Sushant Singh case; ನಿಮ್ಮ ಮೇಲೆ ನಂಬಿಕೆ ಇದೆ; ಶವಪರೀಕ್ಷೆ ಸಿಬ್ಬಂದಿ ಹೇಳಿಕೆ ನಂತರ ಸುಶಾಂತ್ ಸಹೋದರಿ ಮಾತು

By Shruthi KrishnaFirst Published Dec 27, 2022, 5:39 PM IST
Highlights

ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಶವಪರೀಕ್ಷೆ ಸಿಬ್ಬಂದಿ ಹೇಳಿಕೆ ಬಳಿಕ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಸಿಬಿಐಗೆ ಮನವಿ ಮಾಡಿದ್ದಾರೆ. 

ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿ ಎರಡೂವರೆ ವರ್ಷಗಳೇ ಕಳೆಯಿತು. ಆದರೂ ಸಾವಿನ ಹಿಂದಿನ ರಹಸ್ಯ ಇನ್ನೂ ಬಹರಿಗಂವಾಗಿಲ್ಲ. ಸುಶಾಂತ್ ಪ್ರಕರಣದ ಅಂತಿಮ ವರದಿ ಇನ್ನೂ ಹೊಂರಬಿದ್ದಲ್ಲ. ಬಾಲಿವುಡ್ ಅನ್ನೇ ಅಲ್ಲೋಲಕಲ್ಲೋಲ ಮಾಡಿದ್ದ ಸುಶಾಂತ್ ಸಿಂಗ್ ಸಾವಿನ ರಹಸ್ಯ ಬಯಲಾಗುವ ಮೊದಲೇ ಅನೇಕ ಹೇಳಿಕೆಗಳು ವೈರಲ್ ಆಗಿವೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಾ ಭಾರಿ ಚರ್ಚೆಗೆ ಕಾರಣವಾಗಿದ್ದ ಸುಶಾಂತ್ ಸಿಂಗ್ ಪ್ರಕರಣದ ಬಗ್ಗೆ ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ಬಹಿರಂಗವಾಗಿದೆ. ಸುಶಾಂತ್ ಸಿಂಗ್ ರಜಪೂತ್ ಶವ ಪರೀಕ್ಷೆ ಮಾಡಿದ ಸಿಬ್ಬಂದಿ ನೀಡಿದ ಹೇಳಿಕೆ ಈಗ ವೈರಲ್ ಆಗಿದೆ. ಸುಶಾಂತ್ ಸಿಂಗ್ ಆತ್ಮಹತ್ಯೆ ಅಲ್ಲ, ಕೊಲೆ ಎಂದು ಅನಿಸುತ್ತೆ ಅಂತ ಶವಪರೀಕ್ಷೆ ಸಿಬ್ಬಂದಿ ಇತ್ತೀಚಿಗಷ್ಟೆ ಹೇಳಿಕೆ ನೀಡಿದ್ದರು. ಈ ಅಚ್ಚರಿಕರ ಹೇಳಿಕೆ ಬಳಿಕ ಮತ್ತೆ ಸುಶಾಂತ್ ಸಿಂಗ್ ಪ್ರಕರಣ ಸದ್ದು ಮಾಡುತ್ತಿದೆ. 

Sushant Singh; ದೇಹದ ಮೇಲಿತ್ತು ಹಲವಾರು ಗಾಯ; ಎರಡೂವರೆ ವರ್ಷದ ಬಳಿಕ ಶವಪರೀಕ್ಷೆ ಸಿಬ್ಬಂದಿ ಆಘಾತಕಾರಿ ಹೇಳಿಕೆ

ಈ ಬಗ್ಗೆ ಇದೀಗ ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಸುಶಾಂತ್ ಸಿಂಗ್ ಬಗ್ಗೆ ಪ್ರಕಟವಾಗಿದ್ದ ಸುದ್ದಿ ಶೇರ್ ಮಾಡಿ, ಸಿಬಿಐಗೆ ಮನವಿ ಮಾಡಿದ್ದಾರೆ. 'ಈ ಸಾಕ್ಷಿಯಲ್ಲಿ ಸ್ವಲ್ಪ ಸತ್ಯವಿದೆ, ಸಿಬಿಐ ಇದನ್ನು ನಿಜವಾಗಿಯೂ ಶ್ರದ್ಧೆಯಿಂದ ಪರಿಶೀಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ನೀವು ನ್ಯಾಯಯುತ ತನಿಖೆ ನಡೆಸಿ ಸತ್ಯವನ್ನು ನಮಗೆ ತಿಳಿಸುತ್ತೀರಿ ಎಂದು ನಾವು ಯಾವಾಗಲೂ ನಂಬಿದ್ದೇವೆ' ಎಂದು ಹೇಳಿದ್ದಾರೆ.   

ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಮನೆ 2 ವರ್ಷದಿಂದ ಖಾಲಿ; ತಲೆ ಕೆಡಿಸಿಕೊಂಡ ಓನರ್

ಶವಪರೀಕ್ಷೆ ಸಿಬ್ಬಂದಿಯ ಹೇಳಿಕೆ

ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ನಡೆಸಿದ ರೂಪ ಕುಮಾರ್ ಶಾ ಎರಡೂವರೆ ವರ್ಷಗಳ ಬಳಿಕ ಮಾತನಾಡಿದ್ದಾರೆ. 'ಸುಶಾಂತ್ ಸಿಂಗ್ ರಜಪೂತ್ ನಿಧನರಾದಾಗ ಕೂಪರ್ ಆಸ್ಪತ್ರೆಯಲ್ಲಿ ನಾವು ಐದು ದೇಹಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ವಿ. ಐದು ದೇಹಗಳಲ್ಲಿ ಒಂದು ವಿಐಪಿ ಶವವಾಗಿತ್ತು. ಮರಣೋತ್ತರ ಪರೀಕ್ಷೆ ಹೋದಾಗ ನಮಗೆ ಸುಶಾಂತ್ ಸಿಂಗ್ ಶವ ಎಂದು ಗೊತ್ತಾಯಿತು. ದೇಹದ ಮೇಲೆ ಹಲವು ಗುರುತುಗಳಿದ್ದವು. ಕುತ್ತಿಗೆ ಮೇಲೆ ಎರಡರಿಂದ ಮೂರು ಗುರುತುಗಳಿವೆ. ಪೋಸ್ಟ್ ಮಾರ್ಟಮ್ ಅನ್ನು ರೆಕಾರ್ಡ್ ಮಾಡಬೇಕಿತ್ತು. ಆದರೆ ಉನ್ನತ ಅಧಿಕಾರಿಗಳು ದೇಹದ ಚಿತ್ರಗಳನ್ನು ಮಾತ್ರ ಕ್ಲಿಕ್ ಮಾಡುವಂತೆ ಹೇಳಿದರು. ಅದರಂತೆ ಮಾಡಿದೆವು' ಎಂದರು. 

'ನಾನು ಸುಶಾಂತ್‌ನ ಶವವನ್ನು ಮೊದಲ ಬಾರಿಗೆ ನೋಡಿದಾಗ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಅನಿಸಿತ್ತು. ಅದನ್ನು ನಾನು ಹಿರಿಯ ಅಧಿಕಾರಿಗಳಿಗೆ ಹೇಳಿದ್ದೆ. ಆದರೆ ನಾನು ನಿಯಮದ ಪ್ರಕಾರ ಕೆಲಸ ಮಾಡಬೇಕು. ಹಿರಿಯರ ಅಧಿಕಾರಿ ನನಗೆ ಫೋಟೋ ಕ್ಲಿಕ್ ಮಾಡಲು ಹೇಳಿದರು. ಆದಷ್ಟು ಬೇಗ ಶವ ಪರೀಕ್ಷೆ ಮಾಡಿ ಪೊಲೀಸರಿಗೆ ನೀಡಿ ಎಂದರು. ಹಾಗಾಗಿ ನಾವು ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ' ಎಂದು ಹೇಳಿದರು. 

2020ರಲ್ಲಿ ನಿಧನ

34 ವರ್ಷದ ನಟ ಸುಶಾಂತ್ ಸಿಂಗ್ ಜೂನ್ 2020 ಬಾಂದ್ರಾದಲ್ಲಿ ಅವರ ಆಪಾರ್ಟ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮುಂಬೈ ಪೊಲೀಸರು ಮೊದಲು ಆತ್ಮಹತ್ಯೆ ಎಂದು ವರದಿ ಮಾಡಿದ್ದರು. ಬಳಿಕ ಈ ಪ್ರಕರಣ ಸಿಬಿಐಗೆ ಹಸ್ತಾಂತರ ಮಾಡಲಾಯಿತು. ಸುಶಾಂತ್ ಸಾವಿನ ಪ್ರಕರಣವನ್ನು ವಿವಿಧ ಕೋನಗಳಲ್ಲಿ ತನಿಖೆ ಮಾಡಲಾಗಿದೆ.  
 

click me!