'ಬ್ರಹ್ಮಾಸ್ತ್ರ' ಕಲೆಕ್ಷನ್ ಲೆಕ್ಕ ಪಕ್ಕಾ ಫೇಕ್; ಆಲಿಯಾ-ರಣಬೀರ್ ಸಿನಿಮಾ ವಿರುದ್ಧ ಕಂಗನಾ ಗಂಭೀರ ಆರೋಪ

Published : Sep 12, 2022, 11:05 AM IST
'ಬ್ರಹ್ಮಾಸ್ತ್ರ' ಕಲೆಕ್ಷನ್ ಲೆಕ್ಕ ಪಕ್ಕಾ ಫೇಕ್; ಆಲಿಯಾ-ರಣಬೀರ್ ಸಿನಿಮಾ ವಿರುದ್ಧ ಕಂಗನಾ ಗಂಭೀರ ಆರೋಪ

ಸಾರಾಂಶ

ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಪಕ್ಕಾ ಫೇಕ್ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ನಟಿ ಕಂಗನಾ ಕೂಡ ಆರೋಪ ಮಾಡಿದ್ದಾರೆ. ವೈರಲ್ ಆಗಿರುವ  ಫೋಟೋಗಳನ್ನು ಶೇರ್ ಮಾಡಿ ಫೇಕ್ ಲೆಕ್ಕಾ ಎಂದು ಆರೋಪ ಮಾಡಿದ್ದಾರೆ.  

ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಬ್ರಹ್ಮಾಸ್ತ್ರ ಕಲೆಕ್ಷನ್ ಕೊಂಚ ಸಮಾಧಾನ ತಂದಿದೆ. ಬಾಕ್ಸ್ ಆಫೀಸ್ ನಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಬಡವಾಗಿದ್ದ ಬಾಲಿವುಡ್‌ಗೆ ಜೀವ ಬಂದಂತೆ ಆಗಿದೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಮೊದಲ ಎರಡು ದಿನದಲ್ಲೇ 160 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗಿದೆ. ಈ ಕುರಿತು ಸ್ವತಃ ನಿರ್ಮಾಪಕ ಕರಣ್​ ಜೋಹರ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಇದು ಪಕ್ಕಾ ಫೇಕ್ ಲೆಕ್ಕಾ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿ ಕಂಗನಾ ರಣಾವತ್ ಶೇರ್ ಮಾಡುವ ಮೂಲಕ ಮೂಲಕ ಅವರು ಸಹ ಆರೋಪ ಮಾಡಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಆದರೆ ‘ಬ್ರಹ್ಮಾಸ್ತ್ರ’ ಸಿನಿಮಾದ ಬಾಕ್ಸ್​ ಆಫೀಸ್​  ಲೆಕ್ಕಾಚಾರ ಶೇಕಡ 70ರಷ್ಟು ನಕಲಿ ಎಂದು ಆರೋಪಿಸಿದ್ದಾರೆ.

ಅಂದಹಾಗೆ ಕಂಗನಾ ರಣಾವತ್ ಅವರಿಗೆ ಬಾಲಿವುಡ್‌ನಲ್ಲಿ ಅನೇಕ ಮಂದಿಯನ್ನು ಕಂಡರೆ ಆಗಲ್ಲ. ಆಗಾಗ ಅನೇಕರ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ಅದರಲ್ಲೂ ಕರಣ್ ಜೋಹರ್, ಅಲಿಯಾ ಭಟ್ ವಿರುದ್ಧ ಆಗಾಗ ಕೆಂಡಕಾರುತ್ತಿರುತ್ತಾರೆ. ಇದೀಗ ಮತ್ತೆ ಆಲಿಯಾ ಮತ್ತು ಕರಣ್ ಸಿನಿಮಾ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕರಣ್​ ಮಾಡುವ ಪ್ರತಿ ಸಿನಿಮಾ ಮತ್ತು ಶೋಗಳನ್ನು ಕಂಗನಾ ವಿರೋಧಿಸುತ್ತಾರೆ. ಈಗ ‘ಬ್ರಹ್ಮಾಸ್ತ್ರ’ ವಿಚಾರದಲ್ಲಿಯೂ ಹಾಗೆಯೇ ಆಗುತ್ತಿದೆ. ಈ ಚಿತ್ರದ ಬಾಕ್ಸ್​ ಆಫೀಸ್​ ಲೆಕ್ಕ ಸಂಪೂರ್ಣ ನಿಜವಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. ಅಂಥ ಪೋಸ್ಟ್​ಗಳನ್ನು ಕಂಗನಾ ತಮ್ಮ ಇನ್​ಸ್ಟಾಗ್ರಾಮ್ ಖಾತೆಯ ಸ್ಟೋರಿಗಳಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ರಣಬೀರ್‌ಗೆ ಕಂಟಕವಾದ ಗೋಮಾಂಸ ಹೇಳಿಕೆ; ಉಜ್ಜಯಿನಿ ದೇವಸ್ಥಾನ ಪ್ರವೇಶಿಸದಂತೆ ತಡೆದ ಬಜರಂಗದಳ ಕಾರ್ಯಕರ್ತರು

