Chhichhore Release: ಚೀನಾದ 11 ಸಾವಿರ ಸ್ಕ್ರೀನ್‌ನಲ್ಲಿ ಸುಶಾಂತ್ ಸಿನಿಮಾ ಬಿಡುಗಡೆ

By Suvarna News  |  First Published Dec 16, 2021, 4:39 PM IST
  • ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಸಿನಿಮಾ
  • ಚಿಚೋರೆ(Chhichhore) 11 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್

ಎನ್‌ಜಿಇ ಮತ್ತು ಫಾಕ್ಸ್ ಸ್ಟಾರ್ ಇಂಡಿಯಾ ಪ್ರಸ್ತುತಪಡಿಸಿದ ದಂಗಲ್ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ 2019 ರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ಚಿಚೋರೆ(Chhichhore), ಭಾರತದಲ್ಲಿ ₹ 150 ಕೋಟಿ ನಿವ್ವಳ ಗಡಿಯನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಸಿನಿಮಾ ಕಲೆಕ್ಷನ್ ರಿಜಿಸ್ಟರ್‌ಗಳಲ್ಲಿ ರೆಕಾರ್ಡ್ ಮಾಡಿತ್ತು. ಪ್ರಪಂಚದಾದ್ಯಂತ ₹ 200 ಕೋಟಿಗೂ ಹೆಚ್ಚು ಒಟ್ಟು ಕಲೆಕ್ಷನ್ ಆಗಿತ್ತು. ಎಲ್ಲರ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಸಿನಿಮಾ ಟ್ರೇಡ್ ವಲಯದಲ್ಲಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ಸುಶಾಂತ್ ಸಿಂಗ್ ರಜಪೂತ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಈ ಸಿನಿಮಾ ವಿಮರ್ಶಾತ್ಮಕ ಮತ್ತು ವಾಣಿಜ್ಯ ದೃಷ್ಟಿಕೋನದಲ್ಲಿಯೂ ಮೆಚ್ಚುಗೆಯನ್ನು ಗಳಿಸಿತು. ಏಕೆಂದರೆ ಈ ಸಿನಿಮಾದಲ್ಲಿ ಹಾಸ್ಯ ಮತ್ತು ಭಾವನೆಗಳನ್ನು ಮಿಶ್ರ ಮಾಡಿ ಪ್ರದರ್ಶಿಸಲು ಸಾಧ್ಯವಾಗಿತ್ತು. ಕಾಲೇಜು ಜೀವನ ಮತ್ತು ಶಿಕ್ಷಣದ ಹಿನ್ನೆಲೆಯಲ್ಲಿ ಎರಡು ವಿಭಿನ್ನ ಸಮಯಾವಧಿಯಲ್ಲಿ ಸಿನಿಮಾ ಹೊಂದಿಸಲಾಗಿದೆ.

Latest Videos

undefined

ಸುಶಾಂತ್ ಸಹನಟಿ ಅಭಿಲಾಷ ಕೊರೋನಾದಿಂದ ಸಾವು..!

ಈ ತಿಂಗಳ ಆರಂಭದಲ್ಲಿ, 2022 ರ ಜನವರಿ 7 ರಂದು ಮಿಡಲ್ ಕಿಂಗ್‌ಡಮ್‌ನಲ್ಲಿ ಚಿಚೋರೆ ಬಿಡುಗಡೆಯಾಗಲಿದೆ ಎಂದು ದೃಢಪಡಿಸಲಾಯಿತು. ಹೀಗಾಗಿ ಎರಡು ವರ್ಷಗಳಲ್ಲಿ ಪ್ರದರ್ಶಿಸಲಾದ ಮೊದಲ ಭಾರತೀಯ ಸಿನಿಮಾ ಎಂಬ ಖ್ಯಾತಿಯನ್ನೂ ಈ ಸಿನಿಮಾ ಗಳಿಸಿದೆ. 2020 ರಲ್ಲಿ ಬಿಡುಗಡೆಯಾಗಲಿದ್ದ ಚಿಚೋರೆ, ಕೊರೋನಾದಿಂದಾಗಿ ವಿದೇಶಗಳಲ್ಲಿ ಈ ಸಂಬಂಧ ಇದ್ದಂತಹ ಉದ್ವಿಗ್ನತೆಯಿಂದಾಗಿ ಬಿಡುಗಡೆಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಯಿತು.

