ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಬಿಡುಗಡೆ ಆಗಸ್ಟ್ 13ಕ್ಕೆ ಬಿಡುಗಡೆ ಆಗಬೇಕಾಗಿತ್ತು. ಇದೀಗ ನಾಲ್ಕು ತಿಂಗಳ ನಂತರ ತೆರೆಕಾಣುತ್ತಿದೆ. ಅದನ್ನು ಘೋಷಿಸಲಿಕ್ಕೆ ಕರೆದ ಪತ್ರಿಕಾಗೋಷ್ಠಿ ಎರ‚ಡು ಗಂಟೆ ತಡವಾಗಿ ಶುರುವಾಯಿತು. ಚಿತ್ರದ ಪ್ರಚಾರಕ್ಕಾಗಿ 11 ಗಂಟೆಗೆ ಪತ್ರಿಕಾಗೋಷ್ಠಿಗೆ ಬರಬೇಕಾಗಿದ್ದ ಅಲ್ಲು ಅರ್ಜುನ್ 1 ಗಂಟೆಗೆ ವೇದಿಕೆಗೆ ಬಂದರು. ಅವರಿಗಾಗಿ ಕನ್ನಡದ ನಟ ಧನಂಜಯ್, ಶ್ರೀವಲ್ಲಿ ಪಾತ್ರಧಾರಿ ರಶ್ಮಿಕಾ ಮಂದಣ್ಣ ಕೂಡ ಕಾಯುತ್ತಿದ್ದರು. ನಂತರ ಚಿತ್ರದ ಟ್ರೇಲರ್, ಹಾಡುಗಳ ಪ್ರದರ್ಶನ ಶುರುವಾಯಿತು. ಹಾಡು ಮುಗಿಯುತ್ತಿದ್ದಂತೆ ಚಪ್ಪಾಳೆ ನಿರೀಕ್ಷೆ ಮಾಡಿದ್ದ ಅಲ್ಲು ಅರ್ಜುನ್ ಅವರಿಗೆ ಆಘಾತ ಕಾದಿತ್ತು. ಚಪ್ಪಾಳೆಯ ಬದಲು ಪ್ರಶ್ನೆಗಳು, ಆಕ್ಷೇಪಗಳು ತೂರಿ ಬಂದವು.
ನಿಮಗಾಗಿ ಎರಡೂವರೆ ಗಂಟೆ ಕಾದಿದ್ದೇವೆ. ತಡವಾಗಿ ಬಂದಿದ್ದೀರಿ, ಕ್ಷಮೆ ಕೇಳುವ ಸೌಜನ್ಯ ಇಲ್ಲವೇ? ಪ್ರಶ್ನೆ ತೂರಿದ್ದು ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣರತ್ತ. ಅಲ್ಲು ಅರ್ಜುನ್ ತಬ್ಬಿಬ್ಬಾಗಿ ಕಾರ್ಯಕ್ರಮ ಆಯೋಜಕರತ್ತ ನೋಡಿದರು. ಅವರು ಆಕಾಶ ನೋಡಿದರು.
Case Against Pushpa: ಅಲ್ಲು ಸಿನಿಮಾ ವಿರುದ್ಧ ಮತ್ತೊಂದು ಕೇಸ್
‘ದಯವಿಟ್ಟು ಕ್ಷಮಿಸಿ, ನಾನು ಖಾಸಗಿ ಫ್ಲೈಟ್ ಹಿಡಿದು ಬಂದೆ. ಕೆಲವು ತಾಂತ್ರಿಕ ಕಾರಣಗಳಿಂದ ತಡ‚ವಾಯಿತು.’
ನಿಮಗೆ ಯಾರೂ ಹೇಳಲಿಲ್ಲವೇ?
‘ನನಗೆ ನೀವು 11 ಗಂಟೆಯಿಂದ ಕಾಯುವುದು ಗೊತ್ತಿರಲಿಲ್ಲ.’
ಈಗ ಗೊತ್ತಾಯಿತಲ್ಲವೇ? ಅಷ್ಟುಸಾಕು, ನೀವೇನೂ ಕ್ಷಮೆ ಕೇಳಬೇಕಾಗಿಲ್ಲ.
‘ತಡವಾಗಿ ಬಂದಿದ್ದೇನೆ, ಕ್ಷಮೆ ಕೇಳುವುದರಿಂದ ನಾನೇನೂ ಸಣ್ಣವನಾಗೋದಿಲ್ಲ. ನನ್ನಿಂದ ತಪ್ಪಾಗಿದೆ ಕ್ಷಮಿಸಿ.’
ಈ ಮಾತುಕತೆಯೊಂದಿಗೆ ಪರಿಸ್ಥಿತಿ ತಿಳಿಗೊಂಡಿತು. ತಮ್ಮ ಸೂಪರ್‌ಸ್ಟಾರ್ ಕ್ಷಮೆ ಕೇಳಿದ್ದಕ್ಕೆ ಅವರ ಅಭಿಮಾನಿಗಳ ಗುಂಪು ಮಾಧ್ಯಮದತ್ತ ತಿರುಗಿ ಕೆಂಪಾಯಿತು.
