
ತಮ್ಮನ ಮದುವೆ ನಂತ್ರ ಸ್ಯಾಂಡಲ್ವುಡ್ ನಟಿ, ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ (Sandalwood Actress, Crazy Queen Rakshita Prem), ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ. ತಮ್ಮಿಷ್ಟದ ಕಬಿನಿಗೆ ಭೇಟಿ ನೀಡಿ, ಸುಂದರ ಪರಿಸರದಲ್ಲಿ ಒಂದಿಷ್ಟು ಅಮೂಲ್ಯ ಸಮಯ ಕಳೆದಿದ್ದಾರೆ. ರಕ್ಷಿತಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಕಬಿನಿ (Kabini)ಯ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಕಬಿನಿ ತಮಗೆಷ್ಟು ಪ್ರಿಯ ಎಂಬ ವಿಷ್ಯವನ್ನು ಬರೆದಿದ್ದಾರೆ. ರಕ್ಷಿತಾ ಅತಿ ಹೆಚ್ಚು ಪ್ರೀತಿಸುವ ಸ್ಥಳವೆಂದ್ರೆ ಕಬಿನಿ. ಈ ಬಾರಿ ಕಬಿನಿಗೆ ಭೇಟಿ ನೀಡಿದ್ದ ರಕ್ಷಿತಾ ಹುಲಿ ರಾಣನನ್ನು ನೋಡಿ ಬಂದಿದ್ದಾರೆ. ಈ ಖುಷಿಯನ್ನು ಅವರು ತಮ್ಮ ಫ್ಯಾನ್ಸ್ ಮುಂದೆ ಹಂಚಿಕೊಂಡಿದ್ದಾರೆ.
ನಾನೇನೋ ಕಳೆದುಕೊಂಡಿದ್ದೇನೆ ಅಥವಾ ಮುಂದಿನ ಕೆಲಸಕ್ಕೆ ಇನ್ನೂ ಸಿದ್ಧವಾಗಿಲ್ಲ ಎಂದು ಭಾವಿಸಿದಾಗಲೆಲ್ಲ ನಾನು ಮೊದಲು ಹೋಗಲು ಬಯಸುವ ಸ್ಥಳ ಸಫಾರಿ. ಕಾಡಿನಲ್ಲಿ ಸಫಾರಿ ಮಾಡುವುದು ನನಗೆ ಇಷ್ಟ. ಸಫಾರಿಗಾಗಿ ನಾನು ಯಾವುದೋ ಕಾಡನ್ನು ಆಯ್ಕೆ ಮಾಡಿಕೊಳ್ಳೋದಿಲ್ಲ. ನನಗೆ ಕಬಿನಿ ತುಂಬಾ ಇಷ್ಟ. ಅಲ್ಲಿನ ತಾಜಾ ಗಾಳಿ, ಸೂರ್ಯ, ನಾನು ಭೇಟಿಯಾಗುವ ಅದ್ಭುತ ಜನರು. ವಿಶೇಷವಾಗಿ ನಮ್ಮ ಡ್ರೈವರ್ ರಘು ಅಂತ ರಕ್ಷಿತಾ ಬರೆದಿದ್ದಾರೆ. ಇಲ್ಲಿನ ಸುಂದರ ಪ್ರಾಣಿಗಳು ನನಗೆ ಇಷ್ಟ. ನಾನು ಈ ಬಾರಿ ಹುಲಿ ರಾಣನನ್ನು ನೋಡಿದೆ. ಅವನು ತುಂಬಾ ಸುಂದರವಾಗಿದ್ದಾನೆ. ನನ್ನ ಹೃದಯದಲ್ಲಿ ಜಾಗ ಪಡೆದಿರುವ ಸ್ಥಳವೆಂದ್ರೆ ಅದು ಕಬಿನಿ ಹಿನ್ನೀರು ಎಂದು ರಕ್ಷಿತಾ ಬರೆದಿದ್ದಾರೆ. ವಿಡಿಯೋದಲ್ಲಿ ರಕ್ಷಿತಾ ಜೀಪ್ ಒಳಗೆ ಕುಳಿತು ಕಬಿನಿ ಸುತ್ತೋದನ್ನು ನೋಡ್ಬಹುದು. ತಮ್ಮ ತಂಡದ ಜೊತೆ ಕಬಿನಿಗೆ ಹೋಗಿದ್ದ ರಕ್ಷಿತಾ, ಅಲ್ಲಿನ ಪರಿಸರ, ಹುಲಿ, ಆನೆ, ಆನೆ ಮರಿ, ಜಿಂಕೆ ಸೇರಿದಂತೆ ಸಾಕಷ್ಟು ಪ್ರಾಣಿಗಳನ್ನು ನೋಡಿ ಆನಂದಿಸಿದ್ದಾರೆ.
