ಗಂಡ ನನಗೆ ಮೋಸ ಮಾಡಿದ್ದಾನೆ, ಹಾಟ್ ನಟಿ ಸನ್ನಿ ಲಿಯೋನ್ ಆರೋಪ
ಹಾಟ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ತಮ್ಮ ಗಂಡನ ವಿರುದ್ಧ ನನಗೆ ಮೋಸ ಮಾಡಿದ್ದಾನೆ ಎಂದು ವಿಡಿಯೋ ಅಪ್ಲೋಡ್ ಮಾಡಿ ಆರೋಪಿಸಿದ್ದಾರೆ. ಕೆನಡಾ ಮೂಲದ ಭಾರತೀಯ-ಅಮೇರಿಕನ್ ನಟಿ ಸದ್ಯ ಮುಂಬೈನಲ್ಲಿ ತನ್ನ ಗಂಡ ಮತ್ತು ಮೂವರು ಮಕ್ಕಳ ಜೊತೆಗೆ ವಾಸಿಸುತ್ತಿದ್ದಾರೆ. ಮನೆಯಲ್ಲಿ ಗಂಡ ಡೇನಿಯಲ್ ವೆಬರ್ ತನಗೆ ಗೊತ್ತಿಲ್ಲದೇ ಐಸ್ ಕ್ರೀಮ್ ತಿಂದಿದ್ದಾನೆ ಎಂದು ಹೇಳಿರುವ ನಟಿ, ಡೇನಿಯಲ್ ಐಸ್ಕ್ರಿಂ ತಿನ್ನುವತ್ತಿರುವ ವಿಡಿಯೋ ಅಪ್ಲೋಡ್ ಮಾಡಿ ಹಿ ಚೀಟೆಡ್ ಆನ್ ಮಿ ಎಂದು ತಮಾಷೆಗೆ ಬರೆದುಕೊಂಡಿದ್ದಾರೆ.
ಬಾಲಿವುಡ್ ಮಾತ್ರವಲ್ಲ ಭಾರತದ ಹಲವು ಭಾಷೆಯ ಸಿನೆಮಾಗಳಲ್ಲಿ ಕೂಡ ಗುರುತಿಸಿಕೊಂಡಿರುವ ನಟಿ ಸನ್ನಿ ಲಿಯೋನ್ ಸೌಂದರ್ಯ ಕಣ್ಣು ಕುಕ್ಕುವಂತಿದೆ.
ಭಾರತೀಯ ಹೆಣ್ಣು ಮಗು ನಿಶಾಳನ್ನು ದತ್ತು ಪಡೆದಿರುವ ದಂಪತಿ, ಅದಾದ ನಂತರ ಸರೋಗಸಿ ಮೂಲಕ ನೋವಾ-ಆಶರ್ ಎಂಬ ಅವಳಿ ಗಂಡು ಮಕ್ಕಳ ತಂದೆ-ತಾಯಿ ಆಗಿದ್ದಾರೆ.
ಸನ್ನಿ ಲಿಯೋನ್ ಹಾಗೂ ಪತಿ ಡಾನಿಯಲ್ ವೆಬರ್ ಇಬ್ಬರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇಬ್ಬರೂ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
Sunny Leone
ಸನ್ನಿ ಲಿಯೋನ್ಗೆ ವಿಶ್ವದ ತುಂಬೆಲ್ಲಾ ಅಭಿಮಾನಿಗಳು. ಅವರ ಜೊತೆ ಅವರ ಪತಿ ಡೇನಿಯಲ್ ವೆಬರ್ ಕೂಡ ಫೇಮಸ್ ವ್ಯಕ್ತಿಯಾಗಿದ್ದಾರೆ.
ಮೊದಲ ಬಾರಿಗೆ ಲಾಸ್ ವೇಗಾಸ್ನ ಕ್ಲಬ್ನಲ್ಲಿ ಭೇಟಿಯಾದ ಸನ್ನಿ ಮತ್ತು ಡೇನಿಯಲ್ ಪ್ರೀತಿಸಿ ಏಪ್ರಿಲ್ 9, 2011 ರಂದು ವಿವಾಹವಾದರು. ಇವರದ್ದು ಸುಂದರ ದಾಂಪತ್ಯ.
ನಲವತ್ತೆರಡು ವರ್ಷ ವಯಸ್ಸಿನ ಚಿರಯೌವನೆ ಸನ್ನಿ ಒಂದು ಕಾಲದಲ್ಲಿ ನೀಲಿ ಚಿತ್ರಗಳ ಲೋಕದ ಸಾಮ್ರಾಜ್ಞಿಯಾಗಿ ಮೆರೆದವರು. ಇಂದೂ ಆಕೆಯ ಸೌಂದರ್ಯ ಮಾಸಿಲ್ಲ.