ಹುಟ್ಟಿದ ವರ್ಷವನ್ನು 2023 ಎಂದು ಬದಲಿಸಿದ ನಟಿ ಸುಷ್ಮಿತಾ ಸೇನ್​! ಇದರ ಹಿಂದಿದೆ ಕುತೂಹಲದ ಕಥೆ...

By Suchethana D  |  First Published Jun 28, 2024, 5:17 PM IST

ಹುಟ್ಟಿದ ವರ್ಷವನ್ನು 2023 ಎಂದು ಸೋಷಿಯಲ್​ ಮೀಡಿಯಾದಲ್ಲಿ ಬದಲಿಸಿಕೊಂಡಿದ್ದಾರೆ ನಟಿ ಸುಷ್ಮಿತಾ ಸೇನ್​! ಅಷ್ಟಕ್ಕೂ ಇದರ ಹಿಂದಿರುವ  ಕುತೂಹಲದ ಕಥೆ ಏನು? 
 


ಮಾಜಿ ವಿಶ್ವ ಸುಂದರಿ, ಬಾಲಿವುಡ್​ ನಟಿ ಸುಷ್ಮತಾ ಸೇನ್​ ಅವರಿಗೆ ಈಗ 48 ವರ್ಷ ವಯಸ್ಸು. ಆದರೆ ಇದೀಗ ಅವರು ತಮ್ಮ ಹುಟ್ಟಿನ ದಿನಾಂಕವನ್ನು ಬದಲಿಸಿಕೊಂಡಿದ್ದಾರೆ. ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಹುಟ್ಟಿದ ದಿನಾಂಕವನ್ನು ಬದಲಿಸಿಕೊಂಡಿದ್ದು ಅದರ ಪ್ರಕಾರ ಅವರಿಗೆ ಈಗ ಒಂದೂವರೆ ವರ್ಷ ವಯಸ್ಸು! ಹೌದು. 19 ನವೆಂಬರ್​ 1975ರಲ್ಲಿ ಹುಟ್ಟಿರುವ ನಟಿ ಇದೀಗ ತಮ್ಮ ಹುಟ್ಟಿದ ದಿನಾಕವನ್ನು 27ನೇ ಫೆಬ್ರವರಿ 2023 ಎಂದು ಬದಲಿಸಿಕೊಂಡಿದ್ದಾರೆ. ಅಷ್ಟಕ್ಕೂ ಅವರೇನೂ ತಮ್ಮ ವಯಸ್ಸನ್ನು ಕಡಿಮೆ ಮಾಡಿಕೊಳ್ಳಲು ಹೀಗೆ ಮಾಡಿದ್ದಲ್ಲ. ಬದಲಿಗೆ ಇದರ ಹಿಂದಿದೆ ಕುತೂಹಲದ ಕಾರಣ.

ಸಾಮಾನ್ಯವಾಗಿ ಮಹಿಳೆಯರ ಜೀವನದಲ್ಲಿ ಮರುಜನ್ಮ ಬರುವುದು ಮಗುವಿಗೆ ಜನ್ಮನೀಡಿದಾಗ ಎನ್ನುವ ಮಾತಿದೆ. ಅದೇ ರೀತಿ ಯಾವುದೇ ಮನುಷ್ಯರು ಸಾವಿನ ದವಡೆಗೆ ಹೋಗಿ ಬದುಕಿ ಬಂದಾಗ ಅದು ಅವರಿಗೆ ಮರುಜನ್ಮ ಇದ್ದಂತೆಯೇ. ಅದೇ ರೀತಿ ಸುಷ್ಮಿತಾ ಸೇನ್​ ಕಳೆದ ವರ್ಷ ಅಂದ್ರೆ 2023ರ ಫೆಬ್ರುವರಿ 27ರಂದು ಹೃದಯಾಘಾತಕ್ಕೆ ಒಳಗಾಗಿದ್ದು ಮರುಜನ್ಮ ಪಡೆದಿದ್ದಾರೆ. ಈ ದಿನವನ್ನು ಸ್ಮರಿಸಿಕೊಂಡಿರುವ ನಟಿ, ನಿಜವಾಗಿಯೂ ನನಗೆ ಜನ್ಮ ಸಿಕ್ಕಿರುವುದು ಈ ದಿನ ಎಂದು ಸೋಷಿಯಲ್​ ಮೀಡಿಯಾದಲ್ಲಿ ದಿನಾಂಕವನ್ನು ಬದಲಿಸಿಕೊಂಡು ಗಮನ ಸೆಳೆದಿದ್ದಾರೆ.  ಅವರು ತಮ್ಮ ವೆಬ್ ಸೀರೀಸ್ ಆರ್ಯ ಸೀಸನ್ 3 ಶೂಟಿಂಗ್​ನಲ್ಲಿ ಇರುವಾಗ  ಭಾರಿ ಹೃದಯಾಘಾತಕ್ಕೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಅವರು ಗಮನಾರ್ಹವಾಗಿ ಚೇತರಿಸಿಕೊಂಡರು. ಆದ್ದರಿಂದ ಈ ದಿನವು ತಮ್ಮ ಜೀವನದ ಪ್ರಮುಖ ಕ್ಷಣ ಎಂದು ನಟಿ ಹೇಳಿದ್ದಾರೆ.