ಮದುವೆ ಮುಗಿಯುತ್ತಿದ್ದಂತೆ ಹನಿಮೂನ್ ಗಾಗಿ ಬ್ಯಾಂಕಾಕ್ ಗೆ ಹಾರಿದ ರಾಣಾ- ರಕ್ಷಿತಾ
ಇದಕ್ಕೂ ಮುನ್ನ, ರಕ್ಷಿತಾ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ದರ್ಶನ ಪಡೆದಿದ್ದರು. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ದೇವಸ್ಥಾನದಲ್ಲಿ ಗುಲಾಬಿ ಬಣ್ಣದ ಹೂ ಕೇಳಿ ಪಡೆದಿದ್ದ ರಕ್ಷಿತಾ, ತಾಯಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದ್ರು.
ತಮ್ಮ ರಾಣಾ ಮದುವೆ ಮುಗಿಸಿ ಭರ್ಜರಿ ಪಾರ್ಟಿ ಮಾಡಿದ Crazy Queen Rakshitha: ಮೇಘನಾ ರಾಜ್ ಭರ್ಜರಿ ಡ್ಯಾನ್ಸ್!
ಕ್ರೇಜಿ ಕ್ವೀನ್ ಎಂದೇ ಪ್ರಸಿದ್ಧಿ ಪಡೆದಿರುವ ರಕ್ಷಿತಾ ಪ್ರೇಮ್ ವರ್ಷದ ಆರಂಭದಲ್ಲಿ ಸಖತ್ ಬ್ಯುಸಿ ಇದ್ರು ಅಂತಾನೇ ಹೇಳ್ಬಹುದು. ತಮ್ಮನ ಮದುವೆ ಕರೆಯೋಲೆ ಹಿಡಿದು ಸೆಲೆಬ್ರಿಟಿಗಳು, ರಾಜಕಾರಣಿಗಳ ಮನೆಗೆ ಹೋಗ್ತಿದ್ದ ರಕ್ಷಿತಾ ಪ್ರೇಮ್, ತಮ್ಮನ ಮದುವೆಯನ್ನು ಅದ್ಧೂರಿಯಾಗಿ ಮಾಡಿ ಮುಗಿಸಿದ್ದಾರೆ. ಫೆಬ್ರವರಿ 7ರಂದು ತಮ್ಮ ರಾಣಾ ಮದುವೆ ನಡೆದಿದೆ. ರಾಣಾ ಹಾಗೂ ರಕ್ಷಿತಾ ಮದುವೆಗೆ ಸ್ಯಾಂಡಲ್ವುಡ್ ದಂಡೇ ಬಂದಿತ್ತು. ರಾಣಾ ಮದುವೆ ಆಗಿರುವ ಹುಡುಗಿ ಹೆಸರೂ ರಕ್ಷಿತಾ. ಮದುವೆ ನಂತ್ರ ರಕ್ಷಿತಾ ಹಾಗೂ ರಾಣಾ ಹನಿಮೂನ್ ಗೆ ಬ್ಯಾಂಕಾಕ್ ಗೆ ಹೋಗಿದ್ರು. ಇನ್ನು ರಕ್ಷಿತಾ ಪ್ರೇಮ್, ತಮ್ಮನ ಮದುವೆ ನಂತ್ರ ಸ್ಯಾಂಡಲ್ವುಡ್ ತಾರೆಯರಿಗೆ ಭರ್ಜರಿ ಪಾರ್ಟಿ ಕೂಡ ನೀಡಿದ್ದರು. ಸದ್ಯ ರಿಯಾಲಿಟಿ ಶೋ ಹಾಗೂ ಸಿನಿಮಾ ನಿರ್ಮಾಣದಲ್ಲಿ ರಕ್ಷಿತಾ ಬ್ಯುಸಿಯಿದ್ದಾರೆ. ನಿರ್ದೇಶಕ ಪ್ರೇಮ್ ಜೊತೆ ಮದುವೆ ಆದ್ಮೇಲೆ ರಕ್ಷಿತಾ ನಟನೆ ಬಿಟ್ಟಿದ್ದಾರೆ. ಆದರೆ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಸಾಕಷ್ಟು ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.