ನನ್ನ ಚಿತಾಭಸ್ಮ ಗಂಗೆಯಲ್ಲಿ ಬಿಡಬೇಡಿ ಎಂದ ಕಂಗನಾ

Suvarna News   | Asianet News
Published : Dec 27, 2020, 03:39 PM ISTUpdated : Dec 27, 2020, 03:41 PM IST
ನನ್ನ ಚಿತಾಭಸ್ಮ ಗಂಗೆಯಲ್ಲಿ ಬಿಡಬೇಡಿ ಎಂದ ಕಂಗನಾ

ಸಾರಾಂಶ

ಕಂಗನಾ ವಿಚಿತ್ರ ಅನಿಸೋ ಹೇಳಿಕೆಗಳನ್ನು ಕೊಡುತ್ತಲೇ ಇರುತ್ತಾರೆ. ಇದೇನು ಹೊಸದಲ್ಲ. ಇದೀಗ ನನ್ನ ಚಿತಾ ಭಸ್ಮವನ್ನು ಗಂಗೆಯನ್ನು ಬಿಡಬೇಡಿ ಎಂದು ಹಾಡಿದ್ದಾರೆ ಕಂಗನಾ.. ಏನಮ್ಮಾ ಕಾರಣ..?

ಪ್ರತಿದಿನ ಹಲವಾರು ಹಾಟ್‌ ವಿಷಯಗಳ ಬಗ್ಗೆ ನಿರ್ಭಯವಾಗಿ ಮಾತನಾಡುವ ಅಥವಾ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ಕಂಗನಾ ರಣಾವತ್ ಈಗ ಮತ್ತೊಂದು ಹೇಳಿಕೆ ಕೊಟ್ಟಿದ್ದಾರೆ.

ಸಾಮಾಜಿಕ ಮಾಧ್ಯಮ ಟೈಮ್‌ಲೈನ್‌ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಅವರ ಸ್ವರಚಿತ ಕವಿತೆಯನ್ನೂ ಶೇರ್ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಬರೆದ ಹೃದಯ ಸ್ಪರ್ಶಿ ಕವಿತೆ ನೆಟ್ಟಿಗರ ಮನ ಗೆದ್ದಿತ್ತು.

ಮೆರಿ ಕ್ರಿಸ್ಮಸ್ ಎಂದ ಕಂಗನಾ..! ಅಂದಹಾಗೆ ಈ ವಿಶ್ ಎಲ್ರಿಗೂ ಇಲ್ಲ

ಇದೀಗ ನಟಿ ಇನ್ನೊಂದು ರಾಖ್ (ಚಿತಾಭಸ್ಮ) ಎಂಬ ಶೀರ್ಷಿಕೆಯ ಕವಿತೆ ಶೇರ್ ಮಾಡಿದ್ದಾರೆ. ಈ ಕವಿತೆಯು ಆಕೆಯ ಇತ್ತೀಚಿನ ಫ್ಯಾಮಿಲಿ ಹೈಕಿಂಗ್ ಪ್ರವಾಸದ ಕುರಿತು ಅವರ ಅನುಭವಗಳನ್ನು ತಿಳಿಸುತ್ತದೆ.

ನಟಿ ತನ್ನ ಹೈಕಿಂಗ್ ವೀಡಿಯೊವನ್ನು ಹಂಚಿಕೊಂಡಿದ್ದು, ಇದರಲ್ಲಿ ಕಂಗನಾ ಹಿಮದಲ್ಲಿ ಓಡುತ್ತಿರುವುದನ್ನು, ಸಂಬಂಧಿಕರ ಮೇಲೆ ಹಿಮವನ್ನು ಎಸೆಯುವುದನ್ನು ನೋಡಬಹುದು. ಸಾವಿನ ನಂತರ ಗಂಗಾ ನದಿಯಲ್ಲಿ ವ್ಯಕ್ತಿಯ ಚಿತಾಭಸ್ಮವನ್ನು ಮುಳುಗಿಸುವ ಪದ್ಧತಿಯ ಬಗ್ಗೆ ತನ್ನ ಆಲೋಚನೆಗಳನ್ನು ಹಂಚಿಕೊಂಡ ಕಂಗನಾ, ತನ್ನ ಚಿತಾಭಸ್ಮವನ್ನು ಪರ್ವತಗಳ ಮೇಲೆ ಹರಡಬೇಕೆಂಬ ಬಯಕೆಯನ್ನು ತಿಳಿಸಿದ್ದಾರೆ. ಈ ಹಿಂದೆ ಕಂಗನಾ ಬರೆದ ಆಸ್ಮನ್ ಎಂಬ ಕವಿತೆಯಲ್ಲಿ ಆಕಾಶದ ಮಹತ್ವವನ್ನು ಬರೆದಿದ್ದರು. ಆ ಕವಿತೆ ಪ್ರೀತಿ ಮತ್ತು ಜೀವನದ ನೈಜ ಸಾರವನ್ನು ಪ್ರತಿಬಿಂಬಿಸುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

The Devil Movie Review: ದರ್ಶನ್‌ ತೂಗುದೀಪ 'ಡೆವಿಲ್‌' ಹೇಗಿದೆ? ಡೆವಿಲ್‌ನಲ್ಲೂ ಗಿಲ್ಲಿ ನಟನ ಭರ್ಜರಿ ಕಾಮಿಡಿ
ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!