
ಬಾಲಿವುಡ್ ನಟಿ ದಿಶಾ ಪಟಾನಿಯನ್ನು(Disha Patani) ಬಾಲಿವುಡ್‌ನ ಬೋಲ್ಡ್, ಹಾಟ್ ಮತ್ತು ಮಾದಕ ನಟಿ ಎಂದು ಪರಿಗಣಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದು, ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಕೆಲ ದಿನಗಳ ಹಿಂದೆ ದಿಶಾ ಹೊಸ ಬಾಯ್ಫ್ರೆಂಡ್ ಪರಿಚಯಿಸಿದ್ದರು. ಸಿನಿಮಾ ಲೋಕದಲ್ಲಿ ಲವ್, ಬ್ರೇಕಪ್, ಡಿವೋರ್ಸ್, ಅಕ್ರಮ ಸಂಬಂಧ, ಲಿವ್ ಇನ್ ಎಲ್ಲವೂ ಕಾಮನ್ನೇ. ಅದರಲ್ಲೇನೂ ಹೊಸ ವಿಷಯವಿಲ್ಲ. ಅದೇ ರೀತಿ ದಿಶಾ ಪಟಾನಿ ಕೂಡ ಈಗ ತಮ್ಮ ಬಾಯ್ಫ್ರೆಂಡ್ ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್ (Tiger Shroff)ಗೆ ಶಾಕ್ ನೀಡಿದ್ದಾರೆ. ಟೈಗರ್ ಮತ್ತು ದಿಶಾ ಹಲ ವರ್ಷಗಳಿಂದ ಡೇಟ್ ಮಾಡುತ್ತಿದ್ದರು. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಇಬ್ಬರೂ ಕಾರಿನಲ್ಲಿ ಸುತ್ತಾಟ ನಡೆಸಿದ್ದಕ್ಕೆ ಇವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ಆದರೆ, ಈ ಜೋಡಿ ಎಂದಿಗೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಇಂದಿಗೂ ತಾವು ಸಂಬಂಧದಲ್ಲಿದ್ದ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎಂದಿರಲಿಲ್ಲ. ಆದರೆ ಒಟ್ಟಿಗೇ ಮಾತ್ರ ಇದ್ದ ಬಗ್ಗೆ ಸಾಕಷ್ಟು ಪುರಾವೆಗಳು ಇದ್ದವು. ಆದರೆ ಕೆಲ ದಿನಗಳ ಹಿಂದೆ ನಟಿ, ಹೊಸ ಬಾಯ್‌ಫ್ರೆಂಡ್‌ನನ್ನು ಪರಿಚಯಿಸಿದ್ದರು. ಈ ಹೊಸ ಬಾಯ್ಫ್ರೆಂಡ್ ಹೆಸರು ಅಲೆಕ್ಸಾಂಡರ್ ಅಲೆಕ್ಸಿಕ್ (Aleksander Alexilic). ದಿಶಾ ಪಟಾಣಿ ಅವರು ಅಲೆಕ್ಸಾಂಡರ್ ಅಲೆಕ್ಸಿಕ್ ಜೊತೆ ಆಗಾಗ ಕಾಣಿಸಿಕೊಳ್ಳುತ್ತಾರೆ. ತಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಅನೇಕ ಬಾರಿ ಇವರು ಹೇಳಿಕೊಂಡಿದ್ದಾರೆ. ಆದರೆ, ಈಗ ಅವರು ಖುದ್ದು ಸ್ನೇಹಿತ ಎಂದು ಪರಿಚಯಿಸಿದ್ದು, ಇವರ ಮಧ್ಯೆ ಈಗ ಪ್ರೀತಿ ಮೂಡಿದೆಯೇ ಎನ್ನುವ ಅನುಮಾನ ಮೂಡಿದೆ.
ಇದರ ವಿಡಿಯೋ ವೈರಲ್ ಆಗಿದೆ. ದಿಶಾ ತಮ್ಮ ಸ್ನೇಹಿತರಿಗೆ ಅಲೆಕ್ಸಾಂಡರ್ನ ಪರಿಚಯ ಮಾಡಿದ್ದಾರೆ. ‘ಇವರು ನನ್ನ ಬಾಯ್ಫ್ರೆಂಡ್’ ಎಂದು ಹೇಳಿರುವನ್ನು ವಿಡಿಯೋದಲ್ಲಿ ಕೇಳಬಹುದು. ಇದರಿಂದ ಟೈಗರ್ ಶ್ರಾಫ್ ಫ್ಯಾನ್ಸ್ ಕಂಗಾಲಾಗಿದ್ದಾರೆ. ಈ ವಿಡಿಯೋಗೆ ಸಕತ್ ಕಮೆಂಟ್ಗಳು ಬರುತ್ತಿದ್ದು, ಟೈಗರ್ ಶ್ರಾಫ್ ಅವರ ಸ್ಥಿತಿ ಕಂಡು ಹಲವರು ಮರುಗಿದ್ದಾರೆ. ಅಂದಹಾಗೆ ದಿಶಾ ಮತ್ತು ಟೈಗರ್ ನಡುವೆ ಸಂಬಂಧ ಶುರುವಾದದ್ದು ಇಬ್ಬರೂ ಸಿನಿಮಾಕ್ಕೆ ಬರುವ ಮೊದಲೇ. ನಂತರ ಬಘಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇಬ್ಬರ ಗೆಳೆಯನವೇ ಪ್ರೇಮಾಂಕುರವಾಗಲು ಕಾರಣವಾಯ್ತು ಎನ್ನಲಾಗಿದೆ. ಇಷ್ಟಿದ್ದರೂ ಜೋಡಿ ಜೊತೆಜೊತೆಯಾಗಿಯೇ ಹೋದರೂ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಈಗ ಹೊಸ ಗೆಳೆಯನನ್ನು ಪರಿಚಯಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.
