ಬಾಲಿವುಡ್​ನ ಐವರು ಸಿಂಗಲ್​ ಡ್ಯಾಡಿ: ಮದ್ವೆ ಆಗದೇ ಒಂಟಿ ಅಪ್ಪ ಆದವರು!

By Suvarna News  |  First Published Jun 24, 2023, 4:04 PM IST

ಬಾಲಿವುಡ್​ನ ಹಲವು ನಟರು ಒಂಟಿಯಾಗಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಅಂಥ ಐವರು ನಟರ ಪರಿಚಯ ಇಲ್ಲಿ ಮಾಡಿಸಲಾಗಿದೆ. 
 


ಒಂಟಿ ಪಾಲಕರು (Single Parents) ಎಂದಾಗ ಹೆಚ್ಚಾಗಿ ಕಣ್ಮುಂದೆ ಬರುವುದು ಒಂಟಿ ಹೆಣ್ಣು. ಒಂಟಿಯಾಗಿದ್ದುಕೊಂಡು ಮಕ್ಕಳನ್ನು ಪೋಷಿಸುವಾಕೆ ಹೆಣ್ಣೆ ಎನ್ನಲಾಗುತ್ತದೆ. ಆದರೆ ಅಸಲಿಗೆ ಹೆಣ್ಣು ಮಾತ್ರವಲ್ಲ, ಪುರುಷರೂ ಒಂಟಿ ಪಾಲಕರಾಗಿ ಮಕ್ಕಳನ್ನು ಸಲಹುತ್ತಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಒಂಟಿ ಅಪ್ಪ ಆಗಿದ್ದಾರೆ. ಬಾಲಿವುಡ್​ನ ಕೆಲವು ನಟರೂ ಸಿಂಗಲ್​ ಡ್ಯಾಡ್​ ಆಗಿದ್ದಾರೆ. ಕೆಲವರು ಮದುವೆಯಾಗದೇ, ದೈಹಿಕ ಸಂಪರ್ಕವನ್ನೂ ಹೊಂದದೆ  ಒಂಟಿ ತಂದೆಯಾಗಿದ್ದರೆ, ಇನ್ನು ಕೆಲವರು ಡಿವೋರ್ಸ್​ ಕೊಟ್ಟು ಮಕ್ಕಳನ್ನು ಪಾಲನೆ ಮಾಡುತ್ತಿದ್ದಾರೆ. ನಾವು ಇಲ್ಲಿ  ವ 5 ಬಾಲಿವುಡ್ ತಾರೆಯರ ಬಗ್ಗೆ ಮಾತನಾಡುತ್ತೇವೆ. ಈ ನಟರು  ವರ್ಷಗಳಿಂದ ತಮ್ಮ ಮಕ್ಕಳನ್ನು ಒಂಟಿಯಾಗಿ ಬೆಳೆಸುತ್ತಿದ್ದಾರೆ. 

ಕರಣ್​ ಜೋಹರ್​ (Karan Johar)
ಈ ಪಟ್ಟಿಯಲ್ಲಿ ಮೊದಲ ಹೆಸರು ಹಿರಿಯ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರದ್ದು. ಕರಣ್ ಜೋಹರ್ ಮದುವೆಯಾಗಿಲ್ಲ ಮತ್ತು ಬಾಡಿಗೆ ತಾಯ್ತನದ ಮೂಲಕ ಎರಡು ಅವಳಿ ಮಕ್ಕಳ ತಂದೆಯಾದರು. ಕರಣ್‌ಗೆ ಒಬ್ಬ ಮಗಳು ಮತ್ತು ಮಗ ಇದ್ದಾರೆ. ಒಂಬತ್ತು ತಿಂಗಳ ಕಾಲ ಮಕ್ಕಳನ್ನು ಗರ್ಭದಲ್ಲಿಟ್ಟು ಬೆಳೆಸಿದ ಬಾಡಿಗೆ ತಾಯಿಗೂ ಕರಣ್‌ ಕೃತಜ್ಞತೆ ಹೇಳಿದ್ದರು. ಆದರೆ, ಆಕೆ ಯಾರು ಎನ್ನುವ ಗುಟ್ಟು ಬಿಟ್ಟುಕೊಟ್ಟಿಲ್ಲ. ಇವರು ತಮ್ಮ  ತಾಯಿಯ ಸಹಯೊಂದಿಗೆ  ಮಕ್ಕಳನ್ನು ಬೆಳೆಸುತ್ತಿದ್ದಾರೆ. 'ವೈದ್ಯಕೀಯ ವಿಸ್ಮಯದ ಸಹಾಯದಿಂದ ಈ ಜಗತ್ತಿಗೆ ಸ್ವಾಗತಿಸಲ್ಪಟ್ಟ ನನ್ನ ಹೃದಯದ ಎರಡು ತುಣುಕುಗಳಿಗೆ ತಂದೆಯಾಗುವುದು ನನ್ನ ಮಹಾ ಭಾಗ್ಯ ಎಂದು ಭಾವಿಸಿದ್ದೇನೆ ಎಂದು ಕರಣ್‌ ಜೋಹರ್‌ ಮಕ್ಕಳು ಹುಟ್ಟಿದ ಸಂದರ್ಭದಲ್ಲಿ ಹೇಳಿದ್ದರು.

