
ಹೌದು, ಆ ನಟಿಯರಿಬ್ಬರೂ ಜಗತ್ತಿನ ಕಣ್ಣಿಗೆ ಕೆಟ್ಟವರು. ಅಂದ್ರೆ, ತಮ್ಮ ಯೌವನದ ದಿನಗಳಲ್ಲಿ ದುಡ್ಡಿಗಾಗಿ ಅವರು ದೇಹಸಿರಿಯ ಮೂಲಕ ದುಡಿಮೆ ಮಾಡಿದವರು. ಬೇರೆಲ್ಲರೂ ಹೊಟ್ಟೆಪಾಡಿಗೆ ಬೇರೆ ಏನೇನೋ ಕೆಲಸ ಮಾಡಿದ್ದರೆ, ಈ ಇಬ್ಬರೂ ದೇಹ ಸೌಂದರ್ಯ ಪ್ರದರ್ಶಿಸಿ ಹಣ ಮಾಡಿದ್ದರು. ಆಗ ಜಗತ್ತು ಅವರನ್ನು ನೋಡುವ ದೃಷ್ಟಿಯೇ ಬೇರೆಯಾಗಿತ್ತು. ಆದರೆ, ಇಂದು ಈ ಇಬ್ಬರೂ ನಟಿಯರೂ ತಮ್ಮ ವೃತ್ತಿ ಬದಲಿಸಿಕೊಂಡಿದ್ದಾರೆ, ಗೌರವದಿಂದ ಬದುಕು ನಡೆಸುತ್ತಿದ್ದಾರೆ.
ಇಷ್ಟು ಹೇಳಿದಾಗ ಬಹುತೇಕ ಎಲ್ಲರಿಗೂ ಅರ್ಥ ಆಗಿರುತ್ತೆ, ಅವರಿಬ್ಬರೂ ಬೇರಾರೂ ಅಲ್ಲ, ನಟಿಯರಾದ ಸನ್ನಿ ಲಿಯೋನ್ (Sunny Leone) ಹಾಗೂ ಶಕೀಲಾ (Shakeela). ಹೌದು, ಅವರಿಬ್ಬರೂ ಆರಂಭಿಕ ದಿನಗಳಲ್ಲಿ ವೃತ್ತಿ ಬದುಕು ಆರಂಭಿಸಿದಾಗ ಹಣಕ್ಕಾಗಿ ಮನರಂಜನೆ ಕೊಡುವ ಬದಲು ದೇಹವನ್ನೇ ಒತ್ತೆ ಇಟ್ಟಿದ್ದರು. ಆದರೆ, ಅಬರಬರುತ್ತಾ ಅವರಿಬ್ಬರೂ ತಮ್ಮ ಜೀವನದ ಹಾದಿಯನ್ನು ಬದಲಾಯಿಸಿಕೊಂಡರು. ಹಣ ಗಳಿಸುವುದಕ್ಕೇ ಇತರರಂತೆ ಅದೇ ರಂಗದಲ್ಲಿ ತಮಗಿರುವ ಪ್ರತಿಭೆ ಪ್ರದರ್ಶನಕ್ಕೆ ಬದ್ಧರಾದರು.
ರಾಧಿಕಾ ಕುಮಾರಸ್ವಾಮಿ ಮೊದಲ ಗಂಡ ಇವ್ರೇ ನೋಡಿ.. ಭೂಲೋಕದಿಂದ ದೂರಾಗಿದ್ದು ಹೀಗೆ..!
ನಟಿ ಸನ್ನಿ ಲಿಐನ್ ಇಂದು ಮೂರು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ಬೇರೆ ಬೇರೆ ದೇಶಗಳ ಈ ಮಕ್ಕಳಲ್ಲಿ ಹೆಣ್ಣು ಹಾಗೂ ಗಂಡು ಇಬ್ಬರೂ ಇದ್ದಾರೆ. ಅವರೆಲ್ಲರನ್ನೂ ಸ್ವಂತ ಮಕ್ಕಳಂತೆ ಸಾಕುತ್ತಿರುವ ನಟಿ ಸನ್ನಿ ಲಿಯೋನ್ ಹಾಗೂ ಪತಿ ಡೇನಿಯಲ್ ವೆಬ್ಬರ್ ಇಬ್ಬರೂ ಈಗ ಸಾಕಾಷ್ಟು ಸಾಮಾಜಿಕ ಕಳಕಳಿ ಕೆಲಸ ಮಾಡುತ್ತಿದ್ದಾರೆ. ಅವರಿಬ್ಬರ ಬಗ್ಗೆಯೂ ಮೊದಲಿದ್ದ ಅಭಿಪ್ರಾಯ ಬದಲಾಗಿದೆ.
