‘ದಿ ರಾಜಾ ಸಾಬ್’ ಫಸ್ಟ್ ಲುಕ್ ಕೊಟ್ಟ ಡಾರ್ಲಿಂಗ್: ಮತ್ತೊಂದು ಗೆಲುವಿಗಾಗಿ ಹೆಸರು ಬದಲಿಸಿದ್ರಾ ಪ್ರಭಾಸ್?

Published : Jan 17, 2024, 12:32 PM IST
‘ದಿ ರಾಜಾ ಸಾಬ್’ ಫಸ್ಟ್ ಲುಕ್ ಕೊಟ್ಟ ಡಾರ್ಲಿಂಗ್: ಮತ್ತೊಂದು ಗೆಲುವಿಗಾಗಿ ಹೆಸರು ಬದಲಿಸಿದ್ರಾ ಪ್ರಭಾಸ್?

ಸಾರಾಂಶ

ದಿ ರಾಜಾ ಸಾಬ್ ಪ್ರಭಾಸ್ ಮತ್ತು ನಿರ್ದೇಶಕ ಮಾರುತಿ ಕಾಂಬಿನೇಷನ್ನಲ್ಲಿ ಸಿದ್ಧವಾಗುತ್ತಿರೋ ಕಲರ್ಫುಲ್ ಸಿನಿಮಾ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಪ್ರಭಾಸ್ ಲುಂಗಿ ಧರಿಸಿ ಸೆಲೆಬ್ರೇಷನ್ ಮಾಡೋ ರೀತಿ ಪೋಸ್ ಕೊಟ್ಟಿದ್ದಾರೆ.  

ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಮತ್ತೆ ಸಕ್ಸಸ್ ಟ್ರ್ಯಾಕ್ಗೆ ಕಮ್ ಬ್ಯಾಕ್ ಆಗಿದ್ದಾರೆ. ಬಾಹುಬಲಿ ಬಳಿಕ ಸತತ ಸೋಲುಣ್ಣುತ್ತಿದ್ದ ಪ್ರಭಾಸ್ರನ್ನ ಗೆಲುವಿನ ಟ್ರ್ಯಾಕ್ಗೆ ಕರೆದುಕೊಂಡು ಬಂದಿದ್ದು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಮ್ಸ್ ಮಾಡಿದ್ದ ಸಲಾರ್ ಸಿನಿಮಾ. ಈಗ ಮತ್ತೊಂದು ಗೆಲುವಿಗಾಗಿ ಪ್ರಭಾಸ್ ಎದುರು ನೋಡುತ್ತಿದ್ದಾರೆ. ಈಗ ಎಲ್ಲಡೆದ ಸಂಕ್ರಾಂತಿ ಹಬ್ಬದ ಮೂಡ್ ಇದೆ. ಎಳ್ಳು ಬೆಲ್ಲ ತಿಂದು ಖುಷಿ ಖುಷಿಯಾಗಿದ್ದಾರೆ ಪ್ರಭಾಸ್ ಫ್ಯಾನ್ಸ್. ಈ ಖುಷಿಯನ್ನ ಡಬಲ್ ಮಾಡ್ಬೇಕು ಅಂತ ಸಂಕ್ರಾಂತಿ ಹಬ್ಬಕ್ಕೆ ಪ್ರಭಾಸ್ ನಟಿಸುತ್ತಿರೋ ಹೊಸ ಸಿನಿಮಾ ದಿ ರಾಜಾ ಸಾಬ್ ಫಸ್ಟ್ ಲುಕ್ ರಿವಿಲ್ ಮಾಡಿದ್ದಾರೆ.. 

ದಿ ರಾಜಾ ಸಾಬ್ ಪ್ರಭಾಸ್ ಮತ್ತು ನಿರ್ದೇಶಕ ಮಾರುತಿ ಕಾಂಬಿನೇಷನ್ನಲ್ಲಿ ಸಿದ್ಧವಾಗುತ್ತಿರೋ ಕಲರ್ಫುಲ್ ಸಿನಿಮಾ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಪ್ರಭಾಸ್ ಲುಂಗಿ ಧರಿಸಿ ಸೆಲೆಬ್ರೇಷನ್ ಮಾಡೋ ರೀತಿ ಪೋಸ್ ಕೊಟ್ಟಿದ್ದಾರೆ. ಆದ್ರೆ ಪ್ರಭಾಸ್ ಫ್ಯಾನ್ಸ್ ಕಣ್ಣು ಕುಕ್ಕಿರೋದಿ ಮಾತ್ರ ಪೋಸ್ಟರ್ ಮೇಲಿರೋಪ್ರಭಾಸ್ ಹೆಸರು. ಈ ಹೆಸರನ್ನ ನೋಡಿ ಮತ್ತೊಂದು ಗೆಲುವಿಗಾಗಿ ಪ್ರಭಾಸ್ ಏನಾದ್ರು ಹೆಸರು ಬದಲಿಸಿಕೊಂಡ್ರಾ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ ಪ್ರಭಾಸ್ ಹೆಸರಿನ ಮುಂದೆ ಇಂಗ್ಲೀಷ್ ಮತ್ತೊಂದ ಎಸ್ ಅಕ್ಷರವನ್ನ ಸೇರಿಸಲಾಗಿದೆ.

ಇಷ್ಟು ದಿನ ಪ್ರಭಾಸ್ ಹೆಸರನ್ನು ಇಂಗ್ಲಿಷ್ನಲ್ಲಿ Prabhas ಎಂದು ಬರೆಯಲಾಗುತ್ತಿತ್ತು. ಆದ್ರೆ ‘ದಿ ರಾಜಾ ಸಾಬ್’ ಪೋಸ್ಟರ್ನಲ್ಲಿ ‘Prabhass’ ಎಂದು ಬರೆಯಲಾಗಿದೆ. ಅಂದರೆ, ಹೆಸರಿನ ಕೊನೆಯಲ್ಲಿ ಹೆಚ್ಚುವರಿಯಾಗಿ ಒಂದು ‘s’ ಅಕ್ಷರವನ್ನ ಸೇರಿಸಲಾಗಿದೆ. ಸಂಖ್ಯಾಶಾಸ್ತ್ರವನ್ನು ನಂಬಿಕೊಂಡು ಪ್ರಭಾಸ್ ತನ್ನ ಹೆಸರಲ್ಲಿ ಈ ಬದಲಾವಣೆ ಮಾಡಿಕೊಂಡಿದ್ದಾರಾ ಅಥವಾ ಪೋಸ್ಟರ್ ಡಿಸೈನ್ ಮಾಡುವವರ ಕಣ್ತಪ್ಪಿ ಈ ರೀತಿ ಆಗಿದೆಯಾ ಎಂಬ ಪ್ರಶ್ನೆ ಈಗ ಅಭಿಮಾನಿಗಳಲ್ಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?