ಅತ್ತೆ ತೊಡೆ ಮೇಲೆ ಶಾರುಖ್‌: ಪತಿ ಮೇಲೆ ಕಾಲಿಟ್ಟು ಕೂತ ಗೌರಿ- ಇದೆಂಥ ಸಂಸ್ಕಾರ ಎಂದ ನೆಟ್ಟಿಗರು!
 
ತುಷಾರ್​ ಕಪೂರ್​ (Tushar Kapoor)
ತುಷಾರ್ ಕಪೂರ್ ಇನ್-ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಬಳಸಿಕೊಂಡು   ಬಾಡಿಗೆ ತಾಯ್ತನದ ಮೂಲಕ ಮಗನ ತಂದೆ ಆಗಿದ್ದಾರೆ. 2016ರಲ್ಲಿ ಇವರು ತಂದೆಯಾಗಿದ್ದಾರೆ. ಮಗನ ಹೆಸರು ಲಕ್ಷ್ಯ. ತನ್ನ ಸಹೋದರಿ ಏಕ್ತಾ ಕಪೂರ್ ಮತ್ತು ತಂದೆ ಜೀತೇಂದ್ರ ಜೊತೆಗೆ, ಈ ನಟ ತನ್ನ ಮಗನನ್ನು ಬೆಳೆಸುತ್ತಿದ್ದಾರೆ.  ತುಷಾರ್ ತಮ್ಮ  ಮಗನೊಂದಿಗೆ ಅದ್ಭುತ ಬಾಂಧವ್ಯ ಹೊಂದಿದ್ದಾರೆ. 

Tap to resize

Latest Videos

ರಾಹುಲ್​ ದೇವ್​ (Rahul Dev)
ನಟ ರಾಹುಲ್ ದೇವ್ 2009ರಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದರು. ನಟನ ಪತ್ನಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು, ಇದರಿಂದಾಗಿ ಅವರು ಸಂಪೂರ್ಣವಾಗಿ ಮುರಿದುಬಿದ್ದರು. ಪತ್ನಿಯ ಮರಣದ ನಂತರ ರಾಹುಲ್ ಮರುಮದುವೆಯಾಗದೆ ಒಂಟಿ ತಂದೆಯಾಗಿ ಮಗನನ್ನು ಒಬ್ಬರೇ ನೋಡಿಕೊಳ್ಳುತ್ತಿದ್ದಾರೆ.

Karan v/s Priyanka: ಹಾಗ್ಯಾಕೆ ಕಾಲು ತಿಕ್ಕುತ್ತಾ ನುಲಿತೀರಿ... ನೀವೇನು ಅವ್ರಾ? ಎಂದಿದ್ದ ವಿಡಿಯೋ ವೈರಲ್!
 
ಹೃತಿಕ್​ ರೋಷನ್​ (Hruthik Roshan)
2014 ರಲ್ಲಿ ಹೃತಿಕ್ ರೋಷನ್ ಮತ್ತು ಸುಸಾನೆ ಖಾನ್ ಬೇರೆಯಾದರು. ವಿಚ್ಛೇದನದ ನಂತರ, ನಟ ಮತ್ತು ಅವರ ಮಾಜಿ ಪತ್ನಿ ಇಬ್ಬರೂ ತಮ್ಮ ಪುತ್ರರ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಈ ದಂಪತಿ ಇನ್ನೂ ಪುತ್ರರಿಗಾಗಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ. ಆದರೆ ಸದ್ಯ ಹೃತಿಕ್​ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಹೃತಿಕ್​ ರೋಷನ್​ ಹೆಸರು ಕೆಲವು ನಟಿಯರ ಜೊತೆ ಥಳಕು ಹಾಕಿಕೊಳ್ಳುತ್ತಿದ್ದರೂ ವಿಚ್ಛೇದನದ ಬಳಿಕ ಸದ್ಯ ಅವರು ಸಿಂಗಲ್​ ಆಗಿದ್ದಾರೆ. 

ಕಮಲ್​ ಹಾಸನ್​ (Kamal hassan)
ವರ್ಷಗಳ ಕಾಲ ದಕ್ಷಿಣ ಮತ್ತು ಹಿಂದಿ ಚಿತ್ರಗಳನ್ನು ಆಳಿದ ನಟ ಕಮಲ್ ಹಾಸನ್ ಕೂಡ ಸಿಂಗಲ್ ಡ್ಯಾಡ್. ಸಾರಿಕಾಗೆ ವಿಚ್ಛೇದನ ನೀಡಿದ ನಂತರ, ನಟ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿದರು. ಇಂದು ಅವರ ಪುತ್ರಿಯರಾದ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಕೂಡ ಚಿತ್ರರಂಗದಲ್ಲಿ ಹೆಸರು ಗಳಿಸುತ್ತಿದ್ದಾರೆ.

click me!