ಶಕೀಲಾ ಅವರು ಮಲಯಾಳಂ ಮೂಲದ ನಟಿ. ಅವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗ್ಲಾಮರಸ್ ರೋಲ್‌ನಲ್ಲಿ ಮಿಂಚಿದ್ದಾರೆ. ಇತರ ನಟಿಯರಂತೆ ಪ್ರತಿಭೆ ಹಾಗೂ ದೇಶ ಪ್ರದರ್ಶನ ಮಾಡಿ ಹಣ ಗಳಿಸುತ್ತಿದ್ದಾರೆ. ಮೊದಲಿನಂತೆ ನೇರವಾಗಿ ದೇಹವನ್ನೇ ಕೊಟ್ಟು ಹಣ ಗಳಿಸುತ್ತಿಲ್ಲ. ಇನ್ನು ಸನ್ನಿ ಲಿಯೋನ್ ಮೂಲತಃ ಕೆನಡಾದ ನಟಿ, ಆದ್ರೆ ಈಗ ಮುಂಬೈನಲ್ಲೇ ವಾಸ. ಇದು ಎಲ್ಲಾ ಕಡೆ ಸಮಾಜದಲ್ಲಿ ಒಪ್ಪಿತವಾದ ಕೆಲಸವೇ ಆಗಿದೆ. ಎಲ್ಲರಿಗೂ ಅವರವರ ದುಡಿಮೆಗೆ ಒಂದು ಮಾರ್ಗ ಬೇಕಲ್ಲವೇ? ಅದನ್ನೇ ಅವರೂ ಮಾಡುತ್ತಿದ್ದಾರೆ. ಅದರಲ್ಲೇನು ತಪ್ಪಾ..?
ವಿದ್ಯಾ ಬಾಲನ್ ಸೀಕ್ರೆಟ್ ಓಪನ್ ಮಾಡಿದ ಶ್ರೇಯಾ ಘೋಷಾಲ್..! ಇಷ್ಟು ವರ್ಷ ಏನೋ ಅಂದ್ಕೊಂಡಿದ್ರಾ?
ಆದರೆ, ನಟಿಯರಾದ ಸನ್ನಿ ಲಿಯೋನ್ ಹಾಗೂ ಶಕೀಲಾ ಇಬ್ಬರೂ ಕೂಡ ಈಗ ತಾವು ದುಡಿದ ಹಣದಲ್ಲಿ ಸಾಕಷ್ಟು ಭಾಗವನ್ನು ಸಮಾಜದಲ್ಲಿ ನೊಂದು ಬೆಂದವರ ಒಳಿತಿಗಾಗಿ ಕೊಡುತ್ತಿದ್ದಾರೆ. ಪ್ರತಿವರ್ಷ ಬಹಳಷ್ಟು ಬಡಜನತೆಯ ಸೇವೆ ಮಾಡುತ್ತಿದ್ದಾರೆ. ಚಾರಿಟಿ ಮಾಡುವುದರೊಂದಿಕೆ ಕಷ್ಟ ಎಂದು ಕೈ ಒಡ್ಡಿದ ಜನರಿಗೆ ಕೈಲಾದಷ್ಟು ದಾನ ಮಾಡುತ್ತಿದ್ದಾರೆ. ಇದನ್ನೇ ಅಲ್ಲವೇ ಬದಲಾಗುವುದು ಎನ್ನೋದು? ಹೌದು ಅವರಿಬ್ಬರೂ ಬದಲಾಗಿದ್ದಾರೆ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.