ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ/ ಸುಶಾಂತ್ ಸಾವಿನ ನೋವು ಅರಗಿಸಿಕೊಳ್ಳಲಾಗದ ಪುಟ್ಟ ಮಕ್ಕಳು/ ಇಲ್ಲಿಯವರೆಗೆ ಸುಶಾಂತ್ ಸಾವಿಗೆ ನೊಂದು ಆತ್ಮಹತ್ಯೆ ಮಾಡಿಕೊಂವರು ನಾಲ್ವರು
ನವದೆಹಲಿ(ಜೂ.19) ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನೋವನ್ನು ಇಡೀ ಭಾರತೀಯ ಚಿತ್ರರಂಗಕ್ಕೆ ಅರಗಿಸಿಕೊಳ್ಳಲು ಇನ್ನು ಕೆಲವು ಕಾಲ ಬೇಕು. ಜೂನ್ 14 ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ನಂತರ ಇಲ್ಲಿಯವರೆಗೆ ಸುಶಾಂತ್ ಅಗಲಿಕೆ ತಾಳಲಾರದೆ ನಾಲ್ವರು ಅಪ್ರಾಪ್ತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಸುಶಾಂತ್ ಸಾವಿನ ನಂತರ ಕರಣ್, ಆಲಿಯಾ, ಸೋನಂಗೆ ಆದ ಕತೆ ನೋಡಿ!
ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸುಶಾಂತ್ ಸಾವಿನ ನಂತರ ಬಾಲಕಿ ಡಿಪ್ರೆಶನ್ ನಲ್ಲಿ ಇದ್ದಳು. ಇದಕ್ಕೂ ಎರಡು ದಿನ ಮುನ್ನ ಪಾಟ್ನಾದ 17 ವರ್ಷದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಸುಶಾಂತ್ ಸಾವನ್ನು ಮನಸಿಗೆ ಹಚ್ಚಿಕೊಂಡ ಕಾರಣ ಕ್ಲಾಸ್ 10 ಪರೀಕ್ಷೆಯನ್ನು ಉತ್ತಮವಾಗಿ ಮಾಡಿರಲಿಲ್ಲ.
ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಸಿನಿಮಾವನ್ನು ಹಿಂದಿನ ರಾತ್ರಿ ನೋಡಿ ಮರುದಿನ ಸುಶಾಂತ್ ಸಾವಿನ ಸುದ್ದಿ ಕೇಳಿದ್ದ 10 ನೇ ತರಗತಿ ಓದುತ್ತಿದ್ದ ಇಬ್ಬರು ಸಹೋದದರು ಆತ್ಮಹತ್ಯೆ ಮಾಡಿಕೊಂಡಿದ್ದರು.