ಒಬ್ಬಳು ದಿಶಾ ಕೈಕೊಟ್ಮೇಲೆ ಇನ್ನೊಬ್ಬ ದಿಶಾಳ ಹಿಂದೆ ಟೈಗರ್ ಶ್ರಾಫ್? ನಟ ಹೇಳಿದ್ದೇನು?
ಆದರೆ ಇದೀಗ ಇನ್ನೊಂದು ಕುತೂಹಲದ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ದಿಶಾ ಪಟಾಣಿಯವರ ಈ ಹೊಸ ಗೆಳೆಯ ಅಲೆಕ್ಸಾಂಡರ್ ಅಲೆಕ್ಸಿಕ್ ತಮ್ಮ ಕೈ ಮೇಲೆ ದಿಶಾ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದನ್ನು ನೋಡಿದರೆ ಇವರಿಬ್ಬರ ರಿಲೇಷನ್ ಫಿಕ್ಸ್ ಎನ್ನಲಾಗುತ್ತಿದೆ. ಆದರೆ ಕುತೂಹಲದ ಸಂಗತಿ ಎಂದರೆ, ದಿಶಾ ಜೊತೆ ಈಕೆಯ ಹಳೆಯ ಬಾಯ್ ಫ್ರೆಂಡ್ ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣಾ ಶ್ರಾಫ್ ರೀಲ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಹಿಂದೆ ಅಲೆಕ್ಸಾ ಇದ್ದಾರೆ. ಇದೊಂದು ರೀತಿಯಲ್ಲಿ ಸಕತ್ ವಿಚಿತ್ರವಾಗಿದೆ ಎಂದು ಫ್ಯಾನ್ಸ್ ಕಮೆಂಟ್ ಹಾಕುತ್ತಿದ್ದಾರೆ. ಅಸಲಿಗೆ ದಿಶಾ, ಟೈಗರ್ ಜೊತೆ ಸುತ್ತವಾಗಲೂ ತಾವು ಡೇಟಿಂಗ್ ಮಾಡುತ್ತಿರುವುದನ್ನು ಹೇಳಿರಲಿಲ್ಲ, ಅದೇ ರೀತಿ ಅಲೆಕ್ಸಾಂಡರ್ ಜೊತೆ ಕೂಡ ಇದನ್ನು ಇದುವರೆಗೆ ಒಪ್ಪಿಕೊಂಡಿಲ್ಲ. ತಾವಿಬ್ಬರೂ ಸ್ನೇಹಿತರಷ್ಟೇ ಎಂದಿದ್ದಾರೆ. ಆದ್ದರಿಂದ ಇವರಿಬ್ಬರು ಡೇಟಿಂಗ್ ಎಲ್ಲಾ ಮಾಡುತ್ತಿಲ್ಲ ಎನ್ನುತ್ತಲೇ ಇದ್ದಾರೆ ಫ್ಯಾನ್ಸ್.
ಆದರೆ ಸುಖಾ ಸುಮ್ಮನೇ ಯಾರೂ ಹೀಗೆಲ್ಲಾ ಬೇರೆಯವರ ಟ್ಯಾಟೂ (Tatoo) ಕೈಮೇಲೆ ಹಾಕಿಸಿಕೊಳ್ಳಲ್ಲ ಅಂತಿದ್ದಾರೆ ಇನ್ನಷ್ಟು ಮಂದಿ. ಆದ್ದರಿಂದ ಇವರಿಬ್ಬರೂ ಸಂಬಂಧದಲ್ಲಿ ಇರೋದು ನಿಜ ಅಂತಿದ್ದಾರೆ. ಇವರಿಬ್ಬರೂ ಸಂಬಂಧದಲ್ಲಿ ಇದ್ದದ್ದೇ ಹೌದಾಗಿದ್ದರೆ ಟೈಗರ್ ಸಹೋದರಿ ಯಾಕೆ ಅಲ್ಲಿ ಇರುತ್ತಿದ್ದರು ಎಂದು ಇನ್ನಷ್ಟು ಮಂದಿ ಅವರೊಳಗೇ ಚರ್ಚೆ ನಡೆಸುತ್ತಿದ್ದಾರೆ. ಈ ಸಿನಿಮಾ ಮಂದಿ ಸಂಬಂಧ ಏನು ಅಂತನೇ ಅರ್ಥವಾಗಲ್ಲ ಎಂದು ಫ್ಯಾನ್ಸ್ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅದೇ ಇನ್ನೊಂದೆಡೆ, ದಿಶಾರ ಎಕ್ಸ್ ಬಾಯ್ಫ್ರೆಂಡ್ ಟೈಗರ್ ಶ್ರಾಫ್ ದಿಶಾ ಪಟಾಣಿ ಕೈಕೊಟ್ಟ ಮೇಲೆ ದೀಶಾ ಧನುಕಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಅವರ ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಅಂದಹಾಗೆ ದೀಶಾ ಧನುಕಾ ಅವರು, ಪ್ರೊಡಕ್ಷನ್ ಹೌಸ್‌ನಲ್ಲಿ ಹಿರಿಯ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಟೈಗರ್ ಶ್ರಾಫ್ಗೆ ಶಾಕ್ ನೀಡಿದ ದಿಶಾ ಪಟಾನಿ: ಹೊಸ ಬಾಯ್ಫ್ರೆಂಡ್ ಪರಿಚಯಿಸಿದ ನಟಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.