29 ವರ್ಷದ ನೋ ಕಿಸ್ಸಿಂಗ್ ಸೀನ್ ರೂಲ್ಸ್ ಬ್ರೇಕ್ ಮಾಡಿದ ಕಾಜೋಲ್; ಲಿಪ್‌ಲಾಕ್ ದೃಶ್ಯ ವೈರಲ್

Published : Jul 15, 2023, 03:47 PM ISTUpdated : Jul 18, 2023, 03:40 PM IST
29 ವರ್ಷದ ನೋ ಕಿಸ್ಸಿಂಗ್ ಸೀನ್ ರೂಲ್ಸ್ ಬ್ರೇಕ್ ಮಾಡಿದ ಕಾಜೋಲ್; ಲಿಪ್‌ಲಾಕ್ ದೃಶ್ಯ ವೈರಲ್

ಸಾರಾಂಶ

29 ವರ್ಷದ ನೋ ಕಿಸ್ಸಿಂಗ್ ಸೀನ್ ನಿಯಮವನ್ನು ಬ್ರೇಕ್ ಮಾಡಿದ್ದಾರೆ ಬಾಲಿವುಡ್ ನಟಿ ಕಾಜೋಲ್ ದೇವಗನ್. ದಿ ಟ್ರಯಲ್ ವೆಬ್ ಸೀರಿಸ್‌ನ ಲಿಪ್‌ಲಾಕ್ ದೃಶ್ಯ ವೈರಲ್ ಆಗಿದೆ. 

ಇತ್ತೀಚಿನ ದಿನಗಳಲ್ಲಿ ನಟಿಮಣಿಯರು ಆನ್‌ಸ್ಕ್ರೀನ್ ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗುತ್ತಿದ್ದಾರೆ. ತನ್ನ ವೃತ್ತಿ ಜೀವನದ ಕೆಲವು ನಿಯಮಗಳನ್ನು ಬ್ರೇಕ್ ಮಾಡಿ ಅಬ್ಬರಿಸುತ್ತಿದ್ದಾರೆ. ಇತ್ತೀಚೆಗಷ್ಟೆ ನಟಿ ತಮನ್ನಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಆ ಮೂಲಕ ತನ್ನ 18 ವರ್ಷಗಳ ನೋ ಕಿಸ್ಸಿಂಗ್ ನಿಯಮವನ್ನು ಬ್ರೇಕ್ ಮಾಡಿದ್ದರು. ಇದೀಗ ನಟಿ ಕಾಜೋಲ್ ದೇವಗನ್ ಸಮಯ. ಹೌದು ನಟಿ ಕಾಜೋಲ್ ದೇವಗನ್ ವೆಬ್ ಸೀರಿಸ್‌ಗಾಗಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕಾಜೋಲ್ ಕಿಸ್ಸಿಂಗ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಕಾಜೋಲ್ ಬರೋಬ್ಬರಿ 29 ವರ್ಷಗಳ ನಿಯಮವನ್ನು ಬ್ರೇಕ್ ಮಾಡಿದ್ದಾರೆ. ಸಿನಿಮಾರಂಗದ ಪ್ರಾರಂಭದ ದಿನಗಳಲ್ಲಿ ಕಾಜೋಲ್ ಕೆಲವು ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಬಳಿಕ ಕಾಜೋಲ್ ಚುಂಬನದ ದೃಶ್ಯಗಳನ್ನು ಮಾಡದೆ ಇರಲು ನಿರ್ಧರಿಸಿದ್ದರು. DDLJ ಸಿನಿಮಾ ಬಳಿಕ ಸೂಪರ್‌ಸ್ಟಾರ್ ಆದ ನಂತರ ಕಾಜೋಲ್ ಎಂದಿಗೂ ಆ ನಿಯಮವನ್ನು ಉಲ್ಲಂಘಿಸಲಿಲ್ಲ. ಆದರೀಗ ಬ್ರೇಕ್ ಮಾಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. 

ತನ್ನ ಕೊನೆಯ ಆನ್ ಸ್ಕ್ರೀನ್ ಕಿಸ್ಸಿಂಗ್ ದೃಶ್ಯದ ನಂತರ ಕಾಜೋಲ್ ಇದೀಗ ತೆರೆಮೇಲೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕಾಜೋಲ್ ಮತ್ತೆ ಸಿನಿಮಾರಂಗದಲ್ಲಿ ಸಕ್ರೀಯರಾಗುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ಕಾಜೋಲ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಉತ್ತಮ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಇದೀಗ ತೆರೆಮೇಲೆ ಸಹ ನಟನೊಂದಿಗೆ ಕಿಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 

ಹೈ ಹೀಲ್ಸ್ ಹಾಕಿ ಪರದಾಡಿದ ಕಾಜೋಲ್: 'ಈ ಶೋಕಿ ಬೇಕಿತ್ತಾ' ಎಂದ ನೆಟ್ಟಿಗರು

ಲಸ್ಟ್ ಸ್ಟೋರೀಸ್ 2 ನಲ್ಲಿ ಕಾಣಿಸಿಕೊಂಡಿದ್ದ ಕಾಜೋಲ್ ಇದೀಗ 'ದಿ ಟ್ರಯಲ್' ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ದಿ ಟ್ರಯಲ್ ನಲ್ಲಿ ವಕೀಲರ ಪಾತ್ರವನ್ನು ನಿರ್ವಹಿಸಿದ್ದಾರೆ. ಬಂಗಾಳಿ ನಟ ಜಿಶು ಸೇನ್ ಗುಪ್ತಾ, ಕಾಜೋಲ್ ಪತಿಯಾಗಿ ನಟಿಸಿದ್ದಾರೆ. ಒಂದು ದೃಶ್ಯದಲ್ಲಿ ಕಾಜೋಲ್ ತನ್ನ ಸಹ-ನಟನೊಂದಿಗೆ ಲಿಪ್ ಲಾಕ್ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.  

ದೇಶವನ್ನು 'ಅಶಿಕ್ಷಿತ' ನಾಯಕರು ಆಳುತ್ತಿದ್ದಾರೆ ಎಂದ ಕಾಜೋಲ್‌: ನೀವು, ನಿಮ್ಮ ಪತಿ ಓದಿರೋದೇನು ಎಂದು ನೆಟ್ಟಿಗರ ಟ್ರೋಲ್‌

ಈ ಸರಣಿಯಲ್ಲಿ ಕಾಣಿಸಿಕೊಂಡಿರುವ ಈ ಎರಡು ಕಿಸ್ಸಿಂಗ್ ದೃಶ್ಯಗಳು ಇದೀಗ ಸಾಮಾಜಿಕ ವಲಯದಲ್ಲಿ ವೈರಲ್ ಆಗಿದ್ದು ಚರ್ಚೆಗೆ ಕಾರಣವಾಗಿದೆ. ಅಜಯ್ ದೇವಗನ್ ಅವರ ಅಭಿಮಾನಿಗಳು ಈ ಚುಂಬನ ದೃಶ್ಯದಿಂದ ಶಾಕ್ ಆಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?