ರಜನಿಗೆ 1 ವಾರ ಬೆಡ್‌ರೆಸ್ಟ್, ಹೊಸ ಪಕ್ಷ ಘೋಷಿಸ್ತಾರಾ?

Published : Dec 28, 2020, 07:45 AM IST
ರಜನಿಗೆ 1 ವಾರ ಬೆಡ್‌ರೆಸ್ಟ್, ಹೊಸ ಪಕ್ಷ ಘೋಷಿಸ್ತಾರಾ?

ಸಾರಾಂಶ

ಆಸ್ಪತ್ರೆಯಿಂದ ರಜನಿ ಬಿಡುಗಡೆ| ಒಂದು ವಾರ ಬೆಡ್‌ರೆಸ್ಟ್‌ಗೆ ಸಲಹೆ| ಡಿ.31ಕ್ಕೆ ಪಕ್ಷ ಸ್ಥಾಪನೆ ಘೋಷಿಸುತ್ತಾರಾ ನಟ?

ಹೈದರಾಬಾದ್‌(ಡಿ.28): ರಕ್ತದೊತ್ತಡ ಹೆಚ್ಚಳದಿಂದ ಅಸ್ವಸ್ಥಗೊಂಡಿದ್ದ ತಮಿಳು ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರು ಗುಣಮುಖರಾಗಿದ್ದಾರೆ. ಭಾನುವಾರ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.

ಆದರೆ, ಅವರಿಗೆ ಇನ್ನೂ 1 ವಾರ ಸಂಪೂರ್ಣ ವಿಶ್ರಾಂತಿ (ಬೆಡ್‌ ರೆಸ್ಟ್‌) ಪಡೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದಾಗಿ ರಾಜಕೀಯ ಪಕ್ಷ ಸ್ಥಾಪಿಸಿ ಅಧಿಕೃತವಾಗಿ ರಾಜಕೀಯ ರಂಗಕ್ಕೆ ಧುಮುಕುವ ಉಮೇದಿಯಲ್ಲಿದ್ದ ಅವರು ಏನು ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಡಿ.31ರಂದು ತಮ್ಮ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡುವುದಾಗಿ ರಜನೀಕಾಂತ್‌ ಕೆಲವು ವಾರಗಳ ಹಿಂದೆ ತಿಳಿಸಿದ್ದರು.

ರಕ್ತದೊತ್ತಡ ಸಹಜ:

‘ರಜನೀಕಾಂತ್‌ ಅವರ ಆರೋಗ್ಯ ತಪಾಸಿಸಲಾಗಿದೆ. ವರದಿಯಲ್ಲಿ ಯಾವುದೇ ಆತಂಕಕಾರಿ ವಿಷಯಗಳು ಕಂಡುಬಂದಿಲ್ಲ. ರಕ್ತದೊತ್ತಡ (ಬಿ.ಪಿ.) ಸಹಜ ಸ್ಥಿತಿಗೆ ಬಂದಿದ್ದು, ಮೊದಲಿಗಿಂತ ಅವರು ಆರಾಮವಾಗಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಡಿಸ್‌ಚಾಜ್‌ರ್‍ ಮಾಡಲಾಗಿದೆ’ ಎಂದು ಆಸ್ಪತ್ರೆಯ ಪ್ರಕಟಣೆ ಭಾನುವಾರ ಸಂಜೆ ತಿಳಿಸಿದೆ.

70ರ ಹರೆಯದ ರಜನಿ ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ‘ಅಣ್ಣಾಟ್ಟೆ’ ಎಂಬ ತಮಿಳು ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ಆಗ ಚಿತ್ರತಂಡದ ನಾಲ್ವರಿಗೆ ಕೊರೋನಾ ದೃಢಪಟ್ಟಿತ್ತು. ಆಗ ರಜನೀಕಾಂತ್‌ ಅವರನ್ನೂ ಪರೀಕ್ಷೆಗೆ ಒಳಪಡಿಸಿದಾಗ ‘ನೆಗೆಟಿವ್‌’ ವರದಿ ಬಂದಿತ್ತು. ಆದರೂ ಮುಂಜಾಗ್ರತಾ ಕ್ರಮವಾಗಿ ಅವರು ಸ್ವಯಂ ಐಸೋಲೇಶನ್‌ಗೆ ಒಳಪಟ್ಟಿದ್ದರು. ಇದರ ನಡುವೆಯೇ ರಕ್ತದೊತ್ತಡ ಅಧಿಕಗೊಂಡ ಕಾರಣ ಶುಕ್ರವಾರ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?