ಬ್ರಹ್ಮಾಸ್ತ್ರ ಕಲೆಕ್ಷನ್ 

ಸೆಪ್ಟೆಂಬರ್​ 9ರಂದು ರಿಲೀಸ್​ ಆದ ಬ್ರಹ್ಮಾಸ್ತ್ರ ಚಿತ್ರಕ್ಕೆ ವಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಡಿಸಾಸ್ಟರ್, ಹಾರಿಬಲ್ ಎಂದು ಸಿನಿಮಾವನ್ನು ಜರಿದಿದ್ದಾರೆ. ಇನ್ನು ವಿಮರ್ಶಕರು ಸಹ ಈ ಸಿನಿಮಾವನ್ನು ತೆಗಳಿದ್ದಾರೆ. ಆದರೆ ಬಾಕ್ಸ್​ ಆಫೀಸ್​ ಕಲೆಕ್ಷನ್ ವಿಚಾರದಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾ ಹಿಂದೆ ಬಿದ್ದಿಲ್ಲ. 2 ದಿನಕ್ಕೆ ಈ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 160 ಕೋಟಿ ರೂಪಾಯಿ ಬಾಚಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಮೂರನೇ ದಿನದ ಕಲೆಕ್ಷನ್​ ಸೇರಿದರೆ 200 ಕೋಟಿ ರೂಪಾಯಿ ದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಿನಿಮಾದಿಂದ ಆಲಿಯಾ ಭಟ್ ಮತ್ತು ರಣಬೀರ್​ ಕಪೂರ್​ ಅವರ ಡಿಮ್ಯಾಂಡ್​ ಹೆಚ್ಚಿದೆ.

'ಅಸ್ಲಾಂ' ಹೆಸರನ್ನು ಬದಲಾಯಿಸಿಕೊಂಡಿದ್ದೇಕೆ ಮಹೇಶ್ ಭಟ್? ಆಲಿಯಾ ತಂದೆ ವಿರುದ್ಧ ಕಂಗನಾ ವ್ಯಂಗ್ಯ

ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ 

ಈ ಚಿತ್ರದಲ್ಲಿ ಅಲಿಯಾ ಭಟ್, ರಣಬೀರ್ ಜೊತೆಗೆ ಅಮಿತಾಭ್​ ಬಚ್ಚನ್​, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್ ಸೇರಿದಂತೆ ಮುಂತಾದ ಸ್ಟಾರ್​ ಕಲಾವಿದರು ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಅತಿಥಿ ಪಾತ್ರ ಮಾಡಿರುವುದು ವಿಶೇಷ.  ಅಯಾನ್ ಮುಖರ್ಜಿ ಸಾರಥ್ಯದಲ್ಲಿ ಬಂದ ಈ ಸಿನಿಮಾವನ್ನು ವೀಕೆಂಡ್​ನಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದ್ದಾರೆ. ಹಾಗಾಗಿ ದೊಡ್ಡ ಮೊತ್ತದ ಕಲೆಕ್ಷನ್​ ಆಗಿರುವು ಸಾಧ್ಯತೆ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?