
ದಿವಂಗತ ಹೀರೋಯಿನ್ ಸೌಂದರ್ಯ ಬಗ್ಗೆ ಪರಿಚಯ ಮಾಡುವುದು ಅಗತ್ಯವಿಲ್ಲ. ಕೋಟ್ಯಾಂತರ ಮಂದಿ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ. ಗ್ಲಾಮರ್‌ಗೆ ಅವಕಾಶ ನೀಡದೆ, ಸಾಂಪ್ರದಾಯಿಕವಾಗಿ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಸ್ಟಾರ್ ಪಟ್ಟಕ್ಕೇರಿದ್ದರು. ನಟಿಯಾಗಿ ಉತ್ತುಂಗದಲ್ಲಿರುವ ಸಮಯದಲ್ಲಿಯೇ ಸಣ್ಣ ವಯಸ್ಸಿಯಲ್ಲಿಯೇ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಇಂದಿಗೂ ಸೌಂದರ್ಯ ಅವರ ಸಿನಿಮಾಗಳಿಗೆ ಅಭಿಮಾನಿಗಳಿದ್ದಾರೆ.
ಟಾಲಿವುಡ್ ಸಿನಿಮಾ ರಂಗಕ್ಕೆ 'ಮನವರಾಲಿ ಪೆಳ್ಳಿ' ಸಿನಿಮಾದೊಂದಿಗೆ ಹೀರೋಯಿನ್ ಆಗಿ ಪಾದಾರ್ಪಣೆ ಮಾಡಿದ್ದ ಸೌಂದರ್ಯ ಅವರು, ಆ ಬಳಿಕ ಹಿಂದೆ ತಿರುಗಿ ನೋಡಲೇ ಇಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳೊಂದಿಗೆ ಸ್ಟಾರ್ ಹೀರೋಗಳೊಂದಿಗೆ ನಟಿಸಿದ್ದರು. ಹಾಗಾದರೆ ಸೌಂದರ್ಯ ಮೊದಲ ಸಿನಿಮಾ ಯಾರೋ ನೆನಪಿದೆಯಾ? ಆತ ಬೇರೆ ಯಾರು ಅಲ್ಲ, ಹರೀಶ್ ಕುಮಾರ್.
1990ರ ದಶಕದಲ್ಲಿ ತೆಲುಗು ಸಿನಿಮಾ ಪರಿಶ್ರಮದಲ್ಲಿ ತಮ್ಮ ಕ್ಯೂಟ್ ಲುಕ್ಸ್, ಅದ್ಭುತವಾದ ನಟನೆಯ ಮೂಲಕ ಮಹಿಳಾ ಅಭಿಮಾನಿಗಳನ್ನು ಹೆಚ್ಚು ಪಡೆದುಕೊಂಡಿದ್ದರು. ಚೈಲ್ಡ್ ಆರ್ಟಿಸ್ಟ್ ಆಗಿ ಕೆರಿಯರ್ ಆರಂಭಿಸಿದ್ದ, ಸಣ್ಣ ವಯಸ್ಸಿನಲ್ಲಿಯೇ ಹೀರೋ ಆಗಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ಪಡೆದುಕೊಂಡಿದ್ದರು. ಆದರೆ ಆ ಬಳಿಕ ಸಿನಿಮಾ ರಂಗದಿಂದ ದೂರ ಆಗಿದ್ದರು.
ಹರೀಶ್ ಕುಮಾರ್ ಕೇವಲ 13-14ನೇ ವಯಸ್ಸಿನಲ್ಲಿಯೇ ಇವಿವಿ ಸತ್ಯನಾರಾಯಣ ಅವರ ನಿರ್ದೇಶನದಲ್ಲಿ ಬಂದಿದ್ದ 'ಪ್ರೇಮಾ ಖೈದಿ' ಸಿನಿಮಾದಲ್ಲಿ ಹೀರೋ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಚೈಲ್ಡ್ ಆರ್ಟಿಸ್ಟ್ ಆಗಿ ಸ್ಟಾರ್ ನಟರೊಂದಿಗೆ ನಟಿಸಿದ್ದ ಹರೀಶ್, ಹೀರೋ ಆಗಿ ಬೇಗ ಅಭಿಮಾನಿಗಳನ್ನು ಗಳಿಸಿದ್ದರು. ಹೀರೋ ಆಗಿ ಸೂಪರ್ ಹಿಟ್ ಸಿನಿಮಾ ನೀಡುತ್ತಿದ್ದಂತೆ, ಹರೀಶ್ ಕುಮಾರ್ ಅವರೊಂದಿಗೆ 'ಮನವರಾಲಿ ಪೆಳ್ಳಿ' ಸಿನಿಮಾದಲ್ಲಿ ನಟಿ ಸೌಂದರ್ಯ ಅವರನ್ನು ಸಿನಿಮಾ ಪ್ರೇಕ್ಷಕರಿಗೆ ಪರಿಚಯ ಆಗಿದ್ದರು. ಇದರೊಂದಿಗೆ ಸೌಂದರ್ಯ ನಟಿಸಿದ ಮೊದಲ ಸಿನಿಮಾ ನಾಯಕರಾಗಿ ಹರೀಶ್ ಕುಮಾರ್ ಸ್ಥಾನ ಪಡೆದುಕೊಂಡಿದ್ದರು. ಆ ಬಳಿಕ ಇಬ್ಬರ ಕಾಂಬಿನೇಷನ್‌ನಲ್ಲಿ ಹಲವು ಸಿನಿಮಾಗಳು ಬಂದಿದ್ದವು.
