
ಬಾಲಿವುಡ್ ಸ್ಟಾರ್ ಸುಶಾಂತ್ ಸಿಂಗ್ ರಜಪೂತ್ ನಿಧನವಾಗಿ ಇಂದಿಗೆ (ಜೂನ್ 14) ಮೂರು ವರ್ಷ. 2020 ಜೂನ್ 14 ಬಾಲಿವುಡ್ ಪಾಲಿಗೆ ಕರಾಳ ದಿನ. ಸ್ಟಾರ್ ನಟನಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್ ನಿಧನ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಬರ ಸಿಡಿಲು ಬಡಿದಿತ್ತು. ಅದ್ಭುತ ಸಿನಿಮಾಗಳ ಅಭಿಮಾನಿಗಳನ್ನು ರಂಜಿಸುತ್ತಿದ್ದ ಸುಶಾಂತ್ ಹಠಾತ್ ಸಾವು ಆಘಾತ ತಂದಿತ್ತು. ಆದರೆ ಸ್ಟಾರ್ ನಟನ ಸಾವಿನ ಹಿಂದಿನ ರಹಸ್ಯ ಇನ್ನೂ ಬಹಿರಂಗವಾಗಿಲ್ಲ. ಸುಶಾಂತ್ ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದೆ. ಆದರೆ ಇನ್ನೂ ಕಾರಣ ಬಹಿರಂಗವಾಗಿಲ್ಲ. ತನಿಖೆಯ ಪ್ರಗತಿಯ ಬಗ್ಗೆಯೂ ಸಿಬಿಐ ತುಟಿ ಬಿಚ್ಚುತ್ತಿಲ್ಲ.
ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020 ಬಾಂದ್ರಾದ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಬಾಂದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆತ್ಮಹತ್ಯೆ ಎಂದು ಹೇಳಿದರು. ಆದರೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಕುಟುಂಬದವರು ಆರೋಪ ಮಾಡಿ ದೂರು ದಾಖಲಿಸಿದರು. ಸುಶಾಂತ್ ಸಿಂಗ್ ತಂದೆಯ ಹೇಳಿಕೆ ಆಧರಿಸಿ, ಬಿಹಾರ ಪೊಲೀಸರು ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಪ್ರಕರಣ ದಾಖಲಿಸಿದರು. ಅಂತಿಮವಾಗಿ ಸಿಬಿಐ ಸುಶಾಂತ್ ಕೊಲೆ ಪ್ರಕರಣವನ್ನು ವಹಿಸಿಕೊಂಡಿತು.
ಸುಶಾಂತ್ ಸಿಂಗ್ ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗಿದ್ದು ಡ್ರಗ್ಸ್ ಪ್ರಕರಣ ಸಂಬಂಧ ರಿಯಾ ಚಕ್ರವರ್ತಿ ಸೇರಿದಂತೆ ಅನೇಕರನ್ನು ಬಂಧಿಸಲಾಗಿತ್ತು. ರಿಯಾ ಚಕ್ರವರ್ತಿ ಡ್ರಗ್ಸ್ ಖರೀದಿಸಿ ಸುಶಾಂತ್ ಸಿಂಗ್‌ಗೆ ಕೊಡುತ್ತಿದ್ದರು ಎನ್ನುವ ಆರೋಪವಿದೆ. ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದ್ದು ಅಂತಿಮ ವರದಿಯಾವಾಗ ಹೊರಬೀಳುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಜೈಲಿನಲ್ಲಿ ಖೈದಿಗಳೊಂದಿಗೆ ಡ್ಯಾನ್ಸ್ ಮಾಡಿ, ಸಿಹಿ ಹಂಚಿದ್ದ ರಿಯಾ ಚಕ್ರವರ್ತಿ
ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಸಿಗಲಿ ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಸಿಂಗ್ ನ್ಯಾಯಕ್ಕಾಗಿ ಟ್ರೆಂಡ್ ಮಾಡುತ್ತಿದ್ದಾರೆ. ಆದರೆ ಇನ್ನೂ ಸುಶಾಂತ್ ಸಾವಿನ ಹಿಂದಿನ ರಹಸ್ಯೆ ಬಹಿರಂಗವಾಗಿಲ್ಲ.
ಸುಶಾಂತ್ ಸಿಂಗ್ ನಿಧನದ ನಂತರ ಹೆಚ್ಚಾಯ್ತಾ ಬಾಲಿವುಡ್ನಲ್ಲಿ ಬೈಕಾಟ್ ಟ್ರೆಂಡ್?
ಸುಶಾಂತ್ ಸಿಂಗ್ ಸಿನಿಮಾ 2013ರಲ್ಲಿ ಕಾಯ್ ಪೋ ಚೆ ಸಿನಿಮಾ ಮೂಲಕ ದೊಡ್ಡ ಪರದೆ ಮೇಲೆ ಮಿಂಚಿದರು. ಬಳಿಕ ಪಿಕೆ, ಎಂ ಎಸ್ ಧೋನಿ, ಚಿಚೋರೆ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಸುಶಾಂತ್ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿದ್ದಾರೆ. ಕಡಿಮೆ ಸಿನಿಮಾವಾಗಿದ್ದರೂ ಸುಶಾಂತ್ ಅದ್ಭುತ ಪಾತ್ರಗಳ ಮೂಲಕ ಅಭಿಮಾನಿಗಳ ಹೃದಯದಲ್ಲಿ ಜಾಗ ಪಡೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.