Tap to resize

Latest Videos

ಬಾಯ್​ಫ್ರೆಂಡ್​ನ ಹುಟ್ಟುಹಬ್ಬ ಮರೆತು ತೇಪೆಹಚ್ಚುವ ಕೆಲ್ಸ ಮಾಡಿದ ಮಲೈಕಾ ಅರೋರಾ ಸಕತ್​ ಟ್ರೋಲ್​
 
ಅಷ್ಟಕ್ಕೂ ಅವರಿಗೆ ಹೃದಯಾಘಾತ ಹೇಗೆ ಆಗಿತ್ತು ಎನ್ನುವ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಲೇ ಇದೆ. ಏಕೆಂದರೆ ಅವರು ಫಿಟ್​ನೆಸ್​ಗೆ ಹೆಸರಾದವರು. ಅವರ  ಹೃದಯ ದುರ್ಬಲವಾಗಿದ್ದು ಹೇಗೆ ಎಂದು ಎಲ್ಲರೂ ಮಾತನಾಡಿಕೊಂಡಿದ್ದರು. ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದ ಅವರೀಗ ಆ್ಯಂಜಿಯೊಪ್ಲಾಸ್ಟಿ ಮಾಡಿಸಿಕೊಂಡು ಚೇತರಿಸಿಕೊಂಡಿದ್ದರು.  ಸಂಪೂರ್ಣ ಗುಣಮುಖರಾದ ಮೇಲೆ ಮತ್ತೆ ವೃತ್ತಿ ಸಂಬಂಧಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  
 
 ಫಿಟ್ ಅಂಡ್ ಫೈನ್ ಆಗಿದ್ದ ನಟಿ ಸುಶ್ಮಿತಾ ಸೇತ್ ಅವರಿಗೆ ಹೃದಯಾಘಾತವಾದ ವಿಚಾರ ಅಭಿಮಾನಿಗಳಲ್ಲಿ ಶಾಕ್ ನೀಡಿತ್ತು. ಕೊನೆಗೆ  ಸುಷ್ಮಿತಾ ಸೇತ್  ವಿಡಿಯೋ ಮೂಲಕ ಅಭಿಮಾನಿಗಳ ಮುಂದೆ ಬಂದು,  ತಮಗೆ ಮಾಸಿವ್ ಆರ್ಟ್ ಆಟ್ಯಾಕ್ ಆಗಿತ್ತು, 95 % ಬ್ಲಾಕೇಜ್ ಇತ್ತು ಎಂದು ಹೇಳಿಕೊಂಡಿದ್ದರು.  ಪ್ರತಿದಿನ ವರ್ಕೌಟ್, ಯೋಗ  ಮಾಡಿದರೂ ಹೀಗೆ ಆಯಿತು ಎಂದಿದ್ದರು.   ನಾನು ಆಕ್ಟೀವ್ ಲೈಫ್‌ಸ್ಟೈಲ್ ಹೊಂದಿದ್ದರಿಂದ ನಾನು ಬದುಕುಳಿದೆ. ಮತ್ತೊಂದೆ ಕಡೆ ನೋಡಿದರೆ ನಾನು ತುಂಬಾ ಲಕ್ಕಿ. ಇದು ನನ್ನಲ್ಲಿ ಭಯವನ್ನು ಉಂಟುಮಾಡುವುದಿಲ್ಲ, ಬದಲಿಗೆ, ನಾನು ಈಗ ಏನನ್ನಾದರೂ ಎದುರುನೋಡುವ ಭರವಸೆಯ ಭಾವನೆಯನ್ನು ಹೊಂದಿದ್ದೇನೆ' ಎಂದು ಹೇಳಿದರು. ಸುಷ್ಮಿತಾ 2015ರ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. 2015ರಲ್ಲಿ ಬೆಂಗಾಳಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಬಳಿಕ ಅನೇಕ ವೆಬ್ ಸೀರಿಸ್ ಗಳಲ್ಲಿ ಮಿಂಚಿದ್ದಾರೆ. ಆರ್ಯ, ತಾಲಿ ಸೀರಿಸ್ ನಲ್ಲಿ ಸುಶ್ಮಿತಾ ಮಿಂಚಿದ್ದಾರೆ. 

ದರ್ಶನ್​ ಅಣ್ಣ ಸಹೃದಯಿ, ಕನಸಲ್ಲೂ ಕೇಡು ಬಯಸುವವರಲ್ಲ... ಆದರೆ... ನಟ ನಾಗಶೌರ್ಯ ಭಾವುಕ ಪೋಸ್ಟ್​
 

click me!