
ಬಿ-ಟೌನ್ ಯಂಗ್ ಮ್ಯಾನ್, ಪರ್ಫೆಕ್ಟ್ ಬ್ಯಾಚುಲರ್ ಸಲ್ಮಾನ್ ಖಾಸ್ ತನ್ನ 55ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಮನೆಯ ಮುಂದೆ ಪೋಸ್ಟರ್ ಮೂಲಕ ಅಭಿಮಾನಿಗಳಲ್ಲಿ ಮನೆ ಸಮೀಪ ಬಾರದಂತೆ ಮನವಿ ಮಾಡಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಜೊತೆಗೆ ಜಿಮ್‌ಗೆ ಬಂದಿದ್ದು ಯಾರು ಗೊತ್ತಾ?
ಸಲ್ಲು ಪೋಸ್ಟ್:
'ಇಷ್ಟು ವರ್ಷಗಳ ಕಾಲ ನೀವು ತೋರಿದ ಪ್ರೀತಿಗೆ ನಾನು ಆಭಾರಿ. ಆದರೆ ಈ ವರ್ಷದ ಹುಟ್ಟುಹಬ್ಬದಂದು ಯಾರು ಮನೆಯ ಮುಂದೆ ಗುಂಪು ಕಟ್ಟಿಕೊಂಡು ಬರಬಾರದು. ಕೊರೋನಾ ಸೋಂಕಿನ ನಿಯಮದ ಪ್ರಕಾರ ಸಾಮಾಜಿಕ ಅಂತರವನ್ನು ಪಾಲಿಸಬೇಕು. ದಯವಿಟ್ಟು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಹಾಕಿಕೊಳ್ಳಿ, ಸೋಷಿಯಲ್ ಡಿಸ್ಟೆನ್ಸ್ ಪಾಲಿಸಿ,' ಎಂದು ಸಲ್ಲು ಬರೆದುಕೊಂಡಿದ್ದರು.
ರಾತ್ರಿ 12 ಗಂಟೆ ಸುಮಾರಿಗೆ ಸಲ್ಮಾನ್ ಖಾನ್ ನಿವಾಸದ ಬಳಿ ಇದ್ದ ಮಾಧ್ಯಮ ಮಿತ್ರರು ನೆಚ್ಚಿನ ನಟನ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸಲ್ಮಾನ್ ಖಾನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಜೊತೆಗೆ ಎಲ್ಲಾ ಸ್ಟಾರ್ ನಟ-ನಟಿಯರು ಸಲ್ಲು ಜೊತೆ ಫೋಟೋ ಶೇರ್ ಮಾಡಿಕೊಂಡು ಶುಭಾಶಯಗಳನ್ನು ತಿಳಿಸಿದ್ದಾರೆ.
54 ಆದ್ರೂ ಸಲ್ಮಾನ್ ಖಾನ್ ಕಟ್ಟುಮಸ್ತಾಗಿರೋ ಸೀಕ್ರೇಟ್
ಇನ್ನು ಮದುವೆಯಾಗದೇ, ಬ್ಯಾಚುಲರ್ ಆಗಿಯೇ ಇರುವ ಸಲ್ಮಾನ್ 55ನೇ ಹುಟ್ಟುಹಬ್ಬಕ್ಕಾದರೂ ಗುಡ್ ನ್ಯೂಸ್ ಕೊಡಲಿದ್ದಾರೆ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ಲಾಕ್‌ಡೌನ್ ಸಮಯದಿಂದ ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಕೃಷಿ ಮಾಡುತ್ತಾ, ಜಿಮ್‌ನಲ್ಲಿ ಹೆಚ್ಚು ವರ್ಕೌಟ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.