರ ನಂತರ, ಮೊದಲ ವಾರದ ಗಳಿಕೆಯ ಮೌಲ್ಯಮಾಪನ ಪ್ರಾರಂಭವಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಪ್ರಾರಂಭವಾದ ಈ ಟ್ರೆಂಡ್‌ನ ಭಾಗವಾಗಿ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಆಮೀರ್ ಖಾನ್ ಸೇರಿದಂತೆ ಕೆಲವರು ಈ ಬ್ಲಾಕ್​ಬಸ್ಟರ್​ ಸಾಲಿಗೆ ಸೇರಿದ್ದಾರೆ. ಅಕ್ಷಯ್ ಕುಮಾರ್ ಕೂಡ ಹಲವು ಬಾರಿ ನೂರು ಕೋಟಿ ಕ್ಲಬ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ತಮ್ಮ ವೃತ್ತಿಜೀವನದ ಪ್ರಾರಂಭದ ಹಲವು ವರ್ಷಗಳ ನಂತರ ಈ ಕ್ಲಬ್‌ಗೆ ಸೇರುವ ಅವಕಾಶವನ್ನು ಪಡೆದ ಅಂತಹ ಅನೇಕ ತಾರೆಯರಿದ್ದಾರೆ. ಇದರ ಅರ್ಥ 60 ವಯಸ್ಸಾದ ಮೇಲೆ ಈ ಕ್ಲಬ್​ ಸೇರಿರುವ ಖ್ಯಾತಿಯನ್ನು ಕೆಲವು ತಾರೆಯರು ಪಡೆದಿದ್ದಾರೆ. ಅಂಥವರಲ್ಲಿ ಒಬ್ಬರು ಸನ್ನಿ ಡಿಯೋಲ್​.

ನಾನು ಹುಚ್ಚನಾಗಿಬಿಟ್ಟೆ, ರಾತ್ರಿಪೂರ್ತಿ ಅಳುತ್ತಿದ್ದೆ- ನಗುತ್ತಿದ್ದೆ ಎಂದು ಕಣ್ಣೀರಾದ ನಟ

ಇದರ ಬೆನ್ನಲ್ಲೇ ಈಗ ಸನ್ನಿ ಡಿಯೋಲ್​ ಅವರಿಗೆ ಶಾಕಿಂಗ್​ (Shocking) ಸುದ್ದಿ ಎದುರಾಗಿದೆ. ಅದೇನೆಂದರೆ, ಸನ್ನಿ ಡಿಯೋಲ್​ ಅವರು ಬ್ಯಾಂಕ್​  ಒಂದರಲ್ಲಿ ಪಡೆದುಕೊಂಡಿರುವ ಸಾಲವನ್ನು ಮರುಪಾವತಿಸಿಲ್ಲ ಎನ್ನಲಾಗಿದೆ. ಆದ್ದರಿಂದ  ಸನ್ನಿ ಡಿಯೋಲ್ ಅವರ ಮುಂಬೈ ವಿಲ್ಲಾವನ್ನು ಬ್ಯಾಂಕ್ ಆಫ್ ಬರೋಡಾ ಹರಾಜಿಗೆ ಹಾಕಿದೆ. 56 ಕೋಟಿ ಲೋನ್ ಹಾಗೂ ಅದರ ಬಡ್ಡಿಯನ್ನು ಪಾವತಿಸದ ಹಿನ್ನೆಲೆಯಲ್ಲಿ ಮುಂಬೈನ ಜುಹುವಿನಲ್ಲಿರುವ ಮನೆಯನ್ನು ಹರಾಜು ಹಾಕಲಾಗಿದೆ ಎಂದು ವರದಿಯಾಗಿದೆ.  ಬರುವ ಸೆಪ್ಟೆಂಬರ್ 25ರಂದು ಇದರ ಹರಾಜು ಪ್ರಕ್ರಿಯೆ ನಡೆಯಲಿದೆ.  ಒಂದು ವೇಳೆ ಸನ್ನಿ ಡಿಯೋಲ್​ ಇದಕ್ಕೂ ಮುನ್ನ ಹಣ ನೀಡಿದರೆ, ಹರಾಜು ಪ್ರಕ್ರಿಯೆ ನಿಲ್ಲತ್ತಾ ಎನ್ನುವುದು ಈಗಿರುವ ಪ್ರಶ್ನೆ.
 
 ಗದರ್​-2 ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಸನ್ನಿ ಅವರು ಅಕ್ಷರಶಃ ಕಣ್ಣೀರಾಗಿದ್ದರು. ನಿಜಕ್ಕೂ ನನಗೆ ಏನು ಆಯಿತು ಎಂದು ತಿಳಿಯುತ್ತಿಲ್ಲ. ಈ ಚಿತ್ರ ಇಷ್ಟು ಯಶಸ್ವಿಯಾಗುತ್ತದೆ ಎಂದು ಊಹಿಸಿರಲಿಲ್ಲ. ಇದರ ಈ ಪರಿಯ ಯಶಸ್ಸು ಕಂಡು ರಾತ್ರಿ ಪೂರ್ತಿ ಅತ್ತೆ, ಒಮ್ಮೊಮ್ಮೆ ಜೋರಾಗಿ ನಗುತ್ತಿದ್ದೆ. ನಾನು ಕುಡಿದಿದ್ದೇನೆ ಎಂದೇ ಅಂದುಕೊಂಡರು. ಆದರೆ ನಾನು ನಿಜವಾಗಿಯೂ ಕುಡಿದಿರಲಿಲ್ಲ. ಲೈಫ್​ನಲ್ಲಿ ಇಂಥದ್ದೊಂದು ಸನ್ನಿವೇಶ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ನನ್ನ ದೇವರು ಕೈಬಿಡಲಿಲ್ಲ ಎಂದು ಕಣ್ಣೀರು ಹಾಕುತ್ತಲೇ ನುಡಿದಿದ್ದರು ಸನ್ನಿ ಡಿಯೋಲ್​. ನಿಜಕ್ಕೂ ನಾನು ಹುಚ್ಚನಾಗಿಬಿಟ್ಟಿದ್ದೆ. ಏನು ಮಾಡುತ್ತಿದ್ದೇನೆ ಎಂದು ನನಗೆ ತಿಳಿಯುತ್ತಿರಲಿಲ್ಲ ಎಂದು ಭಾವುಕರಾಗಿದ್ದರು. ಆದರೆ ಇದೀಗ ಅವರಿಗೆ ನಿಜಕ್ಕೂ ಶಾಕಿಂಗ್​ಆಗುವ ಸುದ್ದಿ ಬಂದಿದೆ. 

ಬಾಕ್ಸ್​ ಆಫೀಸ್​ ಧೂಳೆಬ್ಬಿಸ್ತಿದೆ 'ಗದರ್-2'​: ಶಾರುಖ್ ಖಾನ್ ಚಿತ್ರ ಪಠಾಣ್​ ದಾಖಲೆ ಉಡೀಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?