ದಾಂಪತ್ಯ ಜೀವನಕ್ಕೆ 20ರ ಸಂಭ್ರಮ…. ಮಕ್ಕಳ ಮುಂದೆ ಮತ್ತೆ ಮದುವೆಯಾದ ಸ್ಟಾರ್ ಜೋಡಿ ಸೂರ್ಯ-ಜ್ಯೋತಿಕಾ

Published : Sep 16, 2026, 04:17 PM IST
Suriya and Jyotika

ಸಾರಾಂಶ

ಮದುವೆಯಾಗಿ 20 ವರ್ಷ ಪೂರೈಸಿದ ತಮಿಳು ಚಿತ್ರರಂಗದ ತಾರಾ ಜೋಡಿ ಸೂರ್ಯ ಮತ್ತು ಜ್ಯೋತಿಕಾ ಮತ್ತೆ ಮದುವೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿದೇಶದ ಚರ್ಚ್‌ನಲ್ಲಿ ನಡೆದ ಈ ವಿಶೇಷ ಸಮಾರಂಭದಲ್ಲಿ ಅವರ ಮಕ್ಕಳಾದ ದಿಯಾ ಮತ್ತು ದೇವ್, ಕುಟುಂಬಸ್ಥರು ಹಾಗೂ ಆಪ್ತರು ಭಾಗಿಯಾಗಿದ್ದರು. ಈ ವಿಶೇಷ ಕ್ಷಣದ ವಿಡಿಯೋವನ್ನು ಜ್ಯೋತಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

20 ವರ್ಷಗಳ ಬಳಿಕ ಮತ್ತೆ ಮದುವೆಯಾದ ಸೂರ್ಯ ಜ್ಯೋತಿಕಾ

ತಮಿಳು ಚಿತ್ರರಂಗದ ಸ್ಟಾರ್ ಜೋಡಿಗಳಾದ ನಟ ಸೂರ್ಯ ಮತ್ತು ಜ್ಯೋತಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇದೀಗ 20 ವರ್ಷಗಳ ನಂತರ ತಮ್ಮ ವಿವಾಹದ ಪ್ರತಿಜ್ಞೆಯನ್ನು ಮತ್ತೆ ಅಪ್ ಡೇಟ್ ಮಾಡಿದ್ದಾರೆ. ಮದುವೆಯಾಗಿ ಇಪ್ಪತ್ತು ವರ್ಷಗಳ ಬಳಿಕ ಇದೀಗ ಮತ್ತೆ ತಮ್ಮ ಮಕ್ಕಳ ಮುಂದೆ ಮತ್ತೊಮ್ಮೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಮಾರಂಭದ ಸುಂದರವಾದ ವಿಡಿಯೋ ಹಾಗೂ ಫೋಟೋಗಳನ್ನು ಜೋಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇಪ್ಪತ್ತು ವರ್ಷ ಕಳೆದರೂ, ಈಗಷ್ಟೇ ಹುಟ್ಟಿದ ಪ್ರೀತಿಯಂತೆ, ಇಬ್ಬರ ಜೋಡಿ, ಮುದ್ದಾಗಿ ಕಂಡು ಬಂದಿದೆ. ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.

ಮಕ್ಕಳ ಎದುರಲ್ಲೇ ಅದ್ಧೂರಿ ಮದುವೆ

ವೀಡಿಯೊದಲ್ಲಿ, ಸೂರ್ಯ ಮತ್ತು ಜ್ಯೋತಿಕಾ ಅವರು ಸ್ಕಾಟ್ ಲ್ಯಾಂಡ್ ದೇಶದಲ್ಲಿನ ಚರ್ಚ್‌ನಲ್ಲಿ ಪ್ರತಿಜ್ಞೆ ರಿನೀವಲ್ ಮಾಡುತ್ತಿರುವುದು, ಆಪ್ತದ ಮಧ್ಯೆ ರಿಂಗ್ ಬದಲಾಯಿಸುತ್ತಿರುವುದನ್ನು ಕಾಣಬಹುದು, ಅವರು ತಮ್ಮ ಮಕ್ಕಳಾದ ದಿಯಾ ಮತ್ತು ದೇವ್, ಸೂರ್ಯನ ಸಹೋದರ ಮತ್ತು ನಟ ಕಾರ್ತಿ ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ಜೊತೆ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2006ರ ಸೆಪ್ಟಂಬರ್ 6ರಂದು ಜ್ಯೋತಿಕ ತಮ್ಮ ವೃತ್ತಿ ಬದುಕಿನ ಪೀಕ್‌ನಲ್ಲಿರುವಾಗಲೇ ಸೂರ್ಯರನ್ನು ಕೈ ಹಿಡಿದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದೀಗ 20 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ತಮ್ಮ ಮದುವೆ ಪ್ರತಿಜ್ಞೆಯನ್ನು ರಿನೀವಲ್ ಮಾಡಿದ್ದಾರೆ.

