ಬಾಯ್‌ಫ್ರೆಂಡ್ ಸಂತಾನು ಹಜಾರಿಕಾ ಬಗ್ಗೆ ಮಾತನಾಡಿದ ಕಮಲ್ ಹಾಸನ್ ಪುತ್ರಿ. ಡೇಟಿಂಗ್ ಮಾಡಿದ ದಿನದಿಂದ ಜೀವನ ಹೇಗೆ ಬದಲಾಗಿದೆ ಎಂದು ಹೇಳಿಕೊಂಡ ನಟಿ....
ಬಹುಭಾಷಾ ನಟ ಕಮಲ್ ಹಾಸನ್ ಹಿರಿಯ ಪುತ್ರಿ ಶ್ರುತಿ ಹಾಸನ್ ಮತ್ತು ಹಾಲಿವುಡ್ ಪಾಪ್ ಗಾಯಕ ಸಂತಾನು ಹಜಾರಿಕಾ ಪ್ರೀತಿಸುತ್ತಿರು ವಿಚಾರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗಿತ್ತು. ಬಾಯ್‌ಫ್ರೆಂಡ್ ಜೊತೆ ರೊಮ್ಯಾಂಟಿಕ್ ಫೋಟೋ ಅಥವಾ ವಿಡಿಯೋ ಹಂಚಿಕೊಂಡಾಗ ಪ್ರತಿ ಸಲವೂ ವೈರಲ್ ಆಗುತ್ತದೆ. ಸುಮಾರು 3 ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಈ ಜೋಡಿ ಪ್ರತಿಯೊಬ್ಬರಿಗೂ ಕಪಲ್ ಗೋಲ್ಸ್ ಸೆಟ್ ಮಾಡುತ್ತಾರೆ. ಸಂತಾನು ಹಜಾರಿಕಾ ಡೇಟ್ ಮಾಡಿದ ದಿನದಿಂದ ತಮ್ಮ ಜೀವನ ಹೇಗೆ ಬದಲಾಯ್ತು ಎಂದು ಶ್ರುತಿ ಹೇಳಿಕೊಂಡಿದ್ದಾರೆ.
ದಿ ಐ ಹೆಸರಿನ ಹಾಲಿವುಡ್ ಸಿನಿಮಾ ಚಿತ್ರೀಕರಣವನ್ನು ಗ್ರೀಸ್‌ನಲ್ಲಿ ಶ್ರುತಿ ಹಾಸನ್ ಮುಗಿಸಿದ ನಂತರ ಮನೆಗೆ ಹಿಂತಿರುಗಿರುವ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಸಂತಾನು ಹಜಾರಿಕಾ ಅವರನ್ನು ತಬ್ಬಿಕೊಂಡಿದ್ದಾರೆ. 'ಸಂತಾನು ಹಜಾರಿಕಾ ಮತ್ತು ನಾನು ಬೆಸ್ಟ್ ಫ್ರೆಂಡ್ಸ್, ನಾವಿಬ್ಬರೂ ಜೊತೆಗಿದ್ದೀವಿ.ಕೆಲವೊಂದು ಸಲ ಸೋಷಿಯಲ್ ಮೀಡಿಯಾದಲ್ಲಿ ನಾವು ಕಾಮೆಂಟ್‌ಗಳನ್ನು ಓದುತ್ತೀವಿ ಏಕೆಂದರೆ ಜನರು ಫನ್ನಿ ರಿಯಾಕ್ಷನ್ ತಿಳಿದುಕೊಳ್ಳಲು. ಸಂತಾನು ನನ್ನ ಜೀವನಕ್ಕೆ ಪ್ರವೇಶಿಸಿದ ನಂತರ ನಾನು ತುಂಬಾ Calmer ಹಾಗೂ Kinder ವ್ಯಕ್ತಿ ಆಗಿರುವೆ. ಇಂತಹ ಒಳ್ಳೆ ಗುಣಗಳನ್ನು ಜನರಿಂದ ಕಲಿತರೆ ಮಾತ್ರ ಅವರ ಜೊತೆಗಿದ್ದು ಸಾರ್ಥಕ. ಸಂತಾನು ಕೂಡ ತಾಳ್ಮೆ ಹೆಚ್ಚಿರುವ ವ್ಯಕ್ತಿ. ಸಂತಾನು ಹಜಾರಿಕಾ ಅವರಿಗೆ ಅನೇಕ ವಿಚಾರಗಳನ್ನು ನಾನು ಕಲಿತಿರುವೆ' ಎಂದು ಇಂಡಿಯಾ ಟು ಡೇ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ನೆಪೋಟಿಸಂ ಬಗ್ಗೆ ಶ್ರುತಿ:
