'ಮೇರಾ ಪಿಯಾ ಆಯಾ' ಹಾಡು ಮರು ಸೃಷ್ಟಿಸಿ, ಮಾಧುರಿಗೆ ಸನ್ನಿ ಲಿಯೋನ್​ ಗೌರವ: ಫ್ಯಾನ್ಸ್​ ಗರಂ

Published : Oct 08, 2023, 05:32 PM IST
'ಮೇರಾ ಪಿಯಾ ಆಯಾ' ಹಾಡು ಮರು ಸೃಷ್ಟಿಸಿ, ಮಾಧುರಿಗೆ ಸನ್ನಿ ಲಿಯೋನ್​ ಗೌರವ: ಫ್ಯಾನ್ಸ್​ ಗರಂ

ಸಾರಾಂಶ

1995ರಲ್ಲಿ ಬಿಡುಗಡೆಗೊಂಡಿದ್ದ ಯಾರಾನಾ ಚಿತ್ರದ ಮೇರಾ ಪಿಯಾ ಘರ್​ ಆಯಾ ಹಾಡಿಗೆ ಮಾಧುರಿ ಅವರ ಡ್ಯಾನ್ಸ್​ ಅನ್ನು ಮರು ಸೃಷ್ಟಿಸಿದ್ದಾರೆ ನಟಿ ಸನ್ನಿ ಲಿಯೋನ್​.   

ಬಾಲಿವುಡ್‌ನ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಅವರ ಬ್ಲಾಕ್‌ಬಸ್ಟರ್ ಚಿತ್ರ 'ಯಾರಾನಾ' ದ ಸೂಪರ್‌ಹಿಟ್ ಹಾಡು 'ಮೇರಾ ಪಿಯಾ ಘರ್ ಆಯಾ ಓ ರಾಮ್ ಜಿ' ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಮಾಧುರಿ ದೀಕ್ಷಿತ್ ಅಭಿನಯದ 'ಯಾರಾನಾ' ಚಿತ್ರ 1995 ರಲ್ಲಿ ಬಿಡುಗಡೆಯಾಯಿತು. ಚಿತ್ರವನ್ನು ಡೇವಿಡ್ ಧವನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮಾಧುರಿಯೊಂದಿಗೆ ರಿಷಿ ಕಪೂರ್, ರಾಜ್ ಬಬ್ಬರ್ ಮತ್ತು ಖಾದರ್ ಖಾನ್ ಕಾಣಿಸಿಕೊಂಡಿದ್ದರು. ಇಂದಿಗೂ ಮಾಧುರಿಯ ಈ ಐಕಾನಿಕ್ ಹಾಡು ತುಂಬಾ ಇಷ್ಟವಾಗಿದೆ. ಈ ಹಾಡನ್ನು ಮಾಧುರಿ ದೀಕ್ಷಿತ್ ಅವರ ಪ್ರಸಿದ್ಧ ಹಾಡುಗಳಲ್ಲಿ ಎಣಿಸಲಾಗಿದೆ. ಈ ಹಾಡಿನಿಂದಲೇ ಮಾಧುರಿ ಇನ್ನಷ್ಟು ಫ್ಯಾನ್ಸ್​ಗಳನ್ನು ಗಳಿಸಿದ್ದರು ಆ ಕಾಲದಲ್ಲಿ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಚಿತ್ರ ಬಿಡುಗಡೆಯಾಗಿ 28 ವರ್ಷಗಳ ಬಳಿಕವೂ ಜನರು ಆ ಹಾಡನ್ನು ಗುನುಗುತ್ತಾರೆ ಎಂದರೆ ಅದು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದು ಹೇಳಬಹುದು.

ಇದೀಗ ಇದೇ  ಐಕಾನಿಕ್ ಹಾಡನ್ನು  ಬಾಲಿವುಡ್‌ ನಟಿ  ಸನ್ನಿ ಲಿಯೋನ್ ಮರುಸೃಷ್ಟಿಸಿದ್ದಾರೆ. ಅದರ ಟೀಸರ್​ ಬಿಡುಗಡೆ ಮಾಡಲಾಗಿದೆ. 'ಮೇರಾ ಪಿಯಾ ಘರ್ ಆಯಾ 2.0' ನ ಇತ್ತೀಚಿನ ಟೀಸರ್ ಎಂದು ನಟಿ ಇದನ್ನು ಶೇರ್​ ಮಾಡಿದ್ದಾರೆ. ಇದರಲ್ಲಿ ಸನ್ನಿ ಲಿಯೋನ್​ ಹಾಟ್​ ಆಗಿ ಸ್ಟೆಪ್​ ಹಾಕಿದ್ದಾರೆ. ಟೀಸರ್ ಬಂದ ತಕ್ಷಣ ವಿಡಿಯೋ 100 ಮಿಲಿಯನ್ ವೀಕ್ಷಣೆ ಪಡೆದಿದೆ. ವರದಿಗಳನ್ನು ನಂಬುವುದಾದರೆ, ಸನ್ನಿಯ ಈ ಹಾಡು ಅಕ್ಟೋಬರ್ 8 ರಂದು ಬಿಡುಗಡೆಯಾಗಲಿದೆ. ಮಾಧುರಿ ದೀಕ್ಷಿತ್ ಅವರ ಈ ಐಕಾನಿಕ್ ಹಾಡನ್ನು ರಿಮೇಕ್ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಟೀಸರ್ ಪೋಸ್ಟ್‌ನ ಶೀರ್ಷಿಕೆಯಲ್ಲಿ ಸನ್ನಿ ಹೇಳಿದ್ದಾರೆ. ಈ ಟೀಸರ್ ವಿಡಿಯೋದಲ್ಲಿ ಮಾಧುರಿ ದೀಕ್ಷಿತ್ ಅವರಿಗೆ ವಿಶೇಷ ಗೌರವವಾಗಿ 'ಮೇರಾ ಪಿಯಾ ಘರ್ ಆಯಾ 2.0' ಅನ್ನು ತರುತ್ತಿದ್ದೇವೆ ಎಂದಿದ್ದಾರೆ. 

