
ಗಾಜಾ ಸ್ಟ್ರಿಪ್‌ನಿಂದ ಕಳೆದ ಶನಿವಾರ ಇಸ್ರೇಲ್ ಮೇಲೆ ಹಮಾಸ್ ಉಗ್ರರ ಗುಂಪು ಸಾವಿರಾರು ರಾಕೆಟ್‌ಗಳ ಸುರಿಮಳೆ ಸುರಿಸಿ, ದಿಢೀರ್ ಯುದ್ಧ ಸಾರಿದೆ. ಇದರಿಂದ ದಿಢೀರನೇ ಇಸ್ರೇಲ್ ಮೇಲೆ ಸ್ಟೇಟ್ ಆಫ್ ವಾರ್ ಆರಂಭವಾಗಿದ್ದು, ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಯುದ್ಧ ಇನ್ನೂ ಭೀಕರವಾಗುತ್ತಲೇ ಸಾಗಿದೆ. ಹಮಾಸ್ ಉಗ್ರರು ಇಸ್ರೇಲ್ ಅನ್ನು ಟಾರ್ಗೆಟ್ ಮಾಡಿದ್ದಾರೆ. ಏಕಾಏಕಿ ಇಸ್ರೇಲ್ ಮೇಲೆ ಮುಗಿಬಿದ್ದಿರುವ ಹಮಾಸ್ ಉಗ್ರರು, ಬರೋಬ್ಬರಿ 500ಕ್ಕೂ ಹೆಚ್ಚು ರಾಕೆಟ್‌ಗಳಿಂದ ದಾಳಿ ಮಾಡಿದ್ದಾರೆ. ಮತ್ತೊಂದೆಡೆ, ಇಸ್ರೇಲ್‌ನಲ್ಲಿ ಹದಗೆಟ್ಟ ಪರಿಸ್ಥಿತಿಯ ನಡುವೆ, ಭಾರತೀಯ ರಾಯಭಾರ ಕಚೇರಿ ಅಲ್ಲಿರುವ ತನ್ನ ನಾಗರಿಕರಿಗೆ ಸಲಹೆಯನ್ನು ನೀಡಿದೆ. ಜಾಗರೂಕರಾಗಿ ಮತ್ತು ಸುರಕ್ಷಿತವಾಗಿರಲು ಅವರನ್ನು ಕೇಳಲಾಗಿದೆ. ಸಂಕಷ್ಟದ ಸಮಯದಲ್ಲಿ ಭಾರತ ಇಸ್ರೇಲ್ ಜನರೊಂದಿಗೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದರ ನಡುವೆಯೇ, ಹಮಾಸ್ನಿಂದ ದಾಳಿಗೊಳಗಾಗಿರುವ ಇಸ್ರೇಲ್‌ನಲ್ಲಿ ಬಾಲಿವುಡ್ ನಟಿ ನುಶ್ರತ್ ಭರೂಚಾ ಸಿಕ್ಕಿಹಾಕಿಕೊಂಡಿದ್ದರು. ಇಸ್ರೇಸ್ನಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು ಜನ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಟಿ ಅಲ್ಲಿ ಸಿಲುಕಿಬಿದ್ದಿದ್ದರು. ಅಷ್ಟಕ್ಕೂ ನಟಿ, ನುಶ್ರತ್ ಭರೂಚಾ ಅವರು ಹೈಫಿ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಇಸ್ರೇಲ್ಗೆ ಹೋಗಿದ್ದರು. ಆದರೆ ಅದೇ ವೇಳೆ ಹಮಾಸ್ ಉಗ್ರರಿಂದ ಏಕಾಏಕಿ ದಾಳಿ ನಡೆದಿದೆ. ಹೀಗಾಗಿ ನಟಿ ದಾಳಿ ಸಂದರ್ಭ ಅಪಾಯದ ವಾತಾವರಣದಲ್ಲಿ ಇಸ್ರೇಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು.
ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರಿಗೆ ರಾಜ್ಯ ಸರ್ಕಾರದಿಂದ ಹೆಲ್ಪ್‌ಲೈನ್
ಆದರೆ ಭಾರತದ ಶ್ರಮದ ಫಲವಾಗಿ ನಟಿಗೆ ಏನೂ ಅನಾಹುತ ಸಂಭವಿಸಿಲ್ಲ. ನಟಿ ಸುರಕ್ಷಿತವಾಗಿ ಭಾರತವನ್ನು ತಲುಪಿದ್ದಾರೆ. 'ನಾವು ಅಂತಿಮವಾಗಿ ನುಶ್ರತ್ ಅವರನ್ನು ಸಂಪರ್ಕಿಸಲು ಯಶಸ್ವಿಯಾಗಿದ್ದೇವೆ. ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ ಅವಳನ್ನು ಸುರಕ್ಷಿತವಾಗಿ ಮನೆಗೆ ಕರೆತರಲಾಗುತ್ತಿದೆ. ನೇರ ವಿಮಾನ ಸಿಗದ ಕಾರಣ ನಟಿ ಸಂಪರ್ಕ ವಿಮಾನದ ಮೂಲಕ ಬರುತ್ತಿದ್ದಾರೆ. ಆಕೆಯ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದಿಲ್ಲ ಆದರೆ ಅವರು ಭಾರತಕ್ಕೆ ಬಂದ ತಕ್ಷಣ, ನಾವು ನಿಮಗೆ ತಿಳಿಸುತ್ತೇವೆ' ಎಂದು ಭಾರತದ ರಕ್ಷಣಾ ತಂಡ ಹೇಳಿಕೆ ಬಿಡುಗಡೆ ಮಾಡಿತ್ತು. ಇದೀಗ ಮುಂಬೈಗೆ ನಟಿ ಬಂದು ತಲುಪಿದ್ದಾರೆ.
ಆದರೆ ಈಕೆ ಬರುತ್ತಿರುವ ವಿಷಯ ತಿಳಿಯುತ್ತಲೇ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳು ಆಕೆಯನ್ನು ಸುತ್ತುವರೆದು ಪ್ರಶ್ನೆಗಳ ಸುರಿಮಳೆಯನ್ನೇಗೈದಿದ್ದಾರೆ. ಗುಂಡಿನ ದಾಳಿಯ ಭಯಾನಕತೆಯನ್ನು ಕಂಡು ಜೀವ ಉಳಿಸಿಕೊಂಡು ಬಂದಿದ್ದ ನಟಿ ಆ ಕರಾಳ ನೆನಪಿನಲ್ಲಿ ಭಯಭೀತರಾಗಿರುವ ನಡುವೆಯೇ ಮಾಧ್ಯಮದವರು ಒಂದೇ ಸಮನೆ ಸುತ್ತುವರೆದು ಮಾಡಿದ ಪ್ರಶ್ನೆಗಳಿಗೆ ನಟಿ ಬೆಚ್ಚಿಬಿದ್ದಿದ್ದು ಅದರ ವಿಡಿಯೋ ವೈರಲ್ ಆಗುತ್ತಿದೆ. ನಟಿಯ ಅಂಗರಕ್ಷಕರು ಮಾಧ್ಯಮದವರನ್ನು ದೂರ ಸರಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಅಲ್ಲಿ ಹೇಗಿದೆ ಪರಿಸ್ಥಿತಿ, ನೀವು ಹೇಗೆ ಸಿಕ್ಕಿಬಿದ್ದಿರಿ ಎಂಬೆಲ್ಲಾ ಪ್ರಶ್ನೆಗಳನ್ನು ಮಾಧ್ಯಮದವರು ನಟಿಗೆ ಕೇಳಿದ್ದಾರೆ. ಕಣ್ಣಿನಲ್ಲಿ ನೀರು ತುಂಬಿಕೊಂಡು ಏನು ಮಾಡಬೇಕು ಎನ್ನುವುದು ತಿಳಿಯದೇ ನಟಿ ನುಶ್ರತ್ ಭರೂಚಾ ಕಂಗಾಲಾಗಿ ಹೋಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮಾಧ್ಯಮದವರ ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಯಹೂದಿ ರಾಷ್ಟ್ರ ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯನ್ನು ಶಿವಮೊಗ್ಗ ಗಲಭೆಗೆ ಹೋಲಿಸಿದ ಬಿಜೆಪಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.