ಮದುವೆಯಾದ 5 ದಿನಕ್ಕೆ ಗರ್ಭಿಣಿಯಾದ್ರಾ ಸೋನಾಕ್ಷಿ!? ಆಸ್ಪತ್ರೆಯಲ್ಲಿ ಕಾಣಿಸಿದ ನವಜೋಡಿ

Published : Jun 28, 2024, 04:39 PM ISTUpdated : Jun 28, 2024, 05:00 PM IST
ಮದುವೆಯಾದ 5 ದಿನಕ್ಕೆ ಗರ್ಭಿಣಿಯಾದ್ರಾ ಸೋನಾಕ್ಷಿ!? ಆಸ್ಪತ್ರೆಯಲ್ಲಿ ಕಾಣಿಸಿದ ನವಜೋಡಿ

ಸಾರಾಂಶ

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಮದುವೆಯಾದ 5 ದಿನಕ್ಕೆ ಗರ್ಭಿಣಿಯಾಗಿದ್ದಾರೆ ಎಂದು ಸುದ್ದಿ ಹಬ್ಬಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅವರು ಆಸ್ಪತ್ರೆಯಲ್ಲಿ ಗಂಡನ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಕಳೆದ ಭಾನುವಾರ ಮದುವೆಯಾದ ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಮತ್ತು ನಟ  ಜಹೀರ್ ಇಕ್ಬಾಲ್ ಐದನೇ ದಿನಕ್ಕೆ  ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ.

ಜೂನ್ 23ರಂದು ವಿವಾಹವಾದ ಈ ಜೋಡಿ ಪ್ರತಿಷ್ಠಿತ ಕೋಕಿಲಾ ಬೆನ್ ಆಸ್ಪತ್ರೆಗೆ ಬಂದು ಹೋಗುತ್ತಿರುವ ವಿಡಿಯೋ ಸೆರೆಯಾಗಿದ್ದು, ಮದುವೆಯಾದ ಐದೇ ದಿನಕ್ಕೆ ಸೋನಾಕ್ಷಿ ಗರ್ಭಿಣಿಯಾಗಿದ್ದಾರಾ ಎಂದು ನೆಟಿಜೆನ್ಸ್ ಕಮೆಂಟ್‌ ಮಾಡುತ್ತಿದ್ದಾರೆ.

2024ರಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿ, ಸಿಹಿ ಸುದ್ದಿ ಹಂಚಿಕೊಂಡ 9 ಕನ್ನಡ ಸೆಲೆಬ್ರಿಟಿಗಳು

ನವ ವಿವಾಹಿತಿ ಜೋಡಿಗಳು ಮದುವೆಯಾದ 5 ದಿನದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ಯಾಕೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಸೋನಾಕ್ಷಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿರಬೇಕು ಎಂದು ಕಮೆಂಟ್‌ಗಳು ಮಾತ್ರ ಬರುತ್ತಿದೆ. ಬಾಲಿವುಡ್‌ ನಲ್ಲಿ ಮದುವೆಗೂ ಮುನ್ನ ಗರ್ಭಿಣಿಯಾದ ಅನೇಕ ನಟಿಯರಿದ್ದಾರೆ. ಅವರ ಸಾಲಿಗೂ ಸೋನಾಕ್ಷಿ ಸೇರ್ಪಡೆಯಾಗ್ತಾರಾ ಕಾದು ನೊಡಬೇಕಿದೆ.

ಡಿವೋರ್ಸ್ ಬಳಿಕ ಮಗನಿಗೆ ಸಹಪೋಷಕರಾಗುವ ಜವಾಬ್ದಾರಿ ಕಠಿಣವಾಗಿತ್ತು: ಸತ್ಯ ಬಹಿರಂಗಪಡಿಸಿದ ಮಲೈಕಾ!

ಬಾಲಿವುಡ್ ನಲ್ಲಿ ಇವರಿಬ್ಬರ ಮದುವೆ ಬಗ್ಗೆ ಸಾಕಷ್ಟು ಚರ್ಚೆ ಇತ್ತು. ಹಿಂದೂ ನಟಿ ಮುಸ್ಲಿಂ ನಟನನ್ನು ಮದುವೆಯಾಗುತ್ತಿರುವುದಕ್ಕೆ ಟೀಕೆ ವ್ಯಕ್ತವಾಗಿತ್ತು. ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾ ದಂಪತಿಗೆ ಒಟ್ಟು ಮೂರು ಮಕ್ಕಳು. ಲವ್-ಕುಶ್ ಅವಳಿ ಸೋದರರಾಗಿದ್ದು, ಸೋನಾಕ್ಷಿ ಸಿನ್ಹಾ ಒಬ್ಬಳೇ ಮಗಳು. ಸೋನಾಕ್ಷಿ ಮದುವೆಗೆ ಸೋದರರಾದ ಲವ್ ಮತ್ತು ಕುಶ್ ಬಂದಿಲ್ಲವಾ ಎಂಬ ಚರ್ಚೆ ಶುರುವಾಗಿತ್ತು. ಅವರಿಗೆ ಈ ಮದುವೆ ಬಗ್ಗೆ ಅಸಮಾಧಾನ ಇತ್ತು. ಆದರೆ ಅವರು ಭಾಗವಹಿಸಿದ್ದಾರೆ ಆದರೆ ಎಲ್ಲೂ ಫೋಟೋ ವಿಡಿಯೋಗೆ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗಿದೆ. 

ತನ್ನ ಬಹುಕಾಲದ ಮುಸ್ಲಿಂ ಗೆಳೆಯ ಜಹೀರ್ ಇಕ್ಬಾಲ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನ ಸೋನಾಕ್ಷಿ 2017 ರಿಂದ ಜಹೀರ್ ಜೊತೆಗೆ 7 ವರ್ಷಗಳ ಕಾಲ ರಿಲೇಷನ್ ಶಿಪ್ ನಲ್ಲಿದ್ದರು.  ಅದೇನೆ ಇರಲಿ ಹಿರಿಯ ನಟ ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾ ಗರ್ಭಿಣಿ ಆಗಿರುವುದು ನಿಜವೇ ಆದರೆ ಸದ್ಯದಲ್ಲೇ ತಿಳಿಯಲಿದೆ. ನಟಿ ಆಲಿಯಾ ಭಟ್, ಶ್ರೀದೇವಿ, ನೇಹಾ ದೂಪಿಯಾ, ನೀನಾ ಗುಪ್ತಾ, ಮಹಿಮಾ ಚೌಧರಿ , ನಟಿ ಸಾರಿಕಾ, ಕೊಂಕಣ್‌ ಸೆನ್‌ ಶರ್ಮ, ನಟಿ ದಿಯಾ ಮಿರ್ಜಾ, ಅಮೃತಾ ಅರೋರಾ, ನಟಿ ನತಾಶಾ ಸ್ಟಾಂಕೋವಿಕ್‌,  ಸೇರಿ ಅನೇಕ ಬಾಲಿವುಡ್‌ ನಟಿಯರು ಮದುವೆಗೂ ಮುನ್ನ ಗರ್ಭಿಣಿಯಾಗಿ ಮದುವೆ ಆದ ಕೆಲವೇ ತಿಂಗಳಲ್ಲಿ ತಾಯಿಯಾಗಿ ಭಡ್ತಿ ಪಡೆದ ಉದಾಹರಣೆಗಳಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್