ಟರ್ಕಿಯಲ್ಲಿ ಜೊತೆಯಾಗಿದ್ದ ರಶ್ಮಿಕಾ-ವಿಜಯ್​: ಬೇರೆ ಬೇರೆ ಫೋಟೋ ಹಾಕಿದ್ರೂ ಸಿಕ್ಕಿಬಿದ್ದ 'ಕಳ್ಳರು'!
 
ಆದರೆ ಇದು ಮಾಧುರಿ ದೀಕ್ಷಿತ್​ ಅವರ ಹಲವು ಅಭಿಮಾನಿಗಳನ್ನು ಕೆರಳಿಸಿದೆ. ಮಾಧುರಿಯವರ ಈ ಹಾಡನ್ನು ಮಾಜಿ ನೀಲಿ ತಾರೆಯೊಬ್ಬರು ಮರು ಸೃಷ್ಟಿಸಿರುವುದು ಸರಿಯಲ್ಲ ಎಂದು ಹಲವರು ಕೆಂಡಾಮಂಡಲವಾಗಿದ್ದರೆ, ಸನ್ನಿ ಮಾಡಿರುವ ಸ್ಟೆಪ್​ಗಳು ಮೂಲ ಹಾಡಿಗೆ ಹೊಂದಾಣಿಕೆಯೇ ಆಗಿಲ್ಲ, ಮಾಧುರಿಯವರಿಗೂ ಸನ್ನಿ ಲಿಯೋನ್​ ನೃತ್ಯಕ್ಕೂ ಹೋಲಿಕೆ ಮಾಡುವುದು ಮಹಾಪರಾಧ ಎನ್ನುತ್ತಿದ್ದಾರೆ. ಆದರೆ ಇನ್ನು ಹಲವರು ಸೂಪರ್​ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಮಾಧುರಿ ದೀಕ್ಷಿತ್​ ಅವರಿಗೆ ನಿಜವಾಗಿಯೂ ಗೌರವ ಸಂದಿದೆ ಎನ್ನುತ್ತಿದ್ದಾರೆ. 

30 ವರ್ಷಗಳ ಹಿಂದೆ ಈ ಚಿತ್ರ 9 ಕೋಟಿ ರೂಪಾಯಿ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮಾಡಿತ್ತು. ಬ್ಲಾಕ್​ಬಸ್ಟರ್​ ಎಂದು ಸಾಬೀತಾಗಿತ್ತು. ಮಾಧುರಿ ದೀಕ್ಷಿತ್ ಎದುರು ನಾಯಕನಾಗಿ ಮೊದಲು ಗೋವಿಂದ ಅವರನ್ನು  ಸಂಪರ್ಕಿಸಲಾಗಿತ್ತು.  ಆದರೆ ಅವರು ಬಿಜಿ ಇದ್ದುದರಿಂದ ಅದು ಸಾಧ್ಯವಾಗಿರಲಿಲ್ಲ, ನಂತರ  ಜಾಕಿ ಶ್ರಾಫ್ ಅವರನ್ನು ಸಂಪರ್ಕಿಸಲಾಯಿತು, ಆದರೆ ಇತರ ಪ್ರಾಜೆಕ್ಟ್​ಗಳಲ್ಲಿ ಇದ್ದರಿಂದ ಅವರ ಡೇಟ್​ ಕೂಡ ಸಿಕ್ಕಿರಲಿಲ್ಲ. ಕೊನೆಗೆ ಇದು  ರಿಷಿ ಕಪೂರ್ ಅವರ ಪಾಲಾಗಿ ಅವರಿಗೂ ಸಕತ್​ ಹೆಸರು ತಂದುಕೊಟ್ಟಿತು.  ಖಳನಾಯಕನಾಗಿ ಮೊದಲು ಕಮಲ್ ಹಾಸನ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಈ ಪಾತ್ರಕ್ಕೆ ಅವರು ಒಪ್ಪದ ಕಾರಣ,  ರಾಜ್ ಬಬ್ಬರ್ ಪಾತ್ರ ನಿರ್ವಹಿಸಿದರು. 

Viral Video: ಇಸ್ರೇಲ್​ನಲ್ಲಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡರೂ ಮಾಧ್ಯಮಗಳ 'ದಾಳಿ'ಗೆ ಬೆಚ್ಚಿಬಿದ್ದ ನಟಿ ನುಶ್ರತ್​!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?