'ಸ್ಟಾರ್ ಮಕ್ಕಳಾಗಿ ಹುಟ್ಟಿ ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಅಂದ್ರೆ ಬಾಗಿಲು ತೆರೆಯುತ್ತಾರೆ ಆದರೆ ಉಳಿದುಕೊಳ್ಳುವುದು ನಮ್ಮ ಕೈಯಲ್ಲಿ ಇರುತ್ತದೆ. ಒಂದು ವಿಚಾರಕ್ಕೆ ಹೆಮ್ಮೆ ಪಡುವೆ ಏನೆಂದರೆ ನನ್ನ ತಂದೆ-ತಾಯಿ ಚಿತ್ರರಂಗದವರಿಗೆ ಕರೆ ಮಾಡಿ ನನ್ನ ಮಕ್ಕಳಿಗೆ ಅವಕಾಶ ನೀಡಿ ಎಂದು ಕೇಳಿಲ್ಲ. ಹೀಗಾಗಿ ಈ ಜರ್ನಿ ತುಂಬಾನೇ ರೋಚಕವಾಗಿತ್ತು ...ಪ್ರತಿ ಹಂತದಲ್ಲೂ ನನಗೆ ಪೋಷಕರು ಸಲಹೆ ಕೊಡುತ್ತಾರೆ. ನೆಪೋಟಿಸಂ ಇಲ್ಲ...ಅವಕಾಶ ಸಿಗುತ್ತದೆ ಆದರೆ ಚಿತ್ರರಂಗದಲ್ಲಿ ಉಳಿದುಕೊಳ್ಳುವುದು ನಮ್ಮ ಕೈಯಲ್ಲಿದೆ.' ಎಂದು ಹೇಳಿದ್ದಾರೆ.
ಶ್ರುತಿ ಹಾಸನ್ ಮುಖಕ್ಕೆ ಏನಾಯಿತು? ಸೆಲ್ಫಿ ಶೇರ್ ಮಾಡಿ ಕಮಲ್ ಪುತ್ರಿ ಹೇಳಿದ್ದೇನು?
ತಂದೆ-ತಾಯಿ ಪ್ರೇರಣೆ:
'ಒಬ್ಬರನ್ನು ನೋಡಿ ಇವರಂತೆ ನಟಿಸಬೇಕು ಅಂತ ಆಸೆ ಪಟ್ಟವಳು ನಾನಲ್ಲ ಆ ರೀತಿ ನನಗೆ ಮಾಡಲು ಬರೋದೂ ಇಲ್ಲ ಹೀಗಾಗಿ ನನ್ನ ತಂದೆ- ತಾಯಿ ಸಿನಿಮಾ ನನಗೆ ಪ್ರೇರಣೆ ಆಗಲಿಲ್ಲ. ಎಲ್ಲವೂ ನಾನೇ ಕಲಿಯಬೇಕಿತ್ತು, ಕ್ಯಾಮೆರಾ ಕಂಡರೆ ಹೇಗಿರಬೇಕು, ಜನರಿದ್ದರೆ ಹೇಗಿರಬೇಕು, ಒಳ್ಳೆ ಕಥೆಯನ್ನು ಆಯ್ಕೆ ಮಾಡಿಕೊಳ್ಳುವ ರೀತಿ ....ಆರಂಭದಲ್ಲಿ ಯಾವುದೂ ನನಗೆ ಸುಲಭವಾಗಿರಲಿಲ್ಲ. ಜೀವನದಲ್ಲಿ ಈ ಸ್ಥಾನಕ್ಕೆ ಬರಲು ನಡೆದುಕೊಂಡು ಬಂದ ಹಾದಿಯನ್ನು ಮರೆಯುವುದಿಲ್ಲ ಇದೊಂದು ಅರೇಂಜ್ಡ್ ಮ್ಯಾರೇಜ್ ರೀತಿ ಈಗಿ ಕಾಲದಲ್ಲಿ ನನಗೆ ತುಂಬಾ ಇಷ್ಟವಾಗುತ್ತದೆ. ಲವ್ ಮ್ಯಾರೇಜ್‌ಗೆ ಬೆಲೆ ಇಲ್ಲ' ಎಂದು ಶ್ರುತಿ ಮಾತನಾಡಿದ್ದಾರೆ.