ತಮ್ಮ ಇಪ್ಪತ್ತನೇ ವರ್ಷದ ಸಂಭ್ರಮಕ್ಕಾಗಿ, ಜ್ಯೋತಿಕಾ ಬಿಳಿ ಗೌನ್ ಧರಿಸಿದ್ದರು, ಸೂರ್ಯ ಕಪ್ಪು ಪ್ಯಾಂಟ್‌ನೊಂದಿಗೆ ಬಿಳಿ ಸೂಟ್ ಜಾಕೆಟ್‌ನಲ್ಲಿ ಕಾಣುತ್ತಿದ್ದರು. ಜೋಡಿಯನ್ನು ಮಕ್ಕಳೇ ಸಿಂಗರಿಸಿ, ಚರ್ಚ್ ಗೆ ಕರೆದುಕೊಂಡು ಬಂದಿರುವುದು ಮತ್ತಷ್ಟು ಸ್ಪೆಷಲ್ ಆಗಿದೆ.

ವಿವಾಹ ಪ್ರತಿಜ್ಞೆಗಳ ಬಗ್ಗೆ ಜ್ಯೋತಿಕಾ ಹೇಳಿದ್ದೇನು?

ಸಮಾರಂಭದ ವಿಡಿಯೋವೊಂದನ್ನು ಹಂಚಿಕೊಳ್ಳುತ್ತಾ ಜ್ಯೋತಿಕಾ ಹೀಗೆ ಬರೆದಿದ್ದಾರೆ: "ನಮ್ಮ 20 ವರ್ಷಗಳ ಪ್ರೀತಿ ಮತ್ತು ಜಗಳದ (ಲವ್ ಆಂಡ್ ವಾರ್) ಪಯಣವನ್ನು ಸಂಭ್ರಮಿಸುತ್ತಾ, ನಾವು ಮತ್ತೆ ಪರಸ್ಪರರಿಗೆ ಬದ್ಧರಾಗುವ (ವಚನ ನವೀಕರಿಸುವ) ಕ್ಷಣವಿದು. ಇದು ಪರಿಪೂರ್ಣ ದಾಂಪತ್ಯದ ಸಂಭ್ರಮವಲ್ಲ; ಬದಲಿಗೆ ಇದು ಅಪೂರ್ಣತೆಗಳು, ಹೊಂದಾಣಿಕೆಗಳು, ಪರಸ್ಪರ ತಿಳುವಳಿಕೆ, ತ್ಯಾಗಗಳು ಮತ್ತು ನಿಸ್ವಾರ್ಥ ಪ್ರೀತಿಯ ಸಂಭ್ರಮ. ಇದು 'ನಮ್ಮ' ಸಂಭ್ರಮ – ಅಂದರೆ, ಒಬ್ಬರಿಗೊಬ್ಬರು ನಾವು ರೂಪಿಸಿಕೊಂಡಿರುವ ವ್ಯಕ್ತಿತ್ವಗಳ ಸಂಭ್ರಮ. ಎಂತಹ ವಿಪರ್ಯಾಸ ನೋಡಿ ವಾಸ್ತವದಿಂದ ಬಹುದೂರವೆಂದುಕೊಂಡಿದ್ದ ಕನಸೊಂದು ಇಂದು ನನಸಾಗಿದೆ; ಇನ್ನು ಮುಂದೆ ನನ್ನ ಇಡೀ ಜೀವನವನ್ನೇ ಆ ಕನಸಿನಲ್ಲೇ ಕಳೆಯಲಿದ್ದೇನೆ!"