ಚೀನಾದಲ್ಲಿ ಛಿಚೋರೆ ಬಿಡುಗಡೆಯಾಗಲಿದೆ. ಆರು ವರ್ಷಗಳಲ್ಲಿ ಚೀನಾದಲ್ಲಿ ಬಿಡುಗಡೆಯಾದ ಮೊದಲ ಥಿಯೇಟ್ರಿಕಲ್ ಕೊರಿಯನ್ ಚಲನಚಿತ್ರ. ಕೊರಿಯನ್ ಹೊರತಾಗಿ, ಬಲ್ಗೇರಿಯನ್ ಚಲನಚಿತ್ರ, ಪೋಲಿಷ್ ಚಲನಚಿತ್ರ ಮತ್ತು ರಷ್ಯಾದ ಚಲನಚಿತ್ರವೂ ಸಹ ಚೀನಾದಲ್ಲಿ ಬಿಡುಗಡೆಯಾಯಿತು. ಆದರೆ ಎಲ್ಲವೂ ಟಿಕೆಟ್ ವಿಂಡೋದಲ್ಲಿ ಅಂತಹ ನಿರೀಕ್ಷಿತ ಲಾಭವೇನು ತಂದುಕೊಡಲಿಲ್ಲ.

ಈಗ, ಚಿಚೋರೆ ಚೀನಾದ 100ಕ್ಕೂ ಹೆಚ್ಚು ನಗರಗಳಲ್ಲಿ 11,000 ಪರದೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ದೃಢಪಡಿಸಲಾಗಿದೆ. ಹೀಗಾಗಿ ಇದು ಚೀನಾದಲ್ಲಿ ವ್ಯಾಪಕವಾದ ಇಂಡಿಯನ್ ರಿಲೀಸ್‌ಗಳಲ್ಲಿ ಒಂದಾಗಿದೆ. ಚೀನಾದಲ್ಲಿ ನಿತೇಶ್ ತಿವಾರಿ ಅವರ ದಂಗಲ್‌ನ ಭಾರೀ ಯಶಸ್ಸಿನ ನಂತರ, ಚೀನಾದ ಪ್ರೇಕ್ಷಕರು ಚಿಚೋರೆಯನ್ನು ಅದೇ ರೀತಿ ಸ್ವೀಕರಿಸುತ್ತಾರೆ ಎಂದು ಅವರು ನಂಬಿದ್ದಾರೆ.

ಭಾರತೀಯ ಸಿನಿಮಾಗಳು ಚೀನಾದಲ್ಲಿ ದಂಗಲ್, ಸೀಕ್ರೆಟ್ ಸೂಪರ್‌ಸ್ಟಾರ್, ಬಜರಂಗಿ ಭಾಯಿಜಾನ್, ಅಂಧಧುನ್ ಮತ್ತು ಹಿಂದಿ ಮೀಡಿಯಂನಂತಹ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಗಮನಾರ್ಹ ಛಾಪು ಮೂಡಿಸಿವೆ. ಚೀನಾದಲ್ಲಿ ಬಿಡುಗಡೆಯಾದ ಹೆಚ್ಚಿನ ಸಿನಿಮಾಗಳು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ತಮ್ಮ ಸಾಮರ್ಥ್ಯಕ್ಕಿಂತ ಉತ್ತಮವಾಗಿ ಗೆದ್ದಿವೆ.ಚಿಚೋರೆ ಹೇಗೆ ವರ್ಕೌಟ್ ಆಗಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಅದರ ಯಶಸ್ಸು ಭವಿಷ್ಯದಲ್ಲಿ ಚೀನಾದಲ್ಲಿ ಹೆಚ್ಚಿನ ಭಾರತೀಯ ಸಿನಿಮಾ ಪ್ರದರ್ಶಿಸಲು ಕಾರಣವಾಗಲಿದೆ.

click me!