'ಅಲ್ಲರಿ ಪ್ರಿಯುಡು', 'ಪೆಳ್ಳಿ ಸಂದಡಿ', 'ಪ್ರೇಮ ಸಂಬಂಧಂ', 'ರೌಡಿ ಇನ್ಸ್‌ಪೆಕ್ಟರ್' ನಂತರ ಸೂಪರ್ ಹಿಟ್ ಸಿನಿಮಾದಲ್ಲಿ ಹರೀಶ್ ನಟಿಸಿದ್ದರು. ಹರೀಶ್ ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿಯೂ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು. 'ಬಲು ಅಪರೂಪ ನಮ್ ಜೋಡಿ' ಸಿನಿಮಾದಲ್ಲಿ ಬಾಲ ನಟಿರಾಗಿ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮನಸ್ಸು ಕದ್ದಿದ್ದ ಹರೀಶ್ ಕುಮಾರ್, ಆ ಬಳಿಕ 'ಭಕ್ತ ಮಾರ್ಕಂಡೇಯ', 'ಆನಂದ ಭೈರವಿ', 'ಸೂಪರ್ ಬಾಯ್ 3D' ಸಿನಿಮಾಗಳಲ್ಲಿ ನಟಿಸಿದ್ದರು. ಆ ಬಳಿಕ 1993ರಲ್ಲಿ ಬಿಡುಗಡೆಯಾಗಿದ್ದ 'ಹೆಂಡತಿ ಹೇಳಿದರೆ ಕೇಳಬೇಕು' ಸಿನಿಮಾ ಮೂಲಕ ಹೀರೋ ಆಗಿ ಬಡ್ತಿ ಪಡೆದುಕೊಂಡಿದ್ದರು. ನಂತರ 'ನಲ್ಲಿ', 'ವಂದೇ ಮಾತರಂ' ಸಿನಿಮಾಗಳಲ್ಲಿಯೂ ನಟಿಸಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹತ್ತಿರ ಆಗಿದ್ದರು.
ಸದ್ಯ ಸಿನಿಮಾ ರಂಗದಿಂದ ದೂರ ಉಳಿದಿರುವ ಹರೀಶ್ ಕುಮಾರ್, ಮುಂಬೈನಲ್ಲಿ ಕುಟುಂಬ ಸದಸ್ಯರೊಂದಿಗೆ ನೆಲೆಸಿದ್ದಾರೆ. ಸದ್ಯ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಬ್ಯುಸಿಯಾಗಿರುವ ಹರೀಶ್, ನಟನೆಗೆ ಸುದೀರ್ಘ ವಿರಾಮ ಇಟ್ಟಿದ್ದಾರೆ. ಸದ್ಯ ತನಗೆ ಇಷ್ಟವಾದ ಪಾತ್ರಗಳು ಸಿಕ್ಕರೆ ಮತ್ತೆ ಸಿನಿಮಾ ಅಥವಾ ವೆಬ್ ಸಿರೀಸ್‌ಗಳಲ್ಲಿ ನಟಿಸಲು ಸಿದ್ಧ ಎಂದು ಸಂದರ್ಶನದಲ್ಲಿ ಹೇಳಿದ್ದರು. 90ರ ದಶಕದ ದಿನಗಳನ್ನು ನೆನಪು ಮಾಡಿಕೊಂಡಿರುವ ಹರೀಶ್, ತಮಗೆ ಸಿಕ್ಕ ಅವಕಾಶಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.