ಇಲ್ಲಿದೆ ನನ್ನ ಪ್ರತಿಜ್ಞೆ – ನಾನು ಸಂತೋಷವಾಗಿರಲು ನಿರ್ಧರಿಸಿದ್ದೇನೆ; ಏಕೆಂದರೆ ಜೀವನದ ಸಕಾರಾತ್ಮಕ ಅಂಶಗಳನ್ನು ಮಾತ್ರ ನೋಡಲು ನಾನು ಆಯ್ಕೆ ಮಾಡಿಕೊಂಡಿದ್ದೇನೆ. ನಾನು ಜೀವನವನ್ನು ಸಂಭ್ರಮಿಸಲು ನಿರ್ಧರಿಸಿದ್ದೇನೆ; ಏಕೆಂದರೆ, ತನ್ನನ್ನು ತಾನು ಗೌರವಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಗೌರವಿಸುವ ವ್ಯಕ್ತಿ ನಿಮ್ಮೊಂದಿಗಿದ್ದಾಗ, ಜೀವನವೇ ಒಂದು ಸುಂದರ ಉಡುಗೊರೆಯಾಗಿರುತ್ತದೆ. ನಾನು ಎಂದಿಗೂ ದೂರು ಹೇಳದಿರಲು ನಿರ್ಧರಿಸಿದ್ದೇನೆ ಏಕೆಂದರೆ, ಆಕಾಶದಷ್ಟು ವಿಶಾಲವಾದದ್ದಕ್ಕೂ ಭೂಮಿಯನ್ನು ಸ್ಪರ್ಶಿಸುವ ಭಾಗ್ಯವಿಲ್ಲದಿರುವಾಗ, ನಾನೇಕೆ ದೂರುತ್ತೇನೆ? ಸುತ್ತಲೂ ನೋಡಿ, ಅಸ್ತಿತ್ವದಲ್ಲಿರುವ ಪ್ರತಿಯೊಂದೂ ಅಪೂರ್ಣವೇ ಆಗಿದೆ; ಆ ಕೊರತೆಗಳನ್ನು ನಾವು ಹೇಗೆ ತುಂಬಿಕೊಳ್ಳುತ್ತೇವೆ ಎಂಬುದೇ ಮುಖ್ಯ. ನಾನು ಕೃತಜ್ಞತೆಯಿಂದಿರಲು ನಿರ್ಧರಿಸಿದ್ದೇನೆ. ಪ್ರತಿದಿನ ಬೆಳಿಗ್ಗೆ ನನ್ನನ್ನು ರಕ್ಷಿಸುವ ವ್ಯಕ್ತಿಯ ತೋಳುಗಳಲ್ಲಿ ಎಚ್ಚರಗೊಳ್ಳುವುದಕ್ಕಾಗಿ ಮತ್ತು ನನ್ನ ಜೀವನಕ್ಕೆ ಅರ್ಥ ಹಾಗೂ ಬದುಕಲು ಕಾರಣವನ್ನು ನೀಡಿದ ನನ್ನ ಸುಂದರ ಮಕ್ಕಳಿಗಾಗಿ.

