ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನವೇ ಸಿಬ್ಬಂದಿಗೆ ಸಂಬಳ ನೀಡಿದ್ದ ಸುಶಾಂತ್ ಸಿಂಗ್!

By Suvarna News  |  First Published Jun 19, 2020, 12:53 PM IST

ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಮೊದಲೇ  ನಿರ್ಧರಿಸಿದ್ದರೇ? ಸ್ನೇಹಿತರಿಗೆ ಕಾಲ್ ಮಾಡಿದ್ದು ನಿಜವೇ? ಮೂರು ದಿನಗಳ ಮುನ್ನವೇ ತನ್ನ ಸಿಬ್ಬಂದಿಗೆ ಸಂಬಳ ನೀಡಲು ನೀಡಲು ಕಾರಣವೇನು?


ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ  ಚುರುಕುಗೊಳ್ಳುತ್ತಿದ್ದಂತೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ತನ್ನ ಯಂಗ್ ಚಾರ್ಮ್‌ನಿಂದ ಜನಪ್ರಿಯತೆ ಪಡೆದುಕೊಂಡ ಸುಶಾಂತ್ ಇಂಥ ನಿರ್ಧಾರ ತೆಗೆದುಕೊಳ್ಳಲು  ಕಾರಣವೇನು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ? 

ಸುಶಾಂತ್ ಸಾವಿನ ಬಗ್ಗೆ ಮೊದಲೇ ಗೊತ್ತಿದ್ದರೂ ಆಲಿಯಾ ಭಟ್‌ ತಂದೆ ಮೌನಿ ಆಗಿದ್ದೇಕೆ?

ಸುಶಾಂತ್ ಆತ್ಮಹತ್ಯೆ ಪ್ರಕರಣದ ಬಗ್ಗೆ ವಕೀಲರು ತನಿಖೆ ಶುರು ಮಾಡಿ ಎಂದು ಕೋರ್ಟ್‌ ಮೆಟ್ಟಿಲು ಏರಿದ್ದಾರೆ. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಚಾರಗಳಲ್ಲಿ  ಯಾವುದು ಸತ್ಯ ಯಾವುದು ಸುಳ್ಳು ಎಂದು ಯಾರಿಗೂ ತಿಳಿಯದಂತಾಗಿದೆ. ಜನರ ಚರ್ಚೆಯನ್ನು ಬದಿಗಿಟ್ಟು ಪೊಲೀಸರು ಈಗ ತನಿಖೆ ಶುರು ಮಾಡಿದ್ದಾರೆ. ಅವರು ಕಲೆಹಾಕಿರುವ ಮಾಹಿತಿ ಪ್ರಕಾರ ಸುಶಾಂತ್ ಸಾವು ಪೂರ್ವ  ನಿರ್ಧಾರಿತವಾಗಿತ್ತು?

Tap to resize

Latest Videos

ಹೌದು! ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ಮೂರು ದಿನಗಳ ಮೊದಲೇ ತನ್ನ ಬಳಿ ಕೆಲಸ ಮಾಡುವ ಪ್ರತಿ ಸಿಬ್ಬಂದಿಗಳಿಗೆ ಸಂಬಳ ನೀಡಿದ್ದಾರೆ. ಹಾಗೆ 'ಇನ್ನುಮುಂದೆ ನಾನು ಸಂಬಳ ನೀಡಲು ಆಗುತ್ತೋ ಇಲ್ಲವೋ' ಎಂಬ ಮಾತನ್ನು ಹೇಳಿರುವುದಾಗಿ ಒರ್ವ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಸಿಬ್ಬಂದಿಗಳಿಗೆ  ಈ ಮಾತಿನ ಅರ್ಥ ಇದು ಎಂದು ತಿಳಿದಿರಲಿಲ್ಲ.

ಕಾರಣ ಹೇಳದೆ ಸಿನಿಮಾ ನಿರಾಕರಿಸಿದ ಆಲಿಯಾ; ಸುಶಾಂತ್ ಕೊಟ್ಟ ಟಾಂಗ್ ಹೀಗಿತ್ತು! 

ಇನ್ನು ಸುಶಾಂತ್ ಸಿಂಗ್ ಜತೆ ಹೆಚ್ಚಿನ ಸಂಪರ್ಕ ಹೊಂದಿದ್ದ ನಟಿ ರಿಯಾ ಚಕ್ರಬೂರ್ತಿ ಭಾವುಕ ಪೋಸ್ಟ್‌ ವೈರಲ್ ಆಗುತ್ತಿದ್ದಂತೆ ಜನರಿಗೆ ರೀಯಾ ಹಾಗೂ ಸುಶಾಂತ್ ಆಪ್ತರಾಗಿದ್ದರು ಎಂದು ತಿಳಿದು ಬಂದಿತ್ತು. ಎಷ್ಟೇ ನೋವಿದ್ದರು ಆಕೆಯ ಬಳಿ ಹಂಚಿಕೊಳ್ಳುತ್ತಿದ್ದ ಇವರು ಏನಾದರೂ ಹೇಳಿಕೊಂಡಿರಬಹುದಲ್ವಾ? ರೀಯಾ ಹೇಳಿಕೆ ಪಡೆಯಲು ಮುಂಬೈ ಪೊಲೀಸರು ಗುರುವಾರ ತನಿಖೆ ಮಾಡಿದ್ದಾರೆ. ಬೆಳಗ್ಗೆ ಸುಮಾರು 11.30 ಪೊಲೀಸ್‌ ಠಾಣೆಗೆ ಆಗಮಿಸಿದ ರಿಯಾ ಸಂಜೆ 3.00 ಗಂಟೆವರೆಗೂ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು. 

ಈ ಬಗ್ಗೆ ಪೊಲೀಸರ ಪೂರ್ಣ ತನಿಖೆಯ ನಂತರವಷ್ಟೇ ಸತ್ಯಾಂಶ ಏನೆಂದು ತಿಳಿಯಬಹುದಾಗಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"

click me!