ಈ ಎಡವಟ್ಟಿಗೆ ಕಾರಣವಾದದ್ದು ಶ್ರೇಯಸ್ ಮೀಡಿಯಾದ ನವರಸನ್. ಪತ್ರಕರ್ತರನ್ನು 11 ಗಂಟೆಗೆ ಬರಹೇಳಿದ್ದ ಅವರು, ಪತ್ರಿಕಾಗೋಷ್ಠಿಯ ಸಮಯವನ್ನು ಅಲ್ಲು ಅರ್ಜುನ್‌ಗೆ ತಿಳಿಸಿರಲೇ ಇಲ್ಲ. ಪತ್ರಿಕಾ ಗೋಷ್ಠಿಯ ಮಾಹಿತಿಯನ್ನೂ ನೀಡಿರಲಿಲ್ಲ. ದೊಡ್ಡ ಸ್ಟಾರ್, ದೊಡ್ಡ ಸಿನಿಮಾ, ಕಾಯುತ್ತಾರೆ ಬಿಡಿ ಎಂಬ ಎಂದಿನ ಧೋರಣೆಯಲ್ಲಿಯೇ ಅವರು ನಿರ್ಲಕ್ಷ್ಯ ಮಾಡಿದ್ದರೆಂದು ಕಾಣುತ್ತದೆ. ಅದು ಅಲ್ಲು ಅರ್ಜುನ್ ಕ್ಷಮೆ ಕೇಳುವಲ್ಲಿ ಮುಕ್ತಾಯವಾಯಿತು. ನವರಸನ್‌ಗಾಗಿ ಅಲ್ಲು ಅರ್ಜುನ್ ತಲೆಬಾಗಬೇಕಾಯಿತು.
Pushpa Bangalore Press meet: ತೆಲುಗು ಮಾತಾಡಿ ಕನ್ನಡನೇ ಬರ್ತಿಲ್ಲ ಎಂದ ರಶ್ಮಿಕಾ
ಪುಷ್ಪ ಚಿತ್ರದ ಚಿತ್ರದ ಕೆಲಸಗಳ ನಡುವೆ ನಾನು ನಟ ಪುನೀತ್‌ರಾಜ್‌ಕುಮಾರ್ ಅವರ ಮನೆಗೆ ಹೋಗುವುದನ್ನು ಮರೆತಿಲ್ಲ. ಆದರೆ, ನಾನು ಈಗ ಹೋಗಲ್ಲ. ಯಾಕೆಂದರೆ ಈಗ ನಾನು ಪುನೀತ್ ಅವರ ಮನೆಗೆ ಹೋದರೆ ಪ್ರಚಾರದ ತಂತ್ರ ಅಂದುಕೊಳ್ಳುತ್ತಾರೆ. ಹೀಗಾಗಿ ಪುಷ್ಪ ಚಿತ್ರ ಬಿಡುಗಡೆಯಾಗಿ, ಅದರ ಕೆಲಸ ಮುಗಿದ ಮೇಲೆ ಪುನೀತ್ ಅವರ ಮನೆಗೆ ಭೇಟಿ ಕೊಡಲಿಕ್ಕಾಗಿಯೇ ಬೆಂಗಳೂರಿಗೆ ಬರುತ್ತೇನೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ರಶ್ಮಿಕಾರನ್ನು ಹೊಗಳಿದ ಅಲ್ಲು:
ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ ಅಲ್ಲು ಅರ್ಜುನ್, 18 ವರ್ಷ ಇದ್ದಾಗ ನಾನು ಬೆಂಗಳೂರಿಗೆ ಬಂದಿದ್ದೆ. ಆಗ ನನ್ನ ಸಿನಿಮಾ ರಿಲೀಸ್ ಆಗುತ್ತೆ ಅಂತ ನಾನು ಅನ್ಕೊಂಡಿರಲಿಲ್ಲ. ಈಗ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಧನಂಜಯ್ ಸಿನಿಮಾದಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್. ಕನ್ನಡದಿಂದ ಚಿತ್ರರಂಗಕ್ಕೆ ಬಂದ ರಶ್ಮಿಕಾ ಇವತ್ತು ದೇಶಾದ್ಯಂತ ಹೆಸರು ಮಾಡಿದ್ದಾರೆ. ಇದು ಕನ್ನಡಿಗರಿಗೆ ಹೆಮ್ಮೆ ವಿಚಾರ ಎಂದಿದ್ದಾರೆ. ಈ ಸಿನಿಮಾಗೆ ಡಬ್ಬಿಂಗ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ. ದೇವಿ ಶ್ರೀ ಪ್ರಸಾದ್ ಅದ್ಭುತವಾದ ಮ್ಯೂಸಿಕ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿರೋ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ.
ಪುಷ್ಪ ಡಿ.17 ಕ್ಕೆ ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಹೀಗಾಗಿ ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದು ಪುಷ್ಪ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ವಾರ ಮೊದಲನೆ ಭಾಗ ರಿಲೀಸ್ ಆಗಲಿದೆ. ಹೀಗಾಗಿ ಬೆಂಗಳೂರಿನಲ್ಕಿ ಪುಷ್ಪ ಸಿನಿಮಾ ಪ್ರಚಾರ ಭರದಿಂದ ಸಾಗಿದೆ.