ನಾನು ಆರೋಗ್ಯವಾಗಿರಲು ನಿರ್ಧರಿಸಿದ್ದೇನೆ, ಏಕೆಂದರೆ ನಾವು ಕಟ್ಟಿಕೊಳ್ಳುವ ಏಕೈಕ ನಿಜವಾದ ಸಂಪತ್ತು ಅದೇ ಆಗಿದೆ. ಅತ್ಯಂತ ಸುಂದರವಾದ ಇಟ್ಟಿಗೆಯ ಮನೆಗಳಲ್ಲೂ ಸೋರಿಕೆ, ಗೆದ್ದಲು ಅಥವಾ ನವೀಕರಣದ ಅಗತ್ಯಗಳು ಇದ್ದೇ ಇರುತ್ತವೆ. ನಾನು ಅತ್ಯುತ್ತಮ ತಾಯಿಯಾಗಿರಲು ನಿರ್ಧರಿಸಿದ್ದೇನೆ, ಅಡುಗೆ ಮಾಡುವುದಕ್ಕಾಗಲಿ, ಮನೆ ಸ್ವಚ್ಛಗೊಳಿಸುವುದಕ್ಕಾಗಲಿ ಅಥವಾ ಸಹಾಯ ಮಾಡುವುದಕ್ಕಾಗಲಿ ಅಲ್ಲ; ಬದಲಾಗಿ, ನನ್ನ ಮುಗುಳ್ನಗು ನನ್ನ ಮಕ್ಕಳಲ್ಲಿ, ತಮ್ಮ ಅಪ್ಪ-ಅಮ್ಮನ ಜೀವನದ ಕಥೆಯನ್ನು ತಾವೂ ಮತ್ತೆ ಬಾಳುವಂತಾಗಬೇಕು ಎಂಬ ಆಸೆಯನ್ನು ಹುಟ್ಟಿಸುವಂತಿರಬೇಕು ಎಂಬ ಕಾರಣಕ್ಕಾಗಿ. ನನ್ನ ಸೂರ್ಯಾ, ನಾನು ಯಾವಾಗಲೂ ಆ 'ಅಪೂರ್ಣ' ಪತ್ನಿಯಾಗಿಯೇ ಉಳಿಯಲು ನಿರ್ಧರಿಸಿದ್ದೇನೆ. ಜಗಳವಾಡಿ, ಮತ್ತೆ ರಾಜಿ ಮಾಡಿಕೊಂಡು, ಪ್ರತಿ ಬಾರಿಯೂ ನಿನ್ನೊಂದಿಗೆ ಇನ್ನಷ್ಟು ಹತ್ತಿರವಾಗುವ ಪತ್ನಿಯಾಗಿ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸ್ನೇಹವನ್ನು ಗೌರವಿಸಲು ನಾನು ನಿರ್ಧರಿಸಿದ್ದೇನೆ, ಏಕೆಂದರೆ ಸಮಾನ ಮನಸ್ಕರು, ಆಪ್ತರು, ಹರಟೆ ಹೊಡೆಯುವ ಸಂಗಾತಿ ಮತ್ತು ಅತ್ಯುತ್ತಮ ಸ್ನೇಹಿತ ಇವರೆಲ್ಲರೂ ಒಬ್ಬನೇ ವಿಶೇಷ ವ್ಯಕ್ತಿಯಲ್ಲಿ, ಅಂದರೆ ನಿಮ್ಮ ಪತಿ ಮತ್ತು ನಿಮ್ಮ ಮಕ್ಕಳ ತಂದೆಯಲ್ಲಿ ಸಿಗುವುದು ಅಪರೂಪ. ಹಾಗಾಗಿ, ಪರಿಪೂರ್ಣ ತಿಳುವಳಿಕೆಯೊಂದಿಗೆ ಮುನ್ನಡೆಯುವ ನಮ್ಮ ಮುಂದಿನ ಇಪ್ಪತ್ತು ವರ್ಷಗಳಿಗೆ ಶುಭವಾಗಲಿ” ಎಂದು ಜ್ಯೋತಿಕಾ ಬರೆಯುವ ಮೂಲಕ ಸೂರ್ಯ ಅವರ ಜೊತೆಗಿನ ಮುಂದಿನ ದಿನಗಳ ಕುರಿತು ಆಶಯ ವ್ಯಕ್ತಪಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ 3' ಬರೋದು ಪಕ್ಕಾ: ಸಿನಿಮಾ ಯಾವಾಗ? ರಿಷಬ್ ಶೆಟ್ಟಿ ಕೊಟ್ರು ಬಿಗ್ ಅಪ್‌ಡೇಟ್
ಬೆಳ್ಳಿಪರದೆಯ ಮೇಲೆ ಮರುಜೀವ ಪಡೆಯಲಿದೆ ಎಂ.ಎಸ್.ಸುಬ್ಬುಲಕ್ಷ್ಮಿ ಕಥನ: ರಶ್ಮಿಕಾ ಮಂದಣ್ಣ ನಾಯಕಿ!